ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ.ಕಲಾ ಮತ್ತು ಕೆ .ಸಿ .ಪಿ ವಿಜ್ಞಾನ ಮಹಾವಿದ್ಯಾಲಯ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಭವ್ಯ ಭಾರತ, ಬಲಿಷ್ಠ ಭಾರತವನ್ನು ನಿರ್ಮಾಣ ಮತ್ತು ಮಹಾನ್ ದಾರ್ಶನಿಕರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಕರಗತ ಮಾಡಿಕೊಳ್ಳಬೇಕು.ಅದರಂತೆ ನಮ್ಮ ದೇಶವನ್ನು ಇನ್ನಷ್ಟು ಉತ್ತಮಗೊಳಿಸಲು, ಭಾರತವನ್ನು ಭವಿಷ್ಯದಲ್ಲಿ ಮತ್ತಷ್ಟು ಬಲಿಷ್ಠಗೊಳಿಸಲು ಇಂದಿನ ಯುವ ಶಕ್ತಿಯ ಪಾತ್ರ ಅತ್ಯಂತ ಮಹತ್ವದೆಂದು ಪ್ರಾಚಾರ್ಯೆ ಡಾ.ಆರ್.ಎಮ್.ಮಿರ್ದೆ ಹೇಳಿದರು.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್. ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ ೭೬ನೇ ಗಣರಾಜ್ಯೋತ್ಸವದಲಿ ದ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು ನ್ಯಾಯ, ಸ್ವಾತಂತ್ರö್ಯ, ಸಮಾನತೆ, ಭ್ರಾತೃತ್ವ ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಸಂವಿಧಾನವನ್ನು ಜನವರಿ ೨೬ ೧೯೫೦ ರಲ್ಲಿ ಜಾರಿಗೊಳಿಸುವ ಮೂಲಕ ಭಾರತ ಸ್ವತಂತ್ರöಗಣರಾಜ್ಯವಾಯಿತು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಅಪಾರವಾದದ್ದು, ಭಾರತದ ಜನಸಂಖ್ಯೆಯ ಶೇ. ೬೫ ರಷ್ಟು ಜನರು ೩೫ ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಆದ್ದರಿಂದ ನಮ್ಮ ಯುವಕರು ನಮ್ಮ ಶಕ್ತಿ ಮತ್ತು ಈ ಶಕ್ತಿಯು ನಮ್ಮ ರಾಷ್ಟ್ರವು ಈಗಿರುವುದಕ್ಕಿಂತ ಹೆಚ್ಚು ಬಲಿಷ್ಠವಾಗಲು ಮುನ್ನುಗ್ಗಬೇಕಾಗಿದೆ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿಕೊಳ್ಳಲು ನಮ್ಮ ಸರ್ಕಾರವು ಕೆಲವು ಭಾಷೆಗಳನ್ನು ಶಾಸ್ತ್ರೀಯ ಭಾಷೆಗಳೆಂದು ಗುರುತಿಸಿದೆ ಭಾರತವು ವಿಭಿನ್ನ ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಹೊಂದಿದ್ದರೂ ಸಹಿತ ಸಂವಿಧಾನ ನಮ್ಮಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಣುವಂತೆ ಮಾಡಿದೆ. ಎಲ್ಲರಿಗೂ ಸಮಾನತೆ, ಸಮಾಜವಾದಿ, ಭಾತೃತ್ವ, ಸಹೋದರತೆ ಹಾಗೂ ಸ್ವಾತಂತ್ರವನ್ನು ನೀಡಿದ್ದು, ಕನ್ನಡ ಹಾಗೂ ಮರಾಠಿ ಸೇರಿದಂತೆ ದೇಶದ ೧೧ ಭಾಷೆಗಳನ್ನು ಶಾಸ್ತಿçÃಯ ಸ್ಥಾನಮಾನ ನೀಡಿ ಭಾರತದ ಶ್ರೀಮಂತ ಸಂಸ್ಕೃತಿಗೆ ಮೆರಗು ನೀಡಿದೆ. ನಾವು ನಮ್ಮ ಸಂಸ್ಕೃತಿಯನ್ನು ನಮ್ಮ ಪರಂಪರೆಯನ್ನು ಬೆಳೆಸಬೇಕಾಗಿದೆ. ನಮಗೆ ಮುಂದುವರೆಯಲು ಇನ್ನೂ ಸವಾಲುಗಳಿವೆ, ಅವುಗಳನ್ನು ಮೆಟ್ಟಿ ನಿಂತು ಮುನ್ನಡೆಯಬೇಕಾಗಿದೆ ಎಂದು ಹೇಳಿದರು.
