Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ಸಂಬಂಧಿತ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸ್ ಯೋಜನೆಗೆ ಅರ್ಹ ಪತ್ರಕರ್ತರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಮುಖ್ಯಮಂತ್ರಿಗಳು 2024-25 ನೇ ಸಾಲಿನ ಆಯವ್ಯಯದಲ್ಲಿ ಈ ಯೋಜನೆ ಘೋಷಿಸಿದ್ದರು.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ವಿದ್ಯುನ್ಮಾನ ಅಥವಾ ಮುದ್ರಣ ಮಾಧ್ಯಮಗಳಲ್ಲಿ ಪೂರ್ಣಾವಧಿಗೆ ನೇಮಕಗೊಂಡು 4 ವರ್ಷಗಳ ಸೇವಾನುಭವ ಹೊಂದಿರುವ ಪತ್ರಕರ್ತರು ಅರ್ಜಿ ಸಲ್ಲಿಸಬಹುದು. ನೇಮಕಾತಿ ಆದೇಶ/ವೇತನ ಪತ್ರ/ಬ್ಯಾಂಕ್ ಸ್ಟೇಟ್‌ಮೆಂಟ್ ಗಳಲ್ಲಿ ಯಾವುದಾದರೂ ದಾಖಲೆಗಳನ್ನು ಸೇವಾನುಭವಕ್ಕಾಗಿ ಒದಗಿಸಬೇಕು.ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸುವ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ಜಿಲ್ಲಾ ವ್ಯಾಪ್ತಿಗೆ ಉಚಿತವಾಗಿ ಸಂಚರಿಸಬಹುದು. ತಹಸೀಲ್ದಾರರಿಂದ ಪಡೆದ ವಾಸಸ್ಥಳ ಪ್ರಮಾಣ ಪತ್ರ ಒದಗಿಸಬೇಕು.ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುವ ವರದಿಗಾರರಿಗೆ ಪ್ರತಿ ತಾಲ್ಲೂಕಿಗೆ ಸಂಪಾದಕರು ಸೂಚಿಸುವ ಒಬ್ಬರಿಗೆ,ಜಿಲ್ಲಾ ಮಟ್ಟದ ಪತ್ರಿಕೆಗಳು ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಒಬ್ಬರಿಗೆ,ಆರು ಪುಟಗಳಲ್ಲಿ ಪ್ರಕಟವಾಗುವ ಪ್ರಾದೇಶಿಕ ಪತ್ರಿಕೆಗಳು ಓರ್ವ ವರದಿಗಾರರು ಹಾಗೂ…
ಲೇಖನ- ಡಾ.ಶಶಿಕಾಂತ ಪಟ್ಟಣರಾಮದುರ್ಗ ಉದಯರಶ್ಮಿ ದಿನಪತ್ರಿಕೆ ಭಾರತದಲ್ಲಿ ಇಂದು ಪ್ರಶಸ್ತಿಗಳು ತಮ್ಮ ಬೆಲೆ ಕಳೆದುಕೊಳ್ಳುವ ಸಂದರ್ಭದಲ್ಲಿ ಪ್ರಶಸ್ತಿಗೆ ಗೌರವ ತಂದು ಕೊಟ್ಟವರಲ್ಲಿ ಅಗ್ರರು ಕ್ಯಾನ್ಸರ್ ತಜ್ಞೆ ಬಡವರ ಬಂಧು ಡಾ ವಿಜಯಲಕ್ಷ್ಮಿ ದೇಶಮಾನೆ. ಬಡತನ ಹಸಿವು ಸಂಘರ್ಷಗಳ ಮಧ್ಯೆ ತಮ್ಮ ಗುರಿ ಸಾಧಿಸಿದ ತಪಸ್ವಿ ಪದ್ಮಶ್ರೀ ಪುರಸ್ಕೃತರು..