Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ವರ್ಷದ ೧೨ ತಿಂಗಳಲ್ಲಿ ಶ್ರಾವಣ ಮಾಸದ ಒಂದು ತಿಂಗಳು ಭಕ್ತಿ ಭಾವೈಕ್ಯತೆಯಿಂದ ಕೂಡಿರುತ್ತದೆ. ಭಗವಂತನಲ್ಲಿ ಪ್ರಾರ್ಥಿಸಲು ಒಳ್ಳೆಯ ಸಂದರ್ಭ ಇದಾಗಿದೆ ಎಂದು ಚಿಮ್ಮಡ ವಿರಕ್ತಮಠದ ಪ್ರಭು ಮಹಾಸ್ವಾಮಿಗಳು ಹೇಳಿದರು.ಗ್ರಾಮದ ಪ್ರಭುಲಿಂಗೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಎರಡನೇ ಸೋಮವಾರ ಹಮ್ಮಿಕೊಂಡ ಭಕ್ತಗಣ ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಾನವ ಕುಲಕ್ಕೆ ಬರುವ ಕಂಟಕಗಳು ತೊಲಗಿ ಎಲ್ಲೆಡೆ ಸುಖಶಾಂತಿ ನೆಲೆಸಲಿ ಎಂದು ಪ್ರಭುಲಿಂಗೇಶ್ವರನಲ್ಲಿ ಎಲ್ಲರೂ ಭಕ್ತಿಯಿಂದ ಪ್ರಾರ್ಥಿಸೋಣ. ಶ್ರಾವಣ ಮಾಸದ ನಿಮಿತ್ಯ ಎಲ್ಲ ದೇವಸ್ಥಾನಗಳಲ್ಲಿ ಪೂಜಾದಿ ಕಾರ್ಯಕ್ರಮಗಳು ನಡೆಯುತ್ತವೆ. ಒಳ್ಳೆಯ ಮನಸ್ಸು, ಒಳ್ಳೆಯ ಭಾವನೆಯನ್ನು ಇಟ್ಟುಕೊಂಡು ಮುನ್ನಡೆಯೋಣ. ಅಲ್ಲಮಪ್ರಭು ದೇವರನ್ನು ಸ್ಮರಿಸಿಕೊಳ್ಳುವ ಈ ಪಾದಯಾತ್ರೆಯಲ್ಲಿ ಪ್ರತಿ ಸೋಮವಾರ ಎಲ್ಲ ಭಕ್ತಾದಿಗಳು ನಿರಂತರವಾಗಿ ಪಾಲ್ಗೊಳ್ಳುವ ಮೂಲಕ ಭಕ್ತಿಭಾವ ಪಸರಿಸೋಣ ಎಂದರು.ಪ್ರತೀ ವರ್ಷದಂತೆ ಈ ಬಾರಿಯೂ ಬಂಡಿಗಣಿ ಬಸವಗೋಪಾಲ ಮಠದ ಶ್ರೀ ಅನ್ನದಾನೇಶ್ವರ ಶ್ರೀಗಳಿಂದ ದೇವಸ್ಥಾನ ಆವರಣದಲ್ಲಿ ಭಕ್ತರಿಗೆ ಪ್ರಸಾದ ವಿತರಣಾ ಕಾರ್ಯಕ್ರಮ ನಡೆಯಿತು.ಗ್ರಾ. ಪಂ. ಮಾಜಿ ಉಪಾಧ್ಯಕ್ಷ ಪ್ರಕಾಶ ಪಾಟೀಲ, ಅವ್ವನಪ್ಪಾ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪಟ್ಟಣದ ನೂತನ ಸುಶೀಲವರ್ದಿನಿ ಮಹಿಳಾ ಕೋ- ಆಪರೇಟಿವ್ ಸೊಸೈಟಿ ಉದ್ಘಾಟನಾ ಕಾರ್ಯಕ್ರಮಕ್ಕೆ ಖ್ಯಾತ ಚಿತ್ರನಟಿ ಶೃತಿ ಆಗಮಿಸಲಿದ್ದಾರೆ ಎಂದು ಸೊಸೈಟಿಯ ಅಧ್ಯಕ್ಷ ಲಕ್ಷ್ಮೀಬಾಯಿ(ಸವಿತಾ) ಚಂದ್ರಶೇಖರ್ ಬೆಳ್ಳುಬ್ಬಿ ಹೇಳಿದರು.ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ 6 ರಂದು ಬೆಳಗ್ಗೆ 11.00 ಗಂಟೆಗೆ ಪಟ್ಟಣದ ದ್ಯಾಮವ್ವ ದೇವಿ ದೇವಸ್ಥಾನದ ಸಂಕೀರ್ಣದಲ್ಲಿ ಸುಶೀಲವರ್ದಿನಿ ಮಹಿಳಾ ಕೋ ಆಪರೇಟಿವ್ ಸೊಸೈಟಿ ಉದ್ಘಾಟನೆಯನ್ನು ಚಿತ್ರನಟಿ ಶೃತಿಯವರು ನೆರವೇರಿಸಲಿದ್ದಾರೆ. ಸಾನಿಧ್ಯವನ್ನು ದಿಗಂಬರೇಶ್ವರ ಮಠದ ಯೋಗಿ ಕಲ್ಲಿನಾಥ ದೇವರು ಹಾಗೂ ಶೀಲವಂತ ಮಠದ ಕೈಲಾಸನಾಥ ಮಹಾಸ್ವಾಮಿಗಳು ವಹಿಸುವರು, ಅಧ್ಯಕ್ಷತೆಯನ್ನು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ವಿಧಾನಪರಿಷತ್ ಸದಸ್ಯ ಎಚ್.ಆರ್. ನಿರಾಣಿ ಜ್ಯೋತಿ ಬೆಳಗಿಸುವವರು, ಮಾಜಿ ಸಚಿವ ಎಸ್.ಆರ್. ಪಾಟೀಲ್ ಶೇಅರ್ ಪತ್ರಗಳನ್ನು ವಿತರಿಸುವರು.ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ರಾಜಶೇಖರ್ ಶೀಲವಂತ, ವಿಜಯಪುರ ಬಿಜೆಪಿ ಜಿಲ್ಲಾ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಬಾಗಲಕೋಟ ಬಿಜೆಪಿ ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ್, ವಯನಾಡು ಓವರಸಿಸ್ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ವಿಜಯಲಕ್ಷ್ಮಿ ವಿಜಯ್…
ಉದಯರಶ್ಮಿ ದಿನಪತ್ರಿಕೆ ಇಂಡಿ: ಮನುಷ್ಯ ಜನ್ಮ ಹುಟ್ಟಿ ಬಂದ ಮೇಲೆ ಪರೋಪಕಾರಿಯಾಗಿ, ತನ್ನ ಸುತ್ತಲಿನ ಜನರೊಂದಿಗೆ ಸಾಮರಸ್ಯದಿಂದ ಬದುಕಿ ತನ್ನ ಕರ್ತವ್ಯ ಪಾಲನೆ ಮಾಡಿದ್ದೆ ಆದರೆ ಅದುವೇ ಧರ್ಮ ಪರಿಪಾಲನೆ ಆಗುತ್ತದೆ ಎಂದು ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಯವರು ಹೇಳಿದರು.ಪಟ್ಟಣದ ವೀರಭಾರತಿ ವಿದ್ಯಾ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ ಹಾಗೂ ಧರ್ಮಸಭೆಯನ್ನು ಉದ್ದೇಶಿಸಿ ಭಟ್ಟಾರಕ ಸ್ವಾಮೀಜಿಯವರು ಮಾತನಾಡಿದರು.ಸಂಸ್ಥೆಯ ಅಧ್ಯಕ್ಷ ಅಭಿನಂದನ ಕಿರಣಗಿ ಮಾತನಾಡಿ 1990 ರಲ್ಲಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರಿಂದ ಸ್ಥಾಪಿತವಾದ ವೀರ ಭಾರತಿ ಸಂಸ್ಥೆ ಇಂದು ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹವನ್ನು ನಡೆಸುತ್ತಿದೆ. ಇದಕ್ಕೆ ಸಮಾಜದ ಹಿರಿಯರ ಆಶೀರ್ವಾದ ಹಾಗೂ ತಮ್ಮೆಲ್ಲರ ಸಹಕಾರದಿಂದ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ ಎಂದರು.