ಸಂಗ್ರಹ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ
ಪುಣೆ
ಉದಯರಶ್ಮಿ ದಿನಪತ್ರಿಕೆ
ಪ್ರೊ.ಸಿದ್ದಲಿಂಗೇಶ ಸಜ್ಜನ ಶೆಟ್ಟರ್ ಅವರು ಅಜಗಣ್ಣ ಮತ್ತು ಮುಕ್ತಾಯಕ್ಕ ಅವರ ಬಗೆಗೆ ಹೇಳುತ್ತಾ ಪುಲಿಗೆರೆಯ ಆದಯ್ಯ, ಅಗ್ಗವಣಿ ಹೊನ್ನಯ್ಯ ಅವರೂ ಸಹ ಗದಗ ಭಾಗದ ಹೆಮ್ಮೆಯ ಶರಣರು ಎನ್ನುವುದನ್ನು ಹಂಚಿಕೊಂಡರು.
ಗದಗ ಹತ್ತಿರದ ಲೆಕ್ಕದ ಗುಂಡಿ, ಲಕ್ಕುಂಡಿಯಲ್ಲಿದ್ದ ಅಜಗಣ್ಣ ಮತ್ತು ಮುಕ್ತಾಯಕ್ಕ ಅವರ ಅಣ್ಣ – ತಂಗಿಯ ಸಂಬಂಧ ಅತ್ಯಂತ ವಿಶೇಷವಾದದ್ದು, ಅವರದು ಒಕ್ಕಲುತನದ ಮತ್ತು ಸದಾಚಾರದ ಕುಟುಂಬ ಎಂದು ಹೇಳುತ್ತಾ ಅಜಗಣ್ಣನವರ ಅಂತರಂಗದ ಭಕ್ತಿ ಮತ್ತು ಅಣ್ಣ-ತಂಗಿಯರ ಸುಜ್ಞಾನದ ಪಯಣವನ್ನು ವರ್ಣಿಸಿದರು.
ಆದ್ಯರ ಅರವತ್ತು ವಚನಕ್ಕೆ ದಣ್ಣಾಯಕರ ಇಪ್ಪತ್ತು ವಚನ
ದಣ್ಣಾಯಕರ ಇಪ್ಪತ್ತು ವಚನಕ್ಕೆ ಪ್ರಭುದೇವರ ಹತ್ತು ವಚನ
ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಐದು ವಚನ
ಅಜಗಣ್ಣನ ಐದು ವಚನಕ್ಕೆ ಕೂಡಲ ಚನ್ನಸಂಗಮದೇವಾ
ದೇವಿಯಕ್ಕಳದೊಂದೆ ವಚನ
ಎಂದು ಹೇಳುತ್ತಾ ಅಜಗಣ್ಣ ನವರ ಮಹಿಮೆಯನ್ನು ಸಾರಿದರು.
ಅಜಗಣ್ಣನವರಿಗೆ ಬಹಿರಂಗದ ಪೂಜೆ ಒಗ್ಗಲಿಲ್ಲ,ಅವರದು ಅಂತರಂಗದ ಸಾಧನೆ,ಧ್ಯಾನ, ಧಾರಣೆಯಾಗಿತ್ತು. ಇಷ್ಟಲಿಂಗವನ್ನು ಗೋಪ್ಯವಾಗಿ ಧರಿಸಬೇಕು ಎನ್ನುವುದು ಅವರ ಆಶಯ. ಅವರು ಗಂಟಲು ಮತ್ತು ದವಡೆಯ ನಡುವೆ ಇರುವ ಜಾಗ ಅಮಳೋಕ್ಯದಲ್ಲಿ ತಮ್ಮ ಲಿಂಗ ಧರಿಸಿದ್ದರು ಎನ್ನುವುದು ವಿಶೇಷ ಎನ್ನುವುದನ್ನು ಹಂಚಿಕೊಳ್ಳುತ್ತಾ

ಮಧ್ಯ ಮಧ್ಯ ವಚನಗಳನ್ನು ಉಲ್ಲೇಖಿಸುತ್ತಾ, ಮುಕ್ತಾಯಕ್ಕಮದುವೆಯಾಗಿ ಗಂಡನ ಮನೆಗೆ ಹೋಗುವಾಗಿನ ಅಣ್ಣ-ತಂಗಿಯರ ಅಗಲುವಿಕೆ ಮತ್ತು ಅಜಗಣ್ಣನವರು ಲಿಂಗೈಕ್ಯರಾದಾಗ ಮುಕ್ತಾಯಕ್ಕ
ಮತ್ತು ಅಲ್ಲಮಪ್ರಭುದೇವರ ನಡುವಿನ ಸಂಭಾಷಣೆಯನ್ನು ಅತ್ಯಂತ ಅರ್ಥವತ್ತಾದ ರೀತಿಯಲ್ಲಿ ಸಮರ್ಪಕವಾಗಿ ತಿಳಿಸಿಕೊಟ್ಟರು.
