ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮಾ.೧೩ ರಂದು ರಾತ್ರಿ ಪಟ್ಟಣದಲ್ಲಿ ಕಾಮದಹನ ಕಾರ್ಯಕ್ರಮ ಜರುಗಲಿದೆ ಎಂದು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ ಹೇಳಿದರು.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು ಅಂದು ಹುಬ್ಬಾ ನಕ್ಷತ್ರವಿದ್ದು ಅದೇ ದಿನ ಬೆಳಿಗ್ಗೆ ೧೦:೩೦ ರಿಂದ ಹುಣ್ಣಿಮೆ ಪ್ರಾರಂಭವಾಗುವದು. ಹಾಗಾಗಿ ಅಂದೇ ರಾತ್ರಿ ಕಾಮದಹನ ಕಾರ್ಯಕ್ರಮ ಫೆ೧೪ ಮತ್ತು ೧೫ ರಂತೆ ಎರಡು ದಿನಗಳ ಕಾಲ ಬಣ್ಣದಾಟ ನಡೆಯಲಿದೆ. ಯಾವುದೇ ಗೊಂದಲ ಗಲಾಟೆಗಳನ್ನು ಸೃಷ್ಟಿಸಿಕೊಳ್ಳದೇ ಶಾಂತಿಯುತವಾಗಿ ಹಬ್ಬವನ್ನು ಆಚರಿಸುವಂತೆ ಸಲಹೆ ನೀಡಿದ್ದಾರೆ.