ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ಮಹಿಳೆಯರು ಎಲ್ಲಾ ರಂಗದಲ್ಲಿ ಸಾಧನೆ ಮಾಡಿದ್ದಾರೆ. ಈ ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಕೊಡುಗೆ ಬಹಳಷ್ಟಿದೆ ಹೀಗಾಗಿ ಎಲ್ಲ ಮಹಿಳೆಯರು ಹಿಂದೆಟು ಹಾಕದೆ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಬೇಕು ಎಂದು ಆಲಮೇಲ ತಾಲೂಕಿನ ನಿರ್ಮಲ ಸಮಾಜ ಸೇವಾ ಸಂಸ್ತೇಯ ನಿರ್ದೇಶಕಿ ಸಿಸ್ಟರ್ ಒಲಿವಾ ಹೇಳಿದರು.
ಪಟ್ಟಣದ ದೇಸಾಯಿ ಕಲ್ಲೂರ ರಸ್ತೆಯಲ್ಲಿರುವ ಹೋಲಿ ಕ್ರಾಸ್ ಶಿಕ್ಷಣ ಸಂಸ್ಥೆ ಹಾಗೂ ಸರ್ವೋದಯ ಸಮಾಜ ಸೇವಾ ಸಂಸ್ಥೆ ಸಹಯೋಗದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಜಗತ್ತಿನಲ್ಲಿ ಮಹಿಳೆಯರು ಪುರುಷರಷ್ಟೇ ಎಲ್ಲ ಕ್ಷೇತ್ರಗಳಲ್ಲಿ ಅಮೋಘ ಸಾಧನೆ ಮಾಡಿದ್ದಾಳೆ. ಸಾಧನೆಗೈದ ಮಹಿಳೆಯರನ್ನು ಮಾದರಿಯಾಗಿಟ್ಟುಕೊಂಡು ಎಲ್ಲ ಮಹಿಳೆಯರು ಕೂಡಾ ದೈರ್ಯದಿಂದ ಬಾಳು ಮಾಡಬೇಕು ಎಂದ ಅವರು ಸರಕಾರ ಮತ್ತು ಸಂಘ ಸಂಸ್ಥೆಗಳಿಂದ ಸವಲತ್ತುಗಳು ಸಿಗಲಿವೆ ಅವುಗಳ ಸದುಪಯೋಗ ಕೂಡಾ ಪಡೆದುಕೊಳ್ಳಬೇಕು ಎಂದರು.
ಫಾದರ್ ರೋಶನ್ ಡಿಸೋಜ ಅವರು ಮಾತನಾಡುತ್ತಾ ಮಹಿಳೆಯರು ಯಾವುದರಲ್ಲೂ ಕಡಿಮೆಯಿಲ್ಲವೆಂದು ಎಲ್ಲ ರಂಗದಲ್ಲೂ ಸಾಧನೆ ಮಾಡಿ ತೋರಿಸಿದ್ದಾರೆ. ಮಹಿಳು ಸರಕಾರದ ಮಟ್ಟದ ಸೌಕರ್ಯಗಳು ಪಡೆಯುವ ಮೂಲಕ ಸುಂದರ ಜೀವನ ಮಾಡಬೇಕು. ಇನ್ನೂ ತಾಲೂಕಿನಲ್ಲಿ ಹೋಲಿ ಕ್ರಾಸ್ ಶಿಕ್ಷಣ ಸಂಸ್ಥೆಯು ಸರ್ವರ ಒಳಿತಿಗಾಗಿ ಕೆಲಸ ಮಾಡುತ್ತದೆ ಎಂದರು.
ಈ ಸಂದರ್ಭದಲ್ಲಿ ಫಾದರ್ ಮಾರ್ಟಿನ್ ಸೊಸೈ, ಫಾದರ್ ವಿಲಿಯಂ ಸೆಲ್ವರಾಜ್ ಸಿದ್ದು, ಬಸಮ್ಮ ಬಾಸಗಿ ಸೇರಿದಂತೆ ಹೋಲಿ ಕ್ರಾಸ್‌ಶಿಕ್ಷಣ ಸಂಸ್ಥೆಯ ಶಿಕ್ಷಕ ಸಿಬ್ಬಂದಿಗಳು ಹಾಗೂ ಸರ್ವೋದಯ ಸಮಾಜ ಸೇವಾ ಸಂಸ್ಥೆಯ ಸಿಬ್ಬಂದಿಗಳು ಹಾಗೂ ಮಹಿಳೆಯರು ಭಾಗವಹಿಸಿದ್ದರು.