Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೇವಲ ಮುಸ್ಲಿಂರ ಬಗ್ಗೆ ತೆಗಳುವುದನ್ನೇ ಕೆಲಸ ಮಾಡಿಕೊಂಡಿರುವ ವಿಜಯಪುರ ನಗರ ಶಾಸಕರು ಒಂದು ದಿನವಾದರೂ ಮದರಸಾ ಹೋಗಿ ಅಲ್ಲಿನ ವ್ಯವಸ್ಥೆಯನ್ನು ನೋಡಿದ್ದಾರೆಯೇ? ಅವರು ಒಂದು ರೀತಿ ಅನಕ್ಷರಸ್ಥರಂತೆ ವರ್ತನೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಕೀಲ್ ಬಾಗಮಾರೆ ದೂರಿದ್ದಾರೆ.ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮದರಸಾದಲ್ಲಿ ಧಾರ್ಮಿಕ ಶಿಕ್ಷಣ, ವಿಜ್ಞಾನ ಎಲ್ಲವನ್ನೂ ಬೋಧಿಸಲಾಗುತ್ತಿದೆ, ಅಲ್ಲಿ ಹೋಗಿ ವ್ಯವಸ್ಥೆಯನ್ನು ಕಣ್ಣಾರೆ ಕಾಣಲಿ, ಅವರ ಒಬ್ಬ ಕಾರ್ಯಕರ್ತನಾದರೂ ಮದರಸಾಗಳಿಗೆ ಭೇಟಿ ನೀಡುವ ಕಾರ್ಯ ಮಾಡಿದ್ದಾರೆಯೇ? ಎಂದು ಶಕೀಲ್ ಪ್ರಶ್ನಿಸಿದ್ದಾರೆ.ಕೇವಲ ಹಿಂದೂ-ಮುಸ್ಲಿಂ ಜಗಳ ಹಚ್ಚುವುದು ಅವರ ಕಾಯಕವಾಗಬಿಟ್ಟಿದೆ. ಹಿಂದೂ-ಮುಸ್ಲಿಂ ಸಹೋದರರಂತೆ ಬದುಕುತ್ತಿದ್ದಾರೆ, ವಿನಾಕಾರಣ ಸಹೋದರರ ನಡುವೆ ಸಾಸಕ ಯತ್ನಾಳ ವಿಷ ಹಿಂಡುವ ಕಾರ್ಯ ಮಾಡುತ್ತಿದ್ದಾರೆ. ವಿನಾಕಾರಣ ಹಿಂದೂ ಮುಗ್ಧ ಯುವಕರನ್ನು ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ, ಈ ಜಗಳ ಹಚ್ಚಿ ತಮ್ಮ ಕುರ್ಚಿ ಭದ್ರ ಮಾಡಿಕೊಳ್ಳುವುದೇ ಬಿಜೆಪಿ ನಾಯಕರ ಕೆಲಸವಾಗಿದೆ. ವೈಯುಕ್ತಿಕ ಸ್ವಾರ್ಥಕ್ಕಾಗಿ ಹಿಂದೂ ಯುವಕರ…

Read More

ಲೇಖನ- ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕುದ.ಕ ಜಿಲ್ಲೆ-೫೭೪೧೯೮ದೂ: ೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ‘ಕಾಳಿಂಗ’ ಎಂಬ ಹೆಸರೇ ಒಂದು ರೀತಿ ಮನುಷ್ಯನಲ್ಲಿ ಭಯವನ್ನು ಮೂಡಿಸುತ್ತದೆ. ಏಕೆಂದರೆ ಕಾಳಿಂಗ ಎನ್ನುವುದನ್ನು ಬಹುವಾಗಿ ಬಳಸುವುದು ಕಾಳಿಂಗಸರ್ಪವನ್ನು ಉಲ್ಲೇಖಿಸಲು. ಅತ್ಯಂತ ವಿಷಕಾರಿಯಾದ ಈ ಹಾವು ಅಳಿವಿನ ಅಂಚಿನಲ್ಲಿದೆ. ಕಾಳಿಂಗ ಸರ್ಪದ ಜೀವ ಸಂಕುಲದ ಹೆಸರು ‘ಒಫಿಯೊಫಗಸ್ ಹನ್ನಾ’, ಇದರ ಅರ್ಥ ‘ಹಾವು ಭಕ್ಷಕ’ ಎಂದು. ಯಾವುದೇ ರೀತಿಯ ಹಾವನ್ನು ಅಥವಾ ತನ್ನದೇ ಗುಂಪಿನ ಸಣ್ಣ ಹಾವುಗಳು, ನಾಗರಹಾವುಗಳನ್ನು ತಿಂದು ಜೀವಿಸುವ ಈ ಸಂಕುಲದ ಕಾಳಿಂಗ ಸರ್ಪವು ವಿಶ್ವದ ಅತ್ಯಂತ ಉದ್ದದ ಹಾಗೂ ಅತ್ಯಂತ ವಿಷಕಾರಿ ಹಾವುಗಳ ಪೈಕಿ ಒಂದು. ಸುಂದರ ಮೈಕಟ್ಟನ್ನು ಹೊಂದಿರುವ ಈ ಹಾವು ಕಪ್ಪು ಬಣ್ಣವಿದ್ದು, ನೋಡಲು ಅತ್ಯಂತ ಆಕರ್ಷಕವಾಗಿ ಇರುತ್ತದೆ.ಸುಮಾರು ೫.೫ಮೀ ಯಾ ೧೮ ಅಡಿ ಉದ್ದ ಬೆಳೆಯುವ ಈ ಹಾವು ಏಷ್ಯಾದ ಹಲವು ಭಾಗಗಳಲ್ಲಿ ಮತ್ತು ಭಾರತದ ಕೆಲ ಪ್ರದೇಶಗಳಲ್ಲಿ ಮಾತ್ರ ಹೆಚ್ಚಾಗಿ ಕಾಣಸಿಗುತ್ತದೆ. ದಟ್ಟ…

Read More

ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಕೆಲ ದಿನಗಳ ಹಿಂದೆ ನಾನು ಆಪರೇಷನ್ ಕ್ಲೀನ್ ಹೋಮ್ ಜಾರಿ ಮಾಡಿದೆ. ಸುಮಾರು ಏಳೆಂಟು ತಾಸುಗಳಲ್ಲಿ ನಾನು, ಸೊಸೆ ಮತ್ತು ಕೆಲಸದಾಕೆ ಇಡೀ ಮನೆಯ ಎಲ್ಲ ಕೋಣೆಗಳ ಜೇಡರ ಬಲೆಗಳನ್ನೆಲ್ಲ ತೆಗೆದು, ಧೂಳು ಹೊಡೆದು, ಕಿಟಕಿ ಬಾಗಿಲುಗಳನ್ನೆಲ್ಲ ಒರೆಸಿ, ಬೆಡ್ ಶೀಟ್ಗಳನ್ನು, ಕಿಟಕಿ ಮತ್ತು ಬಾಗಿಲ ಪರದೆಗಳನ್ನು ವಾಷಿಂಗ್ ಮಷೀನ್ ಗೆ ಹಾಕಿ ಮನೆಯ ಕಸ ಗುಡಿಸಿ ನೆಲ ಒರೆಸಿ ಮುಗಿಸಿದೆವು.ತುಸು ಹೆಚ್ಚು ಸಮಯ ತೆಗೆದುಕೊಳ್ಳುವುದು ಕೇವಲ ಅಡುಗೆಮನೆಯ ಸ್ಟೋರ್ ಮಾತ್ರ. ನನ್ನ ಸ್ನೇಹಿತರಿಗೆ ಆಶ್ಚರ್ಯವಾಗುವುದು ತುಸು ದೊಡ್ಡದೇ ಆದ ನಮ್ಮ ಮನೆಯನ್ನು ಅದು ಹೇಗೆ ಒಂದು ದಿನದಲ್ಲಿ ನೀವು ಇಡೀ ಮನೆ ಕ್ಲೀನ್ ಮಾಡುತ್ತೀರಿ ಅಂತ.