Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ

ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ

ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»’ಭಾರತದ ಕೋಗಿಲೆ’ ಸರೋಜಿನಿ ನಾಯ್ಡು
ವಿಶೇಷ ಲೇಖನ

’ಭಾರತದ ಕೋಗಿಲೆ’ ಸರೋಜಿನಿ ನಾಯ್ಡು

By Updated:No Comments5 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ

ಉದಯರಶ್ಮಿ ದಿನಪತ್ರಿಕೆ

ಭಾರತದ ಕೋಗಿಲೆ ಎಂದು ಹೆಸರಾದ ಸರೋಜಿನಿ ನಾಯ್ಡು, ಲಕ್ಷಾಂತರ ಜನರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಸೇರುವಂತೆ ಮಾಡಿದರು. 1925 ರಲ್ಲಿ ಭಾರತದ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದು ಸ್ವಾತಂತ್ರ್ಯ ಪೂರ್ವದ ಭಾರತದ ಪ್ರಮುಖ ನೇತಾರರಾಗಿದ್ದರು.
ಅಘೋರೆನಾಥ್ ಚಟ್ಟೋಪಾಧ್ಯಾಯ ಮತ್ತು ವರದ ಸುಂದರಿ ದೇವಿ ತಂದೆ ತಾಯಿಗಳಿಗೆ 1879ರಲ್ಲಿ ಜನಿಸಿದ ಸರೋಜಿನಿ 8 ಮಕ್ಕಳಲ್ಲಿ ಹಿರಿಯವರು. ಸ್ವಾಭಾವಿಕವಾಗಿ ಇವರು ಓದು ಬರಹ ಮತ್ತು ಪದ್ಯಗಳ ಅಭ್ಯಾಸದಲ್ಲಿ ತೊಡಗಿಸಿಕೊಂಡವರು. ಬೀಜಗಣಿತ ಬೇಸರವೆನಿಸಿದಾಗ ತಮ್ಮ ನೋಟ್ ಬುಕ್ ಗಳಲ್ಲಿ ಪದ್ಯಗಳನ್ನು ಗೀಚುತ್ತಿದ್ದರು.
ಇವರ ಪೋಷಕರು 1881 ರಲ್ಲಿ ಹೈದರಾಬಾದ್ ನಲ್ಲಿ ಹೆಣ್ಣು ಮಕ್ಕಳಿಗೆ ಆಂಗ್ಲೋ- ಹಿಂದೂ ದೇಶಿಯ ಶಾಲೆಯನ್ನು ಪ್ರಾರಂಭಿಸಿದರು. ಅವರ ಕುಟುಂಬ ವಾಸಿಸುತ್ತಿದ್ದ ಮನೆಗೆ ಸ್ವರ್ಣ ಹೊಸ್ತಿಲು ಎಂಬ ಹೆಸರಿತ್ತು.ಈ ಮನೆಗೆ ಅನೇಕ ವಿದ್ವಾಂಸರು ಭೇಟಿ ನೀಡುತ್ತಿದ್ದರು ಹಾಗೂ ಸರೋಜಿನಿಯವರಿಗೆ ಅವರ ಸಂಭಾಷಣೆಗಳು ಪ್ರೇರಣೆ ನೀಡುತ್ತಿದ್ದವು.
