ಕಳೆದ ೯ ದಿನಗಳಿಂದ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹ | ಪ್ರತಿಭಟನಾ ಮೆರವಣಿಗೆ
ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಪಟ್ಟಣದ ರುಕುಂಪೂರ ರಸ್ತೆ ಅತಿಕ್ರಮಣ ತೆರವುಗೊಳಿಸುವಂತೆ ಆಗ್ರಹಿಸಿ ಕಳೆದ ೯ ದಿನಗಳಿಂದ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು ಇಲ್ಲಿವರೆಗೂ ಯಾವೊಬ್ಬ ಅಧಿಕಾರಿಗಳು ಹೋರಾಟಗಾರರ ಬೇಡಿಕೆ ನ್ಯಾಯಯುತವಾಗಿ ಸ್ಪಂದಿಸದಿರುವುದನ್ನು ಖಂಡಿಸಿ ಗುರುವಾರ ಆಲಮೇಲ ಪಟ್ಟಣ್ಣ ಬಂದ್ ಗೊಳಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಘೋಷಣೆಗಳನ್ನು ಕೂಗುತ್ತ ಮೆರವಣಿಗೆ ಮಾಡಿದರು.
ಹರಿಶ ಎಂಟಮಾನ ಮಾತನಾಡಿ, ಧರಣಿ ಸತ್ಯಾಗ್ರಹ ಆರಂಭಗೊಂಡು ೯ ದಿನಗಳಾದರೂ ಎಡಿಎಲ್‌ಆರ್ ಅಧಿಕಾರಿಗಳಿಂದ ಎರಡು-ಮೂರು ಬಾರಿ ಸರ್ವೇ ಮಾಡಿದರು ಸ್ಪಷ್ಟ ವರದಿ ನೀಡುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೆಳಿದರೆ ನಾಳೆ ಎಡಿಎಲ್‌ಆರ್ ವರದಿ ಬರುತ್ತೆ ಎಂದು ದಿನ ಮುಂದೂಡುತ್ತಿರುವುದು ಸರಿಯಲ್ಲ. ಅಧಿಕಾರಿಗಳು ಸಾರ್ವಜನಿಕರ ಬೇಡಿಕೆಗಳನ್ನು ಆಲಿಸಿ ಸಮಸ್ಯೆಗಳು ಬಗೆಹರಿಸುವುದನ್ನು ಬಿಟ್ಟು ಪ್ರಭಾವಿ ವ್ಯಕ್ತಿಗಳ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣ ಬಂದ ಯಶಸ್ವಿ: ಧರಣಿ ಸತ್ಯಾಗ್ರಹ ಹಮ್ಮಿಕೊಂಡು ಎಂಟು ದಿನ ಪೂರ್ಣಗೊಂಡು ಗುರುವಾರ ೯ನೇ ದಿನದಂದು ಅಧಿಕಾರಿಗಳ ವರ್ತನೆ ಬೆಸತ್ತ ಹೋರಾಟಗಾರರು ಆಲಮೇಲ ಪಟ್ಟಣ ಸಂಪೂರ್ಣ ಬಂದ್ ಕರೆಕೊಟ್ಟು ಪಟ್ಟಣ ಪಂಚಾಯಿತಿಗೆ ಬೀಗ ಹಾಕಿ ಬಂದ್ ಮಾಡಲು ಮುಂದಾಗಿದ್ದರು. ವಿಷಯ ತಿಳಿದ ಪಿಎಸ್‌ಐ ಅರವಿಂದ ಅಂಗಡಿ ಹೋರಾಟಗಾರರ ಜೊತೆ ಮಾತನಾಡಿ ಸರ್ಕಾರಿ ಕಚೇರಿಗೆ ಬೀಗ ಹಾಕಲು ಅವಕಾಶ ನೀಡುವದಿಲ್ಲ. ಶಾಂತಿಯುತವಾಗಿ ಮೆರವಣಿಗೆ ಮಾಡಲು ಮಾತ್ರ ಅವಕಾಶ ನೀಡಲಾಗುವದು ಎಂದು ಮನವೊಲಿಸಿದರು.
ಪಿಎಸ್‌ಐ ಆದೇಶದ ಮೇರೆಗೆ ಪಟ್ಟಣ ಪಂಚಾಯಿತಿಗೆ ಬೀಗ ಹಾಕುವದನ್ನು ಹಿಂಪಡೆದು ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ದ ಘೋಷಣೆಗಳನ್ನು ಕೂಗುತ್ತ ಸಾವಿರಾರು ಜನರೊಂದಿಗೆ ಪಟ್ಟಣದಲ್ಲಿ ಬ್ರತ್ ಮೇರವಣಿಗೆ ಮಾಡಿದರು. ಹೋರಾಟಗಾರರ ಕರೆಗೆ ಪಟ್ಟಣದ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಗೊಳಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಮೇರವಣಿಗೆಯಲ್ಲಿ ಪ.ಪಂ. ಎಲ್ಲ ಸದಸ್ಯರು, ವಿವಿದ ರಾಕೀಯ ಮುಖಂಡರು, ಕಾರ್ಯಕರ್ತರು, ವ್ಯಾಪರಸ್ತರು, ವಿವಿದ ಸಂಘಟನೆಯ ಮುಖಂಡು ಸಾರ್ವಜನಿಕರು ಪಾಲ್ಗೊಂಡಿದ್ದರು.
ಇಂಡಿ ಡಿವಾಯ್‌ಎಸ್‌ಪಿ ಎಚ್.ಎಸ್. ಜಗಧೀಶ, ಸಿಂದಗಿ ಸಿಪಿಐ ನಾನಗೌಡ ಪೋಲಿಸ್ ಪಾಟೀಲ ಆಗಮಿಸಿ ಪರಸ್ಥಿತಿ ಅವಲೋಕಿಸಿದರು.
ಬಿಗಿ ಪೊಲೀಸ್ ಬಂದೂಬಸ್ತ್
ಗುರುವಾರ ಹಮ್ಮಿಕೊಂಡಿದ್ದ ಆಲಮೇಲ ಬಂದ ಹಾಗೂ ಮೇರವಣಿಗೆ ಮನಗಂಡು ಪಿಎಸ್‌ಐ ಅರವಿಂದ ಅಂಗಡಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಮುಂಜಾಗ್ರಕವಾಗಿ ಬಂದೂಬಸ್ತಿಗಾಗಿ ಹೆಚ್ಚಿನ ಪೊಲೀಸ್ ವ್ಯವಸ್ಥೆ ನಿಯೋಜನೆ ಮಾಡಿದರು.

