Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಆರಂಭವಾಗಿ ಆರು ವರ್ಷವಾದರೂ ಸ್ವಂತ ಸೂರಿಲ್ಲದ ವಿದ್ಯಾಲಯ

ಅಧಿಕಾರಿಗಳ ನಡೆ ಖಂಡಿಸಿ ರೈತ ಸಂಘದಿಂದ ಪ್ರತಿಭಟನೆ

ಬಿಜೆಪಿ ಸಭೆಯಲ್ಲಿ ಹಿಂದುಳಿದ ವರ್ಗಗಳ ಕಾರ್ಯಕರ್ತರ ಅಸಮಾಧಾನ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಇತರರ ಸ್ಥಾನದಲ್ಲಿ ನಿಂತು ಯೋಚಿಸುವ ಗುಣವಿರಲಿ
ವಿಶೇಷ ಲೇಖನ

ಇತರರ ಸ್ಥಾನದಲ್ಲಿ ನಿಂತು ಯೋಚಿಸುವ ಗುಣವಿರಲಿ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ
ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು
ದ.ಕ ಜಿಲ್ಲೆ-೫೭೪೧೯೮
ದೂ:೯೭೪೨೮೮೪೧೬೦

ಉದಯರಶ್ಮಿ ದಿನಪತ್ರಿಕೆ

ಧನಂಜಯನು ತನ್ನ ಮೂರು ವರ್ಷ ವಯಸ್ಸಿನ ಮಗಳು ಮಿಥಾಲಿ ಮತ್ತು ಒಂದು ವರ್ಷ ವಯಸ್ಸಿನ ಮಗ ಧನ್ಯತ್‌ರನ್ನು ಕರೆದುಕೊಂಡು ಲೋಕಲ್ ರೈಲಿನಲ್ಲಿ ಬೆಂಗಳೂರಿನಿಂದ ಮಂಡ್ಯದ ಕಡೆಗೆ ಪ್ರಯಾಣಿಸುತ್ತಿದ್ದನು. ರೈಲು ಕಿಕ್ಕಿರಿದು ತುಂಬಿದ್ದು, ಒಂದಷ್ಟು ಮಂದಿ ತಮ್ಮ ಮೊಬೈಲ್‌ನಲ್ಲಿ ಹರಟುತ್ತಿದ್ದರೆ, ಇನ್ನೊಂದಷ್ಟು ಮಂದಿ ತಮ್ಮ ಸಹ ಪ್ರಯಾಣಿಕರ ಜೊತೆಗೆ ಕಷ್ಟ ಸುಖ ಮಾತನಾಡುತ್ತಿದ್ದರು. ಧನಂಜಯನ ಇಬ್ಬರು ಮಕ್ಕಳಾದ ಮಿಥಾಲಿ ಮತ್ತು ಧನ್ಯತ್ ಒಂದೇ ಸಮನೆ ಜೋರಾಗಿ ಅಳುತ್ತಾ ತನ್ನ ಮಡಿಲಲ್ಲಿ ಕುಳಿತಿದ್ದರು. ಆದರೆ ಇದ್ಯಾವುದರ ಪರಿವೆಯೂ ಇಲ್ಲದೇ ಧನಂಜಯನು ಸೀಟಿನ ಪಕ್ಕದ ಕಿಟಕಿಗೆ ತನ್ನ ತಲೆಯನ್ನು ಇಟ್ಟು ಏನನ್ನೋ ಗಾಢವಾಗಿ ಚಿಂತಿಸುತ್ತಾ ಕುಳಿತಿದ್ದನು. ತನ್ನ ಮಕ್ಕಳು ತೀರಾ ದೊಡ್ಡದಾಗಿ ಅಳುತ್ತಿದ್ದರೂ ಧನಂಜಯನಿಗೆ ಇದ್ಯಾವುದರ ಪರಿವೆಯೇ ಇರಲಿಲ್ಲ.