ಸರೋಜಿನಿ ಅವರಿಗೆ ಮಗುವಾಗಿದ್ದಾಗಿನಿಂದಲೇ ಇಂಗ್ಲಿಷ್, ಬಂಗಾಳಿ, ಉರ್ದು, ಪರ್ಷಿಯನ್ ಮತ್ತು ತೆಲುಗು ಭಾಷೆಗಳಲ್ಲಿ ಮಾತನಾಡಲು ಮತ್ತು ಬರೆಯಲು ಬರುತ್ತಿತ್ತು. ತಮ್ಮ 12ನೇ ವಯಸ್ಸಿಗೆ ಮೊದಲಿಗರಾಗಿ ತೇರ್ಗಡೆಯಾದರೂ ಇವರು ಹದಿನೈದು ವರ್ಷ ದಾಟುವುದಕ್ಕೆ ಮುಂಚೆ ಮೆಹೀರ್ ಮುನೀರ್ ಎಂಬ ಪೌರಾಣಿಕ ಮತ್ತು ದೀರ್ಘವಾದ ಪದ್ಯವನ್ನು ರಚಿಸಿದರು. ಸರೋಜಿನಿಯವರು ಮೊದಲು ಇಂಗ್ಲೀಷ್ ಮತ್ತು ಅನಂತರದಲ್ಲಿ ಪರ್ಷಿಯನ್ ಭಾಷೆಯಲ್ಲಿ ಬರೆಯತೊಡಗಿದರು. ಇವರ ಕವಿತೆಗಳಿಂದ ಪ್ರಭಾವಿತರಾದ ಹೈದರಾಬಾದಿನ ನಿಜಾಂ ಸರೋಜಿನಿ ಅವರಿಗೆ ವಿದ್ಯಾರ್ಥಿ ವೇತನ ನೀಡಿ ಇಂಗ್ಲೆಂಡಿನ ಕ್ಯಾಂಪರಿಜ್ ವಿಶ್ವವಿದ್ಯಾಲಯಕ್ಕೆ ಉನ್ನತ ವ್ಯಾಸಂಗಕ್ಕೆ ಕಳಿಸಿದ್ದರು.


ಸರೋಜಿನಿ ಅವರು 1459ರಲ್ಲಿ ಇಂಗ್ಲೆಂಡಿನ ಕೆಂಬ್ರಿಡ್ಜ ವಿಶ್ವವಿದ್ಯಾನಿಲಯದ “ಗೀರ್ಟನ್ ಕಾಲೇಜ್ “ಮತ್ತು ನಂತರದಲ್ಲಿ ಲಂಡನಿನ “ಕಿಂಗ್ಸ್ ಕಾಲೇಜ”ನಲ್ಲಿ ವಿದ್ಯಾಭ್ಯಾಸಕ್ಕೆ ತೆರಳಿದರು. ಅಲ್ಲಿ ಇವರು ಭೇಟಿಯಾದ” ಎಡ್ಮಂಡ್ ಮೂಸ್ ” ಮತ್ತು ” ಆರ್ಥರ್ ಸೈಮನ್ಸ್” ಕವಿಗಳು ಅವರಿಗೆ ಪರಿಚಿತವಾದ ವಸ್ತುಗಳು, ಸ್ಥಳಗಳು ಮತ್ತು ಜನರ ಬಗ್ಗೆ ಬರೆಯಲು ಪ್ರೋತ್ಸಾಹ ನೀಡಿದರು.
ಸರೋಜಿನಿ ಅವರ ಕವಿತೆಗಳ ಸಂಕಲನಕ್ಕೆ ದ ಗೋಲ್ಡನ್ ಥ್ರೆ ಶ್ ಹೋಲ್ಡ್ ಅರ್ಥಾತ್ ” ಸ್ವರ್ಣದ ಹೊಸ್ತಿಲು ” ಬಾಲ್ಯದಲ್ಲಿ ಬರೆದ ಎಲ್ಲಾ ಕವನಗಳ ಸಂಗ್ರಹವಾಗಿತ್ತು. ಅದರಲ್ಲಿ ಪುರಾಣದ ಐತಿಹ್ಯಗಳು, ಬಾಲ್ಯದಲ್ಲಿ ಕಂಡ ಬಳೆಗಾರ,ಬೆಸ್ತ, ಹಾವಾಡಿಗ, ಅಲೆದಾಡುವ ಹಾಡುಗಾರ ಮತ್ತು ಪಲ್ಲಕ್ಕಿ ಹೊತ್ತ ಗಂಡಸರು ಹೀಗೆ ಎಲ್ಲರ ಬಗ್ಗೆ ಬರೆಯಲಾಗಿತ್ತು. ಇದೇ ಸಮಯದಲ್ಲಿ ಪದ್ಯಗಳಿಂದ ಇಂಪಾದ ಸಂಗೀತದ ಶಬ್ದ ಗೀತೆಗಳು ಅವರಿಗೆ ಭಾರತದ ಕೋಗಿಲೆ ಎಂಬ ಬಿರುದನ್ನು ತಂದುಕೊಟ್ಟವು. ಅವರ ಅನೇಕ ಪದ್ಯಗಳನ್ನು ಗೋವಿಂದರಾಜರು ನಾಯ್ಡು ಎಂಬ ವೈದ್ಯರಿಗೆ ಸಮರ್ಪಿಸಿದ್ದರು. ಇಂಗ್ಲೆಂಡಿನಿಂದ ವಾಪಸಾದ ನಂತರ 1898ರಲ್ಲಿ ಅವರನ್ನು ಮದುವೆಯಾದರು.
