Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಕಿಲ್ಲಾ ಗಲ್ಲಿಯಲ್ಲಿರುವ ಹೊಸಮಠದಲ್ಲಿ ಬುಧವಾರ ಸಂಜೆ ಬಣಜಿಗ ಸಮಾಜದ ಪೂರ್ವಭಾವಿ ಸಭೆ ಜರುಗಿತು.ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ದಿ ಸಂಘದ ಮುದ್ದೇಬಿಹಾಳ ತಾಲೂಕು ಘಟಕದ ನೂತನ ಅಧ್ಯಕ್ಷ, ವರ್ತಕ ಅಶೋಕ ಚಟ್ಟೇರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಹಲವು ಸಮಾಜ ಚಿಂತಕರು ಸಮಾಜ ಸಂಘಟನೆ ಕುರಿತು ತಮ್ಮ ಅಭಿಪ್ರಾಯ ಮಂಡಿಸಿ, ತಾಲೂಕಿನಾದ್ಯಂತ ಬಣಜಿಗ ಸಮಾಜವನ್ನು ಬಲಿಷ್ಠವಾಗಿ ಸಂಘಟಿಸಲು ಹಲವು ಚಟುವಟಿಕೆ, ಕಾರ್ಯಕ್ರಮ ಹಮ್ಮಿಕೊಂಡು ಸಮಾಜವನ್ನು ಒಗ್ಗೂಡಿಸಲು, ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲು, ಸಮಾಜದ ನಿವೃತ್ತ ನೌಕರರನ್ನು ಸನ್ಮಾನಿಸಲು ಸಲಹೆ ಸೂಚನೆ ನೀಡಿದರು.ಈ ವೇಳೆ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಮತ್ತು ನೇಮಕಗೊಂಡ ಪದಾಧಿಕಾರಿಗಳ ಪರಿಚಯ ಮಾಡಿಕೊಟ್ಟು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಶೀಘ್ರವಾಗಿ ಹಮ್ಮಿಕೊಳ್ಳುವ ಕುರಿತು ಚರ್ಚಿಸಲಾಯಿತು. ರುದ್ರೇಶ ಕಿತ್ತೂರ, ನಾಲತವಾಡದ ಬಿ.ಎ.ಚಿನಿವಾಲರ ಅವರು ಸಮಾಜ ಸಂಘಟನೆ ಕುರಿತು ಮಾತನಾಡಿದರು. ಸಂಘಟನೆಯ ಜವಾಬ್ಧಾರಿಯುತ ಸ್ಥಾನದಲ್ಲಿರುವವರು ಯಾವ್ಯಾವ ಕರ್ತವ್ಯಗಳನ್ನು ನಿಭಾಯಿಸಬೇಕು, ಸಂಘಟನೆಯನ್ನು ಮುನ್ನಡೆಸುವಲ್ಲಿ ಅವರ…

Read More

