ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಗ್ರಾಮದ ಐತಿಹಾಸಿಕ ಕಿಚಡಿ ಜಾತ್ರೆಯನ್ನು ಯಾವುದೇ ಅಡಚನೆಯಾಗದಂತೆ ನಿರ್ವಹಿಸಲು ಇಲ್ಲಿನ ಯುವ ಸೇವಕರ ಹಲವು ಸಮೀತಿಗಳನ್ನು ರಚಿಸಲು ಇಲ್ಲಿನ ವಿರಕ್ತಮಠದಲ್ಲಿ ನಡೆದ ಸೇವಕರ ಸಭೆಯಲ್ಲಿ ತೀರ್ಮಾಣಿಸಲಾಯಿತು.
ಶ್ರೀ ಪ್ರಭು ಮಹಾಸ್ವಾಮಿಗಳ ನೇತ್ರತ್ವದ ನಡೆದ ಸಭೆಯಲ್ಲಿ ಗ್ರಾಮದ ನೂರಾರು ಜನ ಯುವ ಸೇವಕರು ಪಾಲ್ಗೊಂಡು ಜಾತ್ರೆ ನಿರ್ವಹಣೆ ಕುರಿತು ಹಲವಾರು ಸಲಹೆ, ಸೂಚನೆ ನೀಡಿದರಲ್ಲದೇ ಹಲವು ಯುವಕರು ಭಕ್ತರನ್ನು ನಿಯಂತ್ರಿಸಲು ಹಾಗೂ ಸಮರ್ಪಕವಾಗಿ ಪ್ರಸಾದ ವಿತರಿಸಲು ಅನುಕೂಲವಾಗುವಂತೆ ಸಮೀತಿ ರಚಿಸಬೇಕೆಂದು ಮನವಿ ಮಾಡಿದರು.
ಎಲ್ಲರ ಸಲಹೆಗಳನ್ನು ಆಲಿಸಿದ ಶ್ರೀಗಳು ಹಾಗೂ ಜಾತ್ರಾ ಸಮೀತಿಯ ಪ್ರಮುಖರು ಸಂಚಾರ ನಿಯಂತ್ರಣಾಪ್ರಸಾದ ವಿತರಣಾ ಸಮೀತಿ, ಪ್ರಸಾದ ತಯಾರಿ ಸಮೀತಿ, ಅಥಿತಿ ನಿರ್ವಹಣಾ ಸಮೀತಿ, ಕಾರ್ಯಕ್ರಮ ನಿರ್ವಹಣಾ ಸಮೀತಿ, ಅಥಿತಿ ಪೂಜ್ಯರ ಉಪಚಾರಣಾ ಸಮೀತಿ, ದರ್ಶನ ನಿರ್ವಹಣಾ ಸಮೀತಿ ಸೇರಿದಂತೆ ಹಲವು ಸಮೀತಿಗಳನ್ನು ರಚಿಸಿ ಜವಾಬ್ದಾರಿ ಹಂಚಿಕೆ ಮಾಡುವ ಕುರಿತು ಹಾಗೂ ಜಿಎಲ್‌ಬಿಲುಪ ಕಾಲೂವೆಯ ವರೆಗೆ ಸಿಸಿಟಿವಿ ಕ್ಯಾಮರಾ ಹಾಗೂ ಧ್ವನಿವರ್ಧಕ ಅಳವಡಿಸಲು ತೀಮಾರ್ಣಿಸಲಾಯಿತು.
ಬರುವ ಸೆ.೦೪ ನಡೆಯಲಿರುವ ಈ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರು ಸೇರಿ ಪ್ರಸಾದ ಸವಿಯುವ ಮೂಲಕ ಸಿಸ್ತು, ಉತ್ತಮ ನಿರ್ವಹಣೆಗೆ ಉತ್ತರ ಕರ್ನಾಟಕದಲ್ಲಿಯೇ ಹೆಸರುವಾಸಿಯಾಗಿದ್ದು ಅದಕ್ಕೆ ಚ್ಯುತಿ ಬಾರದಂತೆ ಗ್ರಾಮದ ಪ್ರತಿಯೊಬ್ಬರು ಕಾರ್ಯ ನಿರ್ವಹಿಸಬೇಕಾಗಿದೆ ಅಲ್ಲದೇ ಎಲ್ಲ ಭಕ್ತರಿಗೆ ತೊಂದರೆಯಾಗದಂತೆ ಪ್ರಸಾದ ಪೋರೈಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು ಪ್ರತಿಯೊಬ್ಬರು ಪ್ರಭುವಿನ ಸೇವಾ ಮನೋಭಾವಣೆಯೊಂದಿಗೆ ಕಾರ್ಯ ನಿರ್ವಹಿಸಲು ಕಂಕಣ ಬದ್ದರಾಗಿ ನಿಲ್ಲಬೇಕೆಂದು ಶ್ರೀ ಪ್ರಭು ಮಹಾಸ್ವಾಮಿಗಳ ಸಲಹೆ ನೀಡಿದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಕಾಶ ಪಾಟೀಲ, ನಿಂಗಣ್ಣ ಪೂಜಾರಿ, ಅವ್ವನಪ್ಪ ಮುಗಳಖೋಡ, ಕಾಳು ಬಡಿಗೇರ, ಶಿವಪ್ಪ ದಿನ್ನಿಮನಿ, ಪ್ರಕಾಶ ಬಡಿಗೇರ, ಮಲ್ಲು ಬಿರಾದರಪಾಟೀಲ, ಉಪನ್ಯಾಸಕ ಮಹಾಲಿಂಗ ಕಾಜಗಾರ ಸೇರಿದಂತೆ ಹಲವಾರು ಜನ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು. ಉಪನ್ಯಾಸಕ ಪ್ರಕಾಶ ಬಡಿಗೇರ, ಹಣಮಂತ ಕುಂಬಾರ, ಶಿಕ್ಷಕ ಪ್ರಕಾಶ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.

