ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ವೃತ್ತಿಯಿಂದ ನಿವೃತ್ತಿ ಅನಿವಾರ್ಯ/ ವೃತ್ತಿ ಸಮಯದಲ್ಲಿ ಸುಮಿತ್ರಾ ಸಾನೆ ಅವರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಸೇವೆ ನಮಗೆ ಮಾದರಿಯಾಗಿದೆ ಎಂದು ಸಮಾಜ ಕಲ್ಯಾಣಾಧಿಕಾರಿ ಜಗದೀಶ್ ಪಾಸೋಡಿ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಪದವಿಪೂರ್ವ ಬಾಲಕರ ವಸತಿ ನಿಲಯದಲ್ಲಿ ಜರುಗಿದ ಸರ್ಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದಿದ ಸುಮಿತ್ರಾ ಸಾನೆ ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುಮಿತ್ರಾ ಸಾನೆ ಅವರ ಸೇವೆಯನ್ನು ನಾವೆಲ್ಲರೂ ಸ್ಮರಿಸಿಬೇಕು ಸರ್ಕಾರಿ ಸೇವಗೆ ಸೇರಿದ ಪ್ರತಿಯೊಬ್ಬರಿಗೂ ನಿವೃತ್ತಿ ಸಹಜ ತಮ್ಮ ಸೇವೆಯ ಅವದಿಯಲ್ಲಿ ಮಾಡಿದ ಕಾರ್ಯ ಉತ್ತಮವಾಗಿದ್ದರೆ ಇಂತಹ ಕಾರ್ಯಕ್ರಮ ನಡೆಯಲು ಸಾಧ್ಯ ಎಂದರು.
ಪತ್ರಕರ್ತರ ಅಪ್ಪು ಪೋತರಾಜ, ಅಧಿಕಾರಿ ಎಸ್.ಎನ್.ಗೊಲಾಯಿ, ಶ್ವೇತಾಕಲ್ಲೂರು ಮಾತನಾಡಿದರು.
ವಸತಿ ನಿಲಯ ಮೇಲ್ವಿಚಾರಕರಾದ ಮಂಜುನಾಥ ಆಲಗೂರ ವಸಂತ ಹಿರೇಮಠ, ಅಜಿತ ಪಡಸಲಗಿ, ಯುಲಗುರೇಶ ಒಂಟಿ, ತುಕಾರಾಮ ಉಪ್ಪಾರ, ಈರಯ್ಯ ಮಠಪತಿ, ಪತ್ತಾರ, ಮಗದುಮ, ಬಜಂತ್ರಿ ಯಲ್ಲವ್ವ ಪೋತರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು.

