Author: editor.udayarashmi@gmail.com

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ( ನಮ್ಮ ದೇಶದ ಎಲ್ಲಾ ದೇವರು ಮತ್ತು ಧರ್ಮಗಳಿಗೂ ಅನ್ವಯ ) – ವಿವೇಕಾನಂದ. ಎಚ್. ಕೆ.ಬೆಂಗಳೂರುಮೊ: 9844013068 ಉದಯರಶ್ಮಿ ದಿನಪತ್ರಿಕೆ ಚುನಾವಣಾ ಸಮಯದಲ್ಲಿ ಹಣ, ಹೆಂಡ, ಸೀರೆ, ಪಂಚೆ, ಜಾತಿ, ಧರ್ಮ ನೋಡಿ ಮತ ಹಾಕುವುದು. ಅನಂತರ ಸರ್ಕಾರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ, ಭ್ರಷ್ಟರಾಗಿದ್ದಾರೆ, ನಮ್ಮ ಬೇಡಿಕೆಗಳಿಗೆ, ಕಷ್ಟಗಳಿಗೆ ಯಾರೂ ಸ್ಪಂದಿಸುತ್ತಿಲ್ಲ, ಆದ್ದರಿಂದ ನಮಗೆ ಹೀಗೆ ಆಗುತ್ತಿರುವ ಎಲ್ಲ ತೊಂದರೆಗಳಿಗೆ ಪರಿಹಾರ ಮಾಡು ಎಂದು ದೇವರಲ್ಲಿ ಮೊರೆಹೋಗುವುದು. ದೇವರನ್ನು ಎಲ್ಲ ಕಷ್ಟಗಳು ಪರಿಹರಿಸು ಎಂದು ಕೇಳಿಕೊಳ್ಳಲು ಒಟ್ಟಾಗಿ ಹೋಗಿ ಬೆಂಕಿಯೋ, ಕಾಲ್ತುಳಿತವೋ, ಗಲಭೆಯೋ, ಮತ್ತೇನೋ ಅವಘಡಗಳಾಗಿ ಕೊನೆಗೆ ನಮ್ಮನ್ನು ರಕ್ಷಿಸಿ ಎಂದು ಮತ್ತೆ ಇದೇ ಸರ್ಕಾರಗಳನ್ನು ಬೇಡಿಕೊಳ್ಳುವುದು. ತುಂಬಾ ವಿಚಿತ್ರ ಪರಿಸ್ಥಿತಿ ಎನಿಸುತ್ತದೆ ಅಥವಾ ಇದೇ ಸಹಜ ಬದುಕೋ ಏನೋ ಒಂದೂ ಅರ್ಥವಾಗುತ್ತಿಲ್ಲ..ಒಟ್ಟಿನಲ್ಲಿ ನಮಗೆ ಸಮಸ್ಯೆಗಳು ಇರಬಾರದು, ನೆಮ್ಮದಿಯಿಂದ ಇರಬೇಕು, ಇದಕ್ಕೆ ಸರ್ಕಾರ ಸ್ಪಂದಿಸುತ್ತದೋ ಅಥವಾ ದೇವರು ಸ್ಪಂದಿಸುತ್ತಾರೋ ನಮಗೆ ಅರ್ಥವಾಗುತ್ತಿಲ್ಲ. ಅಜ್ಞಾನ, ಮೌಢ್ಯ, ಅಂಧಕಾರ, ವಿವೇಚನಾ…

Read More

ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ತಾಲೂಕಿನ ಮಲ್ಲಾಬಾದ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ನಡೆದಿದ್ದು ಚುನಾವಣೆಯಲ್ಲಿ ಆನೂರ ಗ್ರಾಮದ ಮಲ್ಲಣ್ಣಗೌಡ ಮಾಲಿಪಾಟೀಲ್ ಅವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.