ಲೋಕಸಭಾ ಚುನಾವಣೆಯಲ್ಲಿ ‘ಮತಗಳ್ಳತನ’ ಆರೋಪ |ದಾಖಲೆ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಸಲ್ಲಿಸಲು ನಿರ್ಧಾರ | ಸಿಎಂ ಸಿದ್ದರಾಮಯ್ಯ ಹೇಳಿಕೆ ಬೆಂಗಳೂರು: ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆ ವೇಳೆಯಲ್ಲಿ ರಾಜ್ಯದಲ್ಲಿನ ‘ಮತಗಳ್ಳತನ’ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಳಿ ದಾಖಲೆಗಳಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಹೇಳಿದ್ದಾರೆ.ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವಿವಾದದ ನಡುವೆ ದೇಶದಲ್ಲಿ ಚುನಾವಣೆಯಲ್ಲಿ ಮತಗಳ್ಳತನ ನಡೆಯುತ್ತಿದೆ. ಕಳೆದ ಲೋಕಸಭಾ ಚುನಾವಣೆ ಅವಧಿಯಲ್ಲಿ ಕರ್ನಾಟಕದ ಕ್ಷೇತ್ರವೊಂದರಲ್ಲಿ ಭಾರಿ ಮತಗಳ್ಳತನ ಬಗ್ಗೆ ಕಾಂಗ್ರೆಸ್ ಅಧ್ಯಯನ ನಡೆಸಿರುವುದಾಗಿ ಜುಲೈ 23 ರಂದು ರಾಹುಲ್ ಗಾಂಧಿ ಆರೋಪಿಸಿದ್ದರು.ಈ ಸಂಬಂಧ ಆಗಸ್ಟ್ 5 ರಂದು ನಡೆಯಲಿರುವ ಚುನಾವಣೆಯಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ. ಈ ಸಂಬಂಧ ರಾಹುಲ್ ಗಾಂಧಿ ದಾಖಲೆ ಹೊಂದಿದ್ದು, ಚುನಾವಣಾ ಆಯೋಗದ ಅಧಿಕಾರಿಗಳಿಗೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ.ರಾಹುಲ್ ಗಾಂಧಿ ಪ್ರತಿಭಟನೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಪ್ರತಿಭಟನಾ ಸ್ಥಳ ಹಾಗೂ ಯಾವ ರೀತಿ ಪ್ರತಿಭಟನೆ ನಡೆಸಬೇಕು ಎಂಬುದರ ಕುರಿತು…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ತಾಲೂಕಿನ ಬಿದರಕುಂದಿ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ನೂತನ ಎಸ್.ಡಿ.ಎಂ.ಸಿ.ಯ ಮೊದಲ ಸಭೆ ಜರುಗಿತು.ಸಭೆಯಲ್ಲಿ ಶಾಲೆಗೆ ಸಿ.ಬಿ.ಝಡ್ ಇಂಗ್ಲೀಷ ವಿಷಯದ ಇಬ್ಬರು ಶಿಕ್ಷಕರು ಮತ್ತು ಪಿ.ಸಿ.