ಸರೋಜಿನಿ ಅವರು 1906ರಲ್ಲಿ ಕಲ್ಕತ್ತಾದ ಕಾಂಗ್ರೆಸ್ ಅಧಿವೇಶನದಲ್ಲಿ ಮೊದಲ ಬಾರಿಗೆ ಮೊಹಮ್ಮದಲಿ ಜಿನ್ನಾ ಅವರನ್ನು ಭೇಟಿಯಾದರು. ಅವರು 1947ರಲ್ಲಿ ಗವರ್ನರ್ ಜನರಲ್ ಆಗುವುದಕ್ಕೆ ಮುಂಚೆ ದಾದಾಬಾಯಿ ನವರೋಜಿಯವರ ರಾಜಕೀಯ ಕಾರ್ಯದರ್ಶಿಯಾಗಿದ್ದರು. ಜಿನ್ನಾ ಮತ್ತು ಸರೋಜಿನಿ ಅವರ ಮಧ್ಯೆ ಅನೇಕ ಭಿನ್ನಾಭಿಪ್ರಾಯಗಳಿದ್ದರೂ ಅವರ ದೀರ್ಘ ಸಂಬಂಧಕ್ಕೆ ಇದು ಪ್ರಾರಂಭವಾಗಿತ್ತು. 1906ರ ಕಲ್ಕತ್ತಾ ಅಧಿವೇಶನದಲ್ಲಿ ಮಹಿಳಾ ಶಿಕ್ಷಣ ಹಕ್ಕುಗಳ ಬಗ್ಗೆ ಮಾತನಾಡಿದರು. 1908 ರಲ್ಲಿ ವಿಧವಾ ಮರು ವಿವಾಹದ ಬಗ್ಗೆ ಒಂದು ಠರಾವು ಮಂಡಿಸಿದರು. ಅಲ್ಲಿಂದ ಆಚೆಗೆ ಅವರ ನಿಖರ ಭಾಷಣದ ಕೌಶಲ್ಯಗಳು ಹೊರಹೊಮ್ಮಿದಾಗ ಅವರಿಗೆ ಬಹಳ ಬೇಡಿಕೆ ಬಂದಿತು. ಅವರು ವೇದಿಕೆಯಿಂದ ಇಳಿಯುವಾಗ ಸ್ವಯಂಸೇವಕರು ದೇಶಭಕ್ತಿ ಗೀತೆಗಳೊಂದಿಗೆ ಕರೆದುಕೊಂಡು ಬರುತ್ತಿದ್ದರು.