ನಿಜ ಅವರು ಹೇಳುವುದು, ಇಷ್ಟೆಲ್ಲಾ ಕೆಲಸಗಳನ್ನು ಒಂದೇ ದಿನದಲ್ಲಿ ಮಾಡಲು ಕಷ್ಟ ಆದರೆ ಅಸಾಧ್ಯವೇನಲ್ಲ. ಮನೆಯಲ್ಲಿ ಅನವಶ್ಯಕ ವಸ್ತುಗಳು ತುಂಬಿದ್ದರೆ ಅವುಗಳನ್ನು ಅಲ್ಲಿ ಇಲ್ಲಿ ಎತ್ತಿಟ್ಟು ಸ್ವಚ್ಛ ಮಾಡುವುದರಲ್ಲಿಯೇ ಬಹಳಷ್ಟು ಸಮಯ ವ್ಯರ್ಥವಾಗುತ್ತದೆ.…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ತಾಲೂಕಿನ ಕೂಡಗಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಕನ್ನಡಿಗರಿಗೆ ಉದ್ಯೋಗ ಹಾಗೂ ಕೊಲ್ದಾರ ತಾಲೂಕಿನ ಎಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಅನ್ಯ ಭಾಷಾ ನಾಮ ಫಲಕಗಳನ್ನು ಕನ್ನಡದಲ್ಲಿ ಅಳವಡಿಸಬೇಕೆಂದು ಆಗ್ರಹಿಸಿ ತಹಸೀಲ್ದಾರ್ ಕಾರ್ಯಾಲಯಕ್ಕೆ ತೆರಳಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಕಾರ್ಯಕರ್ತರು ಎನ್ ಕೆ ನಧಾಪ್ ಅವರಿಗೆ ಮನವಿ ಸಲ್ಲಿಸಿದರುಸರ್ಕಾರ ಕನ್ನಡಿಗರಿಗೆ ಎಲ್ಲ ವಯಲಯದಲ್ಲಿ ಕಡ್ಡಾಯ ಉದ್ಯೋಗ ಮೀಸಲಾತಿಗಾಗಿ ಆದೇಶವನ್ನು ಮಾಡಿದೆ. ಅದರಂತೆ ನಮ್ಮ ಜಿಲ್ಲೆಯ ನಮ್ಮದೇ ತಾಲೂಕಿನ ಎನ್.ಟಿ.ಪಿ.ಸಿ ಉಷ್ಣ ವಿದ್ಯೋತ ಸ್ಥಾವರದಲ್ಲಿ ಶೇ 85% ರಷ್ಟು ಕನ್ನಡಿಗರಿಗೆ ಉದ್ಯೋಗವಕಾಶಗಳನ್ನು ನೀಡಬೇಕೆಂದು ಈಗಾಗಲೇ ನಾವು ಮನವಿ ಸಲ್ಲಿಸಿರುತ್ತೇವೆ. ಈಗ ಮತ್ತೊಮ್ಮೆ ತಮ್ಮಲ್ಲಿ ನಾವು ತಿಳಿಸುವುದೇನೆಂದರೆ, ಎನ್.ಟಿ.ಪಿ.ಸಿ ವಿದ್ಯುತ್ ಸ್ಥಾವರದಲ್ಲಿ ಕನ್ನಡಿಗರಿಗೆ ಕಡ್ಡಾಯವಾಗಿ ಉದ್ಯೋಗ ನೀಡಬೇಕು ಮತ್ತು ಎನ್.ಟಿ.ಪಿ.