ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ತಾಲೂಕಿನ ಕೂಡಗಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಕನ್ನಡಿಗರಿಗೆ ಉದ್ಯೋಗ ಹಾಗೂ ಕೊಲ್ದಾರ ತಾಲೂಕಿನ ಎಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಅನ್ಯ ಭಾಷಾ ನಾಮ ಫಲಕಗಳನ್ನು ಕನ್ನಡದಲ್ಲಿ ಅಳವಡಿಸಬೇಕೆಂದು ಆಗ್ರಹಿಸಿ ತಹಸೀಲ್ದಾರ್ ಕಾರ್ಯಾಲಯಕ್ಕೆ ತೆರಳಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಕಾರ್ಯಕರ್ತರು ಎನ್ ಕೆ ನಧಾಪ್ ಅವರಿಗೆ ಮನವಿ ಸಲ್ಲಿಸಿದರು
ಸರ್ಕಾರ ಕನ್ನಡಿಗರಿಗೆ ಎಲ್ಲ ವಯಲಯದಲ್ಲಿ ಕಡ್ಡಾಯ ಉದ್ಯೋಗ ಮೀಸಲಾತಿಗಾಗಿ ಆದೇಶವನ್ನು ಮಾಡಿದೆ. ಅದರಂತೆ ನಮ್ಮ ಜಿಲ್ಲೆಯ ನಮ್ಮದೇ ತಾಲೂಕಿನ ಎನ್.ಟಿ.ಪಿ.ಸಿ ಉಷ್ಣ ವಿದ್ಯೋತ ಸ್ಥಾವರದಲ್ಲಿ ಶೇ 85% ರಷ್ಟು ಕನ್ನಡಿಗರಿಗೆ ಉದ್ಯೋಗವಕಾಶಗಳನ್ನು ನೀಡಬೇಕೆಂದು ಈಗಾಗಲೇ ನಾವು ಮನವಿ ಸಲ್ಲಿಸಿರುತ್ತೇವೆ. ಈಗ ಮತ್ತೊಮ್ಮೆ ತಮ್ಮಲ್ಲಿ ನಾವು ತಿಳಿಸುವುದೇನೆಂದರೆ, ಎನ್.ಟಿ.ಪಿ.ಸಿ ವಿದ್ಯುತ್ ಸ್ಥಾವರದಲ್ಲಿ ಕನ್ನಡಿಗರಿಗೆ ಕಡ್ಡಾಯವಾಗಿ ಉದ್ಯೋಗ ನೀಡಬೇಕು ಮತ್ತು ಎನ್.ಟಿ.ಪಿ.ಸಿ ಗೆ ಭೂಮಿ ಕಳೆದುಕೊಂಡ ರೈತರಿಗೆ ಹಾಗೂ ಅವರ ಮಕ್ಕಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕು ಮತ್ತು ಕೊಲ್ದಾರ ತಾಲೂಕಿನ ಎಲ್ಲ ಅಂಗಡಿ ಮುಂಗಟ್ಟುಗಳು, ಢಾಬಾಗಳು ಮತ್ತು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿನ ಅನ್ಯ ಭಾಷಾ ಎಲ್ಲ ನಾಮ ಫಲಕಗಳನ್ನು ಕನ್ನಡದಲ್ಲಿ ಅಳವಡಿಸಬೇಕೆಂದು ಎಂದು ಮನವಿಯಲ್ಲಿ ತಿಳಿಸಿದ್ದಾರೆ ಇದೆ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಬಸವರಾಜ ತಾಳಿಕೋಟಿ, ತಾಲೂಕು ಅಧ್ಯಕ್ಷ ರವಿ ಗೊಳಸಂಗಿ, ಆನಂದ ಹಡಗಲಿ, ಸತೀಶ ಹಡಗಲಿ,ರಾಜು ಕುಂಬಾರ, ಮುತ್ತು ಪೂಜಾರಿ, ದರೆಪ್ಪ ನ್ಯಾಮಗೊಂಡ, ಭಿಮನಗೌಡ ಬಿರಾದಾರ, ಬಸವರಾಜ ಕುಬಕಡ್ಡಿ, ಶಂಕರ ದಳವಾಯಿ, ಇತರರಿದ್ದರು