ಪ್ರಾರಂಭದಲ್ಲಿ ಜೈನ ಸಮಾಜದ ಹಿರಿಯರಾದ ಶನತ ಕುಮಾರ ಹಳ್ಳಿ, ಅಜಿತ ಧನಶೆಟ್ಟಿ, ಅಜಿತ ದೋಶಿ, ಕುಲಭೂಷಣ ಕೋಟಿ, ಶ್ರೀಮತಿ ಶೀಲಾ ದುರ್ಗಿ ಮಾತನಾಡಿದರು.ಪಟ್ಟಣದಲ್ಲಿರುವ ದೊಡ್ಡ ಬಸ್ತಿ ಕಟ್ಟಡಕ್ಕೆ ವೀರಭಾರತಿ ವಿದ್ಯಾ ಕೇಂದ್ರದ ಅಧ್ಯಕ್ಷ ಅಭಿನಂದನ ಕಿರಣಗಿ ಒಂದು ಲಕ್ಷ ಹನ್ನೊಂದು ಸಾವಿರ ರೂ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪರಿಶ್ರಮ ಜೀವಿಗಳಾದ ಬಂಜಾರಾ ಸಮಾಜ ಬಾಂಧವರದಲ್ಲಿ ದೈವ ಭಕ್ತಿಗೆ ಕೊರತೆ ಇಲ್ಲ. ಆದರೆ ಉಕ್ಕಲಿ ತಾಂಡಾದ ಬಂಜಾರಾ ಜನರು ದೇವರ ಮೇಲಿನ ಭಕ್ತಿಯ ಜೊತೆಗೆ ಯುಕ್ತಿಗೂ ಆದ್ಯತೆ ನೀಡಬೇಕಿದೆ. ದೇವಸ್ಥಾನ ಕಟ್ಟಲು ತೋರುವ ಆಸಕ್ತಿ ಜೊತೆಗೆ ನಿಮ್ಮ ಮಕ್ಕಳ ಉನ್ನತ ಭವಿಷ್ಯಕ್ಕಾಗಿ ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡಬೇಕೆಂದು ಜವಳಿ, ಕೃಷಿ ಮಾರುಕಟ್ಟೆ, ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ಅವರು ಕಿವಿಮಾತು ಹೇಳಿದರು.ತಾಲೂಕಿನ ಉಕ್ಕಲಿ ತಾಂಡಾದಲ್ಲಿ ಸೋಮವಾರ ಸಂತ ಸೇವಾಲಾಲ ಮೂರ್ತಿ ಅನಾವರಣ ಹಾಗೂ ಅಂಗನವಾಡಿ ನೂತನ ಕಟ್ಟಡ ಲೋಕಾರ್ಪಣೆ ಮಾಡಿ ನಂತರ ಜರುಗಿದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣಕ್ಕೆ ಆದ್ಯತೆ ನೀಡಿದರೆ ನಿಮ್ಮ ಮಕ್ಕಳು ಸರ್ಕಾರದ ಉನ್ನತ ಹುದ್ದೆಗಳನ್ನು ಅಲಂಕರಿಸಿ, ಸಮಾಜದಲ್ಲಿ ವಿವಿಧ ಸೇವೆ ಮಾಡಲು ಸಾಧ್ಯವಾಗಲಿದೆ ಎಂದರು.ಬಂಜಾರಾ ಸಮಾಜದವರು ದುರ್ಗಾದೇವಿ ಹಾಗೂ ಸಂತ ಸೇವಾಲಾಲ ಅವರ ದೇವಸ್ಥಾನ ಕಟ್ಟುವಲ್ಲಿ ವಿಶೇಷ ಆದ್ಯತೆ ನೀಡುತ್ತೀರಿ. ಈ ಎರಡು ದೇವಸ್ಥಾನಗಳ ಹೊರತಾಗಿ ಅನ್ಯ…
