Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 25, 2026

ಆತ್ಮವಿಶ್ವಾಸ ಮತ್ತು ಧನಾತ್ಮಕ ಚಿಂತನೆಯಿಂದ ಭಯ ನಿವಾರಣೆ

ನೂತನ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ಯಾಂಕ್ ಅವ್ಯವಹಾರಕ್ಕೆ ಠೇವಣಿದಾರರ ಬಲಿ
(ರಾಜ್ಯ ) ಜಿಲ್ಲೆ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ಯಾಂಕ್ ಅವ್ಯವಹಾರಕ್ಕೆ ಠೇವಣಿದಾರರ ಬಲಿ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಭವಿಷ್ಯಕ್ಕಾಗಿ ಠೇವಣಿ ಇಟ್ಟಿದ್ದ ಹಣವನ್ನು ಮರಳಿಸುವಂತೆ ಸರ್ಕಾರಕ್ಕೆ ನೊಂದ ಠೇವಣಿದಾರರ ಆಗ್ರಹ

ಉದಯರಶ್ಮಿ ದಿನಪತ್ರಿಕೆ

ಬೆಳಗಾವಿ: ಬಹು ಕೋಟಿ ವಂಚನೆ ಹಗರಣದ ಬೆಳಗಾವಿ ಮೂಲದ ಸಂಗೊಳ್ಳಿ ರಾಯಣ್ಣ ಸಹಕಾರಿ ಸಂಸ್ಥೆಯಲ್ಲಿ ಸಾವಿರಾರು ಜನರು ತಮ್ಮ ಉಳಿತಾಯಕ್ಕಾಗಿ ಭವಿಷ್ಯಕ್ಕಾಗಿ ಠೇವಣಿ ಇಟ್ಟಿದ್ದ ಹಣವನ್ನು ಮರಳಿಸುವಂತೆ ನೊಂದ ಠೇವಣಿದಾರರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಈ ಕುರಿತು ಗುರುವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ನೊಂದ ಠೇವಣಿದಾರರು, ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅರ್ಬನ್ ಕೋಆಪರೇಟಿವ್ ಸೊಸೈಟಿಯ ಉದ್ಯಮಿ ಆನಂದ ಅಪ್ಪುಗೋಳ ಎಂಬುವವರು ಠೇವಣಿದಾರರಿಗೆ ಪಂಗನಾಮ ಹಾಕಿದ್ದು, ಸಾವಿರಾರು ಕೋಟಿ ಆಸ್ತಿಯ ದಾಖಲೆ ಇದ್ದರೂ ಸಹ ಕಳೆದ ಏಳು ವರ್ಷದಿಂದ ಸಂಗೊಳ್ಳಿ ರಾಯಣ್ಣ ಸಹಕಾರಿ ಹಣಕಾಸು ಸಂಸ್ಥೆಯ ಅವ್ಯವಹಾರ ಇನ್ನೂ ಇತ್ಯರ್ಥವಾಗಿಲ್ಲ. 2020 ರಲ್ಲಿ ಬೆಳಗಾವಿ ಅಸಿಸ್ಟೆಂಟ್ ಕಮಿಷನರ್ ಕಚೇರಿಯಲ್ಲಿ ಎಲ್ಲರಿಗೂ ಠೇವಣಿ ಪಾತ್ರದ ನಕಲು ಪ್ರತಿಗಳನ್ನು ಹಚ್ಚಲು ಹೇಳಿ ಅರ್ಜಿಗಳನ್ನು ಸ್ವೀಕರಿಸಿದರು. ಬಡವರು ಕಾರ್ಮಿಕರು ಮದ್ಯಮ ವರ್ಗದವರು ಅರ್ಜಿ ಸಲ್ಲಿಸಿ ತಾವು ತುಂಬಿದ ಠೇವಣಿ ಹಣ ಬರುವುದೆಂದು ದಾರಿ ಕಾಯ್ದರು. ನಾಲ್ಕು ವರ್ಷ ಗತಿಸಿದವು. ಕಳೆದ ಡಿಸೆಂಬರ್ ನಲ್ಲಿ ವಿಶೇಷಾಧಿಕಾರಿ ( KPID ) ಕಂದಾಯ ಇಲಾಖೆಗೆ ಒಳಪಟ್ಟ ಸಂಸ್ಥೆ ಮತ್ತೆ ಪತ್ರಿಕೆಯಲ್ಲಿ ಜಾಹಿರಾತು ಮಾಡಿ, ಠೇವಣಿದಾರರು ಮತ್ತೆ ಅರ್ಜಿ ಸಲ್ಲಿಸಲು ಹೇಳಿದರು. ಬಡವರು ಕೂಲಿ ಕಾರ್ಮಿಕರು ಬೆಂಗಳೂರಿನ ಮಹಾನಗರದಲ್ಲಿ ರಸ್ತೆ ಬದಿ ಮಲಗಿ ತಮ್ಮ ಕಾಗದ ಪತ್ರಗಳನ್ನು ಸಲ್ಲಿಸಿದರು. ಅದನ್ನು ಅತ್ಯಂತ ಶಿಸ್ತುಬದ್ಧವಾಗಿ ಪರಿಶೀಲಿಸಿ ಅದಕ್ಕೆ ರಸೀದಿ ನೀಡಿದರು. ಹಣ ಬರುತ್ತದೆ ಎಂದು ಈವರೆಗೆ ಕಾದ ಜನರ ನಂಬಿಕೆ ಈಗ ಹುಸಿಯಾಗಿದೆ. 