ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಶಾಲೆಯ ಒಂದು ಕೋಣೆ ಶಿಥಿಲಗೊಂಡಿದ್ದು, ಮಕ್ಕಳು ಬಯಲಲ್ಲಿ ಪಾಠ ಭೋದನೆ ಮಾಡುತ್ತಿದ್ದಾರೆ. ಅಧಿಕಾರಿಗಳು ಮಾತ್ರ ಇತ್ತ ಗಮನ ಹರಿಸದೆ ಕ್ಯಾರೇ ಎನ್ನುತ್ತಿಲ್ಲ ಎಂದು ಸಿಂದಗಿ ತಾಲೂಕಾಧ್ಯಕ್ಷ ಸಂತೋಷ ಮನಗೂಳಿ ಕೀಡಿಕಾರಿದರು.
ಜಯ ಕರ್ನಾಟಕ ಸಂಘಟನೆ ಸಿಂದಗಿ ತಾಲೂಕಾ ಘಟಕದ ವತಿಯಿಂದ ಹಂದಿಗನೂರ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಂಡ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಧಿಕಾರಿಗಳು ಶಾಲೆಗೆ ಬೇಟಿ ನೀಡಿ ಪರಿಶೀಲನೆ ಮಾಡುತ್ತಿಲ್ಲ. ಹಲವು ಬಾರಿ ಮೇಲಾಧಿಕಾರಿಗಳಿಗೆ ಕುಡಿಯುವ ನೀರು, ಶಾಲಾ ಕೊಠಡಿಗಳು ಸಮಸ್ಯೆ, ಮೂಲಭೂತ ಸೌಕರ್ಯ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಲಿಖಿತ ಮತ್ತು ಮೌಖಿಕವಾಗಿ ಮನವಿ ಸಲ್ಲಿಸಿದರು ಯಾವುದೇ ರಿತೀಯ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಈ ವೇಳೆ ಕಾರ್ಯಕ್ರಮದ ನೇತೃತ್ವ ವಹಿಸಿದ ಜಿಲ್ಲಾ ವಕ್ತಾರ ಚನ್ನಪ್ಪಗೌಡ ಬಿರಾದಾರ ಮಾತನಾಡಿ, ಶಾಲೆಯ ಸಮಸ್ಯಗಳಿಗೆ ಒಂದು ತಿಂಗಳೊಳಗಾಗಿ ಮನವಿಗೆ ಸ್ಪಂದಿಸದಿದ್ದರೇ ಜಯ ಕರ್ನಾಟಕ ಸಂಘಟನೆ ಹಾಗೂ ಹಂದಿಗನೂರ ಕೆಜಿಎಸ್ ಶಾಲೆಯ ಎಸ್‌ಡಿಎಮ್‌ಸಿ ಸದಸ್ಯರುಗಳ ಸೇರಿಕೊಮಡು ಶಾಲೆ ಬೀಗ ಹಾಕಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಗೆ ನೀಡಿದರು.
ಈ ವೇಳೆ ದೇವರಹಿಪ್ಪರಗಿ ತಾಲೂಕಾಧ್ಯಕ್ಷ ಸಿದ್ರಾಮಪ್ಪ ಅವಟಿ, ತಾಲೂಕಾ ಪದಾಧಿಕಾರಿಗಳಾದ ರಮೇಶ ರಾಠೋಡ, ಭೀಮನಗೌಡ ಬಿರಾದಾರ, ಪ್ರವೀಣ್ ಶೆಟ್ಟಿ, ಎಸ್,ಡಿ,ಎಮ್,ಸಿ ಉಪಾಧ್ಯಕ್ಷ ಎಮ್.ಎನ್.ಗುಬ್ಬೇವಾಡ, ವೀರುಪಾಕ್ಷ ಮಾಶ್ಯಾಳ, ವ್ಹಿ.ಆರ್.ಕುಲಕರ್ಣಿ ಸೇರಿದಂತೆ ಪದಾಧಿಕಾರಿಗಳು, ಶಾಲೆಯ ಮುಖ್ಯಗುರು, ಶಿಕ್ಷಕರು ಹಾಗೂ ಸಹ ಶಿಕ್ಷಕರು ಇದ್ದರು.