Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಜೀವನದಲ್ಲಿ ಶಿಕ್ಷಣ ಪಡೆಯುವದು ಮುಖ್ಯವಾಗಿದೆ. ಶಿಕ್ಷಣವಂತರಾದರೆ ಜೀವನವನ್ನು ಸುಗಮವಾಗಿ ಸಾಗಿಸಬಹುದು. ಈ ನಿಟ್ಟಿನಲ್ಲಿ ಪಾಲಕರು ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕೆಂದು ಗೊರವಗುಂಡಗಿ ಪುಣ್ಯಕೋಟಿ ಆಶ್ರಮದ ವರಲಿಂಗೇಶ್ವರ ಸ್ವಾಮೀಜಿ ಹೇಳಿದರು.ತಾಲೂಕಿನ ಇಂಗಳೇಶ್ವರ ಗ್ರಾಮದ ಉಕ್ಕಲಿ ರಸ್ತೆಯಲ್ಲಿರುವ ಎಲ್‌ಟಿ-೨ ತಾಂಡಾದ ಹತ್ತಿರವಿರುವ ಟೋಕರೆ ಕೋಳಿ ಸಮಾಜ ಸಂಸ್ಥೆಯ ಟೋಕರೆ ಕೇಳಿ ಪೂರ್ವ ಪ್ರಾಥಮಿಕ, ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ೩೫ ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಶಾಲಾ ಸಾಂಸ್ಕ್ರತಿಕ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯು ಅನೇಕ ಸಂತರ-ಮಹಾತ್ಮರಿಗೆ ಜನ್ಮತಾಣವಾಗಿದೆ. ಈಚೆಗೆ ಜಿಲ್ಲೆಯು ಶೈಕ್ಷಣಿಕವಾಗಿ ಅಭಿವೃದ್ಧಿಯಾಗುತ್ತಿದೆ. ಬೇರೆ ಜಿಲ್ಲೆಯವರು ವಿಜಯಪುರ ಜಿಲ್ಲೆಗೆ ವ್ಯಾಸಂಗಕ್ಕೆ ಬರುತ್ತಿರುವದು ಕಾಣಬಹುದಾಗಿದೆ. ಈ ಭಾಗದಲ್ಲಿರುವ ಟೋಕರೆ ಕೋಳಿ ಸಮಾಜ ಸೇವಾ ಸಂಸ್ಥೆಯು ಸಹ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಪೂರ್ವ ಪ್ರಾಥಮಿಕ, ಪ್ರಾಥಮಿಕ ಶಾಲೆಯನ್ನು ನಡೆಸುತ್ತಿರುವದು ಶ್ಲಾಘನೀಯ. ಈಗಾಗಲೇ ಈ ಸಂಸ್ಥೆಯು ಅನುದಾನಕ್ಕೆ ಒಳಪಡಬೇಕಾಗಿತ್ತು. ಮುಂದಿನ ದಿನಗಳಲ್ಲಿ ಸರ್ಕಾರದ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಕೃಷ್ಣಾ ನದಿಯ ಹೂಳು ತುಂಬಿದ ಮಣ್ಣನ್ನು ರೈತನ ಸವಳು-ಜವಳು ಭೂಮಿಗೆ ಮಣ್ಣು ಸಾಗಿಸಲು ಅನುಮತಿ ನೀಡುವಂತೆ ಕೋರಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ತಾಲೂಕು ಘಟಕದ ವತಿಯಿಂದ ಸೋಮವಾರ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.