ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಗಾಲಿಸಾಬ ಗುಡಿಗೆ ಹೊಗಲು ಇರುವ ರಸ್ತೆಯನ್ನು ಒತ್ತುವರಿ ಮತ್ತು ರುಕುಂಪೂರ ರಸ್ತೆ ತೆರವು ಹಾಗೂ ವಿವಿಧ ಸಮುದಾಯಗಳ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಮ್ಮಿಕೊಂಡಿದ್ದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಹೋರಾಟಕ್ಕೆ ಬುಧವಾರ ಪಟ್ಟಣದ ಎಲ್ಲಾ ವೈದ್ಯರು ಬೆಂಬಲಿಸಿ ಧರಣಿಯಲ್ಲಿ ಪಾಲ್ಗೊಂಡರು.
ಈ ವೇಳೆ ವೈದ್ಯ ಡಾ.ರಾಜೇಶ ಪಾಟೀಲ ಮಾತನಾಡಿ, ಆಲಮೇಲದ ಎಲ್ಲಾ ನಾಗರಿಕರು ಸೇರಿ ಆರಾದ್ಯ ದೈವವಾದ ಗಾಲಿಬಸಾಬ ಗುಡಿಗೆ ಹೊಗಲು ರಸ್ತೆಗಾಗಿ ಹೋರಾಟ ಮಾಡುತ್ತಿರುವುದು ದುರಾದೃಷ್ಟಕರ. ಈ ಹೋರಾಟಕ್ಕೆ ಜಯ ಸಿಗುವವರೆಗು ನಾವು ಈ ಹೋರಾಟದಲ್ಲಿ ಪಾಲ್ಗೊಳ್ಳುತ್ತೇವೆ ಎಂದು ಹೇಳಿದರು.
ಈ ಹೋರಾಟದಲ್ಲಿ ವೈದ್ಯರಾದ ಡಾ||ಸಂದಿಪ ಪಾಟೀಲ ಡಾ|| ಸಂಜೆಯ ಪಾಟೀಲ ಡಾ|| ಚನ್ನಬಸು ನಿಂಬಾಳ ಡಾ|| ಕರಬಸು ಲೋಣಿ ಡಾ|| ಸೆಬ್ಬಿರ ಹಾದಿಮನಿ ಪಾಲಗೊಂಡರು
ಹೋರಾಟ ಮಾಡುತ್ತಿರುವ ಸ್ಥಳಕ್ಕೆ ಇಂಡಿಯ ಉಪವಿಭಾಗ ಆಯುಕ್ತರಾದ ಅನುರಾಧ ವಸ್ತ್ರದ ಬೇಟಿ ನೀಡಿ, ಸ್ಥಳ ಪರಿಶೀಲನೆ ಮಾಡ ಮಾನ್ಯ ಜಿಲ್ಲಾಧೀಕಾರಿಗಳೊಂದಿಗೆ ಚರ್ಚೆಮಾಡಿ ಆದಷ್ಟು ಬೇಗನೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ನಾಳೆಯಿಂದ ಉಗ್ರ ಹೋರಾಟ: ೮ದಿನಗಳ ವರೆಗೆ ಹೊರಾಟ ಮಾಡುತ್ತಿರುವದರಿಂದ ಯಾವ ಅಧಿಕಾರಿಗಳಿಂದ ಯಾವುದೇ ಪ್ರಕ್ರೀಯೆ ಬರದೆ ಇರುವ ಪ್ರಯುಕ್ತ ಗುರುವಾರದಿಂದ ಆಲಮೇಲ ಪಟ್ಟಣ ಸಂಪೂರ್ಣ ಬಂದಮಾಡಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಮುಖಂಡರಾದ ರಮೇಶ ಬಂಟನೂರ ಶ್ರೀಶೈಲ ಮಠಪತಿ ಹರೀಶ ಯಂಟಮಾನ ಸಂಜು ಯಂಟಮಾನ, ಪ್ರಭು ವಾಲಿಕಾರ, ಬಸವರಾಜ ತೆಲ್ಲೂರ, ಸೋಮನಾಥ ಮೇಲಿನಮನಿ, ಬಾಬು ಮೇಟಿ ತಿಳಿಸಿದ್ದಾರೆ.

