ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಶ್ರೀಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಡಿ ನಿರ್ಮಿಸಿದ ವಾತ್ಸಲ್ಯ ಮನೆಯನ್ನು ಫಲಾನುಭವಿ ಮೌಲನಾಬೀ ಅವರಿಗೆ ಹಸ್ತಾಂತರಿಸಲಾಯಿತು.
ತಾಲ್ಲೂಕಿನ ಕೋರವಾರ ವಲಯದ ಕೊಂಡಗೂಳಿ ಕಾರ್ಯಕ್ಷೇತ್ರದಲ್ಲಿ ಸೋಮವಾರ ಜರುಗಿದ ಸರಳ ಸಮಾರಂಭದ ಮೂಲಕ ಮಾಶಾಸನ ಫಲಾನುಭವಿ ಮೌಲನಾಬೀ ಎಂಬ ಮಹಿಳೆಗೆ ಮನೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕ ಸಂತೋಷಕುಮಾರ ಮಾತನಾಡಿ, ಜ್ಞಾನ ವಿಕಾಸ ಕಾರ್ಯಕ್ರಮ ಅಡಿಯಲ್ಲಿ ನಡೆಯಲಿರುವ ಕಾರ್ಯಕ್ರಮಗಳ ವಿವರ, ಮಾಶಾಸನ ಹಾಗೂ ವಾತ್ಸಲ್ಯ ಮನೆ ನಿರ್ಮಾಣದ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ಯೋಜನಾಧಿಕಾರಿ ಕೃಷ್ಣಮೂರ್ತಿ, ವೀರಘಂಟಯ್ಯ ಗದ್ದುಗೆಮಠ, ಗ್ರಾಮ ಪಂಚಾಯಿತಿ ಸದಸ್ಯರಾದ ವೀರಘಂಟಿ, ಶಿವಾನಂದ, ವಲಯ ಮೇಲ್ವಿಚಾರಕಿ ಮೀನಾಕ್ಷಿ, ಸೇವಾ ಪ್ರತಿನಿಧಿ ಸುಜಾತಾ ಕೆಂಭಾವಿ, ಸದಸ್ಯರಾದ ಮಹಾದೇವಿ ಗುನ್ನಾಪೂರ, ಸುನಂದಾ, ಗಂಗಾಬಾಯಿ ಸೀತಿಮನಿ, ಅಲ್ಲಮಾ, ಸವಿತಾ, ಲಕ್ಷ್ಮಿ ಸೇರಿದಂತೆ ಇತರರು ಇದ್ದರು.