ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ಕರ್ನಾಟಕ ಮಾದರ ಮಹಾಸಭಾದ ಸದಸ್ಯತ್ವ ಅಭಿಯಾನ ಕುರಿತು ರವಿವಾರರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಲಾಯಿತು.
ಈ ಸಭೆಯಲ್ಲಿ ಸಮಾಜದ ಹಿರಿಯರಾದ ಶೇಕಪ್ಪ ಚಬನೂರ ಅವರು ಮಾತನಾಡಿ, ಕರ್ನಾಟಕ ಮಾದರ ಮಹಾಸಭಾದ ಸದಸ್ಯರಾಗಿ ಸಮುದಾಯದ ಬಲ ಹೆಚ್ಚಿಸಿ ಎಂದು ಹೇಳಿದರು.
ಬಸ್ಸು ಕಟ್ಟಿಮನಿ ಮಾದರ ಮಾತನಾಡಿ ಕರ್ನಾಟಕ ಮಾದರ ಮಹಾಸಭಾದ ಸದಸ್ಯತ್ವವನ್ನು ಹಳ್ಳಿ ಹಳ್ಳಿಗೆ ಹೋಗಿ ಸದಸ್ಯತ್ವ ಪಡೆಯುವುದರ ಉದ್ದೇಶ ಮತ್ತು ಪ್ರಯೋಜನ ಏನು ಎಂಬುದರ ಕುರಿತು ಸಮಾಜದ ಜನರಿಗೆ ತಿಳಿಸೋಣ ಎಂದರು.
ರಮೇಶ ಯ ದೊಡಮನಿ ಮಾತನಾಡಿ ಮಾದಿಗ ಮತ್ತು ಮಾದಿಗ ಸಂಬಂಧಿತ ಜಾತಿಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಮತ್ತು ಕೇಂದ್ರ ಮತ್ತು ರಾಜ್ಯದಿಂದ ಬರುವ ಸೌಲಭ್ಯಗಳನ್ನು ನಮ್ಮ ಸಮುದಾಯದವರಿಗೆ ತಲುಪಿಸುವ ಪ್ರಮುಖ ಉದ್ದೇಶ ಕರ್ನಾಟಕ ಮಾದರ ಮಹಾಸಭಾದ ಉದ್ದೇಶ ಆಗಿದೆ ಎಂದು ಹೇಳಿದರು.
ಶಂಕ್ರಪ್ಪ ದೊಡಮನಿ ಮಾತನಾಡಿ ಮಾದಿಗ ಸಮಾಜದ ಹಿನ್ನಲೆ ಬಹು ಶ್ರೇಷ್ಠ ವಾಗಿದ್ದು ಅದರ ಸದಸ್ಯತ್ವ ಪಡೆದು ಅದರ ಪ್ರಯೋಜನ ಪಡೆಯುವುದು ಮುಖ್ಯ ಎಂದು ಹೇಳಿದರು.
ಇದೇ ಸಮಯದಲ್ಲಿ ಕರ್ನಾಟಕ ಮಾದರ ಮಹಾಸಭಾದ ಸದಸ್ಯತ್ವ ಅಭಿಯಾನದ ಉದ್ದೇಶ ಮತ್ತು ಸದಸ್ಯತ್ವದ ಪ್ರಯೋಜನಗಳನ್ನು ತಿಳಿಸುವ ಬಿತ್ತಿ ಪತ್ರವನ್ನು ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ರಮೇಶ್ ಹಡಗಿನಾಳ, ಮಲ್ಲಿಕಾರ್ಜುನ ಅಸ್ಕಿ, ಭೀಮಣ್ಣ ಮಾದರ, ಶೈಲೂ ಆಲಗೂರ, ಶಿವಪ್ಪ ಕಾರಗನೂರ, ಮಹೇಶ ಶಿವಪುರ ಮತ್ತು ಸಮಾಜದ ಹಿರಿಯರು ಮತ್ತು ಯುವಕರು ಭಾಗವಹಿಸಿದ್ದರು
ಗೋಪಾಲ ಕಟ್ಟಿಮನಿ ನೀರೂಪಿಸಿದರು. ಮಾದೇವ ಅಸ್ಕಿ ವಂದಿಸಿದರು.

