ರಚನೆ
ಮಾಣಿಕ ನೇಳಗಿ
ತಾಳಮಡಗಿ
ಉದಯರಶ್ಮಿ ದಿನಪತ್ರಿಕೆ
ಹರಿಯಲಿ ಹರುಷದ ಹೊನಲು ನವ ವರುಷದಲಿ
ಗೊಂದಲಗಳಿಗಿಂದು ಮನ ತೆರೆಯನೆಳೆಯಲಿ
ತನು ಸಂತಸದ ಗೂಡಾಗಲಿ ಹೊಸ ಸಂವತ್ಸರದಲಿ
ಬಂಧು ಬಾಂಧವರ ನಡುವೆ ಸಾಮರಸ್ಯ ಮೂಡಲಿ
ಮನಮನಗಳಲಿ ಹುದುಗಿದ ವೈಷಮ್ಯ ಅಳಿಯಲಿ
ಪ್ರೀತಿ ಪ್ರೇಮದ ಸಸಿ ಮೊಳಕೆಯೊಡೆದರಳಲಿ
ಎಲ್ಲೆಡೆ ಕಂಪರಳಿಸಿ ಹೃದಯಕೆ ಗಂಧವ ತೀಡಲಿ
ಉಲ್ಲಾಸದ ಬದುಕಿಗೆ ಜನರು ನಾಂದಿಯು ಹಾಡಲಿ
ಉನ್ನತ ವಿಚಾರಧಾರೆ ಸುತ್ತಮುತ್ತಲು ಹರಡಲಿ
ಮಾನಿನಿಯರ ಏಳಿಗೆಗೆ ಲೋಗರು ಕೈಜೋಡಿಸಲಿ
ವೈಚಾರಿಕ ಪ್ರಜ್ಞೆಯು ಪ್ರಖರದಿ ಹೊರಹೊಮ್ಮಲಿ
ಚಿಮ್ಮಲಿ ಬುದ್ಧನ ನಗೆ ನೂತನ ವಸಂತಕಾಲದಲಿ.