Subscribe to Updates
Get the latest creative news from FooBar about art, design and business.
Author: editor.udayarashmi@gmail.com
*ಉದಯರಶ್ಮಿ ದಿನಪತ್ರಿಕೆ* ವಿಜಯಪುರ: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (ಇಗ್ನೂ) ವು ಜುಲೈ ೨೦೨೫ರ ಪದವಿ, ಸ್ನಾತಕ ಪದವಿ, ಡಿಪ್ಲೋಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್ಗಳಿಗೆ ಅರ್ಜಿ ಆಹ್ವಾನಿಸಿದೆ.ಆಸಕ್ತ ಅಭ್ಯರ್ಥಿಗಳು https://ignouadmission.samarth.edu.inಹಾಗೂhttps://ignouiop.samarth.edu.in ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ೨೦೨೫ರ ಮರು ಪ್ರವೇಶಾತಿಗೆ https://onlenerr.ignou.ac.in ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಜುಲೈ ೩೧ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ದೂ: ೦೮೩೫೨-೨೫೨೦೦೬, ಇ-ಮೇಲ್: rcbijapur@ignou.ac.inಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೫-೨೬ನೇ ಸಾಲಿನ ಕೇಂದ್ರ ಸರ್ಕಾರದ ನ್ಯಾಷನಲ್ ಇ-ಸ್ಕಾಲರ್ ಶಿಪ್ ಯೋಜನೆಯಡಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಹ ವಿಕಲಚೇತನ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಮೇಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ದಿನಾಂಕ : ೩೧-೦೮-೨೦೨೫ ಹಾಗೂ ಮೆಟ್ರಿಕ್ ನಂತರದ ಹಾಗೂ ಉನ್ನತ ತರಗತಿ ವಿದ್ಯಾರ್ಥಿವೇತನಕ್ಕೆ ದಿನಾಂಕ : ೩೧-೧೦-೨೦೨೫ ಕೊನೆಯ ದಿನವಾಗಿದ್ದು, ಅರ್ಹ ವಿಕಲಚೇತನ ವಿದ್ಯಾರ್ಥಿಗಳು ಅರ್ಜಿಯನ್ನು ನ್ಯಾಶನಲ್ ಸ್ಕಾಲರ್ ಶಿಪ್ ಪೊರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಂಯೋಜಕರಾದ ಪ್ರತಿಭಾ ಮೊ:೯೬೦೬೧೫೧೧೪೯ ಹಾಗೂ ತಾಲೂಕಾ ಪಂಚಾಯತ್ ಕಾರ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರಾದ ವಿಜಯಪುರ ರವಿ ರಾಠೋಡ ಮೊ: ೯೦೩೫೫೫೩೩೩೭, ಇಂಡಿ ಪರಶುರಾಮ ಭೋಸಲೆ ಮೊ: ೯೯೭೨೪೪೧೪೬೪, ಸಿಂದಗಿ ಮುತ್ತುರಾಜ ಸಾತಿಹಾಳ ಮೊ: ೯೯೮೦೦೧೯೬೩೫, ಬಸವನಬಾಗೇವಾಡಿ ಶಿವಲೀಲಾ ಮೊ: ೮೭೨೨೧೩೫೬೬೦ ಹಾಗೂ ಮುದ್ದೇಬಿಹಾಳ ಎಸ್.ಕೆ.ಘಾಟಿ ಮೊ: ೯೭೪೦೬೮೨೯೭೯ ಹಾಗೂ ಸಂಪರ್ಕಿಸುವಂತೆ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೇಂದ್ರ ಸರ್ಕಾರದಿಂದ ವಿಕಲಚೇತನರ ಸಬಲೀಕರಣಕ್ಕಾಗಿ ವಿವಿಧ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ನೀಡುವ ರಾಷ್ಟ್ರಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ದಿನಾಂಕ : ೩೧-೦೭-೨೦೨೫ ಕೊನೆಯ ದಿನವಾಗಿದ್ದು, ೨ ಪಾಸ್ ಪೋರ್ಟ ಅಳತೆಯ ಭಾವಚಿತ್ರ (ವ್ಯಕ್ತಿ ವಿಭಾಗ), ಒಂದು ಪುಟಕ್ಕೆ ಮೀರದಷ್ಟು ಅರ್ಜಿದಾರರ ವ್ಯಕ್ತಿ, ಸಂಸ್ಥೆಗಳಿಂದ ಸ್ವ-ವಿವರ ಹಾಗೂ ಸಾಧನೆಗಳ ಸಾರಾಂಶ ಪೂರಕ ದಾಖಲೆ ಹಾಗೂ ಇತರೆ ದಾಖಲೆಗಳೊಂದಿಗೆ ಅರ್ಜಿಯನ್ನು www.awards.gov.in & www.depwd.gov.inವೆಬ್‌ಸೈಟ್‌ನಲ್ಲಿ ಸಲ್ಲಿಸಬೇಕು. ಆನ್‌ಲೈನಲ್ಲಿ ತಮ್ಮ ಎಲ್ಲಾ ದಾಖಲಾತಿಗಳನ್ನು ಭರ್ತಿ ಮಾಡಿ ಸಲ್ಲಿಸಿದ ಅರ್ಜಿ ಮತ್ತು ದಾಖಲೆಗಳ ಪ್ರತಿಯನ್ನು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಪಂಚಾಯತ್ ಆವರಣ ವಿಜಯಪುರ ಕಚೇರಿಗೆ ಸಲ್ಲಿಸಬೇಕು.ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ದೂ: ೦೮೩೫೨-೭೯೬೦೬೦ ಸಂಖ್ಯೆಗೆ ಸಂಪರ್ಕಿಸುವಂತೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಪ್ರಕಟಣೆ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಎಸ್‌ಎಸ್‌ಎಲ್‌ಸಿ ಪರೀಕ್ಷೆ-೩ರ ಪರೀಕ್ಷೆಯ ಮೌಲ್ಯಮಾಪನವು ನಗರದ ಫಿನಿಕ್ಸ ಪ್ರೌಢ ಶಾಲೆ, ಸ್ನೇಹ ಸಂಗಮ ಪ್ರೌಢ ಶಾಲೆ ಹಾಗೂ ಮರಾಠಿ ವಿದ್ಯಾಲಯದಲ್ಲಿ ದಿನಾಂಕ:೧೭-೦೭-೨೦೨೫ ರಿಂದ ೨೧-೦೭-೨೦೨೫ರವರೆಗೆ ನಡೆಯಲಿದೆ. ಸದರಿ ಮೌಲ್ಯಮಾಪನ ಕೇಂದ್ರಗಳ ೨೦೦ ಮೀಟರ ಸುತ್ತಮುತ್ತಲಿನ ಪ್ರದೇಶದಲ್ಲಿ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, ೨೦೨೩ರ ಕಲಂ ೧೬೩ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ, ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರು ಆದೇಶ ಹೊರಡಿಸಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಾರಿಗೆ ಸಂಸ್ಥೆಗಳನ್ನು ಆರ್ಥಿಕವಾಗಿ ಸದೃಢಗೊಳಿಸಬೇಕಾಗಿದ್ದ ಸರ್ಕಾರವು ತನ್ನ ವೋಟ್ ಬ್ಯಾಂಕ್ ರಾಜಕಾರಣಕ್ಕೆ ನಷ್ಟಕ್ಕೆ ನೂಕಿದೆ. ಭವಿಷ್ಯ ನಿಧಿ (ಪಿ.ಎಫ್) ಪಾವತಿ ಮಾಡುವುದಕ್ಕೂ ಹಣವಿಲ್ಲದೆ ಈಗ ಅದಕ್ಕೂ ಸಾಲ ಮಾಡಲು ನಿರ್ಧರಿಸಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿಕಾರಿದ್ದಾರೆ.ಎರಡು ದಿನಗಳ ಹಿಂದೆಯಷ್ಟೇ ‘ಶಕ್ತಿ’ ಯೋಜನೆಯ ಬಗ್ಗೆ ಸರ್ಕಾರ ಎಲ್ಲಾ ಪತ್ರಿಕೆಗಳಲ್ಲಿ, ಜಾಲತಾಣಗಳಲ್ಲಿ ಯೋಜನೆಯ ಯಶಸ್ಸಿನ ಬಗ್ಗೆ ಜಾಹೀರಾತು ನೀಡಿತ್ತು. ಸಾರಿಗೆ ನೌಕರರಿಗೆ 38 ತಿಂಗಳ ಭತ್ಯೆ ಮತ್ತು ವೇತನ ಹೆಚ್ಚಳ ಮಾಡದೆ ಇರುವುದರಿಂದ ಮುಷ್ಕರ ಮಾಡುವುದಾಗಿ ಕರೆ ಕೊಟ್ಟಿದ್ದಾರೆ.ಆರ್ಥಿಕ ತಜ್ಞ, ಅತಿ ಹೆಚ್ಚು ಬಜೆಟ್ ಕೊಟ್ಟ ಮುಖ್ಯಮಂತ್ರಿಗಳು ರಾಜ್ಯವನ್ನು ಸಾಲದ ಸುಳಿಗೆ ನೂಕಿದ್ದಾರೆ. ರಾಜ್ಯದ ಬೊಕ್ಕಸಕ್ಕೆ ಗ್ಯಾರಂಟಿ ಯೋಜನೆಗಳು ಹೊರೆಯಾಗಿವೆ ಎಂಬುದು ಗೊತ್ತಿರುವ ವಿಷಯವೇ. ಕಾಂಗ್ರೆಸ್ ಪಕ್ಷಕ್ಕೆ ವೋಟ್ ಬ್ಯಾಂಕ್ ರಾಜಕಾರಣ ಮಾಡಲು ಗ್ಯಾರಂಟಿ ಯೋಜನೆಗಳು ಬೇಕಾದವೇ ಹೊರತು ಜನರ ಏಳಿಗೆಗೆ, ಅಭ್ಯುದಯಕ್ಕೆ, ಕಲ್ಯಾಣಕ್ಕಲ್ಲ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದರಬಾರ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾವರ್ಧಕ ಸಂಘದ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕ್ರೀಡಾ ಸಾಮಗ್ರಿಗಳನ್ನು ವಕೀಲ ಪ್ರಕಾಶ ಉಡುಪಿಕರ ಉದ್ಘಾಟಿಸಿದರು.