ಎರಡನೆಯ ಕವಿತೆಗಳ ಸಂಕಲನ “ದ ಬರ್ಡ್ ಇನ್ ಟೈಮ್ “1902 ರಲ್ಲಿ ಬಿಡುಗಡೆಯಾಗಿ ಬಹಳ ಪ್ರಶಂಸೆ ಪಡೆದುಕೊಂಡಿತ್ತು. ಮುಂದಿನ ವರ್ಷದಿಂದ ಗೋಖಲೆಯವರು ಅವರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಕರೆತಂದರು. ಗೋಖಲೆ ಅವರು ಪೂಣಾ ದಲ್ಲಿ ಸ್ಥಾಪಿಸಿದ್ದ ಭಾರತ ಸಮಾಜದ ಸೇವಕರು ಎಂಬ ಸಂಘದ ಸದಸ್ಯರಾಗಿದ್ದರು. ಸಂಚಾರಿ ಗ್ರಂಥಾಲಯ ಮತ್ತು ರಾತ್ರಿ ತರಗತಿಗಳನ್ನು ಪ್ರಾರಂಭಿಸಿದರು. ಅಸ್ಪೃಶ್ಯತೆ ಮತ್ತು ಇತರ ಜಾತಿ ಭೇದಗಳ ಬಗ್ಗೆ ಅನೇಕ ಭಾಷಣಗಳನ್ನು ವ್ಯವಸ್ಥೆ ಮಾಡಿ ಜಾಗೃತಿ ಮೂಡಿಸಿದರು. ಗೋಖಲೆ ಅವರು ಮೊದಲ ಬಾರಿಗೆ ಗಾಂಧಿಯವರ ಬಗ್ಗೆ ತಿಳಿಸಿ ಅವರನ್ನು “ಭಾರತೀಯ ರಾಜಕೀಯದ ಮುಂದಿನ ಮನುಷ್ಯ “ಎಂದು ಬಣ್ಣಿಸಿದರು. ಮತ್ತು 1914 ರಲ್ಲಿ ಗಾಂಧಿಯವರನ್ನು ಭೇಟಿಯಾದ ಕೂಡಲೇ ಅವರ ರಾಜಕೀಯ ಜೀವನವು ಬೇರೆ ತಿರುವನ್ನು ಪಡೆಯಿತು.
ಸರೋಜಿನಿಯವರ ಸಲಹೆಗಾರ ಗೋಖಲೆ 1914ರಲ್ಲಿ ವಿಧಿವಶರಾದರು. ಆನಂತರದಲ್ಲಿ ಸರೋಜಿನಿ ಅವರಿಗೆ ಸಾಮಾಜಿಕ ಮತ್ತು ರಾಜಕೀಯ ವಿಷಯಗಳು ಜೀವನದಲ್ಲಿ ಹೆಚ್ಚು ಪ್ರಧಾನವಾಗತೊಡಗಿದವು. ಸರೋಜಿನಿಗಿಂತ 10 ವರ್ಷ ಚಿಕ್ಕ ವಯಸ್ಸಿನ ಜವಾಹರಲಾಲ್ ನೆಹರು ಸರೋಜಿನಿ ಅವರ ಮುಖ್ಯವಾದ ಸಹಚರ ಮತ್ತು ಸ್ನೇಹಿತರಾಗಿದ್ದರು. ಇವರು ನೆಹರುರವರಿಗೆ ಬರೆದ ಪತ್ರಗಳಲ್ಲಿ ದಯೆ, ಹಾಸ್ಯ ಮತ್ತು ಪ್ರಶಂಸೆಗಳು ತುಂಬಿರುತ್ತಿದ್ದವು.