ಸಿಎಂ ಜತೆ ಮಾತುಕತೆ ವಿಫಲ | ಲಕ್ಷಾಂತರ ಪ್ರಯಾಣಿಕರಿಗೆ ಅನಾನುಕೂಲತೆ ಸಾಧ್ಯತೆ ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ನಡೆದ ಮಾತುಕತೆ ವಿಫಲವಾದ ಕಾರಣ, ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ಮಂಗಳವಾರದಿಂದ ಅನಿರ್ದಿಷ್ಟ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.ಸಾರಿಗೆ ನೌಕರರ ಮುಷ್ಕರವು ಕರ್ನಾಟಕ ಮತ್ತು ಹೊರಗಿನ ಬಸ್‌ಗಳ ಕಾರ್ಯಾಚರಣೆಯ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ) ಮತ್ತು ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ)ಯನ್ನು ತಮ್ಮ ಪ್ರಯಾಣಕ್ಕಾಗಿ ಅವಲಂಬಿಸಿರುವ ಲಕ್ಷಾಂತರ ಪ್ರಯಾಣಿಕರಿಗೆ ಅನಾನುಕೂಲತೆ ಉಂಟು ಮಾಡುವ ಸಾಧ್ಯತೆಯಿದೆ.ಏತನ್ಮಧ್ಯೆ, ಕರ್ನಾಟಕ ಹೈಕೋರ್ಟ್ ಸೋಮವಾರ, ನೌಕರರ ಮುಷ್ಕರವನ್ನು ಒಂದು ದಿನ ಮುಂದೂಡುವಂತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ(ಜೆಎಸಿ)ಗೆ ಸೂಚನೆ ನೀಡಿದೆ.ಹೈಕೋರ್ಟ್ ನಿರ್ದೇಶನಕ್ಕೆ ಪ್ರತಿಕ್ರಿಯಿಸಿದ ಜೆಎಸಿ ಅಧ್ಯಕ್ಷ ಅನಂತ ಸುಬ್ಬರಾವ್ ಅವರು, ಹೈಕೋರ್ಟ್ ಆದೇಶದ ಪ್ರತಿ ಇನ್ನೂ ನಮ್ಮ ಕೈಗೆ ತಲುಪಿಲ್ಲ. ಆದೇಶ ಪ್ರತಿ ಕೈತಲುಪಿದ ಬಳಿಕ ಬಂದ್ ಬಗ್ಗೆ ನಿರ್ಧಾರ ಮಾಡುತ್ತೇವೆ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು, ಭೀಮಾoತರಂಗ ಸಾಹಿತ್ಯಿಕ, ಸಾಂಸ್ಕೃತಿಕ ಜಗಲಿ ಕೇಂದ್ರ, ಇಂಡಿ, ಕರ್ನಾಟಕ ವಿದ್ಯಾವರ್ಧಕ ಸಂಸ್ಥೆ ಇಂಡಿ ಅವರ ಸಹಯೋಗದಲ್ಲಿ ಪಟ್ಟಣದ ಕರ್ನಾಟಕ ಬಿಎಡ್ ಕಾಲೇಜಿನಲ್ಲಿ ದಿ:07-08-2025 ರಂದು ಬೆಳಿಗ್ಗೆ 10 ಗಂಟೆಗೆ ಗೀಗಿ ಸಂಭ್ರಮ, ಸನ್ಮಾನ ಸಮಾರಂಭ, ಹರದೇಶಿ-ನಾಗೇಶಿ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಇಂಡಿ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಉದ್ಘಾಟಿಸುವರು. ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ ಅಧ್ಯಕ್ಷತೆ ವಹಿಸುವರು.