ಕಪ್ಪು ಬಣ್ಣ ಕಾಟನ್ ಸೀರೆ, ಸದಾ ಹೆಗಲು ಮುಚ್ಚುವ ಸೆರಗು, ಹಣೆಯಲ್ಲಿ ಕುಂಕುಮ, ಮುಖದಲ್ಲೊಂದು ಮಾಸದ ನಗು. ಸರಳ ಸದಾ ವ್ಯಕ್ತಿತ್ವದ ಹೆಣ್ಣು ಮಗಳು. ಹಮ್ಮು, ಬಿಮ್ಮು ಬಿಡಿ, ಗಟ್ಟಿಯಾಗಿ ಮಾತನಾಡಿದ್ದು ಕೇಳದವರಿಲ್ಲ. ಸಣ್ಣ ಮನೆಯೊಂದರಲ್ಲಿ ಸರಳ ಜೀವನ. ಅಧ್ಯಾತ್ಮವಾದಿ ದೇವರ ಪರಮಭಕ್ತೆ.ಕೈಯಲ್ಲಿ ಸ್ಟೆತಾಸ್ಕೋಪ್ ಹಿಡಿದು ಆಕೆ ನಡೆದು ಬರುತ್ತಿದ್ದರೆ, ಜೀವನ್ಮರಣದ ನಡುವೆ ಹೋರಾಡುತ್ತಿರುವ ರೋಗಿಗಳ ಕಣ್ಣಲ್ಲಿ ಭರವಸೆಯ ಬೆಳಕು. ಕ್ಯಾನ್ಸರ್ ರೋಗಿಗಳ ಪಾಲಿನ ಆಶಾಕಿರಣವೇ ಡಾ. ವಿಜಯಲಕ್ಷ್ಮಿ ದೇಶಮಾನೆ.ಕಲಬುರಗಿ ಮೂಲದ ಹೆಸರಾಂತ ಕ್ಯಾನ್ಸರ್ ತಜ್ಞೆ ಡಾ. ವಿಜಯಲಕ್ಷ್ಮೀ ದೇಶಮಾನೆ ಅವರಿಗೆ ಪದ್ಮಶ್ರೀ ಪುರಸ್ಕಾರ ಒಲಿದು ಬಂದಿದೆ. ತರಕಾರಿ ಮಾರಾಟ ಮಾಡುವ ಕುಟುಂಬದಿಂದ ಕ್ಯಾನ್ಸರ್…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ನ್ಯಾಯಾಲಯದಲ್ಲಿ ಸಂಭ್ರಮ ಸಡಗರದಿಂದ ೭೬ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟಿಮನಿ ಅವರು ಮಹಾತ್ಮಾ ಗಾಂಧಿ ಮತ್ತು ಸಂವಿಧಾನ ಶಿಲ್ಪಿ ಡಾ.ಬಿಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣವನ್ನು ನೆರವೇರಿಸಿದರು.ಈ ವೇಳೆ ಮಾತನಾಡಿದ ಅವರು ನಮ್ಮಲ್ಲಿ ಶೀಘ್ರದಲ್ಲಿ ಜಿಲ್ಲಾ ನ್ಯಾಯಾಲಯ ಪ್ರಾರಂಭವಾಗುತ್ತಿದ್ದು ಸಂತಸದ ವಿಷಯ. ಕಿರಿಯ ನ್ಯಾಯವಾದಿಗಳು ಹಿರಿಯ ನ್ಯಾಯವಾದಿಗಳ ಮಾರ್ಗದರ್ಶನ ಪಡೆದು ಪ್ರಕರಣಗಳ ಶೀಘ್ರ ವಿಲೇವಾರಿಗೆ ಸಹಕರಿಸುವಂತೆ ತಿಳಿಸಿದರು.ಈ ವೇಳೆ ಕಿರಿಯ ಶ್ರೇಣಿ ಸಹಾಯಕ ಸರ್ಕಾರಿ ಅಭಿಯೋಜಕ ಬಸವರಾಜ ಆಹೇರಿ ಮಾತನಾಡಿದರು. ಬಳಿಕ ನ್ಯಾಯವಾದಿಗಳ ಸಂಘದ ವತಿಯಿಂದ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು. ಪಕ್ಷಗಾರ ಅಮರಯ್ಯ ಅಸಂತಾಪೂರಮಠ ದೇಶಭಕ್ತಿ ಗೀತೆ ಹಾಡುವ ಮೂಲಕ ಗಮನ ಸೆಳೆದರು.