ಅವರು 1917ರಲ್ಲಿ ಪ್ರಾರಂಭವಾದ ಭಾರತೀಯ ಮಹಿಳೆಯರ ಸಂಘವನ್ನು ಬೆಂಬಲಿಸಿದರು. ಆ ವರ್ಷ ಸರೋಜಿನಿ ಅವರು ಮಹಿಳಾ ಪ್ರತಿನಿಧಿಗಳನ್ನು ಬ್ರಿಟಿಷ್ ಕಾರ್ಯದರ್ಶಿ” ಎಡ್ವಿನ್ ಮಾಂಟಾಗೊ” ಬಳಿಗೆ ಕರೆದುಕೊಂಡು ಹೋಗಿ ಮಹಿಳೆಯರ ಮತದಾನದ ಹಕ್ಕಿಗಾಗಿ ಮನವಿ ಸಲ್ಲಿಸಿದರು. ಆದರೆ ಎಡ್ವಿನ್ ಮೊಂಟಾಗೊ ಅಸಡ್ಡೆ ತೋರಿದರು. ಆದರೂ ವಿಚಲಿತರಾಗದೆ 1918 ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಗಂಡಸರು ಮತ್ತು ಮಹಿಳೆಯರಿಗೆ ಸಮಾನವಾದ ಪೌರ ಹಕ್ಕುಗಳನ್ನು ಕೊಡಬೇಕು ಎಂದು ಠರಾವನ್ನು ತೇರ್ಗಡೆ ಮಾಡಿಸಿದರು.
ಏಪ್ರಿಲ್ 13 1919ರ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ನಂತರ ಸರೋಜಿನಿ ಮತ್ತು ಗಾಂಧೀಜಿಯವರು ಕಟ್ಟಾ ರಾಷ್ಟ್ರವಾದಿಗಳಾದರು. ಲಂಡನ್ ನಲ್ಲಿ 1920 ರಲ್ಲಿ ಕಿಂಗ್ಸ್ ವೇ ಹಾಲ್ ನಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಮತ್ತು ಪಂಜಾಬಿನ ಸೈನಿಕ ಕಾನೂನು ಮಹಿಳೆಯರನ್ನು ನಡೆಸಿಕೊಂಡ ರೀತಿಗಳನ್ನು ಎಲ್ಲರಿಗೂ ತಿಳಿಸಿಹೇಳಿದರು. 1920ರ ಅಸಹಕಾರ ಚಳುವಳಿಯ ಎಲ್ಲಾ ಸ್ಥರದ ಜನರನ್ನು ಸೆಳೆಯಿತು. ಸರೋಜಿನಿ ಅವರು ಎಲ್ಲರಿಗೂ ಸತ್ಯಾಗ್ರಹದಲ್ಲಿ ಸ್ವಯಂ ಶಿಸ್ತು,ನಿಷ್ಕ್ರಿಯವಾದ ಪ್ರತಿಭಟನೆಯನ್ನು ಕಲಿಸಿದರು. ಅವರ ಉದಾಹರಣೆಯನ್ನು ಅನುಸರಿಸಿ ಅನೇಕ ಮಹಿಳೆಯರು ಚಳುವಳಿಗೆ ಸೇರಿದರು.
ಭಾರತದ ಸ್ವಾತಂತ್ರ್ಯಕ್ಕಾಗಿ ಅಧಿಕಾರವಿಲ್ಲದ ರಾಯಭಾರಿಯಾಗಿ ಕೀನ್ಯಾ, ದಕ್ಷಿಣ ಆಫ್ರಿಕಾ, ಅಮೆರಿಕ, ಮತ್ತು ಕೆನಡಾ ದೇಶಗಳಿಗೆ ಭೇಟಿ ಕೊಟ್ಟಿದ್ದರು. ದಕ್ಷಿಣ ಆಫ್ರಿಕಾದ ಡರ್ಬನ್ ನಲ್ಲಿ ಭಾರತೀಯರಂತೆ ಕಪ್ಪು ವರ್ಣಿಯರ ಮೇಲೆ ತೋರುವ ಭೇದಭಾವ ಬಗ್ಗೆ ಮಾತನಾಡಿದರು. ಶ್ರೀಲಂಕಾದ ಕೊಲಂಬೊದಿಂದ 1924ರಲ್ಲಿ ಮದ್ರಾಸಿಗೆ ಹಿಂತಿರುಗಿದ ನಂತರ ಪ್ರೆಸಿಡೆನ್ಸಿ ಕಾಲೇಜ್ ಇರುವ ಸಮುದ್ರ ತೀರದಲ್ಲಿ ನಡೆದ ದೊಡ್ಡ ಸಭೆಯಲ್ಲಿ ದಲಿತರ ವಿರುದ್ಧ ಭೇದಭಾವದ ಬಗ್ಗೆ ಮಾತನಾಡಿದರು.