ಮುಖ್ಯ ಅತಿಥಿಗಳಾಗಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೊದ್ದಾರ, ಕರ್ನಾಟಕ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಬಸವರಾಜ ಕುಮಸಗಿ ಆಗಮಿಸುವರು. ಬಾಗಲಕೋಟದ ಗೊಂದಲಿ ಪದ ಕಲಾವಿದರು, ಪದ್ಮಶ್ರೀ ಪ್ರಶಸ್ತಿ ವಿಜೇತ ಡಾ ವೆಂಕಪ್ಪ ಅಂಬಾಜಿ ಸುಗತೇಕರ ಸನ್ಮಾನಿತರಾಗಿ ಆಗಮಿಸುವರು.ಗುಳೇದಗುಡ್ಡದ ವಿಶ್ರಾಂತ ಪ್ರಾಚಾರ್ಯ ಸಿ ಎಂ ಜೋಶಿ ಅಭಿನಂದನಾ ನುಡಿಗಳನ್ನಾಡುವರು.ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ರಾಘವೇಂದ್ರ ಕುಲಕರ್ಣಿ, ಬಿಎಡ್ ಕಾಲೇಜಿನ ಪ್ರಾಚಾರ್ಯೆ ಸುಧಾ ಸುಣಗಾರ ಉಪಸ್ಥಿತರಿರುವರು.ಮಧ್ಯಾನ್ಹ 12 ಗಂಟೆಗೆ ಹರದೇಶಿ-ನಾಗೇಶಿ ಸ್ವರೂಪ ಕುರಿತು ಜರುಗಲಿರುವ…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ವೃತ್ತಿಯಿಂದ ನಿವೃತ್ತಿ ಅನಿವಾರ್ಯ/ ವೃತ್ತಿ ಸಮಯದಲ್ಲಿ ಸುಮಿತ್ರಾ ಸಾನೆ ಅವರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಸೇವೆ ನಮಗೆ ಮಾದರಿಯಾಗಿದೆ ಎಂದು ಸಮಾಜ ಕಲ್ಯಾಣಾಧಿಕಾರಿ ಜಗದೀಶ್ ಪಾಸೋಡಿ ಹೇಳಿದರು.ನಗರದ ಡಾ.ಬಿ.ಆರ್.ಅಂಬೇಡ್ಕರ್ ಪದವಿಪೂರ್ವ ಬಾಲಕರ ವಸತಿ ನಿಲಯದಲ್ಲಿ ಜರುಗಿದ ಸರ್ಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದಿದ ಸುಮಿತ್ರಾ ಸಾನೆ ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುಮಿತ್ರಾ ಸಾನೆ ಅವರ ಸೇವೆಯನ್ನು ನಾವೆಲ್ಲರೂ ಸ್ಮರಿಸಿಬೇಕು ಸರ್ಕಾರಿ ಸೇವಗೆ ಸೇರಿದ ಪ್ರತಿಯೊಬ್ಬರಿಗೂ ನಿವೃತ್ತಿ ಸಹಜ ತಮ್ಮ ಸೇವೆಯ ಅವದಿಯಲ್ಲಿ ಮಾಡಿದ ಕಾರ್ಯ ಉತ್ತಮವಾಗಿದ್ದರೆ ಇಂತಹ ಕಾರ್ಯಕ್ರಮ ನಡೆಯಲು ಸಾಧ್ಯ ಎಂದರು.ಪತ್ರಕರ್ತರ ಅಪ್ಪು ಪೋತರಾಜ, ಅಧಿಕಾರಿ ಎಸ್.ಎನ್.ಗೊಲಾಯಿ, ಶ್ವೇತಾಕಲ್ಲೂರು ಮಾತನಾಡಿದರು.