ನಮ್ಮ ದಾರ್ಶನಿಕರು. ನಮ್ಮ ಹಿರಿಯರು ನಮಗೆ ಪ್ರೇರಣೆಯಾಗಿದ್ದಾರೆ ಅವರ ಮಾನವೀಯತೆಯ ತತ್ವಗಳು, ಏಕತೆ ಮತ್ತು ಕರುಣೆ ದಯೆ ನಮ್ಮ ಜೀವನದಲ್ಲಿ ಬಹಳ ಮುಖ್ಯ sಭಾರತವು ಕೃಷಿಯಾಗಲಿ, ಕೈಗಾರಿಕೆಯಾಗಲಿ, ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿಯ ಸಾಧಿಸಿದೆ ಅಲ್ಲದೆ ಪ್ರಭಾವ ಬೀರಿದೆ ಎಂದು ಹೇಳಲು ನಮಗೆ ಹೆಮ್ಮೆಯಾಗುತ್ತದೆ. ನಮ್ಮ ದೇಶದ ಭವಿಷ್ಯವಾಗಿರುವ ಇಂದಿನ ಯುವಕರು,ವಿದ್ಯಾರ್ಥಿಗಳು ಜ್ಞಾನವನ್ನು ನವೀಕರಿಸಿಕೊಳ್ಳಬೇಕು, ಕೌಶಲ್ಯವನ್ನು ನವೀಕರಿಸಿಕೊಳ್ಳಬೇಕು, ಜೀವನವು ಒದಗಿಸುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ದೇಶದ ಮಹಾನ್ ದಾರ್ಶನಿಕರನ್ನು ಸ್ಪೂರ್ತಿಯಾಗಿಸಿಕೊಂಡು ದೇಶದ ಪ್ರಗತಿಗೆ ಮತ್ತು ಅಭಿವೃದ್ದಿಗೆ ಶ್ರಮಿಸಬೇಕು. ವಿದಾರ್ಥಿಗಳು ನಿರಂತರ ಕಲಿಕೆ,ದೈರ್ಯ, ಸಾಹಸ,ನಿರ್ದಿಷ್ಟ ಗುರಿ ಸಂವಿಧಾನದ ಆಶಯಗಳು ಇಡೇರಿಸುವಲ್ಲಿ ಇಂದಿನ ಯುವಕರು ಶ್ರಮಿಸಬೇಕಾಗಿದೆ. ಶಿಕ್ಷಣ, ಕ್ರೀಡೆ ಹಾಗೂ ಉದ್ಯಮದ ಮೂಲಕ ಭಾರತವನ್ನು ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಕರೆ ನೀಡಿದರು.ರಾಷ್ಟ್ರಕ್ಕೆ ಅರ್ಥಪೂರ್ಣವಾಗಿ ಕೊಡುಗೆ ನೀಡಬೇಕು ಮತ್ತು ಮುಂಬರುವ ವರ್ಷಗಳಲ್ಲಿ ಇದನ್ನು ಇನ್ನಷ್ಟು ಉತ್ತಮ ಮತ್ತು ಬಲಶಾಲಿಯಾಗಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪ ಪ್ರಾಚಾರ್ಯರಾದ ಡಾ.ಅನೀಲ ಬಿ ನಾಯಕ. ಪಿಯುಸಿ ಪ್ರಾಚಾರ್ಯ ಪ್ರೊ.ಸಿ.ಬಿ.ಪಾಟೀಲ, ಎ ಎಸ್ ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ.ಬಿ.ಎಸ್ ಬೆಳಗಲಿ,ಪಿಯುಸಿ ಪ್ರಾಚಾರ್ಯ ಪ್ರೊ.ಎಸ್ ಜೆ ಜೀರಗಾಳಿ, ಎನ್‌ಸಿಸಿ ಅಧಿಕಾರಿಗಳಾದ ಡಾ.ರಾಮಚಂದ್ರ ನಾಯಕ, ಎಸ್ ಎ ಪಾಟೀಲ,ಎಂಬಿಎ ಡೈರೆಕ್ಟರ್ ಡಾ. ಚಿದಾನಂದ ಬ್ಯಾಹಟ್ಟಿ ,ದೈಹಿಕ ನಿರ್ದೇಶಕರಾದ ಎಸ್.ಕೆ.ಪಾಟೀಲ,ಐಕ್ಯೂಎಸಿ ನಿರ್ದೇಶಕರಾದ ಡಾ.ಪಿ.ಎಸ್ ಪಾಟೀಲ, ಸ್ಕೌಟ್ಸ್ ಮತ್ತು ಗೈಡ್ಸ್ ಅಧಿಕಾರಿಗಳು,ಡಾ.ಉಷಾದೇವಿ ಹಿರೇಮಠ, ಎನ್ ಎಸ್ ಎಸ್ ಅಧಿಕಾರಿಗಳು ಡಾ.ತರನ್ನುಮ್ ಜಬೀನಖಾನ,ಡಾ ಮಿಲನ್ ರಾಠೋಡ್ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾದ ಡಾ.ಶ್ರೀನಿವಾಸ ದೊಡ್ಡಮನಿ ವiಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರೊ.ಶ್ವೇತಾ.ಸವನೂರ ಕಾರ್ಯಕ್ರಮವನ್ನು ನಿರೂಪಿಸಿದರು.