Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಸಂವಿಧಾನ ನಮಗೆ ಪ್ರಶ್ನಿಸುವ ಹಕ್ಕನ್ನು, ಸಮಾನತೆಯನ್ನು ನೀಡಿದೆ, ಅದರ ಆಶಯದಂತೆ ನಮ್ಮೆಲ್ಲರ ಜೀವನ ಸಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಹೇಳಿದರು.ಆಲಮಟ್ಟಿಯ ಎಂಪಿಎಸ್ ಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ ಅಂಬೇಡ್ಕರ ಅವರನ್ನು ಅವರ ಕಣ್ಮರೆಯಾಗಿ ೭೦ ವರ್ಷಕ್ಕೂ ಹೆಚ್ಚು ದಿನಗಳಾದರೂ ಈಗಲೂ ಅವರನ್ನು ಇಡೀ ದೇಶ ಸ್ಮರಿಸುತ್ತದೆ , ಅದರಂತೆ ನಾವು ಸಮಾಜದಲ್ಲಿ ಬದುಕಬೇಕು ಎಂದರು.ಮುಖ್ಯ ಶಿಕ್ಷಕ ಬಿ.ಎಸ್.ಯರವಿನತೆಲಿಮಠ ಅಧ್ಯಕ್ಷತೆ ವಹಿಸಿದ್ದರು.ಎಸ್ ಡಿಎಂಸಿ ಅಧ್ಯಕ್ಷ ನಿಸ್ಸಾರ್ ಪಿಂಜಾರ್, ಸುರೇಶ ಹುರಕಡ್ಲಿ, ಸಾವಿತ್ರಿ ಅಂಗಡಿ ಮತ್ತಿತರರು ಇದ್ದರು.ಮಕ್ಕಳು ಸಾಂಸ್ಕೃತಿಕ ನೃತ್ಯಗಳನ್ನು ಪ್ರದರ್ಶಿಸಿದರು