ಸಿ ಗೆ ಭೂಮಿ ಕಳೆದುಕೊಂಡ ರೈತರಿಗೆ ಹಾಗೂ ಅವರ ಮಕ್ಕಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕು ಮತ್ತು ಕೊಲ್ದಾರ ತಾಲೂಕಿನ ಎಲ್ಲ ಅಂಗಡಿ ಮುಂಗಟ್ಟುಗಳು, ಢಾಬಾಗಳು ಮತ್ತು ಗ್ರಾಮ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ನ್ಯಾಯವಾದಿಗಳ ಸಂಘದ ವತಿಯಿಂದ ನೂತನವಾಗಿ ವಿಜಯಪುರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಡಾ. ಕಸನಪ್ಪಾ ನಾಯಕ ಅವರನ್ನು ಸನ್ಮಾನಿಸಲಾಯಿತು.ಇದೇ ಸಂದರ್ಭದಲ್ಲಿ ಜಿಲ್ಲಾ ಪೋಕ್ಸೊ ಕೋರ್ಟಿನ ನ್ಯಾಯಾಧೀಶರಾದ ರಾಮಾ ನಾಯಕ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಡಿ.ಜಿ. ಬಿರಾದಾರ, ಉಪಾಧ್ಯಕ್ಷ ಎಸ್.ಬಿ. ಬಿರಾದಾರ, ಪ್ರಧಾ ಕರ್ಯದರ್ಶಿ ಎಸ್.ಎಸ್. ಚೂರಿ, ಎಂ.ಆಯ್. ಕಾಖಂಡಕಿ, ಯು.ಎ. ಆಲಗೂರ, ವಾಯ.ಬಿ. ಬಡಿಗೇರ, ಬಿ.ಡಿ. ಬಿರಾದಾರ, ವಿ.ಎಚ್. ಗಾಳಪ್ಪಗೋಳ, ಎಂ.ಆರ್. ಹವಾಲ್ದಾರ. ಪಿ.ಕೆ. ಹುಯಿನಗೊಲ, ಎಂ.ಎಚ್. ಇನಾಮದಾರ, ಎಸ್.ಎ. ಆಸಂಗಿ ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ೨೦೨೫-೨೬ ನೇ ಸಾಲಿಗೆ ತಾಲೂಕಿನ ಬಿದರಕುಂದಿ ಗ್ರಾಮದ ಆದರ್ಶ ವಿದ್ಯಾಲಯ ಶಾಲೆಗೆ ೬ ನೇ ತರಗತಿಗೆ ಮಾ.೨೩ ರಂದು ಪ್ರವೇಶ ಪರೀಕ್ಷೆ ನಡೆಯಲಿದೆ. ಈಗಾಗಲೇ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಪ್ರವೇಶ ಪತ್ರಗಳು ಈ ತಿತಿತಿ.sಛಿhooಟeಜuಛಿಚಿಣioಟಿ.ಞಚಿಡಿ.ಟಿiಛಿ.iಟಿ oಡಿ ತಿತಿತಿ.viಜಥಿಚಿvಚಿhiಟಿi.ಞಚಿಡಿಟಿಚಿಣಚಿಞಚಿ.gov.iಟಿ ವೆಬ್ ಸೈಟ್ ನಲ್ಲಿ ಲಭ್ಯ ಇರುವುದು. ಪ್ರವೇಶ ಪತ್ರವನ್ನು ಪಡೆದುಕೊಂಡು ಪರೀಕ್ಷೆಗೆ ಹಾಜರಾಗುವಂತೆ ಪ್ರಕಟಣೆ ತಿಳಿಸಿದೆ.