ಅವರು ಅವಿರೋಧ ಆಯ್ಕೆಯ ಬಳಿಕ ಮಾತನಾಡುತ್ತಾ ಮಲ್ಲಾಬಾದ ಕೃಷಿ ಪತ್ತಿನ ಸಹಕಾರ ಸಂಘದ ವ್ಯಾಪ್ತಿಗೆ ಬರುವ ಗ್ರಾಮಗಳ ರೈತರ ಒಳಿತಿಗಾಗಿ ಕೆಲಸ ಮಡುತ್ತೇನೆ ಎಂದರು. ನಂತರ ಆನೂರ ಮತ್ತು ಮಲ್ಲಾಬಾದ ಗ್ರಾಮಗಳ ಮುಖಂಡರು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಸುರೇಶ ಜಮಾದಾರ, ಲಕ್ಕಪ್ಪ ಕಲ್ಲೂರ, ಸಿದ್ದರಾಮ ಜಮಾದಾರ, ಬಸು ನರೋಣ , ಸಿದ್ದಯ್ಯ ಮಠಪತಿ, ನಿಂಗಣ್ಣ ಕಲಶೆಟ್ಟಿ, ಗುಂಡು ಮಾಳಗೆ, ದತ್ತು ಘಾಣೂರ, ಚಂದ್ರಕಾಂತ ತೇಲ್ಕರ್, ಮಹಾಂತ ಸಾಹುಕಾರ ಗಾಡಿ, ಹಣಮಂತ ಗೌಂಡಿ, ಶಿವಶರಣ ಪ್ಯಾಟಿ, ಭಾಗಪ್ಪ ತಳಕೇರಿ, ಶ್ರೀಶೈಲ್ ಸ್ಥಾವರಮಠ, ಚಂದಪ್ಪ ಕನ್ನೋಳಿ, ರೇವಣಸಿದ್ದ ಕಲಶೆಟ್ಟಿ ಇದ್ದರು.

Read More

ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕಿಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಮೊನ್ನೆ ಮೊನ್ನೆ ತಾನೆ ಹೊಸ ತರಗತಿಗೆ ಬಂದ ಹಾಗಿದೆ ಆಗಲೇ ಮಧ್ಯವಾರ್ಷಿಕ ಪರೀಕ್ಷೆ ಪೂರ್ವ ಸಿದ್ಧತಾ ಪರಿಕ್ಷೆಗಳು ಸಮೀಪಿಸುತ್ತಿವೆ. ಅಬ್ಬಾ! ಪರೀಕ್ಷೆಗಳಿಗೆ ಯಾವ ರೀತಿ ಸಿದ್ಧನಾಗಬೇಕೆಂಬುದೇ ದೊಡ್ಡ ಟೆನ್ಷನ್ ಆಗಿ ಬಿಟ್ಟಿದೆ. ಹೆಚ್ಚುತ್ತಿರುವ ಒತ್ತಡಕ್ಕೆ ಉಪ್ಪು ಸುರಿದಂತೆ ಹೆತ್ತವರ ಬೈಗುಳ, ಓದು ಎನ್ನುವ ಒತ್ತಾಯ,. ಈ ಸಲ ಹೆಚ್ಚು ಅಂಕ ತೆಗೆಯಲೇಬೇಕು ಎನ್ನುವ ಹೇರಿಕೆಯ ಮಾತುಗಳು ನೀನು ಚೆನ್ನಾಗಿ ಓದಿದರೆ ಒಳ್ಳೆಯ ಅಂಕಗಳನ್ನು ಪಡದೇ ಪಡೆಯುತ್ತಿಯಾ ಗಂಭೀರವಾಗಿ ಓದು ಎಂಬ ಶಿಕ್ಷಕರ ಹಿತ ನುಡಿಗಳು. ಅಯ್ಯೋ! ಒಂದೇ ಎರಡೇ ತಲೆ ಸಿಡಿದು ಮೂರಾ ಬಟ್ಟೆ ಆಗುತ್ತಿದೆ. ಇದು ಶಂಕರನ ಅಳಲು. ಶಂಕರ ಎದುರಿಸುತ್ತಿರುವುದು ಹೊರಗಿನ ಒತ್ತಡ. ಇದನ್ನು ಪ್ರೆಜ್ಯೂಮ್ ಪ್ರೆಶರ್ ಎನ್ನುವರು. ಸಾಮಾನ್ಯವಾಗಿ ಹೊರ ಒತ್ತಡವನ್ನು ಎಲ್ಲ ವಿದ್ಯಾರ್ಥಿಗಳು ಎದುರಿಸುತ್ತಾರೆ.ಪರೀಕ್ಷೆ ಸಮೀಪಿಸಿದಂತೆ ಎಲ್ಲಿಲ್ಲದ ತಲೆನೋವು ವಕ್ಕರಿಸಿಕೊಳ್ಳುತ್ತದೆ. ಒಂದು ವೇಳೆ ಫೇಲ್ ಆಗಿಬಿಟ್ಟರೆ ಎಂದು ನೆನೆದು ಬೆವರು ಕಿತ್ತು ಬರುತ್ತದೆ. ಊಟ ಆಟ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ತಾಲೂಕಿನ ಕರ್ನಾಟಕ ರಾಜ್ಯ ಎನ್‌ಪಿಎಸ್ ನೌಕರರ ಸಂಘದ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ಎನ್‌ಪಿಎಸ್ ರದ್ದುಪಡಿಸಿ ಯುಪಿಎಸ್ ಮರು ಜಾರಿಗೊಳಿಸುವಂತೆ ಒತ್ತಾಯಿಸಿ ಪತ್ರ ಬರೆದು ರವಾನಿಸಲಾಯಿತು.