ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಸಮಾಜದಲ್ಲಿ ಸ್ವಾಸ್ಥ್ಯ ಕಾಪಾಡುವುದು ಎಲ್ಲರ ಕರ್ತವ್ಯ. ಸಂತೋಷ ಹಂಚಿ ಕೊಳ್ಳಲಿಕ್ಕೆ ಶಾಂತಿ ಸಾರಲಿಕ್ಕೆ ಹಬ್ಬಗಳನ್ನು ಆಚರಿಸುತ್ತೇವೆ ಎಂದು ಡಿವೈಎಸ್ಪಿ ಬಲ್ಲಪ್ಪ ನಂದಗಾವಿ ಹೇಳಿದರು.
ಪಟ್ಟಣದ ಪೋಲಿಸ್ ಠಾಣೆ ಆವರಣದಲ್ಲಿ ಮಂಗಳವಾರ ಹೋಳಿ ಹಬ್ಬದ ಹಾಗೂ ರಂಜಾನ್ ಹಬ್ಬದ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹೋಳಿ ಹಬ್ಬ ಮತ್ತು ರಂಜಾನ್ ಹಬ್ಬದ ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳ ಪರೀಕ್ಷೆ ಬರೆಯಲು ಹೋಗುವ ಮಕ್ಕಳಿಗೆ ತೊಂದರೆ ಕೊಡಬಾರದು ಮತ್ತು ಪಟ್ಟಣದಲ್ಲಿ ಡಿಜೆ ಸೌಂಡ್ ಹಚ್ಚಿ ಕಿರಿಕಿರಿ ಮಾಡಬಾರದು, ತಂಟೆ ತಕರಾರು ಮಾಡಿ ಸಮಾಜದಲ್ಲಿ ಅಶಾಂತಿ ಉಂಟು ಮಾಡಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಪಿಎಸ್ಐ ಎಮ್.ಬಿ. ಬಿರಾದಾರ ಮಾತನಾಡಿ ಹಬ್ಬಗಳು ಪರಸ್ಪರ ಬಾಂಧವ್ಯ ಬೆಸೆಯುವ ಕೆಲಸ ಮಾಡುತ್ತವೆ. ಪರಸ್ಪರ ದ್ವೇಷ ಮಾಡದೆ ನಿಮ್ಮ ನಿಮ್ಮ ಹಬ್ಬಗಳನ್ನು ಆಚರಿಸಿ ಖುಷಿಯಿಂದ ಬದುಕಿ ಒಂದು ವೇಳೆ ಯಾರಾದರೂ ಹಬ್ಬಗಳಲ್ಲಿ ತೊಂದರೆ ಕೊಟ್ಟರೆ ಅವರಿಗೆ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಶಾಂತಿ ಸಭೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಚನ್ನಮಲ್ಲಪ್ಪ ಗಿಡ್ಡಪ್ಪಗೋಳ, ಸಿ.ಎಂ. ಗಣಕುಮಾರ, ಆರ್.ಬಿ. ಪಕಾಲಿ, ಟಿ.ಟಿ. ಹಗೇದಾಳ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಉಮೇಶ ಚಲವಾದಿ, ಶಿರಸ್ತೇದಾರ್ ಕೃಷ್ಣಾ ಗುಡೂರ, ಹನೀಫ್ ಮಕಾನದಾರ, ಇಕ್ಬಾಲ್ ನದಾಫ್, ಯಮನಾಜಿ ಕರಣೆ, ಮಂಜುನಾಥ ತುಂಬರಮಟ್ಟಿ, ಬಸಪ್ಪ ಬಾಲಗೊಂಡ, ಬಾಬು ಭಜಂತ್ರಿ, ದಶರಥ ಈಟಿ, ತೌಶೀಪ ಗಿರಗಾಂವಿ, ತಿಪ್ಪಣ್ಣ ಕುದುರಿ, ಸುರೇಶ ಗಿಡ್ಡಪ್ಪಗೋಳ, ಮಹೇಶ ತುಂಬರಮಟ್ಟಿ, ಹಣಮಂತ ಮುಳವಾಡ, ರಾಜು ವಡ್ಡರ, ಸಲೀಂ ಕೊತ್ತಲ ಉಪಸ್ಥಿತರಿದ್ದರು.