12 ತಿಂಗಳು ಕಳೆದ ನಂತರ ಈಗ ಅಸಿಸ್ಟೆಂಟ್ ಕಮಿಷನರ್ ಕೆ ಪಿ ಐ ಡಿ ಮೂರನೆಯ ಮತ್ತು ನಾಲ್ಕನೆಯ ಮಹಡಿ ಪೋಡಿಯಂ ಬ್ಲಾಕ್ ಡಾ ಅಂಬೇಡ್ಕರ ವೀಧಿ ಬೆಂಗಳೂರ ಕಚೇರಿಯಲ್ಲಿ ದಿನವಿಡೀ ತಪಾಸಣೆ ಮಾಡಿ, ಮುದುಕರು, ಮಹಿಳೆಯರು ಸಲ್ಲಿಸಿದ ಅರ್ಜಿಗಳು ಈಗ ಮತ್ತೆ ತಿರಸ್ಕ್ರತವೆಂದು ಪತ್ರ ಹಾಕಿದ್ದಾರೆ.
ಇನ್ನಾದರೂ ಬಡವರ ಅಳಲನ್ನು ಅರ್ಥಮಾಡಿಕೊಂಡು ಮುಖ್ಯಮಂತ್ರಿ ಸಿದ್ಧರಾಮಯ್ಯ, ಕಂದಾಯ ಮಂತ್ರಿ ಕೃಷ್ಣಾ ಭೈರೇಗೌಡ, ಸಹಕಾರ ಮಂತ್ರಿ ಕೆ ಏನ್ ರಾಜಣ್ಣ ಈ ಕೂಡಲೇ ಜನರಿಗೆ ಸಹಾಯ ಮಾಡಿ ನ್ಯಾಯ ಒದಗಿಸಬೇಕೆಂದು ಕೋರಿದ್ದಾರೆ.
ಈಗಾಗಲೇ ಸಾಕಷ್ಟು ವಿಳಂಬವಾಗಿದ್ದಕ್ಕೆ ಠೇವಣಿದಾರರಿಗೆ ಮೋಸ ಮಾಡಿದ ಆನಂದ ಅಪ್ಪುಗೋಳ ಇವರ ಅಸ್ತಿ ಜಪ್ತಿ ಮಾಡಿ, ತನಿಖೆ ನಡೆಸಿ, ಶಿಕ್ಷೆ ಕೊಡದ ಸರಕಾರದ ಮೇಲೆ ಠೇವಣಿದಾರರಿಗೆ ಸಂಶಯ ಮೂಡುತ್ತಿದೆ. ಈಗಾಗಲೇ ಇದರಲ್ಲಿ ಎಷ್ಟೋ ಜನರು ಸತ್ತಿದ್ದಾರೆ. ಒಂದು ವೇಳೆ ಸಮಯಕ್ಕೆ ಸರಿಯಾಗಿ ಹಣ ಬರದಿದ್ದರೆ ಮತ್ತಷ್ಟು ಜನರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗ ಬಂದಿದೆ. ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳ ಕಿರುಕಳ ತಪ್ಪಿಸಿ ಸನ್ಮಾನ್ಯ ಮುಖ್ಯ ಮಂತ್ರಿಗಳು ಈ ಕೂಡಲೇ ಠೇವಣಿ ಇಟ್ಟ ಹಣವನ್ನು ಸಂಗೊಳ್ಳಿ ರಾಯಣ್ಣ ಅರ್ಬನ್ ಸಹಕಾರ ಸಂಸ್ಥೆಯಿಂದ ಮರುಪಾವತಿಸದಿದ್ದರೆ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತಗೆ ಎಂದು ಎಚ್ಚರಿಸಿದ್ದಾರೆ.
ಕಾರಣ ಕೂಡಲೇ ಸರ್ಕಾರ ಆನಂದ ಅಪ್ಪುಗೋಳ ಆಸ್ತಿಯನ್ನು ಹರಾಜು ಹಾಕಿ ಎಲ್ಲ ಸ್ಥಿರ ಚರ ಆಸ್ತಿ ಜಪ್ತಿ ಮಾಡಿ, ಅವನ ಬೇನಾಮಿ ಆಸ್ತಿ ಸರಕಾರ ಮುಟ್ಟುಗೋಲು ಹಾಕಿ, ಬಡವರ ಕಾರ್ಮಿಕರ ಮಾಧ್ಯಮ ವರ್ಗದವರ ಮಹಿಳೆಯರ ಹಣವನ್ನು ನ್ಯಾಯಾಲಯದ ಆದೇಶದಂತೆ ಮರು ಪಾವತಿಸಬೇಕೆಂದು ನೊಂದ ಠೇವಣಿದಾರರು ಪ್ರಕಟಣೆ ಮೂಲಕ ಅಲವತ್ತುಕೊಂಡಿದ್ದಾರೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 25, 2026