1925 ರಲ್ಲಿ ಮೊದಲ ಬಾರಿಗೆ ಭಾರತದ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಮಹಿಳೆ ಆದರೂ ಅಧ್ಯಕ್ಷರಾದ ಕೂಡಲೇ ಮಹಿಳಾ ವಿಭಾಗವನ್ನು ತೆರೆದು ಮಹಿಳೆಯರ ವಿಚಾರಗಳನ್ನು ಯಾವಾಗಲೂ ಪ್ರಸ್ತಾಪಿಸುತ್ತಲೇ ಇದ್ದರು . ಗಾಂಧಿಯವರ ರಾಯಭಾರಿಯಾಗಿ 1920 ರಲ್ಲಿ ಅಮೇರಿಕಾ ದೇಶಕ್ಕೆ ಹೋಗಿದ್ದರು. ನಿರಾತ್ ನಲ್ಲಿ 1928ರಲ್ಲಿ ಉಪನ್ಯಾಸಗಳು ಕವಿತೆಗಳ ವಾಚನ ಮತ್ತು ಸಾಹಿತ್ಯದ ಹಬ್ಬಗಳಲ್ಲಿ ಪಾಲ್ಗೊಂಡರು. ಅವರು ಅಮೆರಿಕನ್ನರ ಕರ್ತವ್ಯ ನಿಷ್ಠೆ, ದೇಶಪ್ರೇಮ, ಆಶಾಭಾವನೆ, ಮತ್ತು ಅಮೆರಿಕಾದ ಭೂ ದೃಶ್ಯಗಳನ್ನು ಪ್ರಶಂಶಿಸಿದರು.
1936ರಲ್ಲಿ ನಡೆದ ಭಾರತೀಯ ಮಹಿಳೆಯರ ಸಂಘದ ಸಮ್ಮೇಳನದಲ್ಲಿ ಸರೋಜಿನಿ ಅವರ ಸಲಹೆಯಂತೆ ಮಹಿಳೆಯರ ಕಾರ್ಯಸೂಚಿಯನ್ನು ಪ್ರಕಟಿಸಲಾಯಿತು. ಭಾರತ ಸರ್ಕಾರದ 1935 ರ ಕಾನೂನಿನಂತೆ ಮಹಿಳೆಯರು ಕೇಂದ್ರೀಯ ಪ್ರಾಂತೀಯ ಮತ್ತು ಸ್ಥಳೀಯ ಸಭೆಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಚಳುವಳಿಕೆ ನೀಡಿತು. ಇವರ ಪ್ರಯತ್ನವು ಮುಂದೆ 26 ಜನವರಿ 1950 ರಲ್ಲಿ ಸಂದ ಕಾನೂನಿನ ಪ್ರಕಾರ ಮಹನೀಯರು ಮತ್ತು ಮಹಿಳೆಯರಿಗೆ ಸಮ ಸಮನಾದ ಮತದಾನದ ಹಕ್ಕು ಒಲಿದು ಬಂದಿತು.
ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿ ಆಗಸ್ಟ್ 1942ರ ನಂತರ ಬಂದನಕ್ಕೊಳಗಾದ ಮುಖಂಡರಲ್ಲಿ ಸರೋಜಿನಿಯವರು ಮೊದಲಿಗರು. ಫೆಬ್ರುವರಿ 1942 ರಲ್ಲಿ ಆಗಾಖಾನ್ ಅರಮನೆಯಲ್ಲಿ ಗಾಂಧಿ ಮತ್ತು ಅವರ ಹೆಂಡತಿ ಕಸ್ತೂರಬಾ ಗಾಂಧಿಯವರ ದೀರ್ಘಕಾಲದ ಅನುಯಾಯಿ ಮಹದೇವ ದೇಸಾಯಿ ಅವರನ್ನು ಸೆರೆವಾಸದಲ್ಲಿಟ್ಟರು. ಇದೇ ಸಂದರ್ಭದಲ್ಲಿ ಕಸ್ತೂರಬಾ ಮತ್ತು ಮಹದೇವ ದೇಸಾಯಿ ಅವರು ತೀರಿಕೊಂಡಿದ್ದು ಗಾಂಧಿ ಮತ್ತು ಸರೋಜಿನಿ ಅವರಿಗೆ ಬಹಳ ದುಃಖ ತಂದಿತು.
