ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ವಿಜಯಪುರ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಾಲೂಕು ಆರೋಗ್ಯಾಧಿಕಾರಿ ಡಾ.ಕವಿತಾ ದೊಡಮನಿ ಅವರ ನೇತೃತ್ವದ ತಂಡವು ಶುಕ್ರವಾರ ವಿವಿಧೆಡೆ ಖಾಸಗಿ ದಾಳಿ ಮಾಡಿ ಅಲ್ಲಿನ ವೈದ್ಯರು ನೋಂದಣಿ ಮಾಡದೇ ಇರುವದನ್ನು ಗಮನಿಸಿ ಇವುಗಳನ್ನು ಮುಚ್ಚಿಸಿ ಬಂದ್ ಮಾಡಿತು.
ನೋಂದಣಿಯಾಗದೇ ಇರುವ ತಾಲೂಕಿನ ಮುತ್ತಗಿ ಗ್ರಾಮದಲ್ಲಿ ಒಂದು ಕ್ಲಿನಿಕ್, ಅಖಂಡ ತಾಲೂಕಿನ ಕೂಡಗಿಯಲ್ಲಿ ಎರಡು, ಕೊಲ್ಹಾರದಲ್ಲಿರುವ ಮೂರು ಖಾಸಗಿ ಕ್ಲಿನಿಕ್‌ಗಳನ್ನು ಬಂದ್ ಮಾಡಲಾಯಿತು. ಕೆಪಿಎಂಇ ನೋಂದಣಿ ಮಾಡಿಸಿಕೊಳ್ಳದೇ ಇರುವ ಖಾಸಗಿ ಆಸ್ಪತ್ರೆಗಳನ್ನು ರದ್ದು ಪಡಿಸಿ ಬಂದ್ ಮಾಡಲಾಗುವುದು. ಬಿಎಎಂಎಸ್ ಆದ ವೈದ್ಯರು ಹಸಿರು ಬಣ್ಣದ ಸೈನ್ ಬೋರ್ಡ್, ಎಂಬಿಬಿಎಸ್ ಆದ ವೈದ್ಯರು ನೀಲಿ ಬಣ್ಣದ ಬೋರ್ಡ್ ಅಳವಡಿಸಬೇಕು. ಈ ರೀತಿಯಾಗಿ ಅಳವಡಿಸದೇ ಇರುವರ ವೈದ್ಯರಿಗೆ ಕಾನೂನು ರೀತಿ ದಂಡ ವಿಽಸಲಾಗುವುದು ಎಂದು ತಾಲೂಕಾ ವೈದ್ಯಾಧಿಕಾರಿ ಡಾ.ಕವಿತಾ ದೊಡಮನಿ ಹೇಳಿದರು.
ಈ ಸಂದರ್ಭದಲ್ಲಿ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್.ಮೇಟಿ, ತಾಲೂಕು ಆಸ್ಪತ್ರೆಯ ಸಿಬ್ಬಂದಿ ತೌಸೀಫ್ ನಾಯ್ಕೋಡಿ ಇದ್ದರು.
.

