ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಆನ್‌ಲೈನ್ ಬೆಟ್ಟಿಂಗ್ ಜೂಜು, ಇಸ್ಪೇಟ್ ಹಾಗೂ ಇನ್ನಿತರ ಹಣ ಗಳಿಸುವಂತಹ ಆಮಿಷವನ್ನು ಒಡ್ದುವ ವಿವಿಧ ಮಾದರಿಯ ಆಟದ ಅಪ್ಲಿಕೇಶಷನ್ ಗಳನ್ನು ನಿರ್ಬಂಧಿಸುವಂತೆ ಬಲಿಷ್ಠ ಭಾರತ ನಿರ್ಮಾಣ ಸೇನೆ ಹಾಗೂ ಕರುನಾಡು ಕ್ರಾಂತಿ ಸೇನೆಯ ವತಿಯಿಂದ ದೇಶದ ಪ್ರಧಾನ ಮಂತ್ರಿಗಳಿಗೆ, ರಾಜ್ಯದ ಮುಖ್ಯಮಂತ್ರಿಗಳಿಗೆ ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಲಿಷ್ಠ ಭಾರತ ನಿರ್ಮಾಣ ಸೇನೆ ಸಂಸ್ಥಾಪಕ ಅಧ್ಯಕ್ಷ ಪುನೀತ ಸಜ್ಜನ ಮಾತನಾಡಿ, ಕರ್ನಾಟಕ ರಾಜ್ಯವನ್ನು ಒಳಗೊಂಡು ಇಡೀ ದೇಶದಲ್ಲಿ ಹಲವಾರು ವಿಧದ ರೀತಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಪ್ ಗಳು, ಇಸ್ಪೀಟ್ ಆಟಗಳನ್ನು ಆಡಿಸುವಂತಹ ಆಪ್ ಗಳು ಹಾಗೂ ಇನ್ನಿತರ ಹಲವಾರು ವಿಧದ ಆಟಗಳನ್ನು ಆಡಿಸುವಂತ ಅಪ್ಲಿಕೇಶನ್ ಗಳು ವಿಪರೀತ ಪ್ರಮಾಣದಲ್ಲಿ ಹುಟ್ಟಿಕೊಂಡಿವೆ ಅದೇ ರೀತಿಯಾಗಿ ವಯಸ್ಸಿನ ಮಿತಿ ಇಲ್ಲದೆ ಎಲ್ಲಾ ವರ್ಗದ ಜನರು ಇವುಗಳ ಅಮಿಷಕ್ಕೆ ಒಳಗಾಗಿ, ಇದರಿಂದ ಸಾಕಷ್ಟು ಹಣವನ್ನು ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ ಕೆಲವೊಮ್ಮೆ ಮಾನಸಿಕ ಒತ್ತಡಕ್ಕೊಳಗಾಗಿ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ ಎಂದರು.
ಕರುನಾಡು ಕ್ರಾಂತಿ ಸೇನೆಯ ಪದಾಧಿಕಾರಿಗಳಾದ ಸಂಭಾಜಿ ಪಾಟೀಲ, ರವಿ ಗಾಯಕವಾಡ ಹಾಗೂ ತೀರ್ಥಪ್ಪ ಪೂಜಾರಿ ಮಾತನಾಡಿದರು.
ಈ ಸಂದರ್ಭದಲ್ಲಿ ರವಿ ಗಾಯಕವಾಡ, ಭೀಮಾರೆಡ್ಡಿ ಬ್ಯಾಕೋಡ, ಉತ್ಕರ್ಷ ಪಾಟೀಲ, ದೀಪಕ ಸೂರ್ಯವಂಶಿ, ಪ್ರಶಾಂತ ಪಾಟೀಲ, ಮುತ್ತಣ್ಣ ಭೋವಿ, ಮಹೇಶ ಯಲ್ಲಕ್ಕ, ರಾಜು ರೂಗಿ, ಮುತ್ತು ಬಿರಾದಾರ, ರುದ್ರಗೌಡ ಪಾಟೀಲ, ಈರಣ್ಣ ಪಾಟೀಲ, ಇನ್ನಿತರರು ಉಪಸ್ಥಿತರಿದ್ದರು.