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪಟ್ಟಣದ ಸಂಘ ಸಂಸ್ಥೆಗಳು ಸೇರಿದಂತೆ ವಿವಿಧೆಡೆ ಧ್ವಜಾರೋಹಣ ನೆರವೇರಿಸಿ ೭೬ನೇ ಗಣರಾಜ್ಯೋತ್ಸವ ಆಚರಿಸಲಾಯಿತು.ಸಮೃದ್ಧಿ ಸಹಕಾರ ಸಂಘ :ಸ್ಥಳೀಯ ಸಮೃದ್ಧಿ ಸಹಕಾರ ಸಂಘದಲ್ಲಿ ಅಧ್ಯಕ್ಷೆ ಸಂಗೀತಾ ನಾಯಿಕ ಧ್ವಜಾರೋಹಣ ನೆರವೇರಿಸಿದರು.ಉಪಾಧ್ಯಕ್ಷ ರಿಯಾಜ್ ಯಲಗಾರ, ಮಾರ್ಗದರ್ಶಕ ಡಾ.ಆರ್.ಆರ್.ನಾಯಿಕ್, ಕಾರ್ಯನಿರ್ವಾಹಕ ಗುರುಬಸಯ್ಯ ಹಿರೇಪಟ್ಟ, ನಿರ್ದೇಶಕರುಗಳಾದ ಪ್ರಭುದೇವ ಹಿರೇಮಠ, ವೆಂಕಟೇಶ ಕುಲಕರ್ಣಿ, ಬಿ.ಎನ್.ಬಬಲೇಶ್ವರ, ಕೆ.ಎಸ್.ಕೋರಿ, ಗುರು ಕರಭಂಟನಾಳ, ಎ.ಕೆ.ಹಿರೇಮಠ, ಮಂಜುನಾಥ ಒಂಟೆತ್ತಿನ ಸಿಬ್ಬಂದಿ ಲತಾ ತಡಪಟ್ಟಿ, ಬಸವರಾಜ ಸಜ್ಜನ, ಅಕ್ಷಯ ರಾಠೋಡ, ಬಸವರಾಜ ಹಿರೇಮಠ, ಶರಣು ಹಿರೇಮಠ ಇದ್ದರು.ಇಂದುಮತಿ ಸಾವಳಗಿ ಶಾಲೆ :ಸಂಸ್ಥೆಯ ಅಧ್ಯಕ್ಷ ಶಾಂತಪ್ಪ ಸಾವಳಗಿ ಧ್ವಜಾರೋಹಣ ನೆರವೇರಿಸಿದರು.ಸಾಹೇಬಗೌಡ ಬಿರಾದಾರ(ಡೋಣಿ ಬೂದಿಹಾಳ), ಕಾರ್ಯದರ್ಶಿ ಸಂತೋಷ ಸಾವಳಗಿ, ಶಂಕರಗೌಡ ಪಾಟೀಲ ಸೇರಿದಂತೆ ಸಿಬ್ಬಂದಿ ಹಾಗೂ ಮಕ್ಕಳು ಇದ್ದರು.ಮೀನುಗಾರಿಕೆ ಸಹಕಾರ ಸಂಘ:ಸಂಘದ ತಾಲ್ಲೂಕು ಅಧ್ಯಕ್ಷ ಶ್ರೀಕಾಂತ ಬಜಂತ್ರಿ ಧ್ವಜಾರೋಹಣ ನೆರವೇರಿಸಿದರು.ಉಪಾಧ್ಯಕ್ಷ ಮಹಿಬೂಬ್ ಚೌಧರಿ ಪಂಚಾಕ್ಷರಿ ಮಿಂಚನಾಳ ಸಂಪತ್ ಜಮಾದಾರ, ಬಸವರಾಜ ಬಜಂತ್ರಿ, ಬಾಬು ರಾಠೋಡ, ಭೀಮಶೀ ಸೂರ್ಯವಂಶಿ ಹಾಗೂ ಸದಸ್ಯರು ಇದ್ದರು.ಎಂಡಿಜಿ ಗ್ಯಾಸ್ ವಿತರಣಾ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಭಾರತದ ಸಂವಿಧಾನ ಶ್ರೇಷ್ಠವಾಗಿದೆ. ಇದು ಎಲ್ಲ ಜಾತಿ, ಮತ, ಪಂಥಗಳ ಧರ್ಮಗ್ರಂಥವೇನಿಸಿದೆ ಎಂದು ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ) ಹೇಳಿದರು.ಪಟ್ಟಣದ ಶಾಸಕರ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಭಾನುವಾರ ಜರುಗಿದ ೭೬ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಶ್ವದಲ್ಲಿಯೇ ವಿಶೇಷವಾದ ನಮ್ಮ ಸಂವಿಧಾನದ ಮಹತ್ವ, ಧ್ಯೆಯೋದ್ಧೇಶಗಳನ್ನು ನಾವುಗಳೆಲ್ಲಾ ಅರಿಯಬೇಕಾಗಿದೆ ಎಂದರು.ತಹಶೀಲ್ದಾರ್ ಪ್ರಕಾಶ ಸಿಂದಗಿ ಧ್ವಜಾರೋಹಣ ನೆರವೇರಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ನಂತರ ತಾಲ್ಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳು, ಸಾಧಕರು ಹಾಗೂ ಶಿಕ್ಷಕಿಯರನ್ನು ಸನ್ಮಾನಿಸಲಾಯಿತು. ನಂತರ ವಿವಿಧ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ದೇವಣಗಾಂವ, ಉಪಾಧ್ಯಕ್ಷ ರಮೇಶ ಮಸಬಿನಾಳ, ಮುಖ್ಯಾಧಿಕಾರಿ ಎಸ್.ಎಸ್.ಬಾಗಲಕೋಟ ಪಿಎಸೈ ಬಸವರಾಜ ತಿಪರಡ್ಡಿ, ತಾಲ್ಲೂಕು ಪಂಚಾಯಿತಿ ಇಓ ಭಾರತಿ ಚಲುವಯ್ಯ, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಅಶೋಕ ಹೆಗಡೆ, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ರಿಯಾಜ್ ಯಲಗಾರ, ಸಿಆರ್‌ಪಿ ವಿಜಯಲಕ್ಷ್ಮಿ ನವಲಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಕಾಸುಗೌಡ ಬಿರಾದಾರ, ಕಾಶೀನಾಥ ಬಜಂತ್ರಿ,…