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಕೃಷ್ಣಾ ತೀರದಲ್ಲಿ ನಡೆಯುತ್ತಿರುವ ಅಕ್ರಮ ಮಣ್ಣು ಮಾಫಿಯಾ ತಡೆಯುವಂತೆ ಒತ್ತಾಯಿಸಿ ಪಟ್ಟಣದ ತಹಸೀಲ್ದಾರ ಕಚೇರಿಯ ಆವರಣದಲ್ಲಿ ಒಂದು ದಿನದ ಧರಣಿ ನಡೆಸಲಾಯಿತು.ಈ ವೇಳೆ ಯುವಜನ ಸೇನೆಯ ರಾಜ್ಯಾಧ್ಯಕ್ಷ ಶಿವಾನಂದ ವಾಲಿ ಮಾತನಾಡಿ, ಅಕ್ರಮವಾಗಿ ಮಣ್ಣು ಸಾಗಾಟ ನಡೆಸುತ್ತಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ತಹಶೀಲ್ದಾರರಿಗೆ ಹೇಳಿದರೆ ಪೊಲೀಸ್ ಇಲಾಖೆಗೆ ತಿಳಿಸುವಂತೆ ಪೊಲೀಸರಿಗೆ ತಿಳಿಸಿದರೆ ತಹಸೀಲ್ದಾರ ಬಂದು ದೂರು ನೀಡಲಿ ಅಂತಾರೆ. ತಾಲೂಕಿನಲ್ಲಿ ಆಡಳಿತ ವ್ಯವಸ್ಥೆ ಇದೆಯೋ ಇಲ್ಲವೋ ಎಂಬ ಬಗ್ಗೆ ನಮಗೆ ಅನುಮಾನ ಮೂಡಿದೆ. ಈ ತಾಲೂಕಿನ ದಂಡಾಧಿಕಾರಿಗಳ ರಿಮೋಟ್ ಬೇರೆಯವರ ಬಳಿ ಇದೆ ಎನಿಸುತ್ತೆ. ಮಣ್ಣು ಮಾಫಿಯಾ ತಡೆಯುವಂತೆ ೧ನೇ ತಾರೀಕಿಗೆ ಮನವಿ ಪತ್ರ ನೀಡಿದರೆ ೧೮ನೇ ತಾರೀಕಿನಂದು ಇದು ನಮ್ಮ ವ್ಯಾಪ್ತಿಗೆ ಒಳಪಡುವದಿಲ್ಲ ಎಂದು ಹಿಂಬರಹ ನೀಡುತ್ತಾರೆ. ನಿನ್ನೆ ಮಣ್ಣು ಹೊಡೆಯಲು ಪರವಾನಗಿ ಕೋರಿ ನಡೆದ ಹೋರಾಟದಲ್ಲಿ ಟಿಪ್ಪರ ಮಾಲೀಕರು ಭಾಗಿಯಾಗಿದ್ದರು. ನಾವು ಮಣ್ಣು ಮಾಫಿಯಾ ಅಂತಾ ಹೇಳಿದ್ದು ರೈತರಿಗಲ್ಲ, ಸುಲಗೆಕೋರರಿಗೆ. ಇಲ್ಲಿ ಮಣ್ಣು…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಕೃಷ್ಣಾ ತೀರದಲ್ಲಿ ನಡೆಯುತ್ತಿರುವ ಅಕ್ರಮ ಮಣ್ಣು ಮಾಫಿಯಾ ತಡೆಯುವಂತೆ ಒತ್ತಾಯಿಸಿ ಪಟ್ಟಣದ ತಹಸೀಲ್ದಾರ ಕಚೇರಿಯ ಆವರಣದಲ್ಲಿ ಒಂದು ದಿನದ ಧರಣಿ ನಡೆಸಲಾಯಿತು.