‌ತಾಲೂಕು ಘಟಕದ ಅಧ್ಯಕ್ಷರಾದ ಡಿ ಎಸ್ ಬಗಲಿ ಅವರು ಮಾತನಾಡಿ ಎನ್‌ಪಿಎಸ್ ನೌಕರರ ಮರಣ ಶಾಸನವಾಗಿದೆ. ಇದು ರದ್ದಾಗದಿದ್ದರೆ ಸರ್ಕಾರಿ ನೌಕರರ ನಿವೃತ್ತಿ ಜೀವನವನ್ನು ಸಂಕಷ್ಟಕ್ಕೆ ತಳ್ಳುತ್ತದೆ ಎಂದರು. ಹಾಗಾಗಿ ಇಂದು ತಾಲೂಕಿನ ಎಲ್ಲಾ ಎನ್‌ಪಿಎಸ್ ನೌಕರರು ಮಾನ್ಯ ಮುಖ್ಯಮಂತ್ರಿಗಳಿಗೆ ಓಪಿಎಸ್ ಮರು ಜಾರಿಗೊಳಿಸಿ ಎಂದು ಒತ್ತಾಯಿಸಿ ಪತ್ರಗಳನ್ನು ರವಾನಿಸುತ್ತಿದ್ದೇವೆ ಎಂದರು.ನೌಕರರಾದ ಸತೀಶ್ ಬಗಲಿ, ರಾಣಿ ಝಳಕಿ, ಶಿವದತ್ತ ಕೊಟ್ಟಲಗಿ, ಎಂ ಗಂಗಾಧರಪ್ಪ, ಆರ್ ವಿ ರವಿ, ರಾಜೇಶ್ವರಿ ಕಾಮಗೊಂಡ, ರಾಜಶೇಖರ ಶಿವಣಗಿ, ಶಶಿಧರ ಕಾಂಬಳೆ, ಜಗದೀಶ್ ಚಲವಾದಿ, ಎನ್ ಎಂ ಬಡಿಗೇರ, ಸದಾಶಿವ ಆಲಗೂರ, ಸುರೇಶ ವಾಲಿಕಾರ, ರಾಜು ವಾಲಿಕಾರ, ಎಸ್ ಎಂ ಮಾಳಿ, ಎಸ್ ಎಲ್ ಕೋಳಿ, ಎಂ ಆರ್ ಹಳ್ಳಿ, ಪರಶುರಾಮ ಖಾನಾಪುರ, ಚಿದಾನಂದ ಸೋನ್ಯಾಳ, ಮತ್ತಿತರ ಸರಕಾರಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಷ್ಟ್ರೀಯ ಹೆದ್ದಾರಿ-೨೧೮ ರ ಹೊನಗನಹಳ್ಳಿ ಇರುವ ರೇಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಜ.೨೯ಕ್ಕೆ ಪರಿಶೀಲಿಸಿ, ಸದರ ಕಾರ್ಯದಲ್ಲಿ ಒಳ್ಳೇ ಗುಣಮಟ್ಟ ಕಾಯ್ದುಕೊಂಡು ತೀವ್ರವಾಗಿ ಪೂರ್ಣಗೊಳಿಸಲು ಸೂಚಿಸಿರುತ್ತಾರೆ.ಕಾಮಗಾರಿ ಸ್ಥಳದಲ್ಲಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಾದ ವ್ಹಿ.ಆಯ್. ಪಾಟೀಲ್, ಕಾರ್ಯನಿರ್ವಾಹಕ ಇಂಜಿನೀಯರರು ಹಾಗೂ ವಿವೇಕ ಆರ್. ಮಠ, ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರೊಂದಿಗೆ ಸಂವಾದ ನಡೆಸಿ ೨೦೨೫ರ ಫೆಬ್ರುವರಿ ಚತುಷ್ಪಥ ಸೇತುವೆಯ ದ್ವೀಪಥರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡುವುದಾಗಿ ಹಾಗೂ ೨೦೨೫ರ ಮಾರ್ಚ್ ಅಂತ್ಯದವರೆಗೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂಬ ಮಾಹಿತಿ ಪಡೆದರು.