ವಸತಿ ನಿಲಯ ಮೇಲ್ವಿಚಾರಕರಾದ ಮಂಜುನಾಥ ಆಲಗೂರ ವಸಂತ ಹಿರೇಮಠ, ಅಜಿತ ಪಡಸಲಗಿ, ಯುಲಗುರೇಶ ಒಂಟಿ, ತುಕಾರಾಮ ಉಪ್ಪಾರ, ಈರಯ್ಯ ಮಠಪತಿ, ಪತ್ತಾರ, ಮಗದುಮ, ಬಜಂತ್ರಿ ಯಲ್ಲವ್ವ ಪೋತರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಂಗ್ರಹ- ಸುಧಾ ಪಾಟೀಲಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ ಶರಣಮಾಸದ ಅನುಭವ ಮಾಲಿಕೆಯ 11ನೇ ದಿವಸ ಶರಣ ಶ್ರೀ ಶಿವಾನಂದ ಕಲಕೇರಿ, ಆಯುಕ್ತರು ಆದಾಯ ತೆರಿಗೆ ಇಲಾಖೆ ಬೆಂಗಳೂರು ಇವರ ತಂದೆ ಲಿಂ. ಹಣಮಂತರಾಯ ಕಲಕೇರಿ ಮತ್ತು ತಾಯಿ ಗಿರಿಜಮ್ಮ ಕಲಕೇರಿ ಇವರ ಹೆಸರಿನ ದತ್ತಿ ಉಪನ್ಯಾಸದಲ್ಲಿ ಡಾ. ಸಂಗಮೇಶ ಕಲಹಾಳ, ನಿವೃತ್ತ ಜಿಲ್ಲಾ ಆಯುಷ್ ಅಧಿಕಾರಿಗಳು ಎಡೆಯೂರು ಶ್ರೀ ಸಿದ್ದಲಿಂಗೇಶ್ವರರ ಬಗೆಗೆ ಅತ್ಯಂತ ಪ್ರಭುದ್ಧವಾಗಿ ನಮ್ಮ ಜೊತೆಗೆ ಹಂಚಿಕೊಂಡರು.ಬಸವಕ್ರಾಂತಿಯ ನಂತರ 12ನೆಯ ಶತಮಾನದ ಶೂನ್ಯ ಪೀಠ 300 ವರ್ಷಗಳ ಕಾಲ ಅನಾಥ ಪ್ರಜ್ಞೆಯನ್ನು ಅನುಭವಿಸಿತು. ಈ ಶೂನ್ಯ ಪೀಠವನ್ನು 15ನೇ ಶತಮಾನದಲ್ಲಿ ಮತ್ತೆ ಪುನರುಜ್ಜೀವನಗೊಳಿಸಿದ ಕೀರ್ತಿ ಅನಾದಿ ನಿರಂಜನ ಜಗದ್ಗುರು ತೋಟದ ಸಿದ್ದಲಿಂಗ ಶಿವಯೋಗಿ ಅವರಿಗೆ ಸಲ್ಲುತ್ತದೆ ಶ್ರೀಗಳು 12ನೇ ಶತಮಾನದ ಅನುಭವ ಮಂಟಪ ಸಂಸ್ಕೃತಿಯನ್ನು 15ನೇ ಶತಮಾನದಲ್ಲಿ ಪುನರ್ ಸ್ಥಾಪಿಸಿದ ಮಹಾಪುರುಷರಾಗಿದ್ದಾರೆ. ಸಿದ್ದಲಿಂಗೇಶ್ವರರ ಜೀವನ ಸಾಧನೆ ಸಿದ್ದಿಗಳು ವಚನ ಕಾವ್ಯ ಶಾಸನಗಳಲ್ಲಿ ಎರಕಗೊಂಡಿವೆ ನಾಡಿನ ಉದ್ದಗಲಕ್ಕೂ…
ಲೇಖನ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ ಡಾ. ವೀಣಾ ಎಲಿಗಾರ ಅವರು ನಮ್ಮ ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರದ ಆಜೀವ ಸದಸ್ಯರು, ದತ್ತಿ ದಾಸೋಹಿಗಳು, ಪ್ರಬುದ್ದ ಉಪನ್ಯಾಸಕರು, ವೇದಿಕೆಯ ಬಗೆಗೆ ಅಪಾರ ಕಾಳಜಿ, ಶ್ರದ್ದೆ ಹೊಂದಿದ, ಅಪ್ಪಟ ಬಸವ ಅನುಯಾಯಿಗಳು ಮತ್ತುಸರಳ ಸಜ್ಜನಿಕೆಯ ವ್ಯಕ್ತಿತ್ವ ವಿರುವ ಅಪರೂಪದ ಸಾಹಿತಿ ಎಂದರೆ ತಪ್ಪಾಗಲಾರದು.ಡಾ.ವೀಣಾ ಅವರು ಲಿಂ. ಚನ್ನಬಸಪ್ಪ ಎಲಿಗಾರ ಮತ್ತು ಲಿಂ. ಗಂಗಮ್ಮ ಚನ್ನಬಸಪ್ಪ ಎಲಿಗಾರ ದತ್ತಿ,ಲಿಂ. ಹನುಮಂತಪ್ಪ ಲಿಂಗಪ್ಪ ಹೂಗಾರ ಮತ್ತು ಲಿಂ.