ಈ ವೇಳೆ ಯುವಜನ ಸೇನೆಯ ರಾಜ್ಯಾಧ್ಯಕ್ಷ ಶಿವಾನಂದ ವಾಲಿ ಮಾತನಾಡಿ, ಅಕ್ರಮವಾಗಿ ಮಣ್ಣು ಸಾಗಾಟ ನಡೆಸುತ್ತಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ತಹಶೀಲ್ದಾರರಿಗೆ ಹೇಳಿದರೆ ಪೊಲೀಸ್ ಇಲಾಖೆಗೆ ತಿಳಿಸುವಂತೆ ಪೊಲೀಸರಿಗೆ ತಿಳಿಸಿದರೆ ತಹಸೀಲ್ದಾರ ಬಂದು ದೂರು ನೀಡಲಿ ಅಂತಾರೆ. ತಾಲೂಕಿನಲ್ಲಿ ಆಡಳಿತ ವ್ಯವಸ್ಥೆ ಇದೆಯೋ ಇಲ್ಲವೋ ಎಂಬ ಬಗ್ಗೆ ನಮಗೆ ಅನುಮಾನ ಮೂಡಿದೆ. ಈ ತಾಲೂಕಿನ ದಂಡಾಧಿಕಾರಿಗಳ ರಿಮೋಟ್ ಬೇರೆಯವರ ಬಳಿ ಇದೆ ಎನಿಸುತ್ತೆ. ಮಣ್ಣು ಮಾಫಿಯಾ ತಡೆಯುವಂತೆ ೧ನೇ ತಾರೀಕಿಗೆ ಮನವಿ ಪತ್ರ ನೀಡಿದರೆ ೧೮ನೇ ತಾರೀಕಿನಂದು ಇದು ನಮ್ಮ ವ್ಯಾಪ್ತಿಗೆ ಒಳಪಡುವದಿಲ್ಲ ಎಂದು ಹಿಂಬರಹ ನೀಡುತ್ತಾರೆ. ನಿನ್ನೆ ಮಣ್ಣು ಹೊಡೆಯಲು ಪರವಾನಗಿ ಕೋರಿ ನಡೆದ ಹೋರಾಟದಲ್ಲಿ ಟಿಪ್ಪರ ಮಾಲೀಕರು ಭಾಗಿಯಾಗಿದ್ದರು. ನಾವು ಮಣ್ಣು ಮಾಫಿಯಾ ಅಂತಾ ಹೇಳಿದ್ದು ರೈತರಿಗಲ್ಲ, ಸುಲಗೆಕೋರರಿಗೆ. ಇಲ್ಲಿ ಮಣ್ಣು…

Read More

ಫೇವಾರ್ಡ್ ವಿಜಯಪುರದಿಂದ ವಿಶ್ವ ಎನ್ಜಿಓ, ಮಹಿಳಾ ದಿನಾಚರಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸರ್ಕಾರ ಸುಸ್ಥಿರ ಭವಿಷ್ಯ ಹಾಗೂ ಅಭಿವೃದ್ಧಿ ಸಾಧಿಸುವಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪಾತ್ರ ಮಹತ್ತರವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ ಅಭಿಮತ ವ್ಯಕ್ತಪಡಿಸಿದರು.ಕರ್ನಾಟಕ ನಗರ ಮತ್ತು ಗ್ರಾಮಾಭ್ಯುದಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ, ವಿಜಯಪುರ ಜಿಲ್ಲಾ ಘಟಕದಿಂದ ಸೋಮವಾರ ನಗರದ ಗಾಂಧಿಭವನದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಸ್ವಯಂ ಸೇವಾ ಸಂಸ್ಥೆಗಳ ದಿನಾಚರಣೆ ಹಾಗೂ ವಿಶ್ವ ಮಹಿಳಾ ದಿನಾಚರಣೆ ಸಮಾರಂಭವನ್ನು ಜಿ.