Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬೆಂಗಳೂರಿನಲ್ಲಿರುವ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕಳೆದ ವರ್ಷ ನವೆಂಬರ್ ಡಿಸೆಂಬರ್ ತಿಂಗಳಿನಲ್ಲಿ ನಡೆಸಿದ ಪರೀಕ್ಷೆಯಲ್ಲಿ ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ ಔಷಧ (ಫಾರ್ಮಸಿ) ಮಹಾವಿದ್ಯಾಲಯದ ಐದು ಜನ ವಿದ್ಯಾರ್ಥಿಗಳು ಸ್ನಾತಕೋತ್ತರ ಮತ್ತು ನಾಲ್ಕು ಜನ ವಿದ್ಯಾರ್ಥಿಗಳು ಪದವಿ ವಿಭಾಗಗಳಲ್ಲಿ ರಾಜ್ಯ ಮಟ್ಟದಲ್ಲಿ ರ‍್ಯಾಂಕ್ ಗಳಿಸುವ ಮೂಲಕ ಗಮನ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.ಸ್ನಾತಕೋತ್ತರ ಎಂ. ಫಾರ್ಮಾ ಪರೀಕ್ಷೆಯಲ್ಲಿ ನಾನಾ ವಿಷಯಗಳ ಒಟ್ಟು 2325 ಅಂಕಗಳಿಗೆ ಪರೀಕ್ಷೆ ನಡೆದಿತ್ತು. ಎಂ. ಫಾರ್ಮಾ ಕೆಮೆಸ್ಟ್ರಿ ವಿಭಾಗದಲ್ಲಿ ಹಣಮಂತ ಬಿ. ಸಣ್ಣಕ್ಕಿ ಅವರು 3ನೇ ರ‍್ಯಾಂಕ್ (2090 ಅಂಕ), ಎಂ. ಫಾರ್ಮ್ ಕ್ವಾಲಿಟಿ ಅಶೂರನ್ಸ್ ವಿಭಾಗದಲ್ಲಿ ಜಗದೇವಿ 7ನೇ ರ‍್ಯಾಂಕ್ (2033 ಅಂಕ), ಎಂ. ಫಾರ್ಮ್ ಫಾರ್ಮಸಿ ಪ್ರ‍್ಯಾಕ್ಟಿಸ್ ವಿಭಾಗದಲ್ಲಿ ಪ್ರಜ್ವಲ ಸಿ. ಮಠ 3ನೇ ರ‍್ಯಾಂಕ್ (2005 ಅಂಕ), ಮಲ್ಲಿಕಾರ್ಜುನ್ ಎಸ್. ಇರಣಿ 7ನೇ ರ‍್ಯಾಂಕ್ (1930 ಅಂಕ), ಮುರುಗೇಶ ದೇವೂರ 10ನೇ ರ‍್ಯಾಂಕ್ (1897…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಆಸ್ತಿ ನಂ.೧೦೨೯ರ ಖವರಸ್ಥಾನ ಜಾಗೆಯಲ್ಲಿ ವಕ್ಫ್ ಹಿತರಕ್ಷಣಾ ವೇದಿಕೆ ಹಮ್ಮಿಕೊಂಡ ೧೭ನೆಯ ದಿನದ ದರಣಿ ಸತ್ಯಾಗ್ರಹಕ್ಕೆ ಆಗಮಿಸಿದ್ದ ನ್ಯಾಯವಾದಿ ಎಸ್.ಎ.ಖಾದ್ರಿ ಪ್ರತಿಭಟನಾಕಾರರ ಮನವೊಲಿಸಿ ಸತ್ಯಾಗ್ರಹವನ್ನು ಕೊನೆಗೊಳಿಸುವಲ್ಲಿ ಸಫಲರಾದರು.ಪಟ್ಟಣದ ಆಸ್ತಿ ನಂ.