ಆತ್ಮವಿಶ್ವಾಸ ಮತ್ತು ಧನಾತ್ಮಕ ಚಿಂತನೆಯಿಂದ ಭಯ ನಿವಾರಣೆ

ನೂತನ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ

ಮಾ.26ಕ್ಕೆ ರಾಜ್ಯ ಬಜೆಟ್ ಅಧಿವೇಶನ ಮುಕ್ತಾಯ!

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 25, 2026
    In ದಿನಪತ್ರಿಕೆ
  • ಆತ್ಮವಿಶ್ವಾಸ ಮತ್ತು ಧನಾತ್ಮಕ ಚಿಂತನೆಯಿಂದ ಭಯ ನಿವಾರಣೆ
    In (ರಾಜ್ಯ ) ಜಿಲ್ಲೆ
  • ನೂತನ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ
    In (ರಾಜ್ಯ ) ಜಿಲ್ಲೆ
  • ಮಾ.26ಕ್ಕೆ ರಾಜ್ಯ ಬಜೆಟ್ ಅಧಿವೇಶನ ಮುಕ್ತಾಯ!
    In (ರಾಜ್ಯ ) ಜಿಲ್ಲೆ
  • ಸ್ಮಶಾನ ಭೂಮಿಗೆ ಅಧಿಕಾರಿಗಳು ಪರಿಹಾರ ಕಂಡುಕೊಳ್ಳಿ :ಡಿಸಿ ಡಾ.ಆನಂದ ಕೆ.
    In (ರಾಜ್ಯ ) ಜಿಲ್ಲೆ
  • ಅಲೆಮಾರಿ ಜನಾಂಗದವರ ಕಾಲೊನಿಗಳಿಗೆ ಮೂಲಸೌಲಭ್ಯ ಕಲ್ಪಿಸಿ
    In (ರಾಜ್ಯ ) ಜಿಲ್ಲೆ
  • ಸಂಪೂರ್ಣ ಒಳಮೀಸಲಾತಿ ಜಾರಿಗೆ ರಕ್ತ ಕರಪತ್ರ ಚಳುವಳಿ!
    In (ರಾಜ್ಯ ) ಜಿಲ್ಲೆ
  • ಮಹಿಳೆ ಅಬಲೆಯಲ್ಲ ಸಬಲೆ :ಪ್ರತಿಮಾ ಪಾಟೀಲ
    In (ರಾಜ್ಯ ) ಜಿಲ್ಲೆ
  • ರೈತರ ಹೊಲದಲ್ಲಿ ಅನಾಹುತಕ್ಕೆ ಕಾದಿರುವ ವಾಲಿದ ವಿದ್ಯುತ್ ಕಂಬ
    In (ರಾಜ್ಯ ) ಜಿಲ್ಲೆ
  • ಕುಡಿವ ನೀರಿನ ಸಮಸ್ಯೆಯಾಗದಂತೆ ನಿಗಾವಹಿಸಿ :ಎಸಿ ಗುರುಸ್ವಾಮಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.