ಎಂ. ಇಂಗ್ಲೀಷ್ ಮಾದ್ಯಮದ ಒಂದು ಹುದ್ದೆಯ ಅವಶ್ಯಕತೆ ಇದೆ. ಈ ಹುದ್ದೆಗಳ ನೇಮಕಾತಿಗೆ ವಿಳಂಬವಾಗುತ್ತಿರುವದರಿಂದ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡುವ ಸಲುವಾಗಿ ಹುದ್ದೆಗಳನ್ನು ಆಹ್ವಾನಿಸಲು ನಿರ್ಧರಿಸಲಾಯಿತು. ಮತ್ತು ಶಾಲೆಗೆ ಶೌಚಾಲಯ ಮತ್ತು ಕುಡಿಯುವ ನೀರಿನ ಸಮಸ್ಯೆಯನ್ನು ತೀವ್ರವಾಗಿ ಬಗೆ ಹರಿಸುವ ಕುರಿತು ಚಿಂತಿಸಲಾಯಿತು. ಅಲ್ಲದೆ ಆಟದ ಮೈದಾನವೂ ಸೇರಿದಂತೆ ಊಟಕ್ಕಾಗಿ ದೊಡ್ಡ ಭೋಜನಾಲಯ ನಿರ್ಮಿಸಲು ಸಂಬಂಧಿಸಿದ ಇಲಾಖೆಯೊಂದಿಗೆ ಚರ್ಚಿಸಲು ನಿರ್ಧರಿಸಿದರು.ಬಳಿಕ ಬಿಸಿಯೂಟದ ಸಹಾಯಕ ನಿರ್ದೇಶಕರಾದ ಡಾ. ಎಂ.ಎಂ.ಬೆಳಗಲ್ಲ ಮತ್ತು ಎಸ್.ಡಿ.ಎಂ.ಸಿ. ಪದಾಧಿಕಾರಿಗಳು ಶಾಲಾ ಮಕ್ಕಳ ಜೊತೆಗೆ ಕುಳಿತು ಮದ್ಯಾಹ್ನದ ಬಿಸಿಯೂಟವನ್ನು ಸವಿದು ಗುಣಮಟ್ಟ ಪರೀಕ್ಷಿಸಿದರು.ಈ ಸಂದರ್ಭದಲ್ಲಿ ಅಧ್ಯಕ್ಷೆ ಪೂರ್ಣಿಮಾ ಬೆಳಗಲ್ಲ, ಉಪಾಧ್ಯಕ್ಷ ಸಂಗನಗೌಡ ಪಾಟೀಲ, ಸದಸ್ಯರಾದ ಮನೋಹರ ಪಾಟೀಲ, ಬಂದೆನಮಾಜ ಕುಮಸಿ, ನಿಂಗನಗೌಡ ಬಿರಾದಾರ, ಯಲ್ಲಪ್ಪ ಮ್ಯಾಗೇರಿ, ಗೀತಾ ನಾಲತವಾಡ,…

Read More

ಕಳೆದ ೯ ದಿನಗಳಿಂದ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹ | ಪ್ರತಿಭಟನಾ ಮೆರವಣಿಗೆ ಉದಯರಶ್ಮಿ ದಿನಪತ್ರಿಕೆ ಆಲಮೇಲ: ಪಟ್ಟಣದ ರುಕುಂಪೂರ ರಸ್ತೆ ಅತಿಕ್ರಮಣ ತೆರವುಗೊಳಿಸುವಂತೆ ಆಗ್ರಹಿಸಿ ಕಳೆದ ೯ ದಿನಗಳಿಂದ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು ಇಲ್ಲಿವರೆಗೂ ಯಾವೊಬ್ಬ ಅಧಿಕಾರಿಗಳು ಹೋರಾಟಗಾರರ ಬೇಡಿಕೆ ನ್ಯಾಯಯುತವಾಗಿ ಸ್ಪಂದಿಸದಿರುವುದನ್ನು ಖಂಡಿಸಿ ಗುರುವಾರ ಆಲಮೇಲ ಪಟ್ಟಣ್ಣ ಬಂದ್ ಗೊಳಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಘೋಷಣೆಗಳನ್ನು ಕೂಗುತ್ತ ಮೆರವಣಿಗೆ ಮಾಡಿದರು.