೧೦೨೯ರ ಖವರಸ್ಥಾನ ಜಾಗೆಯಲ್ಲಿ ವಕ್ಫ್ ಹಿತರಕ್ಷಣಾ ವೇದಿಕೆ ಹಮ್ಮಿಕೊಂಡ ದರಣಿ ಸತ್ಯಾಗ್ರಹಕ್ಕೆ ಬೇಟಿ ನೀಡಿ ಮಾತನಾಡಿದ ಅವರು, ಸದರಿ ಆಸ್ತಿ ನಂ. ಜಾಗೆಯು ಖಬರಸ್ಥಾನ ಜಾಗೆಯಾಗಿದ್ದು, ಅದು ಇಂದು ಮುಂದು ಎಂದೆಂದು ಖಬರಸ್ಥಾನ ಮೀಸಲಾದ ಜಾಗೆ ಇರುತ್ತದೆ. ಇದು ಅಧಿಕೃತ ಸರಕಾರದ ಘೋಷಣೆ ಎಂದೇ ಸಿಂದಗಿ ನಗರದ ಸಮಸ್ತ ಮುಸ್ಲಿಂ ನಾಗರಿಕರು ಬರೆದಿಟ್ಟುಕೊಳ್ಳಬೇಕೆಂದು ಹೇಳಿದ ಅವರು, ಸದರಿ ಆಸ್ತಿಗೆ ಸಂಬಂಧಿಸಿದ ಒಂದು ಇಂಚು ಜಾಗವು ಸಮಸ್ತ ಸಿಂದಗಿ ನಾಗರಿಕರ ಒಪ್ಪಿಗೆ ಇಲ್ಲದೇ ಯಾರೋಬ್ಬ ವ್ಯಕ್ತಿಯಾಗಲಿ, ಯಾವುದೇ ಕಮಿಟಿಗಳಾಗಲಿ ಪರಭಾರೆ ಅಥವಾ ಉಪಭೋಗ ಮಾಡುವಂತಿಲ್ಲ ಎಂಬುದು ಸರಕಾರದ ಸ್ಪಷ್ಟ ನಿಲುವಾಗಿದೆ. ಈಗಾಗಲೇ ಚಾಲ್ತಿಯಲ್ಲಿರುವ ಅನಧಿಕೃತ ಖಬರಸ್ಥಾನ ಕಮಿಟಿಯ ಸತ್ಯಾಸತ್ಯತೆಯನ್ನು ಪರಿಗಣಿಸಿ ಆದಷ್ಟು ಅದರ ರದ್ದತಿಗೆ ಕ್ರಮವಹಿಸಿಲು ವಕ್ಫ್…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಪುರಸಭೆಯ ಸರಹದ್ದಿನಲ್ಲಿ ಸುಮಾರು ವರ್ಷಗಳಿಂದ ಅನಧಿಕೃತವಾಗಿ ಅಂಗಡಿಗಳನ್ನು ಕಟ್ಟಿ ಅವುಗಳಿಂದ ಬಾಡಿಗೆ ಪಡೆಯುತ್ತಿದ್ದು, ಅಂತಹ ಅಂಗಡಿಗಳನ್ನು ತೆರವುಗೊಳಿಸಲು ಪುರಸಭೆಯಲ್ಲಿ ಠರಾವು ಪಾಸು ಮಾಡಲಾಗಿದೆ ಎಂದು ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಹೇಳಿದರು.ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಧಿಕೃತವಾಗಿ ಉತಾರಿಗಳನ್ನು ಸೃಷ್ಠಿಸಿಕೊಂಡು ಪ್ರತಿ ತಿಂಗಳು ಹತ್ತಾರು ಸಾವಿರ ಬಾಡಿಗೆ ಪಡೆಯುತ್ತಿರುವುದರಿಂದ ಪುರಸಭೆಗೆ ಬರಬೇಕಾದ ಆದಾಯಕ್ಕೆ ಕೊಕ್ಕೆ ಬೀಳುತ್ತಿದ್ದು, ಅಂತಹ ಅಂಗಡಿಗಳಿಗೆ ಪುರಸಭೆಗೆ ಹಸ್ತಾಂತರ ಮಾಡಿಕೊಂಡು ಟೆಂಡರ್ ಮೂಲಕ ಬಾಡಿಗೆಯನ್ನು ನಿರ್ಧರಿಸಲಾಗುವುದು. ಒಂದು ವೇಳೆ ಪ್ರಸ್ತುತ ಅಂಗಡಿಕಾರರು ಒಪ್ಪದೇ ಇದ್ದ ಪಕ್ಷದಲ್ಲಿ ಅಂತಹ ಅಂಗಡಿಗಳನ್ನು ನೆಲಸಮ ಮಾಡಿ ಪುರಸಭೆಯಿಂದ ಮಳಿಗೆಗಳನ್ನು ನಿರ್ಮಿಸಿ ಬಾಡಿಗೆಗೆ ಕೊಡಲಾಗುವುದು ಎಂದರು.