ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಸಂವಿಧಾನ ನಮಗೆ ಪ್ರಶ್ನಿಸುವ ಹಕ್ಕನ್ನು, ಸಮಾನತೆಯನ್ನು ನೀಡಿದೆ, ಅದರ ಆಶಯದಂತೆ ನಮ್ಮೆಲ್ಲರ ಜೀವನ ಸಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಹೇಳಿದರು.
ಆಲಮಟ್ಟಿಯ ಎಂಪಿಎಸ್ ಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ ಅಂಬೇಡ್ಕರ ಅವರನ್ನು ಅವರ ಕಣ್ಮರೆಯಾಗಿ ೭೦ ವರ್ಷಕ್ಕೂ ಹೆಚ್ಚು ದಿನಗಳಾದರೂ ಈಗಲೂ ಅವರನ್ನು ಇಡೀ ದೇಶ ಸ್ಮರಿಸುತ್ತದೆ , ಅದರಂತೆ ನಾವು ಸಮಾಜದಲ್ಲಿ ಬದುಕಬೇಕು ಎಂದರು.
ಮುಖ್ಯ ಶಿಕ್ಷಕ ಬಿ.ಎಸ್.ಯರವಿನತೆಲಿಮಠ ಅಧ್ಯಕ್ಷತೆ ವಹಿಸಿದ್ದರು.
ಎಸ್ ಡಿಎಂಸಿ ಅಧ್ಯಕ್ಷ ನಿಸ್ಸಾರ್ ಪಿಂಜಾರ್, ಸುರೇಶ ಹುರಕಡ್ಲಿ, ಸಾವಿತ್ರಿ ಅಂಗಡಿ ಮತ್ತಿತರರು ಇದ್ದರು.
ಮಕ್ಕಳು ಸಾಂಸ್ಕೃತಿಕ ನೃತ್ಯಗಳನ್ನು ಪ್ರದರ್ಶಿಸಿದರು

