ರಚನೆ
-ಡಾ ಶಶಿಕಾಂತ ಪಟ್ಟಣ
ರಾಮದುರ್ಗ
ಉದಯರಶ್ಮಿ ದಿನಪತ್ರಿಕೆ
ಗೆಳೆಯರೇ
ಇಂದು ವಿಶ್ವ ಕಾವ್ಯ ದಿನ
ನಾನು ಕವಿಯಲ್ಲ
ಒಬ್ಬ ಕಾರ್ಯಕರ್ತ
ಹೋರಾಟಗಾರ
ನಾನು ಬರೆಯುವುದು
ಕವನ ಕಾವ್ಯವಲ್ಲ
ನನ್ನವರ ಕೊಂದು ಬದುಕಿದ
ನೀಚರ ವಿರುದ್ಧ
ನಿತ್ಯ ಅಕ್ಷರಗಳ ದಾಳಿ
ನನ್ನೆಲ್ಲ ಕೋಪ ಆಕ್ರೋಶ
ಸಿಟ್ಟು ತಲ್ಲಣ ವೇದನೆ
ಕಳವಳ ಚಿಂತನೆ
ತಳಮಳ ನೋವುಗಳ
ಬರೆದು ಹಂಚುವ ಕರಪತ್ರ
ರಾತ್ರಿಯಿಡಿ ಮಲಗದೆ
ಶೋಷಣೆ ವಿರುದ್ಧ
ಲೇಖನಿ ಖಡ್ಗವ ಮಾಡಿ
ಪ್ರತೀಕಾರದ ಘೋಷಣೆ
ನಿಮಗೆ ವರದಿ ಒಪ್ಪಿಸುತ್ತೆನೆ
ನಾನಲ್ಲ ಕವಿ ಸಾಹಿತಿ
ರಂಜನೆಗೆ ಬರೆದು ಪ್ರಶಸ್ತಿಗೆ
ಬೆನ್ನು ಬಿದ್ದವನಲ್ಲ
ಬುದ್ಧಬಸವರ ಮಗ
ಕವಿಯಲ್ಲ ನನ್ನ ತಪ್ಪೊಪ್ಪಿಕೊಳ್ಳಿ