ಹರಿಶ ಎಂಟಮಾನ ಮಾತನಾಡಿ, ಧರಣಿ ಸತ್ಯಾಗ್ರಹ ಆರಂಭಗೊಂಡು ೯ ದಿನಗಳಾದರೂ ಎಡಿಎಲ್‌ಆರ್ ಅಧಿಕಾರಿಗಳಿಂದ ಎರಡು-ಮೂರು ಬಾರಿ ಸರ್ವೇ ಮಾಡಿದರು ಸ್ಪಷ್ಟ ವರದಿ ನೀಡುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೆಳಿದರೆ ನಾಳೆ ಎಡಿಎಲ್‌ಆರ್ ವರದಿ ಬರುತ್ತೆ ಎಂದು ದಿನ ಮುಂದೂಡುತ್ತಿರುವುದು ಸರಿಯಲ್ಲ. ಅಧಿಕಾರಿಗಳು ಸಾರ್ವಜನಿಕರ ಬೇಡಿಕೆಗಳನ್ನು ಆಲಿಸಿ ಸಮಸ್ಯೆಗಳು ಬಗೆಹರಿಸುವುದನ್ನು ಬಿಟ್ಟು ಪ್ರಭಾವಿ ವ್ಯಕ್ತಿಗಳ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣ ಬಂದ ಯಶಸ್ವಿ: ಧರಣಿ ಸತ್ಯಾಗ್ರಹ ಹಮ್ಮಿಕೊಂಡು ಎಂಟು ದಿನ ಪೂರ್ಣಗೊಂಡು ಗುರುವಾರ ೯ನೇ ದಿನದಂದು ಅಧಿಕಾರಿಗಳ ವರ್ತನೆ ಬೆಸತ್ತ…

Read More

ಸಂಗ್ರಹ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ ಪ್ರೊ.ಸಿದ್ದಲಿಂಗೇಶ ಸಜ್ಜನ ಶೆಟ್ಟರ್ ಅವರು ಅಜಗಣ್ಣ ಮತ್ತು ಮುಕ್ತಾಯಕ್ಕ ಅವರ ಬಗೆಗೆ ಹೇಳುತ್ತಾ ಪುಲಿಗೆರೆಯ ಆದಯ್ಯ, ಅಗ್ಗವಣಿ ಹೊನ್ನಯ್ಯ ಅವರೂ ಸಹ ಗದಗ ಭಾಗದ ಹೆಮ್ಮೆಯ ಶರಣರು ಎನ್ನುವುದನ್ನು ಹಂಚಿಕೊಂಡರು.ಗದಗ ಹತ್ತಿರದ ಲೆಕ್ಕದ ಗುಂಡಿ, ಲಕ್ಕುಂಡಿಯಲ್ಲಿದ್ದ ಅಜಗಣ್ಣ ಮತ್ತು ಮುಕ್ತಾಯಕ್ಕ ಅವರ ಅಣ್ಣ – ತಂಗಿಯ ಸಂಬಂಧ ಅತ್ಯಂತ ವಿಶೇಷವಾದದ್ದು, ಅವರದು ಒಕ್ಕಲುತನದ ಮತ್ತು ಸದಾಚಾರದ ಕುಟುಂಬ ಎಂದು ಹೇಳುತ್ತಾ ಅಜಗಣ್ಣನವರ ಅಂತರಂಗದ ಭಕ್ತಿ ಮತ್ತು ಅಣ್ಣ-ತಂಗಿಯರ ಸುಜ್ಞಾನದ ಪಯಣವನ್ನು ವರ್ಣಿಸಿದರು.ಆದ್ಯರ ಅರವತ್ತು ವಚನಕ್ಕೆ ದಣ್ಣಾಯಕರ ಇಪ್ಪತ್ತು ವಚನದಣ್ಣಾಯಕರ ಇಪ್ಪತ್ತು ವಚನಕ್ಕೆ ಪ್ರಭುದೇವರ ಹತ್ತು ವಚನಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಐದು ವಚನಅಜಗಣ್ಣನ ಐದು ವಚನಕ್ಕೆ ಕೂಡಲ ಚನ್ನಸಂಗಮದೇವಾದೇವಿಯಕ್ಕಳದೊಂದೆ ವಚನಎಂದು ಹೇಳುತ್ತಾ ಅಜಗಣ್ಣ ನವರ ಮಹಿಮೆಯನ್ನು ಸಾರಿದರು.