ರಾಷ್ಟ್ರೀಯ ಹೆದ್ದಾರಿ -೨೧೮ರ ಮುಳವಾಡ ಹತ್ತಿರ ಇರುವ ಟೋಲ್ ಪ್ಲಾಜಾದಲ್ಲೂ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಅಂಬುಲನ್ಸ್ ಮತ್ತು ಕ್ರೇನ್‌ನ್ನು ರಸ್ತೆಯ ಬಳಕೆದಾರರ ಸುರಕ್ಷತಾ ಹಿತದೃಷ್ಠಿಯಿಂದ ಹಾಗೂ ಸಾರ್ವಜನಿಕರು ಅಪಘಾತ ಸಂದರ್ಭದಲ್ಲಿ ಕೋರಿದಲ್ಲಿ ಕೂಡಲೇ ನಿಯೋಜಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿರುತ್ತಾರೆ. ಅಲ್ಲದೇ ರೈತರಿಗೆ ಹಾಗೂ ಸಾರ್ವಜನಿಕರೊಂದಿಗೆ ಸಯಂದಿಂದ ವರ್ತಿಸಿ ತಿಳುವಳಿಕೆ ನೀಡಿ ಕಾನೂನಾತ್ಮಕವಾಗಿ ಟೊಲ್ ಫೀ ವಸೂಲಾತಿಗೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಾರಾಷ್ಟ್ರದ ಲಾಥೂರ್‌ನಲ್ಲಿ ಕೋಳಿ ಶೀತ ಜ್ವರ ಕಂಡು ಬಂದ ಹಿನ್ನೆಲೆ ವಿಜಯಪುರದಲ್ಲಿ ಹಕ್ಕಿ ಜ್ವರ ಹರಡದಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.ಗಡಿ ಭಾಗ ಜಿಲ್ಲೆಗಳಲ್ಲಿ ಪಶು ವೈದ್ಯಾಧಿಕಾರಿಗಳು ಹಾಗೂ ಇತರೆ ಸಿಬ್ಬಂದಿಗಳನ್ನು ನಿಯೋಜಿಸಿ ಬೇರೆ ರಾಜ್ಯದಿಂದ ಬರುವ ಕೋಳಿ ಹಾಗೂ ಮೊಟ್ಟೆಯ ಮೇಲೆ ನಿಗಾ ಇರಿಸಲು ಹಾಗೂ ಕೆರೆ, ನೀರಿನ ಸಂಗ್ರಹಾರಗಳಲ್ಲಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಮೃತಪಟ್ಟ ಹಕ್ಕಿಗಳನ್ನು ಪತ್ತೆ ಹಚ್ಚಲು ತಿಳಿಸಿಲಾಗಿದ್ದು, ಸಾರ್ವಜನಿಕರು, ಕೋಳಿ ಉತ್ಪನ್ನ ಹಾಗೂ ಮಾರಾಟಗಾರರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಬಲೇಶ್ವರ ತಾಲ್ಲೂಕಿನ ಕಾರಜೋಳ ಗ್ರಾಮದಲ್ಲಿರುವ ಶ್ರೀ ಬಸವೇಶ್ವರ ಸಕ್ಕರೆ ಕಾರ್ಖಾನೆಗೆ ಜಿಲ್ಲಾಧಿಕಾರಿಗಳು ಬುಧವಾರ ಭೇಟಿ ನೀಡಿ ವೇಬ್ರೀಡ್ಜಗಳನ್ನು ಪರಿಶೀಲಿಸಿದರು.ಕಾರ್ಖಾನೆಯಲ್ಲಿ ಕಬ್ಬು ನುರಿಸುವಿಕೆಯಿಂದ ಸಕ್ಕರೆ ತಯಾರಾಗುವ ವಿವಿಧ ಹಂತಗಳವರೆಗಿನ ಪ್ರಕ್ರಿಯೆಗಳನ್ನು ಅವಲೋಕಿಸಿ ಸಕ್ಕರೆ ದಾಸ್ತಾನು ಪರಿಶೀಲನೆ ಮಾಡಿದರು.