ಈ ವೇಳೆ ಪೌರ ಕಾರ್ಮಿಕರಿಗೆ ನಿವೇಶನಗಳ ಹಕ್ಕು ಪತ್ರವನ್ನು ವಿತರಿಸಲಾಯಿತು.ಇದೇ ಸಂದರ್ಭದಲ್ಲಿ ನಬಿರಸೂಲ್ ಉಸ್ತಾದ, ಸಿದ್ದು ಅಂಗಡಿ, ಅಬ್ಬಾಸಲಿ ಖಾಕಂಡಕಿ, ಅಭಿಯಂತರ ಸಚಿನ ಮೋರಟಗಿ ಸೇರಿದಂತೆ ಅನೇಕರು ಇದ್ದರು.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಹೃದಯ ಭಾಗದಲ್ಲಿರುವ ಖಬರಸ್ಥಾನ ಜಾಗ ಖಬರಸ್ಥಾನಕ್ಕಾಗಿಯೇ ಉಳಿಯಬೇಕು ಎಂದು ಆಗ್ರಹಿಸಿ ಕಳೆದ ೧೭ ದಿನಗಳಿಂದ ದರಣಿ ಸತ್ಯಾಗ್ರಹ ನಡೆದಿದೆ. ಈ ಸಮಸ್ಯೆಯನ್ನು ಪರಿಹರಿಸಲು ಸಿಂದಗಿ ಶಾಸಕ ಅಶೋಕ ಮನಗೂಳಿ ಅವರು ಎರಡು ಬಣದವರನ್ನು ಕರೆಯಿಸಿ ಮಾತುಕತೆ ನಡೆಸಿದ್ದಾರೆ ಎಂದು ಕರ್ನಾಟಕ ಮುಸ್ಲಿಂ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಎಂ.ಎ.ಖತೀಬ ಹೇಳಿದರು.ಪಟ್ಟಣದಲ್ಲಿ ಕರ್ನಾಟಕ ಮುಸ್ಲಿಂ ಹಿತರಕ್ಷಣಾ ವೇದಿಕೆಯ ವತಿಯಿಂದ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿ ಸುಮಾರು ವರ್ಷಗಳಿಂದ ಬಡ ಜನರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ವ್ಯಾಪಾರ ವಹಿವಾಟು ಮಾಡಿಕೊಂಡಿದ್ದರು. ಅದಕ್ಕಾಗಿ ಎರಡು ಬಣದಿಂದ ಮೂರು ಜನ ಸದಸ್ಯರು ತೆಗೆದುಕೊಂಡು ಒಂದು ಸಮಿತಿಯನ್ನು ರಚಿಸಿ ಅಲ್ಲಿ ಅಂಗಡಿಗಳನ್ನು ನಿರ್ಮಿಸಿಕೊಳ್ಳುವಂತೆ ಉಸ್ತುವಾರಿ ವಹಿಸಿಕೊಳ್ಳುವುದಾಗಿ ಹೇಳಿದ್ದಾರೆ. ಪಟ್ಟಣದ ದುಡಿಯುವ ಬಡ ಜನರಿಗೆ ಅನುಕೂಲವಾಗಲಿ ಎಂಬ ದೃಷ್ಠಿಯಿಂದ ಶಾಸಕರಿಗೆ ಒತ್ತಾಯಿಸಲಾಗಿದೆ. ಈ ಕುರಿತು ಶಾಸಕರು ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡಿದ್ದಾರೆ ಎಂದು ಮಾಧ್ಯಮದವರಿಗೆ ವಿವರಣೆ ನೀಡಿದ್ದಾರೆ.ಈ ವೇಳೆ ಕರ್ನಾಟಕ ಮುಸ್ಲಿಂ ಹಿತರಕ್ಷಣಾ ವೇದಿಕೆಯ…