ಅಜಗಣ್ಣನವರಿಗೆ ಬಹಿರಂಗದ ಪೂಜೆ ಒಗ್ಗಲಿಲ್ಲ,ಅವರದು ಅಂತರಂಗದ ಸಾಧನೆ,ಧ್ಯಾನ, ಧಾರಣೆಯಾಗಿತ್ತು. ಇಷ್ಟಲಿಂಗವನ್ನು ಗೋಪ್ಯವಾಗಿ ಧರಿಸಬೇಕು ಎನ್ನುವುದು ಅವರ ಆಶಯ. ಅವರು ಗಂಟಲು ಮತ್ತು…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೆಬಿಹಾಳ: ಮಾಲಿಕರಿಲ್ಲದ ಬೀದಿ ದನಗಳ ಹಾವಳಿ ತಡೆಗಟ್ಟಿ ರೈತರ ಬೆಳೆಯನ್ನು ಉಳಿಸಬೇಕು ಒತ್ತಾಯಿಸಿ ರೈತ ಮುಖಂಡರು ಇಲ್ಲಿನ ಪುರಸಭೆ ಮುಖ್ಯಾಧಿಕಾರಿಗಳಿಗೆ ಮತ್ತು ಪೊಲೀಸ್ ಇಲಾಖೆಗೆ ಮನವಿ ಪತ್ರ ಸಲ್ಲಿಸಿದರು.ಈ ವೇಳೆ ಮುಖಂಡ ರಫೀಕ ಬೀಳಗಿ ಮಾತನಾಡಿ, ಬೀದಿ ದನಗಳ ಹಾವಳಿಯಿಂದ ಬೇಸತ್ತು ಹೋಗಿದ್ದೇವೆ. ಹಗಲು ರಾತ್ರಿ ಎನ್ನದೇ ಬೇಲಿ ಜಿಗಿದು ಹೊಲಗಳಿಗೆ ನುಗ್ಗಿ ಬೆಳೆಯನ್ನೆಲ್ಲ ಹಾಳುಮಾಡುತ್ತಿವೆ. ಅಲ್ಲದೇ ಜಮೀನನ್ನು ಕಾಯುವ ರೈತರ ಮೇಲೂ ಮಗಿಬಿಳುತ್ತಿವೆ. ಇದರಿಂದ ರೈತ ಬೆಳೆ ಕಳೆದುಕೊಳ್ಳುತ್ತಿರುವದಲ್ಲದೇ ಪ್ರಾಣ ಭಯದಿಂದ ಜೀವನ ನಡೆಸುವಂತಾಗಿದೆ. ಜಮೀನುಗಳಲ್ಲಿ ಮಾತ್ರವಲ್ಲದೇ ಈ ದನಗಳು ಸಾರ್ವಜನಿಕರು ಸದಾ ಓಡಾಡುವ ಪ್ರಮುಖ ರಸ್ತೆಗಳಲ್ಲಿ, ಮುಖ್ಯ ಬಜಾರ್ ನಲ್ಲಿ, ಪ್ರಮುಖ ವೃತ್ತಗಳಲ್ಲಿ ಜನೆತೆಗೆ, ಅಂಗಡಿಕಾರರಿಗೆ, ಬೀದಿ ಬದಿ ವ್ಯಾಪಾರಸ್ಥರಿಗೆ ತೊಂದರೆ ನೀಡುತ್ತಿವೆ. ಈ ತೊಂದರೆಯಿಂದ ರೈತರು ಮಾತ್ರವಲ್ಲದೇ ಸಾರ್ವಜನಿಕರೂ ಕೂಡ ಹೈರಾಣಾಗಿದ್ದಾರೆ. ಈ ಬಗ್ಗೆ ಪುರಸಭೆಯವರು ಕೂಡಲೇ ಎಚ್ಚೆತ್ತುಕೊಂಡು ಎಲ್ಲ ದನಗಳನ್ನು ಹತ್ತಿರದ ಗೋಶಾಲೆಗೆ ಕಳುಹಿಸಬೇಕು. ತಪ್ಪಿದ್ದಲ್ಲಿ ಸಾವಿರಾರು ರೈತರು ಸೇರಿ ಪುರಸಭೆ ಎದುರು…

Read More

