Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಮಹಿಳೆ ಅಬಲೆಯಲ್ಲ ಸಬಲೆ :ಪ್ರತಿಮಾ ಪಾಟೀಲ

ರೈತರ ಹೊಲದಲ್ಲಿ ಅನಾಹುತಕ್ಕೆ ಕಾದಿರುವ ವಾಲಿದ ವಿದ್ಯುತ್ ಕಂಬ

ಕುಡಿವ ನೀರಿನ ಸಮಸ್ಯೆಯಾಗದಂತೆ ನಿಗಾವಹಿಸಿ :ಎಸಿ ಗುರುಸ್ವಾಮಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಅಕ್ರಮ ಮಣ್ಣು ಮಾಫಿಯಾ ತಡೆಗೆ ಒತ್ತಾಯಿಸಿ ಧರಣಿ
(ರಾಜ್ಯ ) ಜಿಲ್ಲೆ

ಅಕ್ರಮ ಮಣ್ಣು ಮಾಫಿಯಾ ತಡೆಗೆ ಒತ್ತಾಯಿಸಿ ಧರಣಿ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಮುದ್ದೇಬಿಹಾಳ: ಕೃಷ್ಣಾ ತೀರದಲ್ಲಿ ನಡೆಯುತ್ತಿರುವ ಅಕ್ರಮ ಮಣ್ಣು ಮಾಫಿಯಾ ತಡೆಯುವಂತೆ ಒತ್ತಾಯಿಸಿ ಪಟ್ಟಣದ ತಹಸೀಲ್ದಾರ ಕಚೇರಿಯ ಆವರಣದಲ್ಲಿ ಒಂದು ದಿನದ ಧರಣಿ ನಡೆಸಲಾಯಿತು.
ಈ ವೇಳೆ ಯುವಜನ ಸೇನೆಯ ರಾಜ್ಯಾಧ್ಯಕ್ಷ ಶಿವಾನಂದ ವಾಲಿ ಮಾತನಾಡಿ, ಅಕ್ರಮವಾಗಿ ಮಣ್ಣು ಸಾಗಾಟ ನಡೆಸುತ್ತಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ತಹಶೀಲ್ದಾರರಿಗೆ ಹೇಳಿದರೆ ಪೊಲೀಸ್ ಇಲಾಖೆಗೆ ತಿಳಿಸುವಂತೆ ಪೊಲೀಸರಿಗೆ ತಿಳಿಸಿದರೆ ತಹಸೀಲ್ದಾರ ಬಂದು ದೂರು ನೀಡಲಿ ಅಂತಾರೆ. ತಾಲೂಕಿನಲ್ಲಿ ಆಡಳಿತ ವ್ಯವಸ್ಥೆ ಇದೆಯೋ ಇಲ್ಲವೋ ಎಂಬ ಬಗ್ಗೆ ನಮಗೆ ಅನುಮಾನ ಮೂಡಿದೆ. ಈ ತಾಲೂಕಿನ ದಂಡಾಧಿಕಾರಿಗಳ ರಿಮೋಟ್ ಬೇರೆಯವರ ಬಳಿ ಇದೆ ಎನಿಸುತ್ತೆ. ಮಣ್ಣು ಮಾಫಿಯಾ ತಡೆಯುವಂತೆ ೧ನೇ ತಾರೀಕಿಗೆ ಮನವಿ ಪತ್ರ ನೀಡಿದರೆ ೧೮ನೇ ತಾರೀಕಿನಂದು ಇದು ನಮ್ಮ ವ್ಯಾಪ್ತಿಗೆ ಒಳಪಡುವದಿಲ್ಲ ಎಂದು ಹಿಂಬರಹ ನೀಡುತ್ತಾರೆ. ನಿನ್ನೆ ಮಣ್ಣು ಹೊಡೆಯಲು ಪರವಾನಗಿ ಕೋರಿ ನಡೆದ ಹೋರಾಟದಲ್ಲಿ ಟಿಪ್ಪರ ಮಾಲೀಕರು ಭಾಗಿಯಾಗಿದ್ದರು. ನಾವು ಮಣ್ಣು ಮಾಫಿಯಾ ಅಂತಾ ಹೇಳಿದ್ದು ರೈತರಿಗಲ್ಲ, ಸುಲಗೆಕೋರರಿಗೆ. ಇಲ್ಲಿ ಮಣ್ಣು ಅಗೆಯುತ್ತಿರುವದರಿಂದ ಹೊಳೆ ನೀರಿನ ಹರಿವು ಬದಲಾಗುವ ಸಾಧ್ಯತೆಗಳಿವೆ. ಹಾಗಾದಲ್ಲಿ ಊರಿಗೆ ಊರೇ ಮುಳುಗಿ ಹೋಗುತ್ತೆ. ಹಲವರು ನಿರ್ಗತಿಗರಾಗೋ ಸಾಧ್ಯತೆಗಳಿವೆ. ಮಣ್ಣು ಅವಶ್ಯವೇ ಇದ್ದಲ್ಲಿ ಕಾನೂನನ್ನು ಉಲ್ಲಂಘಿಸದೇ ಅಧಿಕಾರಿಗಳ ಪರವಾನಗಿ ಪಡೆದು ವೈಜ್ಞಾನಿಕವಾಗಿ ಸಾಗಿಸಿದಲ್ಲಿ ನಮ್ಮದೇನು ತಕರಾರು ಇಲ್ಲ ಎಂದರು.
