ಶಿಕ್ಷಕ, ಪತ್ರಕರ್ತ ಗಂಗಾದರ ಹಿರೇಮಠ ಅವರಿಗೆ ಮಾತೃವಿಯೋಗ
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಸ್ಥಳೀಯ ಎಂ.ಎಚ್.ಎಂ.ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಗಂಗಾಧರ ಹಿರೇಮಠ ಅವರ ತಾಯಿ ಶ್ರೀಮತಿ ಶಾಂತಾಬಾಯಿ ಮಲ್ಲಿಕಾರ್ಜುನಯ್ಯ ಹಿರೇಮಠ (78) ಬುಧವಾರ ರಾತ್ರಿ ನಿಧನರಾದರು.
ಕಳೆದೆರಡು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮೃತರು ಭಾಗಶಃ ಊಟವನ್ನು ತ್ಯಜಿಸಿದ್ದರು. ಅವರಿಗೆ ನಾಲ್ಕು ಜನ ಮಕ್ಕಳಲ್ಲಿ ತಲಾ ಇಬ್ಬರು ಗಂಡು, ಹೆಣ್ಣು ಮಕ್ಕಳಿದ್ದರು. ಇಬ್ಬರು ಗಂಡು ಮಕ್ಕಳಲ್ಲಿ ಒಬ್ಬರು ಈಗಾಗಲೇ ಅಸ್ತಂಗತರಾಗಿದ್ದಾರೆ. ಈಗ ಪತಿ, ಮೂರು ಜನ ಮಕ್ಕಳು ಸೇರಿದಂತೆ ಅಪಾರ ಬಂದು ಬಳಗವನ್ನು ಬಿಟ್ಟು ಮೃತರು ಅಗಲಿದ್ದಾರೆ.
ಮೃತರ ಪುತ್ರ ಗಂಗಾಧರ ಹಿರೇಮಠ ಒಳ್ಳೆಯ ಯೋಗಪಟು, ಯೋಗ ಗುರು, ಆಲಮಟ್ಟಿ ಕನ್ನಡಪ್ರಭ ಮತ್ತು ಉದಯರಶ್ಮಿ ದಿನಪತ್ರಿಕೆಗಳ ವರದಿಗಾರರಾಗಿ ವೃತ್ತಿ ಕಾಯಕದ ಜೊತೆಗೆ ಸಮಾಜಮುಖಿ ಸೇವೆ ಸಲ್ಲಿಸುತ್ತಾ ಈ ಭಾಗದ ಜನತೆಯ ಪ್ರೀತಿಗೆ ಪಾತ್ರರಾಗಿದ್ದಾರೆ.
ಮೃತರ ಅಂತ್ಯಕ್ರಿಯೆ ಗುರುವಾರ ಸಕಲ ಗೌರವಗಳೊಂದಿಗೆ ಸಿಂದಗಿ ಪಟ್ಟಣದಲ್ಲಿ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಂತಾಪ: ಹಿರಿಯ ಮಾತೋಶ್ರೀ ಶ್ರೀಮತಿ ಶಾಂತಾಬಾಯಿ ಹಿರೇಮಠ ಅವರ ನಿಧನಕ್ಕೆ ’ಉದಯರಶ್ಮಿ’ ಪತ್ರಿಕೆ ಸಂಪಾದಕ ಇಂದುಶೇಖರ ಮಣೂರ ಹಾಗೂ ಪತ್ರಿಕಾ ಬಳಗ, ಆಲಮಟ್ಟಿ ಎಸ್.ವಿ.ವಿ.ಅಸೋಸಿಯೇಷನ್ ಅಂಗ ಸಂಸ್ಥೆಗಳ ಶಾಲಾ, ಕಾಲೇಜುಗಳ ಮುಖ್ಯಸ್ಥರು, ಎಲ್ಲ ಸಿಬ್ಬಂದಿಗಳು ತೀವ್ರ ಶೋಕ ವ್ಯಕ್ತಪಡಿಸಿ ಸಂತಾಪ ಸೂಚಿಸಿದ್ದಾರೆ. ಎಂ.ಎಚ್.ಎಂ.ಪಪೂ,ಪದವಿ ಕಾಲೇಜು ಪ್ರಾಚಾರ್ಯ ಪ್ರಭುಸ್ವಾಮಿ ಹೇಮಗಿರಿಮಠ, ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆ ಮುಖ್ಯ ಗುರು ದಿ.ಎಂ.ಕೋಟ್ಯಾಳ, ಎಂ.ಎಚ್.ಎಂ.ಹೈಸ್ಕೂಲ್ ಮುಖ್ಯ ಶಿಕ್ಷಕ ಎಸ್.ಆಯ್.ಗಿಡ್ಡಪ್ಪಗೋಳ, ಚಿಕ್ಕಪಡಸಲಗಿ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಸವರಾಜ ಜಾಲೋಜಿ, ಶಿಕ್ಷಕ ಗುಲಾಬಚಂದ ಜಾದವ ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ. ಮೃತರ ಕುಟುಂಬಕ್ಕೆ ದೇವರು ದುಃಖ ಸಹಿಸುವ ಶಕ್ತಿ ಕರುಣಿಸಲಿವೆಂದು ನೋವಿನ ಭಾವಪೂರ್ಣ ಸಂತಾಪ ಸಲ್ಲಿಸಿದ್ದಾರೆ.