ಲೇಖನ- ಜಯಶ್ರೀ ಅಬ್ಬಿಗೇರಿ, ಬೆಳಗಾವಿಸ ಪ ಪೂ ಕಾಲೇಜುಹಿರೇಬಾಗೇವಾಡಿಜಿ: ಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ತಪ್ಪು ಎಂದರೇನು?ನಮ್ಮ ಅಜ್ಞಾನದಿಂದ ಉಂಟಾಗುವ ಕ್ರಿಯೆ. ಅರಿವಿನ ಕೊರತೆಯಿಂದ ಸಂಭವಿಸುವಂತಹದು. ನಮಗೆ ಆ ಕ್ಷಣಕ್ಕೆ ಸರಿ ಎನಿಸಿದ್ದು. ಅರಿವಿನ ಮೂಸೆಯಲ್ಲಿ ಸರಿಯೆನಿಸಲಾರದ್ದು. ಘಟಿಸಿದ ಮೇಲೆ ತಿಳುವಳಿಕೆಗೆ ಬರುವಂತಹದು. ಎಂದು ನಾವು ಸಾಮಾನ್ಯವಾಗಿ ತಪ್ಪನ್ನು ಅರ್ಥೈಸುತ್ತೇವೆ. ತಪ್ಪಿನ ಮೇಲೆ ನಮಗೆ ಅಧಿಕಾರ ಇದೆಯೆ?ನಾವು ಮಾಡುವ ತಪ್ಪಿನ ಮೇಲೆ ಮೊದ ಮೊದಲು ನಮಗೆ ಅಧಿಕಾರವೇನೂ ಇರುವದಿಲ್ಲ. ಅವು ತಾವಾಗಿಯೇ ಘಟಿಸುತ್ತವೆ. ನಾವು ಮಾಡುವದು ತಪ್ಪು ಎಂದು ತಿಳಿದ ಮೇಲೂ ಮುಂದುವರೆಸುತ್ತೆವಲ್ಲ ಆಗ ತಪ್ಪುಗಳ ಮೇಲೆ ನಮ್ಮ ಅಧಿಕಾರ ಸ್ಥಾಪನೆಯಾಗುತ್ತದೆ. ಆ ಬಳಿಕ ತಪ್ಪುಗಳನ್ನು ಮಾಡುವದು ಬಿಡುವದು ನಮ್ಮ ಇಚ್ಛೆಗಳನ್ನು ಅವಲಂಬಿಸಿದೆ. ತಪ್ಪುಗಳ ಮೇಲೆ ಅಧಿಕಾರ ಸ್ಥಾಪಿಸಬೇಕೆಂದರೆ ಮಾಡಿದ ತಪ್ಪುಗಳನ್ನು ಮತ್ತೆಂದೂ ಮರಕಳಸದಂತೆ ಎಚ್ಚರವಹಿಸಬೇಕು. ಸಣ್ಣ ಮಕ್ಕಳಿದ್ದಾಗ ದಿನನಿತ್ಯ ಅನೇಕ ತಪ್ಪುಗಳನ್ನು ಮಾಡುವದನ್ನು ಕಾಣುತ್ತೇವೆ. ಕ್ರಮೇಣ ತಪ್ಪುಗಳ ಸಂಖ್ಯೆ ಕಡಿಮೆಯಾಗುತ್ತದೆ. ಅದಕ್ಕೆ ಕಾರಣ ಕಲಿಕೆ ಮತ್ತು ಅನುಭವ.ತಪ್ಪು ಮಾಡುವಾಗ ಉಂಟಾಗುವ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಾಗರ ಪಂಚಮಿ ಹಬ್ಬವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ೫ನೇ ದಿನದಂದು ಆಚರಿಸಲಾಗುತ್ತದೆ. ಈ ದಿನ ನಾಗ ದೇವರನ್ನು ಪೂಜಿಸುವುದಕ್ಕಾಗಿ ಮತ್ತು ನಾಗರ ಆಶೀರ್ವಾದವನ್ನು ಪಡೆದುಕೊಳ್ಳುವುದಕ್ಕಾಗಿ ಒಂದು ಉತ್ತಮ ಸಮಯವೆಂದು ಪರಿಗಣಿಸಲಾಗುತ್ತದೆ. ಪೂಜಿಸುವುದರಿಂದ ಕಾಳ ಸರ್ಪ ದೋಷ ನಿವಾರಣೆಯಾಗುವುದು ಮತ್ತು ಹಾವು ಕಡಿತದ ಭಯವು ಮಾಯವಾಗುವುದು. ಈ ವಿಶೇಷ ದಿನದಂದು ನಾಗ ದೇವರ ಭಕ್ತರು ನಾಗಗಳಿಗೆ ಹಾಲನ್ನು ಅರ್ಪಿಸುತ್ತಾರೆ. ಅವುಗಳನ್ನು ಪೂಜಿಸುತ್ತಾರೆ. ಸಮೃದ್ಧಿ, ಸುರಕ್ಷತೆಯನ್ನು ಬೇಡಿಕೊಳ್ಳುತ್ತಾರೆ.