ಪಂ ಸಿಎಓ ರಾಮಣ್ಣ ಅಥಣಿ ಅವರು ಉದ್ಘಾಟಿಸಿ ಮಾತನಾಡಿದರು. ಸ್ವಯಂ ಸೇವಾ ಸಂಸ್ಥೆಗಳು ಸರ್ಕಾರದ ವಿವಿಧ ಜನಪರ, ಮಹಿಳಾ ಸಬಲೀಕರಣ ಯೋಜನೆಗಳನ್ನು ಸಮುದಾಯದ ತಳಮಟ್ಟಕ್ಕೆ ತಲುಪಿಸುವಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಹೇಳಿ ಎನ್ಜಿಓ ಅಧಿಕಾರಿಗಳಿಗೆ, ಸಿಬ್ಬಂದಿಗೆ ಅತ್ಯುತ್ತಮ ಕಾರ್ಯನಿರ್ವಹಿಸುವಲ್ಲಿ ಅತ್ಯಮೂಲ್ಯ ಸಲಹೆಗಳನ್ನು ನೀಡಿದರು. ನಬಾರ್ಡ್ ಎಜಿಎಂ ವಿಕಾಸ ರಾಠೋಡ ಮಾತನಾಡಿ, ಜಿಲ್ಲೆಯ ಸರ್ವಾಗೀಂಣ ಅಭಿವೃದ್ಧಿ ಎಲ್ಲರೂ ಕೈಜೋಡಿಸಬೇಕು. ಜನಪರ ಕಾರ್ಯಕ್ರಮಗಳ ಕುರಿತು ಸರಿಯಾದ ಪ್ರಸ್ತಾವನೆಗಳು‌…

Read More

ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ನಿತ್ಯ ಪ್ರವಚನ ಆಲಿಸುವುದರಿಂದ ಮನಸ್ಸು ಶುದ್ಧಿ ಆಗುವುದರ ಜತೆಗೆ ಮನದ ಕಲ್ಮಶ ತೊಲಗಿ ಪರಿಶುದ್ಧ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಬೀದರ ಚಿದಂಬರಾಶ್ರಮದ ಶ್ರೀ ಸಿದ್ದಾರೂಢ ಮಠದ ಡಾ.ಶಿವಕುಮಾರ ಮಹಾಸ್ವಾಮಿಗಳು ಹೇಳಿದರು.ಪಟ್ಟಣ ಸಮೀಪದ ನಗನೂರ ಗ್ರಾಮದ ಶ್ರೀ ಶಾಂತ ಸ್ವರೂಪ ಸಿದ್ದಾಶ್ರಮ ಶ್ರೀ ಸಿದ್ದಾರೂಢ ಮಠದಲ್ಲಿ ಆಯೋಜಿಸಿದ್ದ ಪ್ರವಚನ ಮಹಾಮಹೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಪ್ರತಿಯೊಬ್ಬ ಮನುಷ್ಯನಲ್ಲಿರುವ ಅಜ್ಞಾನದ ಅಂಧಕಾರವನ್ನು ಕಳೆದು ಸುಜ್ಞಾನದ ಬೆಳಕನ್ನು ನೀಡುವ ಶಕ್ತಿ ಸದ್ಗುರು ಸಿದ್ದಾರೂಢರಿಗಿದೆ ಎಂದರು.ಮನದ ಮಾಲಿನ್ಯ ಕಳೆಯಲು ಜ್ಞಾನದ ಶಕ್ತಿ ಅವಶ್ಯವಾಗಿದೆ. ಈಗಿನ ಸಮಾಜದಲ್ಲಿ ದ್ವೇಷದ ವಾತಾವರಣದಿಂದ ಮಾನವೀಯ ಮೌಲ್ಯಗಳ ಕೊರತೆ ಉಂಟಾಗುತ್ತಿದೆ. ವಿಜ್ಞಾನ ಎಷ್ಟೇ ಮುಂದುವರೆದರೂ ಕೂಡ ಅಂತರಾತ್ಮದ ಶುದ್ಧಿ ಸಾಧ್ಯವಾಗುತ್ತಿಲ್ಲ ಇದಕ್ಕೆ ಪ್ರವಚನವೇ ದಿವ್ಯ ಔಷಧಿಯಾಗಿದೆ ಎಂದವರು ಸಿದ್ದಾರೂಢ ಸ್ವಾಮಿಗಳು ತಮ್ಮ ಆಚಾರ, ವಿಚಾರ ಮತ್ತು ನಡೆ ನುಡಿಗಳಿಂದ ಭಕ್ತರಿಗೆ ಸಾಕ್ಷಾತ್ ಶಿವನ ಸ್ವರೂಪವೇ ಆಗಿದ್ದರು ಎಂದು ಹೇಳಿದರು.ಕಲಬುರಗಿ ಸಿದ್ದಾರೂಢ ಮಠದ ಮಾತೋಶ್ರೀ ಲಕ್ಷ್ಮೀದೇವಿ ತಾಯಿಯವರು…

Read More