ಈ ವೇಳೆ ಹೋರಾಟಗಾರ ಸಂಗಯ್ಯ ಸಾರಂಗಮಠ, ಮುಖಂಡ ಶಿವು ಕನ್ನೊಳ್ಳಿ ಮತ್ತೀತರರು ಮಾತನಾಡಿ ಅಕ್ರಮ ಮಣ್ಣು ಸಾಗಾಟ ನಡೆಸುತ್ತಿರುವ ಬಗ್ಗೆ ತಹಸೀಲ್ದಾರರಿಗೆ ದೂರಿದಾಗ ಯಾವ ಸ್ಥಳದಲ್ಲಿ ಅಕ್ರಮ ಮಣ್ಣು ಸಾಗಾಟ ನಡೆದಿದೆ ಎಂದು ಪ್ರಶ್ನಿಸಿದ್ದರು. ನಮ್ಮ ತಾಲೂಕಿನಲ್ಲಿ ಇಂತಹ ಯಾವುದೇ ಅಕ್ರಮ ನಡೆಯುತ್ತಿಲ್ಲ ಅಂತ ಹೇಳಿದರು, ನಿನ್ನೆ ಅಕ್ರಮ ಮಣ್ಣು ಸಾಗಾಟ ನಡೆಸುತ್ತಿರುವವರು ಹೋರಾಟ ನಡೆಸಿ ಮನವಿ ಸಲ್ಲಿಸಿದ್ದಾರೆ. ಎಲ್ಲಿಂದ ಬಂದರು ಇವರೆಲ್ಲ. ಇಂದು ವಿಜಯಪುರದ ವಿಜಲೆನ್ಸ್ ಟೀಮ್ ಅಕ್ರಮ ಮಣ್ಣು ಸಾಗಿಸುತ್ತಿರುವ ಸ್ಥಳದಲ್ಲಿ ದಾಳಿ ಮಾಡಿದೆ. ಇವತ್ತು ಧರಣಿ ಸಡೆಸುತ್ತಾರೆ. ಇವತ್ತೊಂದು ದಿನ ನಿಲ್ಲಿಸಿದರಾಯ್ತು ಎಂದು ಅಧಿಕಾರಿಗಳು ಅಂದುಕೊಂಡಿರಬಹುದು. ಆದರೆ ನಮ್ಮ ಹೋರಾಟ ನಿಲ್ಲಲ್ಲ. ನಿರಂತರವಾಗಿರಲಿದೆ. ಕೆಬಿಜೆಎನ್‌ಎಲ್ ಅಧಿಕಾರಿಗಳ ಜೊತೆಗೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಲೋಕಾಯುಕ್ತಕ್ಕೆ ದೂರಿ ಸೂಕ್ತ ಕ್ರಮ ಕೈಗೊಳ್ಳುವವರೆಗೆ ನಮ್ಮ ಹೋರಾಟ ನಿಲ್ಲಲ್ಲ ಎಂದರು.
ಹೋರಾಟದಲ್ಲಿ ಕಣ್ಣು, ಕಿವಿ, ಬಾಯಿಗೆ ಕಪ್ಪು ಪಟ್ಟಿ ಕಟ್ಟಿ, ಕಳ್ಳತನ ಮಾಡುವದನ್ನು ಕೇಳಬೇಡಿ, ಕಳ್ಳತನ ಮಾಡುವದನ್ನು ನೋಡಬೇಡಿ, ಕಳ್ಳತನದ ಕುರಿತು ಮಾತನಾಡಬೇಡಿ ಎಂಬ ಮೂರು ಮಂಗಗಳು ಕಣ್ಣು ಕಿವಿ ಬಾಯಿ ಮುಚ್ಚಿದ ಚಿತ್ರದ ಬ್ಯಾನರ್‌ನಲ್ಲಿ ತಾಲೂಕು ಆಡಳಿತ ಅಸಾಯಕತೆಯಿಂದ ಬಾಹ್ಯವಾಗಿ ಹೋರಾಟಗಾರರಿಗೆ ಕಳುಹಿಸಿದ ಸಂದೇಶ ಎಂದು ಬರೆದು ತಮ್ಮ ಆಕ್ರೋಷವನ್ನು ಹೊರಹಾಕಿದರು. ಚಂದ್ರು ಹಡಪದ, ಅಜಯಕುಮಾರ ಕೋಟಿಖಾನಿ, ಕಾಶಿನಾಥ ಗಂಗೂರ, ಬಾಬು ತೆಗ್ಗಿನಮನಿ, ಮಹಾಂತೇಶ ಚಲವಾದಿ, ರಾಜು ಮಸಬಿನಾಳ, ಶಿವು ವನಕಿಹಾಳ, ಅಶೋಕ ನಿಡಗುಂದಿ, ಸಂಗಪ್ಪ ಪೊಲೀಸಪಾಟೀಲ, ಅಯ್ಯಪ್ಪ ತಂಗಡಗಿ, ಶಿವು ಮುಳವಾಡ ಸೇರಿದಂತೆ ಇತರರು ಹೋರಾಟಕ್ಕೆ ಸಾಥ್ ನೀಡಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಮಹಿಳೆ ಅಬಲೆಯಲ್ಲ ಸಬಲೆ :ಪ್ರತಿಮಾ ಪಾಟೀಲ