ಪಟ್ಟಣದ ಪ್ರವಾಸಿ ಮಂದಿರದಿಂದ ಬಸವೇಶ್ವರ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಅಂಬೇಡ್ಕರ್ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ ಮಾರ್ಗವಾಗಿ ಪ್ರತಿಭಟನಾ ಮೆರವಣಿಗೆಯ ಮೂಲಕ ತಹಸೀಲ್ದಾರ ಕಚೇರಿಯವರೆಗೆ ಆಗಮಿಸಿದರು. ಅಲ್ಲಿ ಬಹಿರಂಗ ಸಭೆ ನಡೆಸಿ ಸಂಘದ ರಾಜ್ಯದ ಪ್ರ.ಕಾರ್ಯದರ್ಶಿ ಸಂಗಣ್ಣ ಬಾಗೇವಾಡಿ, ಜಿಲ್ಲಾ ಪ್ರ.ಕಾರ್ಯದರ್ಶಿ ಗುರುಸಂಗಪ್ಪ ಹಂಡರಗಲ್ಲ, ತಾಲೂಕು ಅಧ್ಯಕ್ಷ ಅಯ್ಯಪ್ಪ ಬಿದರಕುಂದಿ, ಪ್ರ ಕಾರ್ಯದರ್ಶಿ ವಾಯ್.ಎಲ್.ಬಿರಾದಾರ, ಹಾಸ್ಯ ಕಲಾವಿದ ಶ್ರೀಶೈಲ ಹೂಗಾರ ಮತ್ತೀತರರು ಮಾತನಾಡಿ, ನದಿಯಲ್ಲಿನ ಮಣ್ಣು ಸಾಕಷ್ಟು ಫಲವತ್ತಾಗಿರುತ್ತದೆ. ಅದನ್ನು ನಮ್ಮ ಹೊಲಗಳಿಗೆ ಹಾಕಿದಾಗ ಒಳ್ಳೆಯ ಬೆಳೆ ಬರುತ್ತೆ. ಹಾಗಾಗಿ ಮಣ್ಣು ಸಾಗಿಸಲು ಅನುಮತಿ ನೀಡಬೇಕು ಮತ್ತು ತಾಲೂಕಿನ ಬಾಲಾಜಿ ಶುಗರ್ಸನವರು ರೈತರಿಗೆ ೨ ತಿಂಗಳಾದರೂ ರೈತರಿಗೆ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಶಾಲೆಯ ಒಂದು ಕೋಣೆ ಶಿಥಿಲಗೊಂಡಿದ್ದು, ಮಕ್ಕಳು ಬಯಲಲ್ಲಿ ಪಾಠ ಭೋದನೆ ಮಾಡುತ್ತಿದ್ದಾರೆ. ಅಧಿಕಾರಿಗಳು ಮಾತ್ರ ಇತ್ತ ಗಮನ ಹರಿಸದೆ ಕ್ಯಾರೇ ಎನ್ನುತ್ತಿಲ್ಲ ಎಂದು ಸಿಂದಗಿ ತಾಲೂಕಾಧ್ಯಕ್ಷ ಸಂತೋಷ ಮನಗೂಳಿ ಕೀಡಿಕಾರಿದರು.ಜಯ ಕರ್ನಾಟಕ ಸಂಘಟನೆ ಸಿಂದಗಿ ತಾಲೂಕಾ ಘಟಕದ ವತಿಯಿಂದ ಹಂದಿಗನೂರ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಂಡ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಧಿಕಾರಿಗಳು ಶಾಲೆಗೆ ಬೇಟಿ ನೀಡಿ ಪರಿಶೀಲನೆ ಮಾಡುತ್ತಿಲ್ಲ. ಹಲವು ಬಾರಿ ಮೇಲಾಧಿಕಾರಿಗಳಿಗೆ ಕುಡಿಯುವ ನೀರು, ಶಾಲಾ ಕೊಠಡಿಗಳು ಸಮಸ್ಯೆ, ಮೂಲಭೂತ ಸೌಕರ್ಯ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಲಿಖಿತ ಮತ್ತು ಮೌಖಿಕವಾಗಿ ಮನವಿ ಸಲ್ಲಿಸಿದರು ಯಾವುದೇ ರಿತೀಯ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.