ಮಕ್ಕಳ ಜೋರಾದ ಕಿರುಚಾಟದ ಅಳುವಿನಿಂದಾಗಿ ಕಿರಿಕಿರಿ ಆಗಲಾರಂಭಿಸಿತು. ಅಕ್ಕಪಕ್ಕದಲ್ಲಿ ಕುಳಿತಿದ್ದವರು, ಈ ಮಕ್ಕಳು ಇಷ್ಟು ಜೋರಾಗಿ ಅಳುತ್ತಿರುವುದರಿಂದ ಇತರ ಪಯಾಣಿಕರಿಗೆ ಸಮಸ್ಯೆ ಆಗುತ್ತದೆ ಎನ್ನುವ ಪರಿವೆಯೇ ಇಲ್ಲದಂತೆ ಕಿಟಕಿಗೆ ತಲೆಯಿಟ್ಟು ಆತನು ಕುಳಿತಿದ್ದಾನಲ್ಲ ಎಂದು ಪರಸ್ಪರ ಮಾತನಾಡಿಕೊಳ್ಳಲು ಪ್ರಾರಂಭಿಸಿದರು. ಆಗ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಸೂಟು ಬೂಟು ಹಾಕಿದ್ದ ಮಹಾಶಯನೊಬ್ಬ ಧನಂಜಯನನ್ನು ತಟ್ಟಿ ಎಬ್ಬಿಸಿ, ಈ ನಿನ್ನ ಮಕ್ಕಳು ಎಷ್ಟು ಜೋರಾಗಿ ಅಳುತ್ತಾ ಗದ್ದಲ ಮಾಡುತ್ತಿದ್ದಾರೆ, ಪ್ರಯಾಣಿಕರಿಗೆ ಕಿರಿಕಿರಿ ಆಗುತ್ತದೆ ಎನ್ನುವ ಪ್ರಜ್ಞೆ ನಿನಗೆ ಬೇಡವೇ ಎಂದು ಸಿಟ್ಟಿನಿಂದ ಪ್ರಶ್ನಿಸುತ್ತಾನೆ.
ಆಗ ತಕ್ಷಣ ಗಾಢ ಯೋಚನೆಯಿಂದ ಹೊರಬಂದ ಧನಂಜಯನು, ದಯವಿಟ್ಟು ಕ್ಷಮಿಸಿರಿ, ಮಕ್ಕಳ ಅಳುವು ನನ್ನ ಅರಿವಿಗೆ ಬರಲಿಲ್ಲ, ನಾನು ಮಕ್ಕಳನ್ನು ಸಮಾಧಾನ ಮಾಡುತ್ತೇನೆ. ಈ ಮಕ್ಕಳ ತಾಯಿ ಅಂದರೆ ನನ್ನ ಮಡದಿ ಈಗಷ್ಟೇ ಕ್ಯಾನ್ಸರ್ ರೋಗದಿಂದ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ತೀರಿಕೊಂಡಳು. ಸಣ್ಣ ಮಕ್ಕಳಿಗೆ ತಮ್ಮ ತಾಯಿಯ ಅಗಲಿಕೆಯ ನೋವನ್ನು ಹೇಗೆ ವ್ಯಕ್ತಪಡಿಸಬೇಕು ಎಂದು ತಿಳಿಯುತ್ತಿಲ್ಲ, ಆದ್ದರಿಂದ ಅವರು ತೀರಾ ಗದ್ದಲ ಮಾಡುತ್ತಿದ್ದಾರೆ. ದಯವಿಟ್ಟು ಮಕ್ಕಳನ್ನು ಕ್ಷಮಿಸಿರಿ, ಮಕ್ಕಳು ಅಳದಂತೆ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದ. ಆಗ ಮಕ್ಕಳ ಅಳುವಿನಿಂದ ಕಿರಿಕಿರಿ ಎಂದು ಹೇಳುತ್ತಿದ್ದ ಪ್ರಯಾಣಿಕರ ಕಣ್ಣಂಚಲ್ಲಿ ನೀರು ತುಂಬಿತ್ತು. ಕಿರಿಕಿರಿಯ ಭಾವನೆಯು ಹೊರಟು ಹೋಗಿ ಮಕ್ಕಳ ಮತ್ತು ಧನಂಜಯನ ಮೇಲೆ ಅನುಕಂಪದ ಭಾವವು ಮೂಡಿತ್ತು.
ಪ್ರತಿಯೊಂದು ಸನ್ನಿವೇಶವೂ ನಾವು ನೋಡುವ ದೃಷ್ಟಿಕೋನವನ್ನು ಅವಲಂಬಿಸಿಕೊಂಡು ಇರುತ್ತದೆ. ಧನಂಜಯನ ಬದುಕಲ್ಲಿ ನಡೆದಿರುವ ಘಟನೆಯನ್ನು ಪ್ರಯಾಣಿಕರು ಅರಿಯದೇ ಇದ್ದಾಗ ಮಕ್ಕಳ ಅಳುವು ಅವರಿಗೆಲ್ಲಾ ಕಿರಿಕಿರಿ ಮತ್ತು ಸಮಸ್ಯೆಯಾಗಿ ಕಂಡಿತು. ಯಾವಾಗ ಮಕ್ಕಳ ತಾಯಿಯ ಸಾವಿನ ವಿಚಾರ ಅವರಿಗೆ ತಿಳಿಯಿತೋ ಆಗ ಮಕ್ಕಳ ಮೇಲೆ ಎಲ್ಲರಿಗೂ ಅನುಕಂಪ ಮೂಡಿತು. ಅದೇ ರೀತಿ ಯಾವುದೇ ಒಂದು ಸನ್ನಿವೇಶವನ್ನು ನೋಡಿದ ತಕ್ಷಣ ಅದಕ್ಕೆ ಪ್ರತಿಕ್ರಿಯಿಸುವ ಬದಲು ಸನ್ನಿವೇಶವನ್ನು ಅರ್ಥೆೈಸಿಕೊಳ್ಳುವುದು ಉತ್ತಮ. ನೋಡುವ ದೃಷ್ಟಿಕೋನವು ಬದಲಾದರೆ ದೃಶ್ಯವೂ ಬದಲಾಗುತ್ತದೆ ಎಂಬಂತೆ ನಮ್ಮ ಮೂಗಿನ ನೇರಕ್ಕೆ ಎಲ್ಲವನ್ನೂ ನೋಡುವ ಬದಲು ಇತರರ ಸ್ಥಾನದಲ್ಲಿ ನಿಂತು ನೋಡುವ ಗುಣ ಬೆಳೆಸಿಕೊಳ್ಳಬೇಕು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಆರಂಭವಾಗಿ ಆರು ವರ್ಷವಾದರೂ ಸ್ವಂತ ಸೂರಿಲ್ಲದ ವಿದ್ಯಾಲಯ