ಭವಿಷ್ಯಕ್ಕಾಗಿ ಠೇವಣಿ ಇಟ್ಟಿದ್ದ ಹಣವನ್ನು ಮರಳಿಸುವಂತೆ ಸರ್ಕಾರಕ್ಕೆ ನೊಂದ ಠೇವಣಿದಾರರ ಆಗ್ರಹ ಉದಯರಶ್ಮಿ ದಿನಪತ್ರಿಕೆ ಬೆಳಗಾವಿ: ಬಹು ಕೋಟಿ ವಂಚನೆ ಹಗರಣದ ಬೆಳಗಾವಿ ಮೂಲದ ಸಂಗೊಳ್ಳಿ ರಾಯಣ್ಣ ಸಹಕಾರಿ ಸಂಸ್ಥೆಯಲ್ಲಿ ಸಾವಿರಾರು ಜನರು ತಮ್ಮ ಉಳಿತಾಯಕ್ಕಾಗಿ ಭವಿಷ್ಯಕ್ಕಾಗಿ ಠೇವಣಿ ಇಟ್ಟಿದ್ದ ಹಣವನ್ನು ಮರಳಿಸುವಂತೆ ನೊಂದ ಠೇವಣಿದಾರರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.ಈ ಕುರಿತು ಗುರುವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ನೊಂದ ಠೇವಣಿದಾರರು, ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅರ್ಬನ್ ಕೋಆಪರೇಟಿವ್ ಸೊಸೈಟಿಯ ಉದ್ಯಮಿ ಆನಂದ ಅಪ್ಪುಗೋಳ ಎಂಬುವವರು ಠೇವಣಿದಾರರಿಗೆ ಪಂಗನಾಮ ಹಾಕಿದ್ದು, ಸಾವಿರಾರು ಕೋಟಿ ಆಸ್ತಿಯ ದಾಖಲೆ ಇದ್ದರೂ ಸಹ ಕಳೆದ ಏಳು ವರ್ಷದಿಂದ ಸಂಗೊಳ್ಳಿ ರಾಯಣ್ಣ ಸಹಕಾರಿ ಹಣಕಾಸು ಸಂಸ್ಥೆಯ ಅವ್ಯವಹಾರ ಇನ್ನೂ ಇತ್ಯರ್ಥವಾಗಿಲ್ಲ. 2020 ರಲ್ಲಿ ಬೆಳಗಾವಿ ಅಸಿಸ್ಟೆಂಟ್ ಕಮಿಷನರ್ ಕಚೇರಿಯಲ್ಲಿ ಎಲ್ಲರಿಗೂ ಠೇವಣಿ ಪಾತ್ರದ ನಕಲು ಪ್ರತಿಗಳನ್ನು ಹಚ್ಚಲು ಹೇಳಿ ಅರ್ಜಿಗಳನ್ನು ಸ್ವೀಕರಿಸಿದರು. ಬಡವರು ಕಾರ್ಮಿಕರು ಮದ್ಯಮ ವರ್ಗದವರು ಅರ್ಜಿ ಸಲ್ಲಿಸಿ ತಾವು ತುಂಬಿದ ಠೇವಣಿ ಹಣ ಬರುವುದೆಂದು ದಾರಿ…
