ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ಕಿಲ್ಲಾ ಗಲ್ಲಿಯಲ್ಲಿರುವ ಹೊಸಮಠದಲ್ಲಿ ಬುಧವಾರ ಸಂಜೆ ಬಣಜಿಗ ಸಮಾಜದ ಪೂರ್ವಭಾವಿ ಸಭೆ ಜರುಗಿತು.
ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ದಿ ಸಂಘದ ಮುದ್ದೇಬಿಹಾಳ ತಾಲೂಕು ಘಟಕದ ನೂತನ ಅಧ್ಯಕ್ಷ, ವರ್ತಕ ಅಶೋಕ ಚಟ್ಟೇರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಹಲವು ಸಮಾಜ ಚಿಂತಕರು ಸಮಾಜ ಸಂಘಟನೆ ಕುರಿತು ತಮ್ಮ ಅಭಿಪ್ರಾಯ ಮಂಡಿಸಿ, ತಾಲೂಕಿನಾದ್ಯಂತ ಬಣಜಿಗ ಸಮಾಜವನ್ನು ಬಲಿಷ್ಠವಾಗಿ ಸಂಘಟಿಸಲು ಹಲವು ಚಟುವಟಿಕೆ, ಕಾರ್ಯಕ್ರಮ ಹಮ್ಮಿಕೊಂಡು ಸಮಾಜವನ್ನು ಒಗ್ಗೂಡಿಸಲು, ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲು, ಸಮಾಜದ ನಿವೃತ್ತ ನೌಕರರನ್ನು ಸನ್ಮಾನಿಸಲು ಸಲಹೆ ಸೂಚನೆ ನೀಡಿದರು.
ಈ ವೇಳೆ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಮತ್ತು ನೇಮಕಗೊಂಡ ಪದಾಧಿಕಾರಿಗಳ ಪರಿಚಯ ಮಾಡಿಕೊಟ್ಟು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಶೀಘ್ರವಾಗಿ ಹಮ್ಮಿಕೊಳ್ಳುವ ಕುರಿತು ಚರ್ಚಿಸಲಾಯಿತು. ರುದ್ರೇಶ ಕಿತ್ತೂರ, ನಾಲತವಾಡದ ಬಿ.ಎ.ಚಿನಿವಾಲರ ಅವರು ಸಮಾಜ ಸಂಘಟನೆ ಕುರಿತು ಮಾತನಾಡಿದರು. ಸಂಘಟನೆಯ ಜವಾಬ್ಧಾರಿಯುತ ಸ್ಥಾನದಲ್ಲಿರುವವರು ಯಾವ್ಯಾವ ಕರ್ತವ್ಯಗಳನ್ನು ನಿಭಾಯಿಸಬೇಕು, ಸಂಘಟನೆಯನ್ನು ಮುನ್ನಡೆಸುವಲ್ಲಿ ಅವರ ಪಾತ್ರ ಏನು ಇತ್ಯಾದಿ ಮಹತ್ವದ ವಿಷಯಗಳ ಕುರಿತು ಚರ್ಚಿಸಿ ಪದಗ್ರಹಣ ಸಮಾರಂಭಕ್ಕೆ ಸಂಭವನೀಯ ಅತಿಥಿ, ಗಣ್ಯರ ಪಟ್ಟಿ ಸಿದ್ಧಪಡಿಸಲಾಯಿತು.
ಪ್ರಮುಖರಾದ ರಾಜು ಕಲಬುರ್ಗಿ, ಜಗದೀಶ ಲಕ್ಷಟ್ಟಿ, ಸಿದ್ದು ಹೆಬ್ಬಾಳ, ಮುತ್ತಣ್ಣ ಕಡಿ, ಸಂಗಣ್ಣ ನಾಶಿ, ಸುನೀಲ ನಾಗಮೋತಿ, ನಾಗಭೂಷಣ ನಾವದಗಿ, ಸಿದ್ದಲಿಂಗ ಚಿನಿವಾರ, ಅಶೋಕ ಚಿನಿವಾರ, ಪುರಸಭೆ ಮಾಜಿ ಸದಸ್ಯರಾದ ರಾಜು ಬಳ್ಳೊಳ್ಳಿ, ಶಂಕರ ಕಡಿ, ಸಂತೋಷ ನಾಯನೇಗಲಿ, ಸುಚಿತ್ ಚಳಗೇರಿ, ಜಗದೀಶ ಕಂಠಿ, ರಾಜು ಹುನಗುಂದ, ಶಂಭು ಅಕ್ಕಿ, ಶಿವು ಹುರಕಡ್ಲಿ, ಕವಿತಾ ದಡ್ಡಿ, ರೇಖಾ ಗಡೇದ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಮಹಾದೇವಿ ಕಿಣಗಿ (ವಾಲಿ), ರತ್ನಕ್ಕ ದಡ್ಡಿ, ಸಂಗಮ್ಮ ಜೋಳದ, ಬಸಮ್ಮ ಕೋಳೂರ, ಸುನೀತಾ ಕತ್ತಿ, ಶೋಭಾ ಚಳಗೇರಿ, ನಂದಿನಿ ಕಂಠಿ, ಮಂಜುಳಾ ಕಂಠಿ, ಸಾಹಿಲ್ ನಾಗಠಾಣ ಸೇರಿ ಹಲವರು ಪಾಲ್ಗೊಂಡು ಸಲಹೆ ಸೂಚನೆ ನೀಡಿದರು.