ಈ ವೇಳೆ ಕಾರ್ಯಕ್ರಮದ ನೇತೃತ್ವ ವಹಿಸಿದ ಜಿಲ್ಲಾ ವಕ್ತಾರ ಚನ್ನಪ್ಪಗೌಡ ಬಿರಾದಾರ ಮಾತನಾಡಿ, ಶಾಲೆಯ ಸಮಸ್ಯಗಳಿಗೆ ಒಂದು ತಿಂಗಳೊಳಗಾಗಿ ಮನವಿಗೆ ಸ್ಪಂದಿಸದಿದ್ದರೇ ಜಯ ಕರ್ನಾಟಕ ಸಂಘಟನೆ ಹಾಗೂ ಹಂದಿಗನೂರ ಕೆಜಿಎಸ್ ಶಾಲೆಯ ಎಸ್‌ಡಿಎಮ್‌ಸಿ ಸದಸ್ಯರುಗಳ ಸೇರಿಕೊಮಡು…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಶೃಂಗೇರಿ ಶಾರದಾ ಪೀಠದ ೩೭ನೇ ಜಗದ್ಗುರು ವಿಧುಶೇಖರ ಭಾರತೀ ಮಹಾಸ್ವಾಮೀಜಿ ಅವರು ವಿಜಯ ಯಾತ್ರೆಯನ್ನು ಕೈಗೊಂಡಿದ್ದು, ಆ ಹಿನ್ನಲೆಯಲ್ಲಿ ಸಿಂದಗಿ ನಗರಕ್ಕೆ ಮಾ.೨೦ ಮತ್ತು ೨೧ ರಂದು ಆಗಮಿಸಲಿದ್ದಾರೆ ಎಂದು ಸ್ಥಳೀಯ ಭೀಮಾಶಂಕರ ಮಠದ ಶ್ರೀ ಸದ್ಗುರು ದತ್ತಪ್ಪಯ್ಯ ಸ್ವಾಮಿಗಳು ತಿಳಿಸಿದ್ದಾರೆ.ಸಿಂದಗಿ ಪಟ್ಟಣದ ಶ್ರೀ ಭೀಮಾಶಂಕರ ಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಶ್ರೀಮಠದಲ್ಲಿ ಪೂಜ್ಯರ ಅಮೃತ ಹಸ್ತದಿಂದ ಸುವರ್ಣ ಭಾರತೀ ಭವನದ ಶಿಲಾನ್ಯಾಸ ನೆರವೇರಲಿದೆ. ಮಾ.೨೦ರಂದು ಸಂಜೆ ೫ಗಂಟೆಗೆ ಜಗದ್ಗುರುಗಳ ಪುರಪ್ರವೇಶ ವಿಜಯಪುರ ಬೈಪಾಸ್ ರಸ್ತೆಯಿಂದ ಶ್ರೀ ಸಂಗಮೇಶ್ವರ ದೇವಸ್ಥಾನದವರೆಗೆ ಬೈಕ್ರ‍್ಯಾಲಿ ಮೂಲಕ ಜಗದ್ಗುರುಗಳಿಗೆ ಸ್ವಾಗತ. ಸಂಜೆ ೬ಗಂಟೆಗೆ ಶ್ರೀ ಸಂಗಮೇಶ್ವರ ದೇವಸ್ಥಾನದಿಂದ ಶ್ರೀಮಠದವರೆಗೆ ಶೋಭಾಯಾತ್ರೆ, ೬.೩೦ಗಂಟೆಗೆ ಶ್ರೀಮಠದಲ್ಲಿ ಶ್ರೀ ಜಗದ್ಗರುಗಳಿಗೆ ಪೂರ್ಣಕುಂಭ ಸ್ವಾಗತ, ೭ಗಂಟೆಗೆ ಶ್ರೀಗಳಿಗೆ ಧೂಳಿ ಪಾದಪೂಜೆ ಹಾಗೂ ಭಿನ್ನವತ್ತಳಿಕೆ ಸಮರ್ಪಣೆ ಮತ್ತು ಅನುಗ್ರಹ ಭಾಷಣ. ರಾತ್ರಿ ೮.೩೦ಗಂಟೆಗೆ ಶ್ರೀಗಳಿಂದ ಶ್ರೀ ಶಾರದಾ ಚಂದ್ರಮೌಳೇಶ್ವರ ಪೂಜೆ ನಂತರ ಪ್ರಸಾದ ವಿತರಣೆ ಇರುತ್ತದೆ.