ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರ ಮತಕ್ಷೇತ್ರದಲ್ಲಿ ಬರುವ ತೊರವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಬಡಾವಣೆ, ಕಾಲೊನಿಗಳಲ್ಲಿ ಮುಖ್ಯ ರಸ್ತೆಗಳು, ಆಂತರಿಕ ರಸ್ತೆಗಳು ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ರೂ.10 ಕೋಟಿ ಅನುದಾನ ಮಂಜೂರಿಸಲಾಗಿದ್ದು, ಶೀಘ್ರದಲ್ಲೇ ಭೂಮಿಪೂಜೆ ನೆರವೇರಿಸಿ ಕಾಮಗಾರಿ ಆರಂಭಿಸಲಾಗುವುದು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರು ತಿಳಿಸಿದ್ದಾರೆ.
ತೊರವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನವರಸಪುರದಲ್ಲಿ ಬರುವ ಸೇನಾ ನಗರ, ಸಿದ್ದಾರ್ಥ ನಗರದಲ್ಲಿ ಆಂತರಿಕ ರಸ್ತೆ, ಚರಂಡಿ ಮುಂದುವರೆದ ಕಾಮಗಾರಿಗೆ ರೂ.50 ಲಕ್ಷ, ಕಂದಾಯ ಕಾಲೊನಿ, ಸಬ್ ರಜಿಸ್ಟರ್ ಕಾಲೊನಿ ಆಂತರಿಕ ರಸ್ತೆಗಳ ಮುಮದುವರೆದ ಕಾಮಗಾರಿಗೆ ರೂ.50 ಲಕ್ಷ, ಟೀಚರ್ ಕಾಲೊನಿಯಲ್ಲಿ ಆಂತರಿಕ ರಸ್ತೆ, ಚರಂಡಿ ಮುಂದುವರೆದ ಕಾಮಗಾರಿಗೆ ರೂ.50 ಲಕ್ಷ, ಅಂಬೇಡ್ಕರ್ ಕಾಲೊನಿಯಲ್ಲಿ ಆಂತರಿಕ ರಸ್ತೆ, ಚರಂಡಿ ಕಾಮಗಾರಿಗೆ ರೂ.50 ಲಕ್ಷ, ಕಬಾಡೆ ಕಾಲೊನಿ ಮುಖ್ಯ ರಸ್ತೆ, ಸೈನಿಕ ಸ್ಕೂಲ್ ಕಾಲೊನಿಗಳಲ್ಲಿ ಮುಂದುವರೆದ ಆಂತರಿಕ ರಸ್ತೆ, ಚರಂಡಿ ಕಾಮಗಾರಿಗೆ ರೂ.100 ಲಕ್ಷ, ಎಲೆಗೆನ್ಸ್ ಕಾಲೊನಿಯ ಆಂತರಿಕ ರಸ್ತೆ, ಚರಂಡಿ ಕಾಮಗಾರಿಗೆ ರೂ.100 ಲಕ್ಷ, ಲೋಕನಾಥ ಕಾಲೊನಿ ಆಂತರಿಕ ರಸ್ತೆಗಳ ಕಾಮಗಾರಿಗೆ ರೂ.150 ಲಕ್ಷ, ಕ್ರಾಂತಿವೀರ ಕಾಲೊನಿಯಲ್ಲಿ ಆಂತರಿಕ ರಸ್ತೆಗಳ ಕಾಮಗಾರಿಗೆ ರೂ.50 ಲಕ್ಷ, ಏಕತಾ ಕಾಲೊನಿಯ ಆಂತರಿಕ ರಸ್ತೆ, ಚರಂಡಿ ಕಾಮಗಾರಿಗೆ ರೂ.100 ಲಕ್ಷ, ಸೇನಾ ನಗರದ 4ನೇ ಭಾಗದ ಆಂರತಿಕ ರಸ್ತೆಗಳ ಕಾಮಗಾರಿಗೆ ರೂ.50 ಲಕ್ಷ, ಶಾಂತಿ ನಗರದ ಆಂತರಿಕ ರಸ್ತೆಗಳ ಕಾಮಗಾರಿಗೆ ರೂ.50 ಲಕ್ಷ, ಹವಾಲ್ದಾರ್ ಕಾಲೊನಿ, ಪೊಲೀಸ್ ಕಾಲೊನಿ ಮುಖ್ಯ ರಸ್ತೆ ಮತ್ತು ಆಂತರಿಕ ರಸ್ತೆಗಳ ಕಾಮಗಾರಿಗೆ ರೂ.150 ಲಕ್ಷ, ಎನ್.ಜಿ.ಓ ಕಾಲೊನಿಯಿಂದ ಸೈನಿಕ ನಗರದ ವರೆಗೆ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ.50 ಲಕ್ಷ ಅನುದಾನ ಬಿಡುಗಡೆಗೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

