ಉದಯರಶ್ಮಿ ದಿನಪತ್ರಿಕೆ
ಇಂಡಿ: ಪ್ರಸ್ತುತ ಸಮಾಜದಲ್ಲಿ ಮಹಿಳೆಯರಿಗೆ ಇರಬೇಕಾದ ಕಾನೂನಿನ ಅರಿವು ಮೂಡಿಸುವ ಕಾರ್ಯಗಾರಗಳು ಹೆಚ್ಚು ಹೆಚ್ಚು ನೆಡೆಯಬೇಕು ಎಂದು ವಕೀಲೆ ಡಿ.ವಾಯ್.ಮೇಡೆಗಾರ ಹೇಳಿದ್ದರು.
ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಹಿಳಾ ಸಬಲೀಕರಣ ಕುರಿತು ಉಪನ್ಯಾಸ ನೀಡಿದ್ದರು.
ಲೈಂಗಿಕ ದೌರ್ಜನ್ಯ ಮತ್ತು ಮಹಿಳಾ ಶೋಷಣೆ ಇವುಗಳ ಕುರಿತು ಪ್ರಸ್ತುತ ಭಾರತೀಯ ದಂಡ ಸಂಹಿತೆಯಲ್ಲಿ ಹೂಸ ಕಾನೂನುಗಳ ಬಗ್ಗೆ ಪ್ರಸ್ತಾಪಿಸಿದರು. ಅಧ್ಯಕ್ಷತೆ ವಹಿಸಿ ಕಾಲೇಜಿನ ಪ್ರಾಚಾರ್ಯ, ಪ್ರೂ.ಆರ್ ಎಚ್ ರಮೇಶ ಮಾತನಾಡಿ “ಮಹಿಳಾ ದಿನಾಚಾರಣೆ ದೇಶದ ಶ್ರೇಷ್ಠ ಮಹಿಳೆಯರನ್ನು ಸ್ಮರಿಸಿಕೂಂಡು ಅವರ ವಿಚಾರಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೂಳ್ಳಬೇಕು ಎಂದರು.
ಪ್ರೊ.ರವಿಕುಮಾರ ಅರಳಿ ಪ್ರಾಸ್ತಾವಿಕವಾಗಿ ಮಾತನಾಡಿದರು, ವೇದಿಕೆಯಲ್ಲಿ ಪ್ರೂ.ತಿಪ್ಪಣ್ಣ ವಗ್ಧಾಳ,ಪ್ರೂ.ರಾಜಲಕ್ಷ್ಮಿ, ಉಪಸ್ಥಿತರಿದ್ದರು,
ಕುಮಾರಿ ತೇಜಸ್ವನಿ ಯಳಮೇಲಿ ಪ್ರಾರ್ಥಿಸಿದರು, ಪ್ರೊ.ಸಂಗಮೇಶ ಹಿರೇಮಠ ವಂದಿಸಿದರು, ಪ್ರೂ.ಸುರೇಖಾ ರಾಠೋಡ್ ನಿರೂಪಿಸಿದರು.