1943ರಲ್ಲಿ ಮಲೇರಿಯಾದ ಸಮಸ್ಯೆ ಇದ್ದಿದ್ದರಿಂದ ಸರೋಜಿನಿ ಅವರ ಬಿಡುಗಡೆ ಆಯಿತು. ಆದರೆ ಸರ್ಕಾರ ಅವರ ಭಾಷಣದ ಮೇಲೆ ನಿಷೇಧ ಹೇರಿತು. ಆದರೆ 1944 ರಲ್ಲಿ ಬ್ರಿಟಿಷರ ಪ್ರಚಾರ ಕಾರ್ಯದ ವಿರುದ್ಧ ಧ್ವನಿ ಎತ್ತಿದರು. ನಂತರ ಹಿಂದೂಸ್ತಾನ್ ಟೈಮ್ನಲ್ಲಿ ಪ್ರಕಟವಾದ ಭಾಷಣದಲ್ಲಿ ಜಪಾನಿಯರ ಅತಿಕ್ರಮಣವನ್ನು ಭಾರತ ಒಪ್ಪಿಕೊಳ್ಳುತ್ತದೆ ಎಂಬ ಸಲಹೆಯನ್ನು ಅಲ್ಲಗಳೆಯುತ್ತಾರೆ.
ಭಾರತದ ಸ್ವಾತಂತ್ರ್ಯದೊಂದಿಗೆ ನಾಟಕೀಯ ಮತ್ತು ಹಿಂಸಾ ತ್ಮಕ ಘಟನೆಗಳು ದೇಶ ವಿಭಜನೆಯೊಂದಿಗೆ ತೆರೆದುಕೊಳ್ಳುತ್ತವೆ. ಅಲ್ಲಲ್ಲಿ ಗಲಭೆಗಳು ಅನೇಕ ನಿರಾಶ್ರಿತರ ವಲಸೆ ಮತ್ತು ಹಿoಸಾತ್ಮಕ ಘಟನೆಗಳು ಎರಡೂ ಕಡೆ ನಡೆಯುತ್ತವೆ. ಜನೇವರಿ 30 1948 ರಂದು ದೆಹಲಿಯಲ್ಲಿ ಗಾಂಧಿಯವರ ಕೊಲೆಯಾಗುತ್ತದೆ. ಗಾಂಧಿಯವರ ಸಂಸ್ಕಾರ ಸಭೆಯಲ್ಲಿ ಅವರು “ಆಕಾಶದಿಂದ ನೇರವಾಗಿ ಇಳಿದುಬಂದು ಸುವಾರ್ತೆ ತಂದ ಉಪಾಧ್ಯಾಯರು ನಿಜವಾದ ಪ್ರೇಮ ಮತ್ತು ಶಾಂತಿಯನ್ನು ಹರಡಿ ಹೋದರು” ಎಂದು ಹೇಳಿದರು.