ವಿಜಯಪುರದ ಆದರ್ಶ ನಗರದ ಶಿವಾಲಯ ಮಂದಿರದ ಆವರಣದಲ್ಲಿರುವ ನಾಗದೇವನಿಗೆ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಮಹಿಳೆಯರು ನಾಗದೇವನಿಗೆ ಅರಿಶಿನ, ಕುಂಕುಮ, ಹಾಲು, ಹಣ್ಣು, ನೈವೇದ್ಯವನ್ನು ಅರ್ಪಿಸಿ, ಗೆಜ್ಜೆ ವಸ್ತçಗಳಿಂದ ನಾಗರ ಕಲ್ಲನ್ನು ಅಲಂಕರಿಸಿ, ದೀಪ, ಧೂಪ, ಅಗರಬತ್ತಿಯನ್ನು ಹಚ್ಚಿ ಪೂಜೆಯನ್ನು ಮಾಡಲಾಯಿತು. ಈ ಮೂಲಕ ನಾಗರ ಪಂಚಮಿ ಹಬ್ಬವನ್ನು ಭಕ್ತಿ, ಶ್ರದ್ಧೆಯಿಂದ ಆಚರಿಸಿದರು.ಈ ವೇಳೆಯಲ್ಲಿ ಶ್ರೀಮತಿ ಕವಿತಾ ಮಾಳಿ ಮಾತನಾಡುತ್ತ. ನಾಗರ ಪಂಚಮಿ ಹಬ್ಬದ ದಿನದಂದು ನಾವು ನಾಗ…

Read More

ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಗ್ರಾಮದ ಐತಿಹಾಸಿಕ ಕಿಚಡಿ ಜಾತ್ರೆಯನ್ನು ಯಾವುದೇ ಅಡಚನೆಯಾಗದಂತೆ ನಿರ್ವಹಿಸಲು ಇಲ್ಲಿನ ಯುವ ಸೇವಕರ ಹಲವು ಸಮೀತಿಗಳನ್ನು ರಚಿಸಲು ಇಲ್ಲಿನ ವಿರಕ್ತಮಠದಲ್ಲಿ ನಡೆದ ಸೇವಕರ ಸಭೆಯಲ್ಲಿ ತೀರ್ಮಾಣಿಸಲಾಯಿತು.ಶ್ರೀ ಪ್ರಭು ಮಹಾಸ್ವಾಮಿಗಳ ನೇತ್ರತ್ವದ ನಡೆದ ಸಭೆಯಲ್ಲಿ ಗ್ರಾಮದ ನೂರಾರು ಜನ ಯುವ ಸೇವಕರು ಪಾಲ್ಗೊಂಡು ಜಾತ್ರೆ ನಿರ್ವಹಣೆ ಕುರಿತು ಹಲವಾರು ಸಲಹೆ, ಸೂಚನೆ ನೀಡಿದರಲ್ಲದೇ ಹಲವು ಯುವಕರು ಭಕ್ತರನ್ನು ನಿಯಂತ್ರಿಸಲು ಹಾಗೂ ಸಮರ್ಪಕವಾಗಿ ಪ್ರಸಾದ ವಿತರಿಸಲು ಅನುಕೂಲವಾಗುವಂತೆ ಸಮೀತಿ ರಚಿಸಬೇಕೆಂದು ಮನವಿ ಮಾಡಿದರು.