Read More

ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ.ಕಲಾ ಮತ್ತು ಕೆ .ಸಿ .ಪಿ ವಿಜ್ಞಾನ ಮಹಾವಿದ್ಯಾಲಯ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭವ್ಯ ಭಾರತ, ಬಲಿಷ್ಠ ಭಾರತವನ್ನು ನಿರ್ಮಾಣ ಮತ್ತು ಮಹಾನ್ ದಾರ್ಶನಿಕರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಕರಗತ ಮಾಡಿಕೊಳ್ಳಬೇಕು.ಅದರಂತೆ ನಮ್ಮ ದೇಶವನ್ನು ಇನ್ನಷ್ಟು ಉತ್ತಮಗೊಳಿಸಲು, ಭಾರತವನ್ನು ಭವಿಷ್ಯದಲ್ಲಿ ಮತ್ತಷ್ಟು ಬಲಿಷ್ಠಗೊಳಿಸಲು ಇಂದಿನ ಯುವ ಶಕ್ತಿಯ ಪಾತ್ರ ಅತ್ಯಂತ ಮಹತ್ವದೆಂದು ಪ್ರಾಚಾರ್ಯೆ ಡಾ.ಆರ್.ಎಮ್.ಮಿರ್ದೆ ಹೇಳಿದರು.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್. ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ ೭೬ನೇ ಗಣರಾಜ್ಯೋತ್ಸವದಲಿ ದ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು ನ್ಯಾಯ, ಸ್ವಾತಂತ್ರö್ಯ, ಸಮಾನತೆ, ಭ್ರಾತೃತ್ವ ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಸಂವಿಧಾನವನ್ನು ಜನವರಿ ೨೬ ೧೯೫೦ ರಲ್ಲಿ ಜಾರಿಗೊಳಿಸುವ ಮೂಲಕ ಭಾರತ ಸ್ವತಂತ್ರöಗಣರಾಜ್ಯವಾಯಿತು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಅಪಾರವಾದದ್ದು, ಭಾರತದ ಜನಸಂಖ್ಯೆಯ ಶೇ. ೬೫ ರಷ್ಟು ಜನರು ೩೫ ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಆದ್ದರಿಂದ ನಮ್ಮ ಯುವಕರು ನಮ್ಮ ಶಕ್ತಿ ಮತ್ತು ಈ ಶಕ್ತಿಯು ನಮ್ಮ…

Read More

ರಚನೆಮಾಣಿಕ ನೇಳಗಿತಾಳಮಡಗಿ ಉದಯರಶ್ಮಿ ದಿನಪತ್ರಿಕೆ ಹರಿಯಲಿ ಹರುಷದ ಹೊನಲು ನವ ವರುಷದಲಿಗೊಂದಲಗಳಿಗಿಂದು ಮನ ತೆರೆಯನೆಳೆಯಲಿತನು ಸಂತಸದ ಗೂಡಾಗಲಿ ಹೊಸ ಸಂವತ್ಸರದಲಿಬಂಧು ಬಾಂಧವರ ನಡುವೆ ಸಾಮರಸ್ಯ ಮೂಡಲಿ ಮನಮನಗಳಲಿ ಹುದುಗಿದ ವೈಷಮ್ಯ ಅಳಿಯಲಿಪ್ರೀತಿ ಪ್ರೇಮದ ಸಸಿ ಮೊಳಕೆಯೊಡೆದರಳಲಿಎಲ್ಲೆಡೆ ಕಂಪರಳಿಸಿ ಹೃದಯಕೆ ಗಂಧವ ತೀಡಲಿಉಲ್ಲಾಸದ ಬದುಕಿಗೆ ಜನರು ನಾಂದಿಯು ಹಾಡಲಿ ಉನ್ನತ ವಿಚಾರಧಾರೆ ಸುತ್ತಮುತ್ತಲು ಹರಡಲಿಮಾನಿನಿಯರ ಏಳಿಗೆಗೆ ಲೋಗರು ಕೈಜೋಡಿಸಲಿವೈಚಾರಿಕ ಪ್ರಜ್ಞೆಯು ಪ್ರಖರದಿ ಹೊರಹೊಮ್ಮಲಿಚಿಮ್ಮಲಿ ಬುದ್ಧನ ನಗೆ ನೂತನ ವಸಂತಕಾಲದಲಿ.