…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪ್ರಾಥಮಿಕ ಶಿಕ್ಷಣವೇ ಮೂಲ ತಾಯಿ ಬೇರು ಎಂದು ಹೇಳಲಾಗುತ್ತಿತ್ತು ಇಂದು ಅನುಪಾದಕ ಕ್ಷೇತ್ರವಾಗಿದೆ ಇಂತಹ ಸಂದರ್ಭದಲ್ಲಿಯು ಗುಣಾತ್ಮಕ ಶಿಕ್ಷಣ ನೀಡಲು ಹೊರಟಿರುವ ವೀರಭದ್ರೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಹಂದಿಗನೂರ ಸರಕಾರಿ ಪ್ರೌಡಶಾಲೆಯ ಮುಖ್ಯಗುರು ಎಸ್.ಕೆ.ಗುಗ್ಗರಿ ಹೇಳಿದರು.ಸಿಂದಗಿ ಸಮೀಪದ ಕೋರವಾರ ಗ್ರಾಮದ ವೀರಭದ್ರೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಸರಸ್ವತಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಶಾರದೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಜಗತ್ತಿನ ಎಲ್ಲ ಧರ್ಮಗ್ರಂಥಗಳು ಸದಾ ಸತ್ಯವನ್ನು ಪ್ರತಿಪಾದಿಸಿವೆ. ಸತ್ಯಕ್ಕೆ ಯಾವಾಗಲು ಜಯವಿದೆ. ಹಾಗಾಗಿ ಮಕ್ಕಳು ಸದಾ ಸತ್ಯವನ್ನೆ ಹೇಳಬೇಕು. ಮಕ್ಕಳಿಗೆ ಶಾಲೆಯಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿ ದೊರೆಯುತ್ತದೆ ಎಂದರು.ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬೆಂಗಳೂರಿನ ಎಚ್‌ಡಿಎಫ್‌ಸಿ ಬ್ಯಾಂಕಿನ ಉಪಾಧ್ಯಕ್ಷ ದೇವರಾಜಗೌಡ ಪೊಲೀಸಪಾಟೀಲ ಮಾತನಾಡಿ, ಎಲ್ಲಿ ಹೆಣ್ಣನ್ನು ಪೂಜಿಸುತ್ತಾರೋ ಅಲ್ಲಿ ದೇವಾನು ದೇವತೆಗಳು ನೆಲೆಸುತ್ತಾರೆ. ತೊಟ್ಟಿಲು ತೂಗುವ ಕೈ ಇಡೀ ಜಗತ್ತನ್ನೇ ತೂಗ ಬಲ್ಲಳು. ಹೆಣ್ಣು ಸಮಾಜದ ಕಣ್ಣು. ಇಂತಹ ಅನೇಕ ಉದಾಹರಣೆಗಳನ್ನು ತಾಯಂದಿರಿಗೆ…

Read More

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ ಬೆಂಗಳೂರು: ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ನೀಡಲಾಗಿದ್ದು, ಮುಂಬರುವ ಚುನಾವಣೆಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸಬೇಕು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸೋಮವಾರ ಕರೆ ನೀಡಿದ್ದಾರೆ. ಆದರೆ ಕರ್ನಾಟಕ ಕಾಂಗ್ರೆಸ್ ಪಕ್ಷದ ಮಹಿಳೆಯರು ಉತ್ತಮ ಕೆಲಸ ಮಾಡದಿರುವ ಬಗ್ಗೆ ಅವರು ನಿರಾಶೆ ವ್ಯಕ್ತಪಡಿಸಿದರು.ಸೋಮವಾರ ನಡೆದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಮಾಜಿ ಶಾಸಕಿ ಸೌಮ್ಯ ರೆಡ್ಡಿ ನೇತೃತ್ವದ ರಾಜ್ಯ ಮಹಿಳಾ ಕಾಂಗ್ರೆಸ್ ವಿಭಾಗದ ಕಾರ್ಯಕ್ಷಮತೆಯ ಬಗ್ಗೆ ತೀವ್ರ ನಿರಾಶೆ ವ್ಯಕ್ತಪಡಿಸಿದರು.”ಮಹಿಳಾ ವಿಭಾಗದ ಬಗ್ಗೆ ನನಗೆ ಸಂತೋಷವಿಲ್ಲ; ಅದು ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ. ನೀವು ಏನನ್ನಾದರೂ ಸಾಧಿಸಲು ದೃಢನಿಶ್ಚಯ ಮಾಡಿದರೆ ಮುಂದೆ ಹಲವಾರು ಅವಕಾಶಗಳಿವೆ” ಎಂದು ಹೇಳಿದರು.ಮಹಿಳಾ ಸಬಲೀಕರಣಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ ಡಿಸಿಎಂ, “ಮಹಿಳಾ ಮೀಸಲಾತಿ ಮಸೂದೆ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಶ್ರೀಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಡಿ ನಿರ್ಮಿಸಿದ ವಾತ್ಸಲ್ಯ ಮನೆಯನ್ನು ಫಲಾನುಭವಿ ಮೌಲನಾಬೀ ಅವರಿಗೆ ಹಸ್ತಾಂತರಿಸಲಾಯಿತು.ತಾಲ್ಲೂಕಿನ ಕೋರವಾರ ವಲಯದ ಕೊಂಡಗೂಳಿ ಕಾರ್ಯಕ್ಷೇತ್ರದಲ್ಲಿ ಸೋಮವಾರ ಜರುಗಿದ ಸರಳ ಸಮಾರಂಭದ ಮೂಲಕ ಮಾಶಾಸನ ಫಲಾನುಭವಿ ಮೌಲನಾಬೀ ಎಂಬ ಮಹಿಳೆಗೆ ಮನೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕ ಸಂತೋಷಕುಮಾರ ಮಾತನಾಡಿ, ಜ್ಞಾನ ವಿಕಾಸ ಕಾರ್ಯಕ್ರಮ ಅಡಿಯಲ್ಲಿ ನಡೆಯಲಿರುವ ಕಾರ್ಯಕ್ರಮಗಳ ವಿವರ, ಮಾಶಾಸನ ಹಾಗೂ ವಾತ್ಸಲ್ಯ ಮನೆ ನಿರ್ಮಾಣದ ಕುರಿತು ಮಾಹಿತಿ ನೀಡಿದರು.