ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಾಲ್ಲೂಕಿನ ಕನ್ನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಮುಂಬೈ ಮೂಲದ ತುಳಸಿದಾಸ ಮತ್ತು ವೃಜದಾಸ ಚಾರಿಟೇಬಲ್ ಟ್ರಸ್ಟ ವತಿಯಿಂದ ದೇಣಿಗೆ ನೀಡಿದ ಆಪ್ಟಿಕಲ್ ಟಚ್ ಬೊರ್ಡನ ಉದ್ಘಾಟನೆ ಕಾರ್ಯಕ್ರಮ ನೇರವೆರಿತು.
ಗುಣಕಿ ಸಿ.ಆರ್.ಪಿ ಆಯ್.ಎಸ್ ಬಂಡೆ ಮಾತನಾಡಿ ಮಕ್ಕಳ ಗುಣಾತ್ಮಕ ಕಲಿಕೆಗೆ ಇಂತಹ ತಂತ್ರಜ್ಞಾನದ ಬಳಕೆ ಮಾಡುವ ಮೂಲಕ ಪರಿಣಾಮಕಾರಿ ಕಲಿಕೆಯನ್ನುಂಟು ಮಾಡಬಹುದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ಥಳೀಯ ಶಾಲೆಯ ಎಸ್ಡಿಎಂಸಿ ಅದ್ಯಕ್ಷ ಬಾಬು ಕುಮಟಗಿ, ಕೆ.ಡಿ.ಬಿರಾದಾರ, ಕಾಂತುಗೌಡ ಬಿರಾದಾರ, ಎನ್.ಆರ್ ಹೊನ್ನುಟಗಿ, ಬಿ.ವಿ.ತಾಳಿಕೋಟಿ ಇದ್ದರು.