Read More

ಲೇಖನ✍️ ಅರ್ಚನಾ ಮಂಜುನಾಥ್ (ಅಚ್ಚು ) ಉದಯರಶ್ಮಿ ದಿನಪತ್ರಿಕೆ ” ಸಂಬಂಧಗಳಲ್ಲಿ ಹೊಂದಾಣಿಕೆ” ಈ ಸಾಲುಗಳು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲೂ ತನ್ನದೇ ಆದ ಪಾತ್ರವನ್ನು ನಿರ್ವಹಿಸುತ್ತದೆ. ಹೊಂದಾಣಿಕೆ ಇಲ್ಲದೆ ಮಾನವನ ಜೀವನ ನಡೆಯಲು ಸಾಧ್ಯವೇ ಇಲ್ಲ.ಹುಟ್ಟಿನಿಂದ ಸಾಯುವವರೆಗೂ ಒಂದಲ್ಲ ಒಂದು ವಿಷಯಕ್ಕೆ, ವ್ಯಕ್ತಿಗೆ, ಸಮಯಕ್ಕೆ, ಸವಾಲಿಗೆ, ನಿರ್ಧಾರಗಳಿಗೆ, ಅಭಿರುಚಿಗಳಿಗೆ, ಸ್ಥಳಗಳಿಗೆ, ಉಡುಗೆ ತೊಡುಗೆಗಳಿಗೆ ಹೀಗೆ ಇನ್ನೂ ಹಲವಾರು ವಿಚಾರಗಳಿಗೆನಮ್ಮನ್ನು ನಾವು ಹೊಂದಿಸಿಕೊಂಡು ಬದುಕಬೇಕಾಗುತ್ತದೆ. “ಸರಸವೇ ಜನನ,ವಿರಸವೇ ಮರಣ, ಸಮರಸವೇ ಜೀವನ “ಎಂಬ ನಾಣ್ಣುಡಿಯಂತೆ ಸಮರಸ ಅಂದರೆ ಹೊಂದಾಣಿಕೆಯ ಜೀವನವೇ ಬದುಕಿಗೆ ನೆಮ್ಮದಿಯ ನೆಲೆಯನ್ನು ಒದಗಿಸುತ್ತದೆ. ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಹೊಂದಾಣಿಕೆ ಎಂಬುದು ಹುಟ್ಟಿನಿಂದಲೇ ಬಂದು ಬಿಟ್ಟಿರುತ್ತದೆ. ಅದರಲ್ಲೂ ಕೂಡು ಕುಟುಂಬದಲ್ಲಿ ಆಕೆ ತಂದೆ ತಾಯಿಯ, ಅಜ್ಜಿ ತಾತ,ಅಣ್ಣ ತಮ್ಮ ,ಅಕ್ಕ ತಂಗಿ, ದೊಡ್ಡಪ್ಪ ಚಿಕ್ಕಪ್ಪ, ದೊಡ್ಡಮ್ಮ ಚಿಕ್ಕಮ್ಮ, ಅತ್ತೆ ಮಾವ ಹೀಗೆ ಹಲವಾರು ಸಂಬಂಧಗಳ ಜೊತೆ ಹೊಂದಿಕೊಂಡು ಬಾಳಲೇ ಬೇಕಾಗಿರುತ್ತದೆ. ಹೊಂದಿಕೊಳ್ಳದಿದ್ದ ಪಕ್ಷದಲ್ಲಿ ಅವರು ಮನೆಯಲ್ಲಿ ಈ ರೀತಿ ಹೊಂದಿಕೊಳ್ಳದಿದ್ದರೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಭಿವೃದ್ಧಿಯಿಂದಾಗಿ ರೈತರ ಜಮೀನಿಗೆ ಭಾರಿ ಬೆಲೆ ಬಂದಿದ್ದು, ಅನ್ನದಾತರರು ತಮ್ಮ ಭೂಮಿಯನ್ನು ಮಾರಾಟ ಮಾಡಬಾರದು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಕಿವಿಮಾತು ಹೇಳಿದ್ದಾರೆ.ಶನಿವಾರ ಬಬಲೇಶ್ವರ ತಾಲೂಕಿನ ಬೋಳಚಿಕ್ಕಲಕಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಗ್ರಾ. ಪಂ. ಕಟ್ಟಡ, ಎಸ್.ಡಬ್ಲ್ಯೂ.ಎಂ ಘಟಕ, ಗೋದಾಮು, ಎನ್.ಆರ್.ಎಲ್.ಎಂ ಘಟಕ ಮತ್ತು ಪ್ರೌಢಶಾಲೆ ಕಟ್ಟಡ ಉದ್ಘಾಟಿಸಿ ಆವರು ಮಾತನಾಡಿದರು.ಅಭಿವೃದ್ಧಿ ಕಾರ್ಯಗಳಿಂದಾಗಿ ಆರ್ಥಿಕವಾಗಿ ಸಮರ್ಥರಾಗಿರುವ ರೈತರು ತಮ್ಮ ಮಕ್ಕಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು. ರೂ. 100 ಕೋ. ಸಿ.ಎಸ್.ಆರ್ ಅನುದಾನದಲ್ಲಿ ಬಬಲೇಶ್ವರ ಮತಕ್ಷೇತ್ರದ ಗ್ರಾಮೀಣ ಭಾಗದ ಶಾಲೆಗಳನ್ನು ಬೆಂಗಳೂರು ಮಾದರಿಯಲ್ಲಿ ಸುಧಾರಣೆ ಮಾಡಲಾಗುವುದು. ಶಾಲಾ ಆವರಣದಲ್ಲಿ ಕ್ರೀಡಾ ಸಲಕರಣೆ ವ್ಯವಸ್ಥೆ, ಅಂಗನವಾಡಿಗಳಲ್ಲಿ ಪ್ಲೆ ಸ್ಕೂಲ್ ಮಾದರಿ ಸೌಲಭ್ಯ ಒದಗಿಸಲಾಗುವುದು. ಶಾಲಾ ಕಟ್ಟಡಗಳ ನಿರ್ಮಾಣ, ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ, ಮೂಲಭೂತ ಸೌಕರ್ಯ ಒದಗಿಸಲಾಗುತ್ತಿದೆ. ಯುವಕರಿಗೆ ಓಪನ್ ಜಿಮ್ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೇ, ಮತಕ್ಷೇತ್ರ…