ಉದಯರಶ್ಮಿ ದಿನಪತ್ರಿಕೆ ಅಪಜಲಪುರ: ಭೀಮಾತೀರದಲ್ಲಿರುವಉಡಚಣದಲ್ಲಿ ಸಹಸ್ರಾರ ಭಕ್ತರ ಜೈ ಘೋಷಗಳ ಮಧ್ಯೆ ಸಂಭ್ರಮದಿಂದ ಹುಚ್ಚ ಲಿಂಗೇಶ್ವರ ಜಾತ್ರಾ ಮಹೋತ್ಸವ ಬುಧವಾರ ಅಧೂರಿಯಾಗಿ ನೆರವೇರಿತು.ಬುಧವಾರ ಬೆಳಗ್ಗೆ ಶ್ರೀ ಹುಚ್ಚ ಲಿಂಗೇಶ್ವರರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆಯ ಮೂಲಕ ಭೀಮಾನದಿಗೆ ಗಂಗಾ ಸ್ಥಲಮಾಡಿಸಿಕೊಂಡು ಮೂರ್ತಿಯನ್ನು ದೇವಸ್ಥಾನಕ್ಕೆ ಅದ್ದೂರಿ ಮೆರವಣಿಗೆ ಡೊಳ್ಳು ಹಲಗೆ ಬಾಜಾ ಭಜಂತ್ರಿಗಳೊಂದಿಗೆ ಕರೆ ತರಲಾಯಿತು.ನಂತರ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಸಹಸ್ರಾರು ಭಕ್ತ ಸಮೂಹ ಮಧ್ಯೆ ಮಧ್ಯಾನ ಎರಡು ಗಂಟೆಗೆ ಭಂಡಾರಿ ದಂಪತಿ ಅಗ್ಗಿ ಪ್ರವೇಶಿಸುವ ಮೂಲಕ ಅಗ್ಗಿ ಹಾಯುವ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು, ರಾಜ್ಯ ಹಾಗೂ ನೆರೆ ರಾಜ್ಯದ ಭಕ್ತರು ಬಿಸಿಲಲ್ಲಿ ಅಗ್ಗಿ ಹಾಯುವ ಸನ್ನಿವೇಶವನ್ನು ಕಣ್ತುಂಬಿಕೊಂಡು ಧನ್ಯರಾದರು, ಸಹಸ್ರಾರು ಭಕ್ತರು ಆಗ್ಗಿ ಪ್ರವೇಶವನ್ನು ವೀಕ್ಷಿಸಿದರು. ಎಲ್ಲೆಡೆ ಹುಚ್ಚ ಲಿಂಗೇಶ್ವರ ಮಹಾರಾಜ ಕಿ ಜೈ ಜೈ ಘೋಷಣೆಗಳು ಮೊಳಗಿದವು,ಬೃಹತ್ ಜಾನುವಾರ ಜಾತ್ರೆಯೊ ನಡೆದಿದ್ದು ಸಾವಿರಾರು ಜಾನುವಾರುಗಳ ವ್ಯಾಪಾರಕ್ಕೆ ಬೃಹತ್ತ ಮಾರುಕಟ್ಟೆ ದೊರೆಕಿದೆ ಜನರಿಗೆ ಅಗ್ಗಿ ನೋಡಲು ಅನುಕೂಲ ಕಲ್ಪಿಸಲು ಬೃಹತ್ ಟೀವಿ…
ಶಿಕ್ಷಕ, ಪತ್ರಕರ್ತ ಗಂಗಾದರ ಹಿರೇಮಠ ಅವರಿಗೆ ಮಾತೃವಿಯೋಗ ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಸ್ಥಳೀಯ ಎಂ.ಎಚ್.ಎಂ.ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಗಂಗಾಧರ ಹಿರೇಮಠ ಅವರ ತಾಯಿ ಶ್ರೀಮತಿ ಶಾಂತಾಬಾಯಿ ಮಲ್ಲಿಕಾರ್ಜುನಯ್ಯ ಹಿರೇಮಠ (78) ಬುಧವಾರ ರಾತ್ರಿ ನಿಧನರಾದರು.