ಅವರು ಉತ್ತರ ಪ್ರದೇಶದ ರಾಜ್ಯಪಾಲರಾಗಿ ಆ ಸ್ಥಾನವನ್ನು ಅಲಂಕರಿಸಿದ ಮೊದಲ ಮಹಿಳೆಯಾದರು. ಆಗ ಅವರು ಅಲಹಾಬಾದ್ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳೂ ಆಗಿದ್ದರು. ಅವರು ತಮ್ಮ ಮಾತಿನ ಶೈಲಿಯಿಂದ ವಿದ್ಯಾರ್ಥಿಗಳನ್ನು ಮಂತ್ರ ಮುಗ್ದರಾಗಿಸಿದ್ದರು. ಎಲ್ಲಾ ವಿಶ್ವವಿದ್ಯಾಲಯಗಳು ವಿಜ್ಞಾನಿಗಳು ಮತ್ತು ತತ್ವಶಾಸ್ತ್ರಜ್ಞರಿಗೆ ಕಲ್ಪನೆ ಮತ್ತು ದೂರ ದೃಷ್ಟಿಗೆ ವೇದಿಕೆ ಎಂದು ಹೇಳುತ್ತಿದ್ದರು.
1949 ಮಾರ್ಚ್ 2 ರಂದು ದಿಢೀರ್ ಖಾಯಿಲೆಯಿಂದ ನಿಧನರಾದರು. ಅವರ ಶವ ಸಂಸ್ಕಾರವು ಲಕ್ನೌ ಪಕ್ಕದ ನದಿ ದಂಡೆಯಲ್ಲಿ ಸುಮಾರು 6,000 ಜನರ ಉಪಸ್ಥಿತಿಯಲ್ಲಿ ನಡೆಯಿತು.ಅವರ ಕೊನೆಯ ಕವನ ಸಂಕಲನ “ಫೆದರ್ ಆಫ್ ಡಾನ್ “ಅನ್ನು ಅವರ ಮಗಳು ಪದ್ಮಜಾ ಸಂಗ್ರಹಿಸಿ ಪ್ರಕಟಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ

ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ

ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .

ಅನ್ನದಾತರ ಸಮೃದ್ಧಿಯಲ್ಲಿ ನಮಗೆ ಸಂತೃಪ್ತಿ ಇದೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ
    In (ರಾಜ್ಯ ) ಜಿಲ್ಲೆ
  • ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ
    In (ರಾಜ್ಯ ) ಜಿಲ್ಲೆ
  • ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .
    In (ರಾಜ್ಯ ) ಜಿಲ್ಲೆ
  • ಅನ್ನದಾತರ ಸಮೃದ್ಧಿಯಲ್ಲಿ ನಮಗೆ ಸಂತೃಪ್ತಿ ಇದೆ
    In (ರಾಜ್ಯ ) ಜಿಲ್ಲೆ
  • ಸರ್ಕಾರದಿಂದ ಮೈಸೂರು ಜಿಲ್ಲೆಗೆ 5 ಕೋಟಿ 19 ಲಕ್ಷ ಅನುದಾನ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿಯಲ್ಲಿ ಭಾವೈಕ್ಯತಾ ದಿನಾಚರಣೆ…
    In (ರಾಜ್ಯ ) ಜಿಲ್ಲೆ
  • ಮಾ.೯ರಂದು ಭೀಮ ಗಾಯನ ಕಾರ್ಯಕ್ರಮ ಯಶಸ್ವಿಗೆ ಕೈಜೋಡಿಸಿ
    In (ರಾಜ್ಯ ) ಜಿಲ್ಲೆ
  • ಮಾ.೯ರಂದು ಪ್ರಧಾನ ಮಂತ್ರಿ ರಾಷ್ಟ್ರೀಯ ಶಿಶುಕ್ಷು ಮೇಳ
    In (ರಾಜ್ಯ ) ಜಿಲ್ಲೆ
  • ಹೋಳಿ ಹಬ್ಬ ಆಚರಣೆ: ವಿಶೇಷ ದಂಡಾಧಿಕಾರಿಗಳ ನೇಮಿಸಿ ಆದೇಶ
    In (ರಾಜ್ಯ ) ಜಿಲ್ಲೆ
  • ಬೇಡಿಕೆಗಳ ಈಡೇರಿಕೆಗೆ ಮಾ.೧೧ ರಿಂದ ೧೫ವರೆಗೆ ಮುಷ್ಕರಕ್ಕೆ ನಿರ್ಧಾರ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.