ಮುಕ್ತಾಯಕ್ಕನವರು ಮುಟ್ಟಿದ ಅನುಭಾವದ ನೆಲೆ ಮಹತ್ತರವಾದದ್ದು. ಅಜಗಣ್ಣ ತಂದೆ ಎಂಬ ವಚನಾoಕಿತಗಳಿಂದ ವಚನಗಳನ್ನು ರಚಿಸಿದ ಮುಕ್ತಾಯಕ್ಕನವರ 37 ವಚನಗಳು ಲಭ್ಯವಾಗಿವೆ. ಅಕ್ಕಮಹಾದೇವಿ ಭಕ್ತಿ ವೈರಾಗ್ಯ ಮಾರ್ಗದ ಪ್ರತಿಪಾದಕರಾದರೆ ಮುಕ್ತಾಯಕ್ಕ ವೈಚಾರಿಕತೆಯ ದಿಟ್ಟ ನಿಲುವಿನ ಜ್ಞಾನ ಮಾರ್ಗದ ಪ್ರತಿಪಾದಕರು ಎಂದು ಅರುಹಿದರು.
ಜಾನಪದ ತ್ರಿಪದಿಗಳಲ್ಲಿ ಅಕ್ಕಮಹಾದೇವಿ ಅಕ್ಕನಾಗಿ ಕಂಡರೆ ಮುಕ್ತಾಯಕ್ಕ ತಂಗಿಯಾಗಿ ಕಾಣಿಸುತ್ತಾಳೆ ಎಂದು ಹೇಳುವುದರ ಮೂಲಕ ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು.
ಅಧ್ಯಕ್ಷರಾದ ಡಾ.ಶಶಿಕಾಂತ ಪಟ್ಟಣ ಅವರು, ಅಜಗಣ್ಣನವರು ಶರಣ ಸಂಕುಲಕ್ಕೆ ಶ್ರೇಷ್ಠರಾಗಿ ಬಾಳಿ ಬದುಕಿದವರು. ಮೌನ ಯೋಗಿ, ಶಿವಯೋಗ ಸಾಧಕರು ಎಂದು ಹೇಳುತ್ತಾ, ಶರಣರ ಸ್ಮಾರಕಗಳ ಬಗೆಗೆ ತಮ್ಮ ಹಲವಾರು ಸಂಶೋಧನಾ ಕಾರ್ಯಗಳನ್ನು ಮತ್ತು ಇನ್ನೂ ನಡೆಯಬೇಕಾದ ಮಹತ್ತರ ಕಾರ್ಯಗಳನ್ನು ಹಂಚಿಕೊಂಡರು.
ಶರಣೆ ಪ್ರೇಮಕ್ಕ ಹೊರಟ್ಟಿ ಅವರ ವಚನ ಪ್ರಾರ್ಥನೆ, ಶರಣೆ ಬಸಮ್ಮ ಭರಮಶೆಟ್ಟಿ ಅವರ ಸ್ವಾಗತ, ಶರಣೆ ಗೀತಾ ಜಿ ಎಸ್ ಅವರ ಶರಣು ಸಮರ್ಪಣೆ, ಶರಣೆ ಸುಮಂಗಲ ಅಣ್ಣಿಗೇರಿ ಅವರ ವಚನ ಮಂಗಳ ಮತ್ತು ಡಾ.ವೀರಾಕ್ಷಿ ವಿವೇಕಿ ಅವರ
ನಿರೂಪಣೆಯೊಂದಿಗೆ ಗೂಗಲ್ ಮೀಟ್ ಕಾರ್ಯಕ್ರಮ ಅತ್ಯಂತ ವ್ಯವಸ್ಥಿತವಾಗಿ ನಡೆಯಿತು.

ಶಾರದಾ ಪಾಟೀಲ್ (ಮೇಟಿ) ದತ್ತಿ ಉಪನ್ಯಾಸ
ವಚನ ಅಧ್ಯಯನ ವೇದಿಕೆ ಬಸವಾದಿ ಶರಣರ ಚಿಂತನ ಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಪ್ರೊ. ಶಾರದಾ ಪಾಟೀಲ್ ಮೇಟಿ ಅವರ ಹೆಸರಿನಲ್ಲಿ ವಿಶೇಷ ದತ್ತಿ ಉಪನ್ಯಾಸ – 307
