ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣದ ಸಂಘ ಸಂಸ್ಥೆಗಳು ಸೇರಿದಂತೆ ವಿವಿಧೆಡೆ ಧ್ವಜಾರೋಹಣ ನೆರವೇರಿಸಿ ೭೬ನೇ ಗಣರಾಜ್ಯೋತ್ಸವ ಆಚರಿಸಲಾಯಿತು.
ಸಮೃದ್ಧಿ ಸಹಕಾರ ಸಂಘ :
ಸ್ಥಳೀಯ ಸಮೃದ್ಧಿ ಸಹಕಾರ ಸಂಘದಲ್ಲಿ ಅಧ್ಯಕ್ಷೆ ಸಂಗೀತಾ ನಾಯಿಕ ಧ್ವಜಾರೋಹಣ ನೆರವೇರಿಸಿದರು.
ಉಪಾಧ್ಯಕ್ಷ ರಿಯಾಜ್ ಯಲಗಾರ, ಮಾರ್ಗದರ್ಶಕ ಡಾ.ಆರ್.ಆರ್.ನಾಯಿಕ್, ಕಾರ್ಯನಿರ್ವಾಹಕ ಗುರುಬಸಯ್ಯ ಹಿರೇಪಟ್ಟ, ನಿರ್ದೇಶಕರುಗಳಾದ ಪ್ರಭುದೇವ ಹಿರೇಮಠ, ವೆಂಕಟೇಶ ಕುಲಕರ್ಣಿ, ಬಿ.ಎನ್.ಬಬಲೇಶ್ವರ, ಕೆ.ಎಸ್.ಕೋರಿ, ಗುರು ಕರಭಂಟನಾಳ, ಎ.ಕೆ.ಹಿರೇಮಠ, ಮಂಜುನಾಥ ಒಂಟೆತ್ತಿನ ಸಿಬ್ಬಂದಿ ಲತಾ ತಡಪಟ್ಟಿ, ಬಸವರಾಜ ಸಜ್ಜನ, ಅಕ್ಷಯ ರಾಠೋಡ, ಬಸವರಾಜ ಹಿರೇಮಠ, ಶರಣು ಹಿರೇಮಠ ಇದ್ದರು.
ಇಂದುಮತಿ ಸಾವಳಗಿ ಶಾಲೆ :
ಸಂಸ್ಥೆಯ ಅಧ್ಯಕ್ಷ ಶಾಂತಪ್ಪ ಸಾವಳಗಿ ಧ್ವಜಾರೋಹಣ ನೆರವೇರಿಸಿದರು.
ಸಾಹೇಬಗೌಡ ಬಿರಾದಾರ(ಡೋಣಿ ಬೂದಿಹಾಳ), ಕಾರ್ಯದರ್ಶಿ ಸಂತೋಷ ಸಾವಳಗಿ, ಶಂಕರಗೌಡ ಪಾಟೀಲ ಸೇರಿದಂತೆ ಸಿಬ್ಬಂದಿ ಹಾಗೂ ಮಕ್ಕಳು ಇದ್ದರು.
ಮೀನುಗಾರಿಕೆ ಸಹಕಾರ ಸಂಘ:
ಸಂಘದ ತಾಲ್ಲೂಕು ಅಧ್ಯಕ್ಷ ಶ್ರೀಕಾಂತ ಬಜಂತ್ರಿ ಧ್ವಜಾರೋಹಣ ನೆರವೇರಿಸಿದರು.
ಉಪಾಧ್ಯಕ್ಷ ಮಹಿಬೂಬ್ ಚೌಧರಿ ಪಂಚಾಕ್ಷರಿ ಮಿಂಚನಾಳ ಸಂಪತ್ ಜಮಾದಾರ, ಬಸವರಾಜ ಬಜಂತ್ರಿ, ಬಾಬು ರಾಠೋಡ, ಭೀಮಶೀ ಸೂರ್ಯವಂಶಿ ಹಾಗೂ ಸದಸ್ಯರು ಇದ್ದರು.
ಎಂಡಿಜಿ ಗ್ಯಾಸ್ ವಿತರಣಾ ಕೇಂದ್ರ:
ಧ್ವಜಾರೋಹಣವನ್ನು ವಿವೇಕಾನಂದ ಪರದೇಶಿಮಠ ನೆರವೇರಿಸಿದರು.
ಆನಂದ ಜಡಿಮಠ, ದಾವೂದ್ ರಿಸಾಲ್ದಾರ್, ಸಾದಿಕ್ ಟಕ್ಕಳಕಿ, ಮಂಜುನಾಥ ಜುಮನಾಳ, ಮಹಿಬೂಬ್ ರಿಸಾಲ್ದಾರ್ ಅನುಪಮಾ ಪರದೇಶಿಮಠ, ರೇವಣಸಿದ್ದ ತಳಕೇರಿ, ಪ್ರವೀಣ ಮಾಶ್ಯಾಳ ಇದ್ದರು.