ಎಲ್ಲರ ಸಲಹೆಗಳನ್ನು ಆಲಿಸಿದ ಶ್ರೀಗಳು ಹಾಗೂ ಜಾತ್ರಾ ಸಮೀತಿಯ ಪ್ರಮುಖರು ಸಂಚಾರ ನಿಯಂತ್ರಣಾಪ್ರಸಾದ ವಿತರಣಾ ಸಮೀತಿ, ಪ್ರಸಾದ ತಯಾರಿ ಸಮೀತಿ, ಅಥಿತಿ ನಿರ್ವಹಣಾ ಸಮೀತಿ, ಕಾರ್ಯಕ್ರಮ ನಿರ್ವಹಣಾ ಸಮೀತಿ, ಅಥಿತಿ ಪೂಜ್ಯರ ಉಪಚಾರಣಾ ಸಮೀತಿ, ದರ್ಶನ ನಿರ್ವಹಣಾ ಸಮೀತಿ ಸೇರಿದಂತೆ ಹಲವು ಸಮೀತಿಗಳನ್ನು ರಚಿಸಿ ಜವಾಬ್ದಾರಿ ಹಂಚಿಕೆ ಮಾಡುವ ಕುರಿತು ಹಾಗೂ ಜಿಎಲ್‌ಬಿಲುಪ ಕಾಲೂವೆಯ ವರೆಗೆ ಸಿಸಿಟಿವಿ ಕ್ಯಾಮರಾ ಹಾಗೂ ಧ್ವನಿವರ್ಧಕ ಅಳವಡಿಸಲು ತೀಮಾರ್ಣಿಸಲಾಯಿತು.ಬರುವ ಸೆ.೦೪ ನಡೆಯಲಿರುವ…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಗಾಲಿಸಾಬ ಗುಡಿಗೆ ಹೊಗಲು ಇರುವ ರಸ್ತೆಯನ್ನು ಒತ್ತುವರಿ ಮತ್ತು ರುಕುಂಪೂರ ರಸ್ತೆ ತೆರವು ಹಾಗೂ ವಿವಿಧ ಸಮುದಾಯಗಳ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಮ್ಮಿಕೊಂಡಿದ್ದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಹೋರಾಟಕ್ಕೆ ಬುಧವಾರ ಪಟ್ಟಣದ ಎಲ್ಲಾ ವೈದ್ಯರು ಬೆಂಬಲಿಸಿ ಧರಣಿಯಲ್ಲಿ ಪಾಲ್ಗೊಂಡರು.ಈ ವೇಳೆ ವೈದ್ಯ ಡಾ.ರಾಜೇಶ ಪಾಟೀಲ ಮಾತನಾಡಿ, ಆಲಮೇಲದ ಎಲ್ಲಾ ನಾಗರಿಕರು ಸೇರಿ ಆರಾದ್ಯ ದೈವವಾದ ಗಾಲಿಬಸಾಬ ಗುಡಿಗೆ ಹೊಗಲು ರಸ್ತೆಗಾಗಿ ಹೋರಾಟ ಮಾಡುತ್ತಿರುವುದು ದುರಾದೃಷ್ಟಕರ. ಈ ಹೋರಾಟಕ್ಕೆ ಜಯ ಸಿಗುವವರೆಗು ನಾವು ಈ ಹೋರಾಟದಲ್ಲಿ ಪಾಲ್ಗೊಳ್ಳುತ್ತೇವೆ ಎಂದು ಹೇಳಿದರು.ಈ ಹೋರಾಟದಲ್ಲಿ ವೈದ್ಯರಾದ ಡಾ||ಸಂದಿಪ ಪಾಟೀಲ ಡಾ|| ಸಂಜೆಯ ಪಾಟೀಲ ಡಾ|| ಚನ್ನಬಸು ನಿಂಬಾಳ ಡಾ|| ಕರಬಸು ಲೋಣಿ ಡಾ|| ಸೆಬ್ಬಿರ ಹಾದಿಮನಿ ಪಾಲಗೊಂಡರುಹೋರಾಟ ಮಾಡುತ್ತಿರುವ ಸ್ಥಳಕ್ಕೆ ಇಂಡಿಯ ಉಪವಿಭಾಗ ಆಯುಕ್ತರಾದ ಅನುರಾಧ ವಸ್ತ್ರದ ಬೇಟಿ ನೀಡಿ, ಸ್ಥಳ ಪರಿಶೀಲನೆ ಮಾಡ ಮಾನ್ಯ ಜಿಲ್ಲಾಧೀಕಾರಿಗಳೊಂದಿಗೆ ಚರ್ಚೆಮಾಡಿ ಆದಷ್ಟು ಬೇಗನೆ ಬಗೆಹರಿಸುವುದಾಗಿ ಭರವಸೆ ನೀಡಿದರು.ನಾಳೆಯಿಂದ ಉಗ್ರ ಹೋರಾಟ: ೮ದಿನಗಳ ವರೆಗೆ…

Read More