ಈ ವೇಳೆ ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಸಂಪತ್ತಕುಮಾರ ಬಳೂಲಗಿಡದ, ಹಿರಿಯ ನ್ಯಾಯವಾದಿಗಳಾದ ಜೆ.ಎ.ಚಿನಿವಾರ, ಎಂ.ಎಚ್.ಹಾಲಣ್ಣವರ, ಎಂ.ಎ.ಮುದ್ದೇಬಿಹಾಳ, ಎಂ.ಎಚ್.ಕ್ವಾರಿ, ಆರ್.ಬಿ.ಪಾಟೀಲ, ಬಿ.ಆರ್.ನಾಡಗೌಡರ ಸಂಘದ ಉಪಾಧ್ಯಕ್ಷ ಎಚ್.ಜಿ.ನಾಗೋಡ, ಪ್ರ.ಕಾರ್ಯದರ್ಶಿ ಪಿ.ಬಿ.ಗೌಡರ, ನ್ಯಾಯವಾದಿಗಳಾದ ಚೇತನ ಶಿವಶಿಂಪಿ,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ವತಿಯಿಂದ ೨೦೨೪-೨೫ನೇ ಸಾಲಿನ “ಕಿತ್ತೂರು ರಾಣಿ ಚೆನ್ನöಮ್ಮ” ಪ್ರಶಸ್ತಿಗೆ ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿ ಮತ್ತು ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದೆ.ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಕಛೇರಿಯಿಂದ ಅರ್ಜಿ ಪಡೆದು ಸಂಬಂಧಿಸಿದ್ದ ದಾಖಲೆ ಲಗತ್ತಿಸಿ ಫೆ.೨ರ ಒಳಗಾಗಿ ಕಛೇರಿಗೆ ಸಲ್ಲಿಸಬೇಕು.ಹೆಚ್ಚಿನ ಮಾಹಿತಿಗಾಗಿ ೦೮೩೫೨-೨೯೫೩೫೩ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ೨೦೨೪-೨೫ನೇ ಸಾಲಿನಲ್ಲಿ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತರ ಪದವಿ ಹಾಗೂ ಪಿಎಚ್‌ಡಿ ವ್ಯಾಸಾಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ಪ್ರವರ್ಗ ೧, ೨ಎ, ೩ಎ ಹಾಗೂ ೩ಬಿಗಳಿಗೆ ಸೇರಿದ ಅರ್ಹ ವಿದ್ಯಾರ್ಥಿಗಳಿಂದ ಹಿಂದೂಳಿದ ಕಲ್ಯಾಣ ಇಲಾಖೆ ನೀಡುವ ಡಿ.ದೇವರಾಜ ಅರಸು ವ್ಯಾಸಾಂಗ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.ಅರ್ಹ ಅಭ್ಯರ್ಥಿಗಳು ಇಲಾಖೆಯ ವೆಬ್ ಸೈಟ್ https://bcwd.karnataka.gov.inನಲ್ಲಿ ಫೆ.