ಉದಯರಶ್ಮಿ ದಿನಪತ್ರಿಕೆ
ಇಂಡಿ: ಕಬ್ಬು ಬೆಳೆಗೆ ಕೃತಕ ತಂತ್ರಜ್ಞಾನ ಬಳಸಿದರೆ ಮಣ್ಣಿನ ತೇವಾಂಶ, ಮಳೆಯ ಮುನ್ಸೂಚನೆ, ನೀರು ಬಿಡುವ ಪ್ರಮಾಣ, ಮಣ್ಣಿನಲ್ಲಿರುವ ನ್ಯೂಟ್ರಿಯಂಟ್ಸಗಳು, ನೀರಿನ ಪಿಎಚ್ ಬೆಲೆ, ಕಬ್ಬಿಗೆ ಬರುವ ರೋಗಗಳು, ಕೀಟಗಳು, ಕಳೆ, ಗೊಬ್ಬರ ಎಷ್ಟು ಹಾಕಬೇಕು ಇತ್ಯಾದಿ ಮಾಹಿತಿ ದೊರೆಯುತ್ತದೆ. ಹೀಗಾಗಿ ಕಬ್ಬು ಬೆಳೆ ಅಧಿಕ ಬೆಳೆಯಲು ಸಾಧ್ಯ ಎಂದು ಕೃಷಿ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಹೇಳಿದರು.
ತಾಲೂಕಿನ ಹಿರೇಬೇವನೂರ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕೃಷಿ ಇಲಾಖೆಯಿಂದ ೨೦೨೬-೨೭ ನೇ ಸಾಲಿನ ಪಿಎಂ ಆರ್ ಕೆ ವಿ ವಾಯ್ ಯೋಜನೆ ಅಡಿಯಲ್ಲಿ ಹಿರೇಬೇವನೂರ ಸಕ್ಕರೆ ಕಾರ್ಖಾನೆ ಸಹಯೋಗದಲ್ಲಿ ಕಬ್ಬಿನ ಅರ್ಥಿಕ ಇಳುವರಿಗಾಗಿ ಸುಧಾರಿತ ಬೇಸಾಯ ಕೃತಕ ತಂತ್ರಜ್ಞಾನ ಬಳಕೆ ಕುರಿತು ಹಮ್ಮಿಕೊಂಡ ಕಾರ್ಯಾಗಾರದಲ್ಲಿ ಮಾತನಾಡಿದರು.
ಕೃಷಿ ವಿಶ್ವವಿದ್ಯಾಲಯದ ಪ್ರಾದ್ಯಾಪಕ ಎ.ಪಿ.ಬಿರಾದಾರ ಮಾತನಾಡಿ ಕೃತಕ ತಂತ್ರಜ್ಞಾನ ಬಳಕೆಯಿಂದ ಕಬ್ಬು ೨೦ ರಿಂದ ೩೦ ಪ್ರತಿಶತ ಇಳುವರಿ ಹೆಚ್ಚು ಬರುತ್ತದೆ. ಜಗತ್ತಿನಲ್ಲಿ ಬ್ರೇಜಿಲ್ ಕಬ್ಬು ಬೆಳೆಯುವಲ್ಲಿ ಪ್ರಥಮ ಸ್ಥಾನದಲ್ಲಿದ್ದರೆ ಭಾರತ ದ್ವೀತಿಯ ಸ್ಥಾನದಲ್ಲಿದೆ. ಭಾರತದಲ್ಲಿ ಉತ್ತರಪ್ರದೇಶ ಪ್ರಥಮ ಮಹಾರಾಷ್ಟç ದ್ವೀತಿಯ ಮತ್ತು ಕರ್ನಾಟಕ ತೃತೀಯ ಸ್ಥಾನದಲ್ಲಿವೆ. ಕಬ್ಬಿನ ರವದಿ ಸುಡದೇ ಮಣ್ಣಿನಲ್ಲಿ ಕೊಳೆಸಬೇಕು, ಡ್ರೀಪ್ ನೀರಾವರಿ ಮಾಡಬೇಕು, ಗಾಳಿಯ ಅಂಶ ನೀರಿನ ಅಂಶ ಸಮಪ್ರಮಾಣದಲ್ಲಿ ಇರಬೇಕು.ಸಾವಯುವ ಇಂಗಾಲ ಪ್ರಮಾಣ ೦.೫ ಇರಬೇಕು. ನೀರಿನ ನಿರ್ವಹಣೆ, ಗೊಬ್ಬರ ಪೂರೈಕೆ ಪೋಷಕಾಂಶ ನಿರ್ವಹಣೆ ಸರಿಯಾಗಿರಬೇಕಾದರೆ ನಾವು ಸಧಾರಿತ ಕೃತಕ ತಂತ್ರಜ್ಞಾನದಿAದ ಕಬ್ಬನ್ನು ಹೆಚ್ಚು ಇಳುವರಿ ಪಡೆಯಲು ಸಾದ್ಯ ಎಂದರು.
ಇAಡಿಯ ಕೃಷಿ ಉಪ ನಿರ್ದೇಶಕ ಚಂದ್ರಕಾAತ ಪವಾರ ಮಾಡಿನಾಡಿ ಕೃಷಿ ಇಲಾಕೆಯಿಂದ ಎರಡುವರೆ ಲಕ್ಷ ಮತ್ತು ಹಿರೇಬೇವನೂರ ಇಂಡಿಯನ್ ಸಕ್ಕರೆ ಕಾರ್ಖಾನೆಯಿಂದ ಎರಡು ವರೆ ಲಕ್ಷ ರೂ ನಲ್ಲಿ ೬೦೦ ರೈತರಿಗೆ ಮೊಬೈಲನಲ್ಲಿ ಕೃತಕ ತಂತ್ರಜ್ಞಾನದ ಆಪ್ ನೀಡಲಾಗುವದು. ಅದು ರೈತರಿಗೆ ಕಬ್ಬಿನ ಬೆಳೆಯ ಕುರಿತು ರೈತರಿಗೆ ಎಲ್ಲ ಮಾಹಿತಿ ನೀಡುತ್ತದೆ ಎಂದರು.
ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ಏವೂರ ಮಾತನಾಡಿ ತಾಲೂಕಿನ ಎಲ್ಲ ೮೮ ಹಳ್ಳಿ ಮತ್ತು ೩೦ ತಾಂಡಾಗಳಲ್ಲೂ ಕಬ್ಬು ಬೆಳೆ ಅಧಿಕ ಪ್ರಮಾಣದಲ್ಲಿದೆ. ರೈತರು ಆಧುನಿಕ ತಂತ್ರಜ್ಞಾನ ಬಳಸಿ ಕೃತಕ ಬುದ್ದಿಮತ್ತೆ ಉಪಯೋಗ ಪಡೆದುಕೊಂಡು ಕಬ್ಬಿನ ಬೆಳೆ ಹೆಚ್ಚು ಬೆಳೆದು ಅರ್ಥಿಕವಾಗಿ ಸಬಲರಾಗಬೇಕಾಗಿದೆ ಎಂದರು.
ಕೃಷಿ ಅಧಿಕಾರಿ ಮಹಾಂತೇಶ ಶೆಟ್ಟೆನ್ನವರ, ಕೃಷಿ ವಿಜ್ಞಾನ ಕೇಂದ್ರದ ಪ್ರಕಾಶ ಸಿ, ಕೃಷಿ ಇಲಾಖೆ ಕೃತಕ ತಂತ್ರಜ್ಞಾನದ ಸಗೀರ ಅಹಮ್ಮದ , ಸಿಂದಗಿಯ ಕೃಷಿ ಸಹಾಯಕ ನಿರ್ದೇಶಕ ಎಚ್.ವಾಯ್ ಸಿಂಗ್ಯಾಗೋಳ, ಗಿರಿಮಲ್ಲಪ್ಪಗೌಡ ಬಿರಾದಾರ, ಎಂ,ಆರ್.ಮೈದರಗಿ, ಶಂಕರಗೌಡ ಬಿರಾದಾರ, ವೇದಮೂರ್ತಿ ದಯಾನಂದ ಹಿರೇಮಠ ಮಾತನಾಡಿದರು.
ವೇದಿಕೆಯ ಮೇಲೆ ಕಾರ್ಖಾನೆಯ ಮುಖ್ಯಸ್ಥ ಸೂರ್ಯ ಪ್ರಕಾಶ, ತಾ.ಪಂ ಮಾಜಿ ಅಧ್ಯಕ್ಷ ಅಣ್ಣಾರಾಯ ಬಿದರಕೋಟಿ, ಬಿ.ಕೆ.ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಶ್ರೀಶೈಲಗೌಡ ಬಿರಾದಾರ, ನಾಗಪ್ಪಗೌಡ ಬಿರಾದಾರ, ಭೀಮರಾಯಗೌಡ ಬಿರಾದಾರ, ಗುರಣ್ಣ ಪವಾಡಿ, ಅರ್ಚಕ ಈರಸಂಗಯ್ಯ ಮಠಪತಿ, ಕೃಷಿ ಇಲಾಖೆಯ ರಾಧಾಕೃಷ್ಣ, ಶಿವಕುಮಾರ ಅಂದೇವಾಡಿ, ಅಣ್ಣಾರಾಯ ಬಮ್ಮನಹಳ್ಳಿ, ಮಲ್ಲಿಕಾರ್ಜುನ ಪವಾಡಿ ಮತ್ತಿತರರಿದ್ದರು.