ಜಿಲ್ಲಾ ಯೋಜನಾಧಿಕಾರಿ ಕೃಷ್ಣಮೂರ್ತಿ, ವೀರಘಂಟಯ್ಯ ಗದ್ದುಗೆಮಠ, ಗ್ರಾಮ ಪಂಚಾಯಿತಿ ಸದಸ್ಯರಾದ ವೀರಘಂಟಿ, ಶಿವಾನಂದ, ವಲಯ ಮೇಲ್ವಿಚಾರಕಿ ಮೀನಾಕ್ಷಿ, ಸೇವಾ ಪ್ರತಿನಿಧಿ ಸುಜಾತಾ ಕೆಂಭಾವಿ, ಸದಸ್ಯರಾದ ಮಹಾದೇವಿ ಗುನ್ನಾಪೂರ, ಸುನಂದಾ, ಗಂಗಾಬಾಯಿ ಸೀತಿಮನಿ, ಅಲ್ಲಮಾ, ಸವಿತಾ, ಲಕ್ಷ್ಮಿ ಸೇರಿದಂತೆ ಇತರರು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಾರಾ ಕಮಾನ್ ಆವರಣದಲ್ಲಿ ದಿ:-16-03-2025ರಂದು (ಅ)ಪರಿಚಿತ ಓದುಗರ ನಾಲ್ಕನೆಯ ಭೇಟಿಯು ಯಶಸ್ವಿಯಾಗಿ ಜರುಗಿತು.ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ವಿಜಯಪುರದ ಸಾಹಿತಿ ವಿಶ್ವನಾಥ ಅರಬಿ ಮಾತನಾಡಿ ಕಾವ್ಯದ ಹುಟ್ಟು,ವಿವಿಧ ಕಾವ್ಯ ಪ್ರಕಾರಗಳ ಬಗ್ಗೆ ಮಾತನಾಡುತ್ತಾ ತಾವು ರಚಿಸಿದ ಎಂಟು ಕೃತಿಗಳನ್ನು ಓದುಗರಿಗೆ ಪರಿಚಯಿಸಿದರು.ಮುಂದುವರೆದು ಪ್ರಸ್ತುತ ಕಾಲಘಟ್ಟದಲ್ಲಿ ಕನ್ನಡ ಪುಸ್ತಕಗಳನ್ನು ಓದುವವರ ಸಂಖ್ಯೆ ಕ್ಷೀಣಿಸುತ್ತಿದ್ದು ಇಂತಹ ಸಂದರ್ಭದಲ್ಲಿ ಸಾಹಿತ್ಯಾಸಕ್ತರನ್ನು ಒಂದೆಡೆ ಸೇರಿಸಿ ವಿವಿಧ ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ಈ ಮೂಲಕ ಕನ್ನಡದ ಅಳಿಲು ಸೇವೆ ಸಲ್ಲಿಸುತ್ತಿರುವ ಸಂಚಾಲಕ ಡಿ ಕುಮಾರ್ ಅವರ ಕಾರ್ಯ ಶ್ಲಾಘನೀಯವಾದುದು ಎಂದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾಹಿತಿ ಸಂಗೀತಾ ಮಠಪತಿ ಮಾತನಾಡಿ ಯುವಕ/ಯುವತಿಯರಲ್ಲಿ ಓದಿನ ಆಸಕ್ತಿ ಹೆಚ್ಚಿಸುವಲ್ಲಿ (ಅ) ಪರಿಚಿತ ಓದುಗರ ಬಳಗದ ಕಾರ್ಯ ಅಭಿನಂದನಾರ್ಹ, ವಾರಾಂತ್ಯದಲ್ಲಿ ತಮ್ಮದೇ ಲೋಕದಲ್ಲಿ ಮುಳುಗುವವರ ಮಧ್ಯೆ ಆಸಕ್ತಿಯಿಂದ ಆಗಮಿಸಿ ಪುಸ್ತಕದ ಲೋಕದಲ್ಲಿ ಮುಳುಗಿದ ಕನ್ನಡ ಈ ಎಲ್ಲ ಕನ್ನಡ ಮನಸ್ಸುಗಳು ಮುಂದೆ ಉತ್ತಮ ಸಾಹಿತಿಗಳಾಗಲಿ ಎಂದು ಹಾರೈಸಿದರು.ಬೆಳಗ್ಗೆ 10-30 ಗಂಟೆಯ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಗ್ರಂಥಾಲಯ ಶಾಖೆಯಲ್ಲಿ ಗೌರವಧನ ಆಧಾರದ ಮೇಲೆ ಅತಿಥಿ ಸಹಾಯಕ ಗ್ರಂಥಪಾಲಕರು (ಉuesಣ ಂssisಣಚಿಟಿಣ ಐibಡಿಚಿಡಿiಚಿಟಿ) (ತಾತ್ಕಾಲಿಕ) ಹಾಗೂ ಅತಿಥಿ ಗ್ರಂಥಾಲಯ ಸಹಾಯಕರು (Library Assistant)(ತಾತ್ಕಾಲಿಕ) ಹುದ್ದೆಗೆ ಇದೇ ೨೯ ರಂದು ಬೆಳಿಗ್ಗೆ ೧೧:೩೦ ಗಂಟೆಗೆ ವಿವಿಯ ಆಡಳಿತ ಭವನದ ಸಿಂಡಿಕೇಟ್ ಸಭಾ ಭವನದಲ್ಲಿ ಅರ್ಹ ಅಭ್ಯರ್ಥಿಗಳಿಗೆ ನೇರ ಸಂದರ್ಶನ ಏರ್ಪಡಿಸಲಾಗಿದೆ.ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ಮೂಲ ದಾಖಲಾತಿಗಳೊಂದಿಗೆ ಹಾಜರಿರಬೇಕು.ಹೆಚ್ಚಿನ ಮಾಹಿತಿಗಾಗಿ www.kswu.ac.in£ÀÄßಸಂಪರ್ಕಿಸಬಹುದು ಎಂದು ಕುಲಸಚಿವ ಶಂಕರಗೌಡ ಸೋಮನಾಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರ ಮತಕ್ಷೇತ್ರದಲ್ಲಿ ಬರುವ ತೊರವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಬಡಾವಣೆ, ಕಾಲೊನಿಗಳಲ್ಲಿ ಮುಖ್ಯ ರಸ್ತೆಗಳು, ಆಂತರಿಕ ರಸ್ತೆಗಳು ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ರೂ.10 ಕೋಟಿ ಅನುದಾನ ಮಂಜೂರಿಸಲಾಗಿದ್ದು, ಶೀಘ್ರದಲ್ಲೇ ಭೂಮಿಪೂಜೆ ನೆರವೇರಿಸಿ ಕಾಮಗಾರಿ ಆರಂಭಿಸಲಾಗುವುದು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರು ತಿಳಿಸಿದ್ದಾರೆ.ತೊರವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನವರಸಪುರದಲ್ಲಿ ಬರುವ ಸೇನಾ ನಗರ, ಸಿದ್ದಾರ್ಥ ನಗರದಲ್ಲಿ ಆಂತರಿಕ ರಸ್ತೆ, ಚರಂಡಿ ಮುಂದುವರೆದ ಕಾಮಗಾರಿಗೆ ರೂ.50 ಲಕ್ಷ, ಕಂದಾಯ ಕಾಲೊನಿ, ಸಬ್ ರಜಿಸ್ಟರ್ ಕಾಲೊನಿ ಆಂತರಿಕ ರಸ್ತೆಗಳ ಮುಮದುವರೆದ ಕಾಮಗಾರಿಗೆ ರೂ.50 ಲಕ್ಷ, ಟೀಚರ್ ಕಾಲೊನಿಯಲ್ಲಿ ಆಂತರಿಕ ರಸ್ತೆ, ಚರಂಡಿ ಮುಂದುವರೆದ ಕಾಮಗಾರಿಗೆ ರೂ.50 ಲಕ್ಷ, ಅಂಬೇಡ್ಕರ್ ಕಾಲೊನಿಯಲ್ಲಿ ಆಂತರಿಕ ರಸ್ತೆ, ಚರಂಡಿ ಕಾಮಗಾರಿಗೆ ರೂ.50 ಲಕ್ಷ, ಕಬಾಡೆ ಕಾಲೊನಿ ಮುಖ್ಯ ರಸ್ತೆ, ಸೈನಿಕ ಸ್ಕೂಲ್ ಕಾಲೊನಿಗಳಲ್ಲಿ ಮುಂದುವರೆದ ಆಂತರಿಕ ರಸ್ತೆ, ಚರಂಡಿ ಕಾಮಗಾರಿಗೆ ರೂ.100 ಲಕ್ಷ,…

Read More