೫ರ ವರೆಗೆ ಆನ್‌ಲೈನ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ. ೮೦೫೦೭೭೦೦೦೪ ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ೨೦೨೪-೨೫ನೇ ಸಾಲಿನಲ್ಲಿ ಪ್ರಥಮ ವರ್ಷದ ಪೂರ್ಣಾವಧಿ ಪಿಎಚ್‌ಡಿ ಅಧ್ಯಯನ ಪ್ರಾರಂಭಿಸಿರುವ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ ೧, ೨ಎ, ೩ಎ ಹಾಗೂ ೩ಬಿ ಗಳಿಗೆ ಸೇರಿದ ಅರ್ಹ ಅಭ್ಯರ್ಥಿಗಳಿಂದ ಮಾಸಿಕ ವ್ಯಾಸಾಂಗ ವೇತನ ವೇತನ/ ಫೆಲೋಶಿಫ್ ಗಾಗಿ ಅರ್ಜಿ ಆಹ್ವಾನಿಸಲಾಗಿದೆ.ಕರ್ನಾಟಕದ ಶಾಸನ ಬದ್ದ ವಿಶ್ವವಿದ್ಯಾಲಯಗಳಲ್ಲಿ/ ಅಧೀನಕ್ಕೆ ಒಳಪಡುವ ಸಂಸ್ಥೆಗಳಲ್ಲಿ ಪ್ರಥಮ ವರ್ಷದ ಪಿಎಚ್‌ಡಿ (೨೦೨೪ರ ಜ.೧೦ ಮತ್ತು ಅದರ ನಂತರ ಪ್ರಥಮ ವರ್ಷದ ಪಿಎಚ್‌ಡಿ) ಅಧ್ಯಯನ ಮಾಡುತ್ತಿರುವ ಹೊಸ ಅಭ್ಯರ್ಥಿಗಳು ಮಾತ್ರ ಆಪ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ಅಭ್ಯರ್ಥಿಗಳು ಫೆ.೧೦ರ ಒಳಗಾಗಿ ಅರ್ಜಿ ಸಲ್ಲಿಸಬಹುದು.ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್‌ಸೈಟ್ https://bcwd.karnataka.gov.in ಹಾಗೂ ಸಹಾಯವಾಣಿ ಸಂಖ್ಯೆ. ೮೦೫೦೭೭೦೦೦೪ ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಪೊಲೀಸ್ ಅಧೀಕ್ಷರು ೨೦೨೩-೨೪ನೇ ಸಾಲಿನಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಒಟ್ಟು ೨೧ ಎನ್ ಡಿಪಿಎಸ್ ಪ್ರಕರಣಗಳಲ್ಲಿ ಜಪ್ತಿ ಮಾಡಲಾದ ೧೮.೪೩೨ ಕೆ.ಜಿ ಅಫಿಮ್ ಡ್ರೆöÊಡ್ ನಟ್ಸ್ ಪೌಡರ್, ೨೮೩.೮೦೮ ಕೆ.ಜಿ ಗಾಂಜಾ ಪ್ಲಾಂಟ್ ಮತ್ತು ಪೌಡರ ಒಟ್ಟು ೩೦೨.೨೪೦ಕೆ.ಜಿ ವಶಪಡಿಸಿಕೊಂಡಿದ್ದ ಮಾದಕ ವಸ್ತುಗಳನ್ನು ಜ.೨೩ರಂದು ಮಹಾನಗರ ಪಾಲಿಕೆಯ ವ್ಯಾಪ್ತಿಯ ಇಂಡಿ ರಸ್ತೆ ಸರ್ವೆ ನಂ ೧೪೦ರ KPMP Trust, Bio medical waste disposal unitನಲ್ಲಿ ದಹಿಸಿ ನಾಶಗೊಳಿಸಲಾಯಿತು.ಈ ಸಂದರ್ಭದಲ್ಲಿ ಡ್ರಗ್ಸ್ ಡಿಸಪೋಸಲ್ ಕಮೀಟಿಯ ಚೇರಮನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷö್ಮಣ ನಿಂಬರಗಿ, ಸಮೀತಿ ಸದಸ್ಯ ಡಿಎಸ್‌ಪಿ ಬಸವರಾಜ ಯಲಿಗಾರ, ಇಂಡಿ ಡಿ.