Read More

ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಪ್ರಧಾನ ಸತ್ರ ನ್ಯಾಯಾಧೀಶ ಶಿವಾಜಿ ನಲವಡೆ ಸಲಹೆ ಉದಯರಶ್ಮಿ ದಿನಪತ್ರಿಕೆ‌ ವಿಜಯಪುರ: ಪ್ರಥಮ ಬಾರಿಗೆ ಮತದಾನ ಮಾಡುವ ಯುವ ಜನತೆ ಆಮಿಷಕ್ಕೆ ಒಳಗಾಗದೇ ಮತದಾನ ಮಾಡಬೇಕು ಎಂದು ಪ್ರಧಾನ ಸತ್ರ ನ್ಯಾಯಾಧೀಶ ಶಿವಾಜಿ ನಲವಡೆ ಹೇಳಿದರು.ನಗರದ ಜಿಲ್ಲಾ ಪಂಚಾಯತ ಸಭಾ ಭವನದಲ್ಲಿ ಶನಿವಾರ ರಾಷ್ಟ್ರೀಯ ಮತದಾನ ದಿನಾಚರಣೆ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಅವರು ರಾಜಕೀಯ ವ್ಯವಸ್ಥೆ ಕೆಟ್ಟಿದೆ ಎಂದು ದುರುತ್ತಾ ಕೂಡುವ ಬದಲು ಯೋಗ್ಯರನ್ನು ಆಯ್ಕೆ ಮಾಡುವ ಕಾರ್ಯ ಯುವ ಮತದಾನರಿಂದ ನಡೆಯಬೇಕು ಎಂದು ಅವರು ಯುವ ಜನತೆಗೆ ಕರೆಕೊಟ್ಟರು. ಚುನಾವಣೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಮತದಾನರು ಭಾಗಿಯಾಗುವುದರಿಂದ ಜನಪರ ಸರ್ಕಾರ ಆಡಳಿತಕ್ಕೆ ಬರಲು ಸಾಧ್ಯ ಎಂದು ಅವರು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಟಿ. ಭೂಬಾಲನ್ ಮಾತನಾಡಿ, ಮುಂದೆ ನಡೆಯಲಿರುವ ಎಲ್ಲಾ ಚುನಾವಣೆಗಳಲ್ಲಿಯೂ ಉತ್ತಮವಾದಂತಹ ಮತದಾನದ ಪ್ರಮಾಣ ಹೆಚ್ಚಿಸುವ ಕಾರ್ಯಕ್ಕೆ ಎಲ್ಲರೂ ಪ್ರಯತ್ನಿಸೋಣ ಎಲ್ಲಾ ಚುನಾವಣೆಗಳಲ್ಲಿಯೂ ಉತ್ತಮ ಪ್ರಮಾಣದ ಮತದಾನ ನಡೆಯುವ ಹಾಗೇ ಶ್ರಮಿಸೋಣ…

