Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟಬುಕ್ ವಿತರಣೆ

ಡಾ.ಹಳಕಟ್ಟಿಯವರಿಂದ ವಚನ ಸಾಹಿತ್ಯದ ಸಮಗ್ರ ದರ್ಶನ :ಡಾ.ಮದಭಾವಿ

ಜು.೧೦ ರಂದು ತರಬೇತಿ, ಇ-ಹರಾಜು

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಡಾ.ಹಳಕಟ್ಟಿಯವರಿಂದ ವಚನ ಸಾಹಿತ್ಯದ ಸಮಗ್ರ ದರ್ಶನ :ಡಾ.ಮದಭಾವಿ
(ರಾಜ್ಯ ) ಜಿಲ್ಲೆ

ಡಾ.ಹಳಕಟ್ಟಿಯವರಿಂದ ವಚನ ಸಾಹಿತ್ಯದ ಸಮಗ್ರ ದರ್ಶನ :ಡಾ.ಮದಭಾವಿ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರ ‘ಶಿವಾನುಭವ’ ಪತ್ರಿಕೆಯ ಜನ್ಮ ಶತಮಾನೋತ್ಸವ ವರ್ಷ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ೧೨ನೇ ಶತಮಾನದ ಬಸವಾದಿ ಶರಣರ ವಚನಗಳನ್ನು ಡಾ. ಫ.ಗು. ಹಳಕಟ್ಟಿ ಅವರು ಸಂಪಾದಿಸಿ ಪ್ರಕಟಿಸುತ್ತಿದ್ದ ‘ಶಿವಾನುಭವ’ ಪತ್ರಿಕೆಯ ಜನ್ಮಶತಮಾನೊತ್ಸವ ವರ್ಷವಿದು, ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂಪಾದಿಸಿ ಪ್ರಕಟಿಸದೇ ಹೋಗಿದ್ದರೆ ವಚನ ಸಾಹಿತ್ಯದ ಸಮಗ್ರ ದರ್ಶನ ನಮಗಾಗುತ್ತಿರಲಿಲ್ಲ ಎಂದು ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಡಾ. ಎಂ.ಎಸ್. ಮದಭಾವಿ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಸಾಂಸ್ಕೃತಿಕ ಸಭಾಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ೮೦ನೇ ಶಿವಾನುಭವ ಗೋಷ್ಠಿಯಲ್ಲಿ ಮಾತನಾಡಿದ ಅವರು ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರು ತಮ್ಮ ಸಮಸ್ತ ಬದುಕನ್ನೆ ಶರಣ ಸಾಹಿತ್ಯದ ಪುನರುಜ್ಜೀವನಕ್ಕಾಗಿ ಮೀಸಲಿಟ್ಟು, ‘ಶಿವಾನುಭವ’ ಪತ್ರಿಕೆ ಮೂಲಕ ಮುವತ್ತೈದು ವರ್ಷಗಳ ಕಾಲ ಶರಣ ಸಾಹಿತ್ಯವನ್ನು ಅವ್ಯಾಹತವಾಗಿ ಪ್ರಕಟಿಸಿ ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚು ಮಾಡಿದರು. ಶಿವಶರಣರ ತತ್ವಗಳ ಉದ್ದೇಶವು ಶಿವನ ಅನುಭವ ಅಂದರೆ ಶಿವನನ್ನು ಕಾಣುವುದು, ಅರಿಯುವುದೇ ಮುಖ್ಯ. ಶಿವಾನುಭವ ಪತ್ರಿಕೆಯನ್ನು ಎಂತಹ ಗಂಡಾಂತರ ಬಂದರೂ ನಿಲ್ಲಿಸದೇ ಪ್ರಕಟಿಸಿದ್ದು ಅವರ ಶರಣ ಶೃದ್ದೆಗೆ ಹಿಡಿದ ಕನ್ನಡಿ ಪತ್ರಿಕೆಯು ಕನ್ನಡ ಧಾಮಿರ್ಕ, ಸಾಹಿತ್ತಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮಹತ್ವದ ಸ್ಥಾನವನ್ನು ಪಡೆದಿತ್ತು. ಉನ್ನತ ತತ್ವ ಪ್ರಚಾರ, ಧಾರ್ಮಿಕ ಚಿಂತನೆ ಸಾಹಿತ್ತಿಕ ಅರಿವು ಹಾಗೂ ಸಾಂಸ್ಕೃತಿಕ ಜಾಗೃತಿಯನ್ನು ಧ್ಯೇಯವನ್ನಾಗಿ ಮಾಡಿಕೊಂಡ ಪತ್ರಿಕೆಯು ಕನ್ನಡಿಗರಿಗೆ ಅಪಾರ ಜ್ಞಾನ ಸಂಪತ್ತು ಒದಗಿಸಿತು. ಅವರೊಬ್ಬ ೨೦ನೇ ಶತಮಾನದ ಸಂತ ಎಂದು ಹೇಳಿದರು.
ಮಹಾಸಭೆಯ ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿ ಡಾ. ಫ.ಗು. ಹಳಕಟ್ಟಿ ಅವರ ನೆಲ, ಜಲ, ನುಡಿ ಮೇಲಿರುವ ಅಭಿಮಾನ, ಬಡತನ ಆರೋಗ್ಯವನ್ನು ಕಾಪಾಡದೆ ವಚನ ಸಾಹಿತ್ಯವನ್ನು ಸಂಗ್ರಹಿಸಿದ ಮೊದಲಿಗರು. ಧಾರ್ಮಿಕ ಸಾಮಾಜಿಕವಾಗಿ ನಿಸ್ವಾರ್ಥದಿಂದ ತೊಡಗಿಸಿ ಕೊಂಡವರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಸಂಸ್ಥಾಪಕ ಅಧ್ಯಕ್ಷರಾಗಿದ್ದರು ಎಂದರು.
ಇದೇ ಸಂದರ್ಭದಲ್ಲಿ ೨೦೨೬ರ ನಾಡಪ್ರಭು ಕೆಂಪೆಗೌಡ ಪ್ರಶಸ್ತಿಗೆ ಭಾಜನರಾದ ಬಿ.ಎಮ್. ಕೊಕರೆ ಅವರನ್ನು ಮಹಾಸಭೆಯ ಪದಾಧಿಕಾರಿಗಳು ಸನ್ಮಾನಿಸಿದರು.
ಅಪ್ಪಾಸಾಹೇಬ ಕೋರಿ, ನೂತನ ಬ್ಯಾಕೊಡ ವಚನಗೀತೆ ಪ್ರಸ್ತುತ ಪಡಿಸಿದರು. ಮಹಾಸಭೆಯ ಕಾರ್ಯದರ್ಶಿ ಬಿ.ಟಿ. ಈಶ್ವರಗೊಂಡ ಸ್ವಾಗತಿಸಿದರು. ಸಾಹಿತಿ ಸಂಗಮೇಶ ಬದಾಮಿ ನಿರೂಪಿಸಿದರು. ಮಹಾಸಭೆಯ ಉಪಾಧ್ಯಕ್ಷ ಸಹದೇವ ನಾಡಗೌಡರ ವಂದಿಸಿದರು.
ಕಾರ್ಯಕ್ರಮದಲ್ಲಿ ಡಾ. ಎಸ್.ಕೆ. ಕೊಪ್ಪ, ರವೀಂದ್ರ ಬ್ಯಾಕೋಡ, ಭಾರತಿ ಬುಯ್ಯಾರ, ಮಹಾದೇವ ಹಾಲಳ್ಳಿ, ವಿಠ್ಠಲ ತೇಲಿ, ಮಲ್ಲಿಕಾರ್ಜುನ ಅಮರಣ್ಣವರ, ಕಮಲಾ ಗೆಜ್ಜಿ, ಡಾ. ಸಂಗಮೇಶ ಮೇತ್ರಿ, ಡಾ. ಸೋಮಶೇಖರ ವಾಲಿ, ಜಗದೀಶ ಮೊಟಗಿ, ಎಸ್.ವಾಯ್. ಶಿವಣಗಿ ಬಸವರಾಜ (ಅಪ್ಪು) ಇಟ್ಟಂಗಿ ದೊಡ್ಡಣ್ಣ ಭಜಂತ್ರಿ, ಸುಭಾಸ ಬೆಟಗೇರಿ, ಶಶಿಧರ ಶಿರಹಟ್ಟಿ, ಹಾಗೂ ಶರಣರು ಶರಣೆಯರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟಬುಕ್ ವಿತರಣೆ