ಎಸ್‌ಪಿ ಜಗದೀಶ್ ಎಚ್‌ಎಸ್, ಜಿಲ್ಲಾ ಪರಿಸರ ಅಧಿಕಾರಿ ವಿವೇಕ ಗುನಗಾ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಡೆಪ್ಯೂಟಿ ಡೈರೆಕ್ಟರ್ ಆಫ್, ಪ್ಯಾಕ್ಟರಿಸ್ & ಬೋಯಿಲರ್‌ನ ಜಟಿಂಗರಾಯ ಹಾಗೂ ಉಪಸ್ಥಿತರಿದ್ದರು.
ರಚನೆ- ಇಂದಿರಾ ಮೋಟೆಬೆನ್ನೂರಬೆಳಗಾವಿ ಉದಯರಶ್ಮಿ ದಿನಪತ್ರಿಕೆ ತಾಯ ಕೊರಳ ಮುರಿಯಬಂದ ಅರಿಯ ಕಂಡುರುಧಿರ ಕುದಿದುಕರುಳ ತರಿದುಸಿಡಿಲ ಮರಿಗಳುಕೊಟ್ಟರವರು ಕೊರಳ ಕುಣಿಕೆಗೆ… ದಾಸ್ಯ ಶೃಂಖಲೆ ಬಿಡಿಸಿಭಾರತಿಯ ಮಡಿಲಪುತ್ರರು ವೀರ ಶೂರರುಎದೆಯ ಗುಂಡಿಗೆಗುಂಡಿಗೊಡ್ಡಿ ಅಮರರಾಗಿಕೊಟ್ಟರವರು ಕೊರಳ ಕುಣಿಕೆಗೆ… ನೆಲದ ಮಣ್ಣ ಕಣ್ಣ ತೆರೆದುಕೈ ಬೀಸಿ ಕರೆಯಲುಗಡಿಯ ಮೆಟ್ಟಿ ಒಡಲಬಗೆಯ ಬಂದವರಎದೆಯ ಸೀಳುತಕೊಟ್ಟರವರು ಕೊರಳ ಕುಣಿಕೆಗೆ… ಅವ್ವನ ಕಾಲಿಗೆ ಬೇಡಿ ತೊಡಿಸಿಆಳ ಬಂದವರ ತಡೆದುಒಡೆದು ಆಳುವ ನೀತಿ ಮುರಿದುತಮ್ಮ ಬಾಳ ಮುಡಿಪ ಮಾಡಿವೀರಪುತ್ರರು ದೇಶಭಕ್ತರುಕೊಟ್ಟರವರು ಕೊರಳ ಕುಣಿಕೆಗೆ… ತ್ಯಾಗ ಬಲಿದಾನ ಸತ್ಯಅಹಿಂಸೆ ಸತ್ಯಾಗ್ರಹಮಾರ್ಗದಲಿ ನಡೆದುಸ್ವಾತಂತ್ರ್ಯ ಜ್ಯೋತಿಬೆಳಗಲೆಂದು ನಾಡಿಗಾಗಿಕೊಟ್ಟರವರು ಕೊರಳ ಕುಣಿಕೆಗೆ… ಇರುಳ ಕಳೆದು ಬೆಳಕುಹರಿದು ನಗಲು ಮೊಗವುತಾಯಿ ಭಾರತಿಯ ಮನವುಸ್ವಾತಂತ್ರ್ಯ ಮುತ್ತಿ ಮುಗಿಲುಹರಿಯೆ ಹರುಷ ಹೊನಲುಕೊಟ್ಟರವರು ಕೊರಳ ಕುಣಿಕೆಗೆ..
ರಚನೆ- ಇಂದಿರಾ ಮೋಟೆಬೆನ್ನೂರಬೆಳಗಾವಿ ಉದಯರಶ್ಮಿ ದಿನಪತ್ರಿಕೆ ತಾಯ ಕೊರಳ ಮುರಿಯಬಂದ ಅರಿಯ ಕಂಡುರುಧಿರ ಕುದಿದುಕರುಳ ತರಿದುಸಿಡಿಲ ಮರಿಗಳುಕೊಟ್ಟರವರು ಕೊರಳ ಕುಣಿಕೆಗೆ… ದಾಸ್ಯ ಶೃಂಖಲೆ ಬಿಡಿಸಿಭಾರತಿಯ ಮಡಿಲಪುತ್ರರು ವೀರ ಶೂರರುಎದೆಯ ಗುಂಡಿಗೆಗುಂಡಿಗೊಡ್ಡಿ ಅಮರರಾಗಿಕೊಟ್ಟರವರು ಕೊರಳ ಕುಣಿಕೆಗೆ… ನೆಲದ ಮಣ್ಣ ಕಣ್ಣ ತೆರೆದುಕೈ ಬೀಸಿ ಕರೆಯಲುಗಡಿಯ ಮೆಟ್ಟಿ ಒಡಲಬಗೆಯ ಬಂದವರಎದೆಯ ಸೀಳುತಕೊಟ್ಟರವರು ಕೊರಳ ಕುಣಿಕೆಗೆ… ಅವ್ವನ ಕಾಲಿಗೆ ಬೇಡಿ ತೊಡಿಸಿಆಳ ಬಂದವರ ತಡೆದುಒಡೆದು ಆಳುವ ನೀತಿ ಮುರಿದುತಮ್ಮ ಬಾಳ ಮುಡಿಪ ಮಾಡಿವೀರಪುತ್ರರು ದೇಶಭಕ್ತರುಕೊಟ್ಟರವರು ಕೊರಳ ಕುಣಿಕೆಗೆ… ತ್ಯಾಗ ಬಲಿದಾನ ಸತ್ಯಅಹಿಂಸೆ ಸತ್ಯಾಗ್ರಹಮಾರ್ಗದಲಿ ನಡೆದುಸ್ವಾತಂತ್ರ್ಯ ಜ್ಯೋತಿಬೆಳಗಲೆಂದು ನಾಡಿಗಾಗಿಕೊಟ್ಟರವರು ಕೊರಳ ಕುಣಿಕೆಗೆ… ಇರುಳ ಕಳೆದು ಬೆಳಕುಹರಿದು ನಗಲು ಮೊಗವುತಾಯಿ ಭಾರತಿಯ ಮನವುಸ್ವಾತಂತ್ರ್ಯ ಮುತ್ತಿ ಮುಗಿಲುಹರಿಯೆ ಹರುಷ ಹೊನಲುಕೊಟ್ಟರವರು ಕೊರಳ ಕುಣಿಕೆಗೆ..
ಲೇಖನವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಎಲ್ಲ ವಸ್ತುಗಳಲ್ಲಿಯೂ, ವಿಷಯಗಳಲ್ಲಿಯೂ ಶಾಶ್ವತತೆಯನ್ನು ಹುಡುಕುವ ನಾವುಗಳು ನಮ್ಮ ಬದುಕೇ ಆಶಾಶ್ವತತೆಯ ತೂಗುಯ್ಯಾಲೆಯಲ್ಲಿ ತೂಗುತ್ತದೆ ಎಂಬ ಸತ್ಯವನ್ನು ಮರೆತಿದ್ದೇವೆ. ಜೀವನವನ್ನು ನೋಡುವ ನಮ್ಮ ದೃಷ್ಟಿಕೋನವನ್ನು ಬದಲಾಯಿಸುವ ಶಕ್ತಿ ಈ ಆಶಾಶ್ವತತೆಯ ಪರಿಕಲ್ಪನೆಗಿದೆ. ಸಂತಸ, ದುಃಖ, ಸೋಲು, ಯಶಸ್ಸು, ಸಂಬಂಧಗಳು ಮತ್ತು ನಮ್ಮ ಇಡೀ ಬದುಕು ಆಶಾಶ್ವತ.ನೂರು ಕಾಲ ನಾವು ಬಾಳುತ್ತೇವೋ ಇಲ್ಲವೇ ಮುಂದಿನ ಕ್ಷಣವೇ ಇಲ್ಲವಾಗುತ್ತೇವೋ ಎಂಬ ಅರಿವು ಕೂಡ ನಮಗೆ ಇರುವುದಿಲ್ಲ.. ಆದ್ದರಿಂದಲೇ ಭಗವಾನ್ ಶ್ರೀ ಕೃಷ್ಣನಿಗೆ ಅರ್ಜುನನು ಸುಖದಲ್ಲಿ ಮತ್ತು ದುಃಖದಲ್ಲಿ ನಮ್ಮನ್ನು ನಿರ್ಲಿಪ್ತರಾಗಿಸಲು, ಮತ್ತೆ ಜೀವನ್ಮುಖಿಯಾಗಿಸಲು ಒಂದು ವಾಕ್ಯವನ್ನು ಹೇಳು ಎಂದು ಹೇಳಿದಾಗ ಶ್ರೀ ಕೃಷ್ಣನು ‘ಈ ಕ್ಷಣ ಶಾಶ್ವತವಲ್ಲ, ಈ ಸಮಯ ಕಳೆದು ಹೋಗುತ್ತದೆ’ ಎಂಬ ಪರಮ ಸತ್ಯವನ್ನು ಅರುಹಿದ.ಸಾಮಾಜಿಕವಾಗಿ ನೋಡುವುದಾದರೆ ಅತ್ಯಂತ ಕಡಿಮೆ ವರಮಾನವಿರುವ ವ್ಯಕ್ತಿ ನಾನು ಖರೀದಿಸುವ ವಸ್ತುಗಳು, ಬಟ್ಟೆಗಳು ಬಹಳ ದಿನಗಳ ಕಾಲ ತಾಳಿಕೆ ಬರಲಿ ಎಂದು ಅಪೇಕ್ಷೆ ಪಡುತ್ತಿದ್ದುದು ಸಹಜವಾಗಿತ್ತು.…