ಅಧಿಕಾರಿಗಳ ನಡೆ ಖಂಡಿಸಿ ರೈತ ಸಂಘದಿಂದ ಪ್ರತಿಭಟನೆ

ಬಿಜೆಪಿ ಸಭೆಯಲ್ಲಿ ಹಿಂದುಳಿದ ವರ್ಗಗಳ ಕಾರ್ಯಕರ್ತರ ಅಸಮಾಧಾನ

ಶಿಸ್ತು, ಭಾವೈಕ್ಯ ಮೂಡಿಸುವ ಭಾರತ ಸೇವಾದಳ :ನಡುಗಡ್ಡಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಆರಂಭವಾಗಿ ಆರು ವರ್ಷವಾದರೂ ಸ್ವಂತ ಸೂರಿಲ್ಲದ ವಿದ್ಯಾಲಯ
    In (ರಾಜ್ಯ ) ಜಿಲ್ಲೆ
  • ಅಧಿಕಾರಿಗಳ ನಡೆ ಖಂಡಿಸಿ ರೈತ ಸಂಘದಿಂದ ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
  • ಬಿಜೆಪಿ ಸಭೆಯಲ್ಲಿ ಹಿಂದುಳಿದ ವರ್ಗಗಳ ಕಾರ್ಯಕರ್ತರ ಅಸಮಾಧಾನ
    In (ರಾಜ್ಯ ) ಜಿಲ್ಲೆ
  • ಇತರರ ಸ್ಥಾನದಲ್ಲಿ ನಿಂತು ಯೋಚಿಸುವ ಗುಣವಿರಲಿ
    In ವಿಶೇಷ ಲೇಖನ
  • ಶಿಸ್ತು, ಭಾವೈಕ್ಯ ಮೂಡಿಸುವ ಭಾರತ ಸೇವಾದಳ :ನಡುಗಡ್ಡಿ
    In (ರಾಜ್ಯ ) ಜಿಲ್ಲೆ
  • ಅರ್ಹ‌ ಮತದಾರರು ಮತದಾರ ಪಟ್ಟಿಯಿಂದ ಹೊರಗುಳಿಯಬಾರದು
    In (ರಾಜ್ಯ ) ಜಿಲ್ಲೆ
  • ವಿಜಯಪುರದಲ್ಲಿ ಕೋಚ್ ಡಿಪೋ ಸ್ಥಾಪಿಸಲು ಆಗ್ರಹ
    In (ರಾಜ್ಯ ) ಜಿಲ್ಲೆ
  • ಕಾನಿಪ ಸಂಘದ ವಿವಿಧ ಸ್ಥಾನಗಳಿಗೆ ಹಿರಿಯ ಪತ್ರಕರ್ತರ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಮತಗಟ್ಟೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಹಕರಿಸಿ :ಬೋಸಗಿ
    In (ರಾಜ್ಯ ) ಜಿಲ್ಲೆ
  • ನಾಳೆ ಸಚಿವ ಎಂ.ಬಿ.ಪಾಟೀಲ ರಿಂದ ನೂತನ ಶಾಲಾ ಕಟ್ಟಡ ಉದ್ಘಾಟನೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.