ಉದಯರಶ್ಮಿ ದಿನಪತ್ರಿಕೆ
ಇಂಡಿ: ಮನುಷ್ಯ ಜನ್ಮ ಹುಟ್ಟಿ ಬಂದ ಮೇಲೆ ಪರೋಪಕಾರಿಯಾಗಿ, ತನ್ನ ಸುತ್ತಲಿನ ಜನರೊಂದಿಗೆ ಸಾಮರಸ್ಯದಿಂದ ಬದುಕಿ ತನ್ನ ಕರ್ತವ್ಯ ಪಾಲನೆ ಮಾಡಿದ್ದೆ ಆದರೆ ಅದುವೇ ಧರ್ಮ ಪರಿಪಾಲನೆ ಆಗುತ್ತದೆ ಎಂದು ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಯವರು ಹೇಳಿದರು.
ಪಟ್ಟಣದ ವೀರಭಾರತಿ ವಿದ್ಯಾ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ ಹಾಗೂ ಧರ್ಮಸಭೆಯನ್ನು ಉದ್ದೇಶಿಸಿ ಭಟ್ಟಾರಕ ಸ್ವಾಮೀಜಿಯವರು ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಅಭಿನಂದನ ಕಿರಣಗಿ ಮಾತನಾಡಿ 1990 ರಲ್ಲಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರಿಂದ ಸ್ಥಾಪಿತವಾದ ವೀರ ಭಾರತಿ ಸಂಸ್ಥೆ ಇಂದು ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹವನ್ನು ನಡೆಸುತ್ತಿದೆ. ಇದಕ್ಕೆ ಸಮಾಜದ ಹಿರಿಯರ ಆಶೀರ್ವಾದ ಹಾಗೂ ತಮ್ಮೆಲ್ಲರ ಸಹಕಾರದಿಂದ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ ಎಂದರು.
ಪ್ರಾರಂಭದಲ್ಲಿ ಜೈನ ಸಮಾಜದ ಹಿರಿಯರಾದ ಶನತ ಕುಮಾರ ಹಳ್ಳಿ, ಅಜಿತ ಧನಶೆಟ್ಟಿ, ಅಜಿತ ದೋಶಿ, ಕುಲಭೂಷಣ ಕೋಟಿ, ಶ್ರೀಮತಿ ಶೀಲಾ ದುರ್ಗಿ ಮಾತನಾಡಿದರು.
ಪಟ್ಟಣದಲ್ಲಿರುವ ದೊಡ್ಡ ಬಸ್ತಿ ಕಟ್ಟಡಕ್ಕೆ ವೀರಭಾರತಿ ವಿದ್ಯಾ ಕೇಂದ್ರದ ಅಧ್ಯಕ್ಷ ಅಭಿನಂದನ ಕಿರಣಗಿ ಒಂದು ಲಕ್ಷ ಹನ್ನೊಂದು ಸಾವಿರ ರೂ ದೇಣಿಗೆ ನೀಡಿದರು.
ಕಾರ್ಯಕ್ರಮದಲ್ಲಿ ಡಿ.ಆರ್. ಶಹಾ, ಅನಂತ ಕೋಟಿ,ಶಾಂತು ಧನಶೆಟ್ಟಿ, ಅಜಿತ ಧನಶೆಟ್ಟಿ, ಚಂದ್ರಕಾಂತ ಶಹಾ, ಶ್ರೀಕಾಂತ ದುರ್ಗಿ,ಸಂಜೀವ ಧನಪಾಲ, ಸಂದೀಪ ಧನಶೆಟ್ಟಿ, ವೃಷಭನಾಥ ಧನಶೆಟ್ಟಿ ನೂರಾರು ಜನ ಸಮಾಜ ಬಾಂದವರು ಸೇರಿದರು.