ಈ ಸಂದರ್ಭದಲ್ಲಿ ಆಹಾರ ಇಲಾಖೆ ಉಪನಿರ್ದೇಶಕರು ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಹವಮಾನ ವೈಪರೀತ್ಯದಿಂದ ಹಾನಿಯಾದ ಬೆಳೆಗಳಿಗೆ ೮೫.೬೦ ರೂ. ಕೋಟಿ ಬೆಳೆ ವಿಮೆ ಪರಿಹಾರ ಅಂತಿಮಗೊಳಿಸಲಾಗಿರುತ್ತದೆ. ಈಗಾಗಲೇ, ಮುದ್ದೇಬಿಹಾಳ, ತಾಳಿಕೋಟಿ, ದೇವರಹಿಪ್ಪರಗಿ, ಆಲಮೇಲ ತಾಲೂಕಿನ ರೈತರಿಗೆ ಬೆಳೆ ವಿಮೆ ಪರಿಹಾರ ೧೦.೩೦ ಕೋಟಿ ರೂ. ಜಮೆಯಾಗಿರುತ್ತದೆ.ಉಳಿದಂತೆ ೬೫.೧೦ ಅಂದಾಜು ಇನ್ನೂ ರೂ. ೬೫.೧೦ ಕೋಟಿ ಬೆಳೆ ವಿಮೆ ಪರಿಹಾರ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಆಧಾರ ಜೋಡಣೆಯಾದ ರೈತರ ಬ್ಯಾಂಕ್ ಖಾತೆಗೆ ನೇರ ಜಮೆ ಮಾಡಲಾಗುವುದು. ಆದಕಾರಣ ವಿಮೆ ತುಂಬಿದ ರೈತರು ಬ್ಯಾಂಕ್ ಖಾತೆಗೆ ಆಧಾರ ಜೋಡಣೆಯಾದ ಬಗ್ಗೆ ಖಾತರಿಪಡೆಸಿಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೊಲ್ಹಾರ ತಾಲೂಕಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಬುಧವಾರ ಭೇಟಿ ನೀಡಿದರು.ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಯು.ಕೆ.ಪಿ ಕ್ರಾಸದಿಂದ ೨.೫ ಕೀ.ಮಿ. ಸರ್ವಿಸ್ ರಸ್ತೆ ಕುರಿತು ಸ್ಥಳ ಪರಿಶೀಲಿಸಿ ಹೆದ್ದಾರಿಯಲ್ಲಿಯ ನ್ಯೂನ್ಯತೆ ಕುರಿತು ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.ಕೊಲ್ಹಾರ ತಹಶೀಲ್ದಾರ ಕಾರ್ಯಾಲಯಕ್ಕೆ ಭೇಟಿ ನೀಡಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸ್ಥಳ ಹಾಗೂ ಪಟ್ಟಣದ ಸರಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆ ಹೊಸದಾಗಿ ಪ್ರಜಾ ಸೌಧ ನಿರ್ಮಿಸುವ ಕುರಿತು ಸ್ಥಳ ಪರಿಶೀಲನೆ ಮಾಡಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಹಾಗೂ ಪಟ್ಟಣದ ಸಾರ್ವಜನಿಕರೊಂದಿಗೆ ಚರ್ಚಿಸಿದರು.