ರೈತರ ಹೊಲದಲ್ಲಿ ಅನಾಹುತಕ್ಕೆ ಕಾದಿರುವ ವಾಲಿದ ವಿದ್ಯುತ್ ಕಂಬ

ಕುಡಿವ ನೀರಿನ ಸಮಸ್ಯೆಯಾಗದಂತೆ ನಿಗಾವಹಿಸಿ :ಎಸಿ ಗುರುಸ್ವಾಮಿ

ಸೇತುವೆ ಕಾರ್ಯದಿಂದಾಗಿ ಮಾರ್ಗ ಬದಲಾವಣೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಮಹಿಳೆ ಅಬಲೆಯಲ್ಲ ಸಬಲೆ :ಪ್ರತಿಮಾ ಪಾಟೀಲ
    In (ರಾಜ್ಯ ) ಜಿಲ್ಲೆ
  • ರೈತರ ಹೊಲದಲ್ಲಿ ಅನಾಹುತಕ್ಕೆ ಕಾದಿರುವ ವಾಲಿದ ವಿದ್ಯುತ್ ಕಂಬ
    In (ರಾಜ್ಯ ) ಜಿಲ್ಲೆ
  • ಕುಡಿವ ನೀರಿನ ಸಮಸ್ಯೆಯಾಗದಂತೆ ನಿಗಾವಹಿಸಿ :ಎಸಿ ಗುರುಸ್ವಾಮಿ
    In (ರಾಜ್ಯ ) ಜಿಲ್ಲೆ
  • ಸೇತುವೆ ಕಾರ್ಯದಿಂದಾಗಿ ಮಾರ್ಗ ಬದಲಾವಣೆ
    In (ರಾಜ್ಯ ) ಜಿಲ್ಲೆ
  • ಮೇ ಅಂತ್ಯದವರೆಗೆ ಕೆರೆಗಳಿಗೆ ನೀರು ಬಿಡಲು ಆಗ್ರಹಿಸಿ ಮನವಿ
    In (ರಾಜ್ಯ ) ಜಿಲ್ಲೆ
  • ಬಳ್ಳೊಳ್ಳಿಯಲ್ಲಿ ಅದ್ದೂರಿಯಾಗಿ ನಡೆದ ಶ್ರೀ ವೀರಭದ್ರೇಶ್ವರ ಜಾತ್ರೆ
    In (ರಾಜ್ಯ ) ಜಿಲ್ಲೆ
  • ಪ್ರತಿ ಗ್ರಾಹಕ ತನ್ನ ಹಕ್ಕುಗಳನ್ನು ಅರಿತುಕೊಳ್ಳುವುದು ಮುಖ್ಯ
    In (ರಾಜ್ಯ ) ಜಿಲ್ಲೆ
  • ಹಿಪ್ಪರಗಿ ಜಲಾಶಯದಲ್ಲಿ ಇಳಿಮುಖವಾಗುತ್ತಿರುವ ಜೀವಜಲ
    In (ರಾಜ್ಯ ) ಜಿಲ್ಲೆ
  • ಕೆಬಿಜೆಎನ್ನೆಲ್ ಅಧಿಕಾರಿಗಳಿಂದ ಚಡಚಣ ಭಾಗದ ರೈತರಿಗೆ ಮಲತಾಯಿ ಧೋರಣೆ
    In (ರಾಜ್ಯ ) ಜಿಲ್ಲೆ
  • ಇಂದಿನಿಂದ ಕಡಣಿ ಭೋಗೇಶ್ವರ ಜಾತ್ರೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.