ಜು.೧೦ ರಂದು ತರಬೇತಿ, ಇ-ಹರಾಜು

ಎಸ್‌ಐಆರ್ ಕುರಿತು ವದಂತಿ ಹರಡಿದರೆ ಕಾನೂನು ಕ್ರಮ

ಬರ: ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟಬುಕ್ ವಿತರಣೆ
    In (ರಾಜ್ಯ ) ಜಿಲ್ಲೆ
  • ಡಾ.ಹಳಕಟ್ಟಿಯವರಿಂದ ವಚನ ಸಾಹಿತ್ಯದ ಸಮಗ್ರ ದರ್ಶನ :ಡಾ.ಮದಭಾವಿ
    In (ರಾಜ್ಯ ) ಜಿಲ್ಲೆ
  • ಜು.೧೦ ರಂದು ತರಬೇತಿ, ಇ-ಹರಾಜು
    In (ರಾಜ್ಯ ) ಜಿಲ್ಲೆ
  • ಎಸ್‌ಐಆರ್ ಕುರಿತು ವದಂತಿ ಹರಡಿದರೆ ಕಾನೂನು ಕ್ರಮ
    In (ರಾಜ್ಯ ) ಜಿಲ್ಲೆ
  • ಬರ: ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ
    In (ರಾಜ್ಯ ) ಜಿಲ್ಲೆ
  • ಮಳೆಗಾಗಿ ಗ್ರಾಮಸ್ಥರಿಂದ ಗುರ್ಜಿ ಪೂಜೆಗೆ ಮೊರೆ
    In (ರಾಜ್ಯ ) ಜಿಲ್ಲೆ
  • ಕೊಲ್ಹಾರ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ :ಕೊಪ್ಪಳ
    In (ರಾಜ್ಯ ) ಜಿಲ್ಲೆ
  • ಜೆಇಇಯಲ್ಲಿ ಸಾಧನೆಗೈದ ಇಂದಿರಾಬಾಯಿಗೆ ಸನ್ಮಾನ
    In (ರಾಜ್ಯ ) ಜಿಲ್ಲೆ
  • ಎಸ್‌ಐಆರ್ ನೆಪದಲ್ಲಿ ಮತದಾರರ ಹಕ್ಕು ಕಸಿವ ಕುತಂತ್ರ
    In (ರಾಜ್ಯ ) ಜಿಲ್ಲೆ
  • 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ನಕಲಿ ಡಿಎಸ್‌ಪಿ ಬಂಧನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.