ಪಟ್ಟಣದ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ ಬೇಟಿ ನೀಡಿ ಮಕ್ಕಳೂಂದಿಗೆ ಅಭ್ಯಾಸ ಚಟುವಟಿಕೆ ವಿಕ್ಷೀಸಿ ಶಾಲೆಯ ಆವರಣದಲ್ಲಿರುವ ಅಂಗನವಾಡಿ ೮ನೇ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಹಾಜರಾತಿ, ಕಲಿಕೆ ಕುರಿತು ಹಾಗೂ ಮಕ್ಕಳಿಗೆ ನೀಡುವ ಆಹಾರದ ಬಗ್ಗೆ ಪರಿಶೀಲನೆ ನಡೆಸಿದ್ದರು.ಸರಕಾರಿ ಪ್ರೌಢ ಶಾಲೆ, ಕಸ್ತೂರಿ ಬಾ ಗಾಂಧಿ ವಸತಿ ಶಾಲೆಗೆ ಭೇಟಿ ನೀಡಿ ಮೂಲ ಭೂತ ಸೌಕರ್ಯ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ರಕ್ತಹೀನತೆಯು ಗರ್ಭಿಣಿಯರು, ಚಿಕ್ಕ ಮಕ್ಕಳು, ಹದಿಹರೆಯದವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಸೇವಿಸುವ ಆಹಾರದಲ್ಲಿ ಪೌಷ್ಟಿಕಾಂಶದ ಕೊರತೆಯೇ ಇದಕ್ಕೆ ಮುಖ್ಯ ಕಾರಣವಾಗಿದೆ ಎಂದು ತಡವಲಗ ಸಮುದಾಯ ಆರೋಗ್ಯ ಕೇಂದ್ರದ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದ ಆಪ್ತ ಸಮಾಲೋಚಕ ರಾಮಗೊಂಡ ಭಜಂತ್ರಿ ಹೇಳಿದರು.ಸೋಮವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್,ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ‘ಅನಿಮೀಯ ಮುಕ್ತ ಅಭಿಯಾನ’ವನ್ನು ಉದ್ಧೇಶಿಸಿ ಮಾತನಾಡಿದರು.10 ರಿಂದ 19 ವಯಸ್ಸಿನವರಲ್ಲಿ ಕಂಡುಬರುವ ರಕ್ತಹೀನತೆ ಪ್ರಮಾಣ ನಿಯಂತ್ರಿಸುವದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಪ್ರತಿಶತ 55%ಕ್ಕಿಂತ ಹೆಚ್ಚು ಗಂಡು ಮತ್ತು ಹೆಣ್ಣು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ.ಪ್ರತಿವಾರಕ್ಕೆ ಒಂದು ಕಬ್ಬಿಣಾಂಶದ ಮಾತ್ರೆಯನ್ನು ನೀಡಿ, ಮಕ್ಕಳಲ್ಲಿ ರಕ್ತಹೀನತೆಯನ್ನು ತಡೆಗಟ್ಟಲು ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ರಕ್ತಹೀನತೆಯು ಸಾರ್ವತ್ರಿಕ ಆರೋಗ್ಯ ಸಮಸ್ಯೆಯಾಗಿದ್ದು, ನಿತ್ಯ ಹಸಿರು ತರಕಾರಿ, ಬೇಳೆಕಾಳುಗಳಿಂದ ತಯಾರಿಸಿದ ಊಟ ಸೇವಿಸುವುದರ ಜೊತೆಗೆ ಹಣ್ಣು, ಮೊಸರು ಸೇವಿಸಿ ರಕ್ತ ಹೀನತೆಯಿಂದ ದೂರವಿರುವಂತೆ ತಿಳಿಸಿದರು.ಶಿಕ್ಷಕ ಎಸ್ ಆರ್ ಚಾಳೇಕರ ಮಾತನಾಡಿ,…

Read More