ಕಳೆದೆರಡು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮೃತರು ಭಾಗಶಃ ಊಟವನ್ನು ತ್ಯಜಿಸಿದ್ದರು. ಅವರಿಗೆ ನಾಲ್ಕು ಜನ ಮಕ್ಕಳಲ್ಲಿ ತಲಾ ಇಬ್ಬರು ಗಂಡು, ಹೆಣ್ಣು ಮಕ್ಕಳಿದ್ದರು. ಇಬ್ಬರು ಗಂಡು ಮಕ್ಕಳಲ್ಲಿ ಒಬ್ಬರು ಈಗಾಗಲೇ ಅಸ್ತಂಗತರಾಗಿದ್ದಾರೆ. ಈಗ ಪತಿ, ಮೂರು ಜನ ಮಕ್ಕಳು ಸೇರಿದಂತೆ ಅಪಾರ ಬಂದು ಬಳಗವನ್ನು ಬಿಟ್ಟು ಮೃತರು ಅಗಲಿದ್ದಾರೆ.ಮೃತರ ಪುತ್ರ ಗಂಗಾಧರ ಹಿರೇಮಠ ಒಳ್ಳೆಯ ಯೋಗಪಟು, ಯೋಗ ಗುರು, ಆಲಮಟ್ಟಿ ಕನ್ನಡಪ್ರಭ ಮತ್ತು ಉದಯರಶ್ಮಿ ದಿನಪತ್ರಿಕೆಗಳ ವರದಿಗಾರರಾಗಿ ವೃತ್ತಿ ಕಾಯಕದ ಜೊತೆಗೆ ಸಮಾಜಮುಖಿ ಸೇವೆ ಸಲ್ಲಿಸುತ್ತಾ ಈ ಭಾಗದ ಜನತೆಯ ಪ್ರೀತಿಗೆ ಪಾತ್ರರಾಗಿದ್ದಾರೆ.ಮೃತರ ಅಂತ್ಯಕ್ರಿಯೆ ಗುರುವಾರ ಸಕಲ ಗೌರವಗಳೊಂದಿಗೆ ಸಿಂದಗಿ ಪಟ್ಟಣದಲ್ಲಿ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.ಸಂತಾಪ: ಹಿರಿಯ ಮಾತೋಶ್ರೀ ಶ್ರೀಮತಿ ಶಾಂತಾಬಾಯಿ ಹಿರೇಮಠ…
ಲೇಖನ:- ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕುದ.ಕ ಜಿಲ್ಲೆ-೫೭೪೧೯೮ದೂ: ೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ಮನುಷ್ಯನಿಗೆ ೩೦ ವರ್ಷ ವಯಸ್ಸಿನ ನಂತರ ವೃದ್ಧಾಪ್ಯ ಆರಂಭ ಆಗುತ್ತದೆ. ಆತನ ಕಾರ್ಯಕ್ಷಮತೆಯ ಉತ್ತುಂಗದ ಹಂತಕ್ಕೇರಿ ಅಲ್ಲಿಂದ ಆತನ ದೇಹದ ಜೀವಕೋಶಗಳು ನಿಧಾನವಾಗಿ ಕುಂದಲು ಪ್ರಾರಂಭವಾಗುತ್ತದೆ. ನಂತರ ಸ್ನಾಯುಗಳ ಶಕ್ತಿ ಕುಂಠಿತ ಆಗುವುದು, ಉಸಿರಾಟ ನಿಧಾನವಾಗುವುದು, ರಕ್ತಪರಿಚಲನೆಯ ದಕ್ಷತೆ ಕಡಿಮೆ ಆಗುವುದು, ದೇಹದ ರೋಗನಿರೋಧಕ ಶಕ್ತಿಯೂ ಕಡಿಮೆ ಆಗುತ್ತಾ ಹೋಗುತ್ತದೆ. ಅಷ್ಟೇ ಅಲ್ಲ ಆತನ ಚರ್ಮದ ಸ್ಥಿತಿಸ್ಥಾಪಕತೆ ಕಡಿಮೆಯಾಗಿ ಸುಕ್ಕುಗಟ್ಟಲು ಆರಂಭಿಸುತ್ತದೆ. ಮುಪ್ಪಿಗೆ ಕಾರಣಗಳೇನು ಎಂದು ವಿಶ್ಲೇಷಿಸಿದರೆ ವಿಜ್ಞಾನಿಗಳ ಪ್ರಕಾರ ಮುಪ್ಪು ಮತ್ತು ಮರಣಕ್ಕೆ ಸಂಬಂಧಿಸಿದ ಕೋಶಗಳ ಜೀನ್‌ಗಳಲ್ಲೇ ಒಂದು ವೇಳಾಪಟ್ಟಿಯಿದ್ದು, ಇದು ಪೂರ್ವನಿರ್ಧರಿತ. ಅಂಗಗಳ ಅಭಿವರ್ಧನೆಯನ್ನು ಕೆಲವು ಜೀನ್‌ಗಳು ನಿಯಂತ್ರಿಸುವಂತೆ, ಕೆಲವು ಜೀನ್‌ಗಳು ಮುಪ್ಪು ಮತ್ತು ಮರಣವನ್ನು ನಿಯಂತ್ರಿಸುತ್ತವೆ.ಮನುಷ್ಯನಲ್ಲಿ ಮಗುವಿನ ಚರ್ಮದ ಜೀವಕೋಶಗಳು ಸುಮಾರು ೫೦ ಬಾರಿ ವಿಭಜಿಸಿ ತಮ್ಮ ವಿಭಜನೆಯ ಕೆಲಸವನ್ನು ನಿಲ್ಲಿಸಿಬಿಡುತ್ತವೆ. ಅದೇ ೯೦ ವರ್ಷ ವಯಸ್ಸಿನ…
ಕಾಂಗ್ರೆಸ್ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿಯಿಂದ ಸಮಾಜದಲ್ಲಿ ಅಶಾಂತಿ | ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪ ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇಕಡಾ 4ರಷ್ಟು ಮೀಸಲಾತಿ ನೀಡಲು ಯೋಜಿಸುತ್ತಿದೆ ಎಂದು ಬಿಜೆಪಿ ಬುಧವಾರ ಆರೋಪಿಸಿದೆ.ರಾಜ್ಯಾದ್ಯಂತ ಎಲ್ಲಾ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿರುವಾಗ, ಆಡಳಿತಾರೂಢ ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಸರ್ಕಾರಿ ಒಪ್ಪಂದಗಳಲ್ಲಿ ಶೇಕಡಾ ನಾಲ್ಕು ಮೀಸಲಾತಿ ನೀಡುವ ಪ್ರಸ್ತಾಪವನ್ನು ಸಚಿವ ಸಂಪುಟದ ಮುಂದೆ ಮಂಡಿಸಲು ನಿರ್ಧರಿಸಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.ದೇಶದಲ್ಲಿ ಅನೇಕ ಇತರ ಸಮುದಾಯಗಳಿರುವಾಗ ಅಲ್ಪಸಂಖ್ಯಾತರೆಂದರೆ ಯಾವಾಗಲೂ ಮುಸ್ಲಿಮರು ಎಂದು ಏಕೆ ಕರೆಯಲಾಗುತ್ತದೆ ಎಂದು ವಿಜಯೇಂದ್ರ ಪ್ರಶ್ನಿಸಿದರು.”