ಶಾಂತಮ್ಮ ಹನುಮಂತಪ್ಪ ಹೂಗಾರ ದತ್ತಿ,ಲಿಂ. ಡಾ. ಚನ್ನಕ್ಕ ಎಲಿಗಾರ ದತ್ತಿ ಹೀಗೆ ತಮ್ಮ ತಂದೆ-ತಾಯಿಅತ್ತೆ-ಮಾವ ಮತ್ತು ನಾದಿನಿ ಹೆಸರಿನಲ್ಲಿ ಮೂರು ದತ್ತಿ ದಾಸೋಹಗಳನ್ನು ನೀಡಿದ್ದಾರೆ.ಡಾ. ವೀಣಾ ಎಲಿಗಾರ ಅವರು 13 -3- 1966 ರಲ್ಲಿ ರಡ್ಡೇರ ಹಟ್ಟಿ ತಾ- ಅಥಣಿ, ಬೆಳಗಾವಿ ಜಿಲ್ಲೆಯಲ್ಲಿ ಜನಿಸಿದರು. ಇವರ ತಂದೆ ಲಿಂ. ಹನುಮಂತಪ್ಪ ಲಿಂಗಪ್ಪ ಹೂಗಾರ ಅವರು ತಾಯಿ ಲಿಂ. ಶಾಂತಮ್ಮ ಹೂಗಾರ ಅವರು.ಇವರು…
ಜಮಖಂಡಿಯಲ್ಲಿ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ.ಮಂಜುಳಾ ಅಭಿಮತ ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ದೇಶದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರ ಅಭಿವೃದ್ಧಿಗಾಗಿ ಹಲವಾರು ಯೋಜನೆ ನೀಡಿದ್ದಾರೆ. ಅವುಗಳ ಪ್ರಯೋಜನವನ್ನು ಎಲ್ಲ ಮಹಿಳೆಯರು ಪಡೆದುಕೊಳ್ಳಬೇಕು ಎಂದು ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ. ಮಂಜುಳಾ ಹೇಳಿದರು.ಶಾಸಕ ಜಗದೀಶ ಗುಡಗುಂಟಿ ಅವರ ಗೃಹ ಕಚೇರಿಯ ಸಾಕ್ಷಾತ್ಕಾರ ಭವನದಲ್ಲಿ ಭಾನುವಾರ ನಡೆದ ಬಿಜೆಪಿ ಮಹಿಳಾ ಮೋರ್ಚಾದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ರಾಜ್ಯ ಕಾಂಗ್ರೆಸ್ ಸರ್ಕಾರ ಮಹಿಳಾ ಸುರಕ್ಷತೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ, ಉತ್ತರ ಕರ್ನಾಟಕ ಭಾಗದಲ್ಲಿ ಮಹಿಳೆಯರ ಸುರಕ್ಷತೆ, ಭದ್ರತೆ ಕುರಿತು ಬಿಜೆಪಿ ಮಹಿಳಾ ಮೋರ್ಚಾದ ಪದಾಧಿಕಾರಿಗಳು, ನಗರಸಭೆ, ಮಹಾನಗರ ಪಾಲಿಕೆ ಸದಸ್ಯೆಯರ ಜೊತೆ ಈಗಾಗಲೇ ಸಭೆ ನಡೆಸಿ, ಹೋರಾಟದ ಕುರಿತು ಅಭಿಪ್ರಾಯ ಸಂಗ್ರಹಿಸಲಾಗಿದೆ. ಈ ವಿಷಯದಲ್ಲಿ ರಾಜಕಿಯೇತರ ಸಂಘಟನೆಗಳಿಂದಲೂ ಹೋರಾಟ ನಡೆಯಬೇಕು ಎಂದರು.ಅತ್ಯಾಚಾರ ಪ್ರಕರಣಗಳು ನಡೆದರೆ ದೊಡ್ಡ ನಗರಗಳಲ್ಲಿ ಇದು ಸಾಮಾನ್ಯ ಎಂದು ಗೃಹ ಸಚಿವರು ಹೇಳುತ್ತಾರೆ. ಹಾಗಾದರೆ ಮಹಿಳಾ ಸುರಕ್ಷತೆಗೆ ಯಾರು…