Read More

ಬಬಲೇಶ್ವರ ಮತಕ್ಷೇತ್ರದಲ್ಲಿ ಪದವಿ ಕಾಲೇಜು ಪ್ರೌಢಶಾಲೆ ನೂತನ ಕಟ್ಟಡ ಭೂಮಿ ಪೂಜೆ ನೆರವೇರಿಸಿದ ಸಚಿವ ಡಾ.ಎಂ.ಬಿ. ಪಾಟೀಲ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಟೋಯೋಟಾ ಕಂಪನಿ ತನ್ನ ಸಿ.ಎಸ್.ಆರ್. ೨೧ ಕೋಟಿ ರೂ.ಗಳನ್ನು ಅನುದಾನವನ್ನು ವಿವಿಧ ಹಂತದಲ್ಲಿ ಬಬಲೇಶ್ವರ ಮತಕ್ಷೇತ್ರದಲ್ಲಿ ಸಾಮಾಜಿಕ ಕಾರ್ಯ ಚಟುವಟಿಕೆಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಹೇಳಿದರು.ಬಬಲೇಶ್ವರ ತಾಲೂಕಿನ ಮಮದಾಪುರ ಗ್ರಾಮದಲ್ಲಿ ಟೊಯೊಟಾ ಕಿರ್ಲೋಸ್ಕರ್ ಕಂಪನಿ ತನ್ನ ಸಿ.ಎಸ್.ಆರ್. ಐದು ಕೋಟಿ ರೂ. ಅನುದಾನದಲ್ಲಿ ಸರ್ಕಾರಿ ಪದವಿ ಕಾಲೇಜು ಹಾಗೂ ಸರಕಾರಿ ಪ್ರೌಢ ಶಾಲೆಗಳ ನೂತನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ಟೋಯೋಟಾ ಶಿಸ್ತು ಹಾಗೂ ಬದ್ದತೆಗೆ ಹೆಸರಾದ ಕಂಪನಿ, ದೂರದ ಜಪಾನ್ ಮೂಲದ ಈ ಕಂಪನಿ ಮಮದಾಪೂರದ ಮಕ್ಕಳ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಅನುಕೂಲವಾಗಲಿದೆ೨೧ ಕೋಟಿ ರೂ. ಸಿ.ಎಸ್.ಆರ್ ಅನುದಾನವನ್ನು ಬಬಲೇಶ್ವರ ಮತಕ್ಷೇತ್ರಕ್ಕೆ ನೀಡಿದೆ, ವಿವಿಧ ಹಂತಗಳಲ್ಲಿ ಶಾಲಾ ಕೊಠಡಿ ನಿರ್ಮಾಣ, ಶೈಕ್ಷಣಿಕ ಕಿಟ್ ವಿತರಣೆ, ಶೌಚಾಲಯ,…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ರಾಷ್ಟ್ರೀಯ ಮತದಾರರ ದಿನ-೨೦೨೫ ಅಂಗವಾಗಿ ತಾಲೂಕು ಆಡಳಿತ, ತಾಲೂಕು ಪಂಚಾಯತ ಹಾಗೂ ತಾಲೂಕು ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ ಜಾಥಾ ನಡೆಸಲಾಯಿತು.ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಾಗೃತ ಜಾಥಾಕ್ಕೆ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರೂ ಆದ ನಿಂಗಪ್ಪ ಎಸ್. ಮಸಳಿ ಅವರು ಚಾಲನೆ ನೀಡಿದರು. ಜಾಥಾವು ಕಿತ್ತೂರು ರಾಣಿ ಚೆನ್ನಮ್ನ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮೂಲಕ ಬಸವೇಶ್ವರ ವೃತ್ತಕ್ಕೆ ತಲುಪಿತು. ಜಾಥಾದಲ್ಲಿ ಮತದಾನ ಜಾಗೃತಿ ಫಲಕಗಳನ್ನು ಹಿಡಿದು ಶಾಲಾ ವಿದ್ಯಾರ್ಥಿಗಳು ಹೆಜ್ಜೆಹಾಕಿದರು. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವಂತೆ ಅರಿವು ಮೂಡಿಸಲಾಯಿತು.ಈ ಸಂದರ್ಭದಲ್ಲಿ ತಹಶೀಲ್ದಾರ ಬಲರಾಮ ಕಟ್ಟಿಮನಿ, ಬಿಇಒ ಬಿ.ಎಸ್.ಸಾವಳಗಿ, ಕಾಲೇಜು ಪ್ರಾಂಶುಪಾಲ ಎಸ್.ಎಸ್.ಅಂಗಡಿ, ತಾ.ಪಂ.ಯೋಜನಾಧಿಕಾರಿ ಖೂಬಸಿಂಗ್ ಜಾಧವ್ ಸೇರಿದಂತೆ ಹಲವರು ಇದ್ದರು.

Read More