ಅಲ್ಪಸಂಖ್ಯಾತರು ಎಂದರೆ ಮುಸ್ಲಿಮರು ಮಾತ್ರವೇ ಹೊರತು ಬೇರೆ ಯಾರನ್ನೂ ಅಲ್ಲವೇ? ಕಾಂಗ್ರೆಸ್‌ನ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿಗಳು ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡುತ್ತವೆ” ಎಂದು ವಿಜಯೇಂದ್ರ ಸುದ್ದಿಗಾರರಿಗೆ ತಿಳಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ನಿಜವಾಗಿಯೂ ಹಿಂದುಳಿದ ಸಮುದಾಯಗಳ ನಾಯಕರಾಗಿದ್ದರೆ, ಅವರು ತಮ್ಮನ್ನು ತಾವು ಹಿಂದುಳಿದ ಸಮುದಾಯಗಳ ನಾಯಕ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಅವರಿಗೆ ಅಧಿಕಾರ ನೀಡುವ…
ಉದಯರಶ್ಮಿ ದಿನಪತ್ರಿಕೆ ಗೋಲಗೇರಿ: ಕರ್ನಾಟಕ ರಾಜ್ಯ ತಳವಾರ ಮಹಾಸಭಾ ರಾಜ್ಯ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಹೋರಾಟಗಾರ ಶಿವಾಜಿ ಮೆಟಗಾರ ಅವರನ್ನು ಇಂದು ಸಿಂದಗಿಯಲ್ಲಿ ತಳವಾರ ಸಮಾಜದ ಬಾಂಧವರು ಸನ್ಮಾನಿಸಿ ಅಭಿನಂದಿಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿವಾಜಿ ಮೆಟಗಾರ ಅವರು, ನಾನು ಹಿಂದೆಯೂ ತಳವಾರ ಸಮಾಜದ ಅಭಿವೃದ್ಧಿಗಾಗಿ ಹೋರಾಟ ಮಾಡಿದ್ದೇನೆ ಮುಂದೆಯೂ ತಳವಾರ ಸಮಾಜದ ಅಭಿವೃದ್ಧಿಗಾಗಿ ಸದಾ ಸಿದ್ದವಿರುವದಾಗಿ ಹೇಳಿದರು.ಈ ಸಂದರ್ಭದಲ್ಲಿ ಮಾತನಾಡಿದ ತಳವಾರ ಸಮಾಜದ ಮುಖಂಡರಾದ ಮಡಿವಾಳ ನಾಯ್ಕೋಡಿ ಅವರು ತಳವಾರ ಸಮಾಜದ ಅಭಿವೃದ್ದಿಗಾಗಿ ಶಿವಾಜಿ ಮೆಟಗಾರ ಅವರ ಹೋರಾಟ ಯಾವಾಗಲೂ ಶ್ಲಾಘನೀಯ ಎಂದು ಹೇಳಿದರು.ಈ ಸಂದರ್ಭದಲ್ಲಿ ತಳವಾರ ಸಮಾಜದ ಮುಖಂಡರಾದ ಅರವಿಂದ ನಾಯ್ಕೋಡಿ, ನಾಗರಾಜ ತಳವಾರ, ಮಡಿವಾಳ ಕೂಡಿ, ಪ್ರಭು ನಾಟೀಕಾರ, ಶಂಕ್ರೆಪ್ಪಬೂದಿಹಾಳ, ಮಹೇಶ ಬೂದಿಹಾಳ,ಮಡಿವಾಳಪ್ಪ ನಾಯ್ಕೋಡಿ, ರಾಜಕುಮಾರ ಸುಂಗಠಾಣ, ಮುದಕಪ್ಪ ಸುಂಗಠಾಣ, ರವಿ.ಕೆಂಭಾವಿ ಸೇರಿದಂತೆ ಇನ್ನಿತರರು ಇದ್ದರು