ಈ ವೇಳೆ ಮಾತನಾಡಿದ ಅವರು, ಮಕ್ಕಳಿಗೆ ನಿತ್ಯ ದೈಹಿಕ ಚಟುವಟಿಕೆ ಮಾಡಿಸುವುದರಿಂದ ದೈಹಿಕ ಮತ್ತು ಮಾನಸಿಕ ವಿಕಸನಕ್ಕೆ ಸಹಕಾರಿಯಾಗಿದೆ ಎಂದ ಅವರು, ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಯೋಗಾಸನ ಪ್ರಾಣಾಯಾಮ ಕಬಡ್ಡಿ ಮತ್ತು ಗುಂಪು ಚಟುವಟಿಕೆಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಪಾಲ್ಗೊಳ್ಳುವಂತೆ ದೈಹಿಕ ಶಿಕ್ಷಕರು ಪ್ರೇರಣೆ ನೀಡುವುದು ಅವಶ್ಯವಾಗಿದೆ ಹಾಗಾದಾಗ ಮಾತ್ರ ಭವಿಷ್ಯದಲ್ಲಿ ರಾಜ್ಯ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ನುಡಿದರು.ಇದೆ ಸಂದರ್ಭದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷ ಕೆ ಜಿ ದೇಶಪಾಂಡೆ, ಸದಸ್ಯರಾದ ವಿಶಾಲ ದರಬಾರ, ಆದಿತ್ಯ ದರಬಾರ, ಸಮನ್ವಯ ಅಧಿಕಾರಿ ಡಾ. ವಿ ಬಿ ಗ್ರಾಮ ಪುರೋಹಿತ, ಪಾರಥ ದರಬಾರ, ಪ್ರಧಾನ ಗುರುಮಾತೆ ರೂಪಾ ತೋಳ, ಮುಖ್ಯೋಪಾಧ್ಯಾಯ ರಮೇಶ ಕೋಟ್ಯಾಳ, ಜಿ.ಎಚ್.ಮಣೂರ, ಟಿ.ಆರ್.ಕುಲಕರ್ಣಿ, ಸತೀಶ ಕುಲಕರ್ಣಿ ಉಪಸ್ಥಿತರಿದ್ದರು.ಬೋಧಕ ಮತ್ತು…
ಪ್ರತೀ ವರ್ಷ ಮುಂಗಾರು ಮಳೆ ಆರಂಭದ ಒಂದು ತಿಂಗಳ ನಂತರ ಬರುವ ಅಮವಾಸ್ಯೆಗೆ ಗುಳ್ಳವ್ವನ ಆಗಮನ ಉದಯರಶ್ಮಿ ದಿನಪತ್ರಿಕೆ ವರದಿ: ಇಲಾಹಿ ಇ.ಜಮಖಂಡಿಚಿಮ್ಮಡ: ಮಣ್ಣೆತ್ತಿನ ಅಮವಾಸ್ಯೆ ಬಂತೆಂದರೆ ಹೆಣ್ಣು ಮಕ್ಕಳಿಗೆ ಸಂಭ್ರಮವೋ ಸಂಭ್ರಮ. ಅದಕ್ಕೆ ಕಾರಣ ಹೆಣ್ಣು ಮಕ್ಕಳ ವಿಶೇಷ ಹಬ್ಬ ಗುಳ್ಳವ್ವನ ಆಗಮನ.ಪ್ರತೀ ವರ್ಷ ಮುಂಗಾರು ಮಳೆ ಆರಂಭದ ಒಂದು ತಿಂಗಳ ನಂತರ ಬರುವ ಈ ಅಮವಾಸ್ಯೆ ಉತ್ತರ ಕರ್ನಾಟಕದಲ್ಲಿ ತನ್ನದೇ ಆದ ವೈಶಿಷ್ಟ್ಯತೆ ಪಡೆದುಕೊಂಡಿದೆ. ಮುಂಗಾರಿನ ಮೇಘರಾಜನ ದರ್ಶನದಿಂದ ಧರೆ ನವ ವಧುವಿನಂತೆ ಸಿಂಗಾರಗೊಂಡು ಎಲ್ಲೆಡೆ ಹಸಿರಿನಿಂದ ಕಂಗೊಳಿಸಿರುತ್ತಾಳೆ, ಸಕಲ ಜೀವ ಸಂಪತ್ತಿಗೆ ಆಸರೆಯಾಗಿರುವ ಪ್ರಕೃತಿಮಾತೆ ಆಷಾಢ ಮಾಸದಲ್ಲಿ ಜೇಡಿ ಮಣ್ಣಿನಿಂದ ತಯಾರಿಸಿದ ಗುಳ್ಳವ್ವನ ಪ್ರತಿರೂಪದಲ್ಲಿ ಪೂಜಿಸಲ್ಪಡುತ್ತಾಳೆ. ಈ ಭಾಗದಲ್ಲಿ ಅದರ ಪೂಜೆ ಹೆಣ್ಣು ಮಕ್ಕಳಲ್ಲಿ ಹಬ್ಬದ ವಾತಾವರಣವನ್ನೇ ಸೃಷ್ಠಿಸಿರುತ್ತದೆ. ಮನ್ನೆತ್ತಿನ ಅಮವಾಸ್ಯೆ ನಂತರ ನಾಲ್ಕು ವಾರಗಳವರೆಗೆ ಪ್ರತಿ ಮಂಗಳವಾರ ಬೆಳಿಗ್ಗೆ ಮಹಿಳೆಯರು ಕುಂಬಾರ ಓಣಿಗೆ ಹೋಗಿ ಅಲ್ಲಿ ತಯಾರಿಸಿದ ಹಲವು ಆಕಾರಗಳ ಗುಳ್ಳವ್ವನ ಕಲಾಕೃತಿಗಳಲ್ಲಿ ತಮಗೆ ಬೇಕಾದ…
ಮಹಿಳಾ ವಿವಿ ಸಂಸ್ಥಾಪಕ ವಿಶೇಷಾಧಿಕಾರಿ ಡಾ.ಎಸ್.ಎಂ.ಜಾಮದಾರ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಾವು ಮಾಡುವ ಕೆಲಸಗಳು ಕಾಲಾನಂತರದಲ್ಲಿ ಮರೆಯಾಗಬಹುದಾದರೂ, ನಾವು ಕಟ್ಟಿದ ಶಿಕ್ಷಣ ಸಂಸ್ಥೆಗಳು ಶಾಶ್ವತವಾಗಿ ಜನರ ಮನಸ್ಸಿನಲ್ಲಿ ಉಳಿಯುತ್ತವೆ ಎಂದು ನಿವೃತ್ತ ಹಿರಿಯ ಐ.ಎ.ಎಸ್ ಅಧಿಕಾರಿ ಮತ್ತು ಮಹಿಳಾ ವಿವಿಯ ಸಂಸ್ಥಾಪಕ ವಿಶೇಷಾಧಿಕಾರಿ ಡಾ.ಎಸ್.ಎಂ.ಜಾಮದಾರ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಕ್ಷೇಮಪಾಲನ ನಿರ್ದೇಶನಾಲಯ, ಕ್ರೀಡಾ ನಿರ್ದೇಶನಾಲಯ ಹಾಗೂ ವಸತಿ ನಿಲಯಗಳ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ‘ವಾರ್ಷಿಕ ದಿನಾಚರಣೆ-೨೦೨೫’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮಹಿಳಾ ವಿಶ್ವವಿದ್ಯಾನಿಲಯ ಕೇವಲ ೧೦ ವಾರಗಳ ಅಂತರದಲ್ಲಿ ಸ್ಥಾಪಿತವಾಯಿತು ಎಂಬುದು ಇತಿಹಾಸದಲ್ಲೇ ವಿಶಿಷ್ಟ ಸಾಧನೆ. ವಿಶ್ವವಿದ್ಯಾನಿಲಯ ಸ್ಥಾಪನೆಯ ಆದೇಶ ನನಗೆ ದೊರೆತಾಗ, ಮಹಿಳಾ ಶಿಕ್ಷಣ ಮತ್ತು ಸಬಲೀಕರಣದ ಮಹತ್ವಪೂರ್ಣ ಗುರಿಯನ್ನು ಸಾಧಿಸಬೇಕು ಎಂಬ ದೃಢ ನಿಶ್ಚಯದೊಂದಿಗೆ ಕಾರ್ಯಪ್ರವೃತ್ತನಾದೆ. ಯಾವ ದೇಶದಲ್ಲಿ ಮಹಿಳೆಗೆ ಶಿಕ್ಷಣ ಸಿಗುವುದಿಲ್ಲವೋ, ಆ ದೇಶದಲ್ಲಿ ಸುಧಾರಣೆ ಸಾಧ್ಯವಿಲ್ಲ. ಮಹಿಳೆಯರಿಗಾಗಿ, ಅವರ ಬೆಳವಣಿಗೆಗಾಗಿ ಸ್ಥಾಪಿತ ಈ ವಿಶ್ವವಿದ್ಯಾನಿಲಯ ಮುಂದಿನ ದಿನಗಳಲ್ಲಿ ಸಾವಿರಾರು ಮಹಿಳೆಯರ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಸಾತಿಹಾಳ ಗ್ರಾಮದ ಪ್ರಕಾಶ ಡೋಣೂರಮಠ ಇವರು ಕರ್ನಾಟಕ ರಕ್ಷಣಾ ವೇದಿಕೆಯ ದೇವರಹಿಪ್ಪರಗಿ ತಾಲ್ಲೂಕು ಘಟಕದ ಗೌರವಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರ ಅನುಮತಿ ಮೇರೆಗೆ ಈ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಎಂ.ಸಿ.ಮುಲ್ಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಎಲ್ಲ ವೃತ್ತಿಗಳಲ್ಲಿ ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾದದ್ದು ಎಂದು ಲಚ್ಯಾಣ ಡಿ.ಎಡ್,ಕಾಲೇಜು ಪ್ರಾಚಾರ್ಯ ಎಸ್.ಎಮ್.ಶೆಟ್ಟಣ್ಣವರ ಹೇಳಿದರು.ಪಟ್ಟಣದ ಪಂಚಾಚಾರ್ಯ ಕಲ್ಯಾಣಮಂಟಪದಲ್ಲಿ ಸೋಮವಾರ ಜರುಗಿದ ೧೯೯೪-೯೫ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ನಾವು ಕಲಿಸಿದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗಳಲ್ಲಿ ಅಲಂಕರಿಸುವುದು ಶಿಕ್ಷಕನಿಗೆ ಸಿಗುವ ಅತೀ ದೊಡ್ಡ ಗೌರವವಾಗಿದೆ. ಶಿಕ್ಷಕನ ನಿಜವಾದ ಸಂಪತ್ತು ಅವರ ವಿದ್ಯಾರ್ಥಿಗಳು. ವಿದ್ಯಾರ್ಥಿಗಳು ಸಮಾಜದಲ್ಲಿ ಗೌರವ, ಉನ್ನತ ಸ್ಥಾನ ಪಡೆದಾಗ ಶಿಕ್ಷಕರಿಗೆ ಆಗುವ ಸಂತೊಷಕ್ಕೆ ಯಾವುದೇ ಸಾಟಿ ಇಲ್ಲ ಎಂದರು.ನಿವೃತ್ತ ಪ್ರಾಚಾರ್ಯ ಎಸ್.ಎಮ್.ಮಿರ್ಜಿ ಹಾಗೂ ಬಿ.ಕೆ.ಪಾಟೀಲ ಮಾತನಾಡಿ, ಸುಮಾರು ೩೦ ವರ್ಷಗಳ ನಂತರ ವಿದ್ಯೆ ಕಲಿಸಿದ ಗುರುವಿನ ಮಹತ್ವ ಅರಿತು ಅವರಿಗೆ ವಂದಿಸುವ ಕಾರ್ಯ ಶ್ಲಾಘನೀಯ. ಇಂದು ಏನಾದರು ಗಳಿಸಿದ್ದರೆ ಅದೆಲ್ಲವು ಸಮಾಜದಿಂದ ಹಾಗಾಗಿ ಸಮಾಜದಿಂದ ಪಡೆದದ್ದನ್ನು ಮತ್ತೆ ಸಮಾಜದ ಉತ್ತಮ ಕಾರ್ಯಕ್ಕೆ ನೀಡಬೇಕು ಎಂದರು.ನಿವೃತ್ತಶಿಕ್ಷಕ ಬಿ.ಸಿ.ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.ಶಿಕ್ಷಕರಾದ ಎಸ್.ಎಸ್.ಯರನಾಳ, ಬಿ.ಜಿ.ಅರಳಿಮಟ್ಟಿ, ಎಸ್.ಎಮ್.ಕೌಲಗಿ, ಎ.ಕೆ.ಭತಗುಣಕಿ, ಎಸ್.ವ್ಹಿ.ಹದನೂರ(ಕೋಟಿನ), ಎಮ್.ಕೆ.ನಾಯ್ಕೋಡಿ, ಜೆ.ಆರ್.ಬಿರಾದಾರ,…
