ಸಂಗ್ರಹ
– ಸುಧಾ ಪಾಟೀಲ
ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ
ಪುಣೆ
ಉದಯರಶ್ಮಿ ದಿನಪತ್ರಿಕೆ
ಶರಣಮಾಸದ ಅನುಭವ ಮಾಲಿಕೆಯ 11ನೇ ದಿವಸ ಶರಣ ಶ್ರೀ ಶಿವಾನಂದ ಕಲಕೇರಿ, ಆಯುಕ್ತರು ಆದಾಯ ತೆರಿಗೆ ಇಲಾಖೆ ಬೆಂಗಳೂರು ಇವರ ತಂದೆ ಲಿಂ. ಹಣಮಂತರಾಯ ಕಲಕೇರಿ ಮತ್ತು ತಾಯಿ ಗಿರಿಜಮ್ಮ ಕಲಕೇರಿ ಇವರ ಹೆಸರಿನ ದತ್ತಿ ಉಪನ್ಯಾಸದಲ್ಲಿ ಡಾ. ಸಂಗಮೇಶ ಕಲಹಾಳ, ನಿವೃತ್ತ ಜಿಲ್ಲಾ ಆಯುಷ್ ಅಧಿಕಾರಿಗಳು ಎಡೆಯೂರು ಶ್ರೀ ಸಿದ್ದಲಿಂಗೇಶ್ವರರ ಬಗೆಗೆ ಅತ್ಯಂತ ಪ್ರಭುದ್ಧವಾಗಿ ನಮ್ಮ ಜೊತೆಗೆ ಹಂಚಿಕೊಂಡರು.
ಬಸವಕ್ರಾಂತಿಯ ನಂತರ 12ನೆಯ ಶತಮಾನದ ಶೂನ್ಯ ಪೀಠ 300 ವರ್ಷಗಳ ಕಾಲ ಅನಾಥ ಪ್ರಜ್ಞೆಯನ್ನು ಅನುಭವಿಸಿತು. ಈ ಶೂನ್ಯ ಪೀಠವನ್ನು 15ನೇ ಶತಮಾನದಲ್ಲಿ ಮತ್ತೆ ಪುನರುಜ್ಜೀವನಗೊಳಿಸಿದ ಕೀರ್ತಿ ಅನಾದಿ ನಿರಂಜನ ಜಗದ್ಗುರು ತೋಟದ ಸಿದ್ದಲಿಂಗ ಶಿವಯೋಗಿ ಅವರಿಗೆ ಸಲ್ಲುತ್ತದೆ ಶ್ರೀಗಳು 12ನೇ ಶತಮಾನದ ಅನುಭವ ಮಂಟಪ ಸಂಸ್ಕೃತಿಯನ್ನು 15ನೇ ಶತಮಾನದಲ್ಲಿ ಪುನರ್ ಸ್ಥಾಪಿಸಿದ ಮಹಾಪುರುಷರಾಗಿದ್ದಾರೆ. ಸಿದ್ದಲಿಂಗೇಶ್ವರರ ಜೀವನ ಸಾಧನೆ ಸಿದ್ದಿಗಳು ವಚನ ಕಾವ್ಯ ಶಾಸನಗಳಲ್ಲಿ ಎರಕಗೊಂಡಿವೆ ನಾಡಿನ ಉದ್ದಗಲಕ್ಕೂ ಎದ್ದು ನಿಂತ ಇವರ ಹೆಸರಿನ ಗದ್ದುಗೆ ಮಠ ಮಂದಿರಗಳು ಇವರ ಪ್ರಭಾವವನ್ನು ಸಾರಿ ಹೇಳುತ್ತವೆ.
ಬಸವಾದಿ ಶರಣರ ವಚನ ಸಾಹಿತ್ಯವನ್ನು ಸಂಗ್ರಹಿಸುವ, ಸಂಕಲಿಸುವ, ಸಂಪಾದಿಸುವ ಕಾರ್ಯವನ್ನು ತಮ್ಮ ಶಿಷ್ಯರು ಕೈಗೊಳ್ಳುವಂತೆ ಮಾಡಿದ್ದು, ತಾವು ಸ್ವತಃ ವಚನಗಳನ್ನು ರಚಿಸಿ ವಚನ ಸಾಹಿತ್ಯ ಪರಂಪರೆಯನ್ನು ಮುಂದುವರೆಸಿದ್ದು ಇವರ ಮುಖ್ಯ ಕೊಡುಗೆಗಳಂತಿವೆ. ಶ್ರೀಗಳು 701 ವಚನಗಳನ್ನು ರಚಿಸಿದ್ದಾರೆ.”ಮಹಾಲಿಂಗ ಗುರು ಶಿವಸಿದ್ದೇಶ್ವರ ಪ್ರಭುವೇ” ಎಂಬ ಅಂಕಿತನಾಮದೊಂದಿಗೆ ಷಟ್ ಸ್ಥಲ ಜ್ಞಾನ ಸಾರಾಮೃತ ಹೆಸರಿನ ಸ್ಥಲಕಟ್ಟಿನ ಕೃತಿಯಲ್ಲಿ ಸಂಕಲನಗೊಂಡಿವೆ. ವಚನ ಸಾಹಿತ್ಯ ಪರಂಪರೆಯ ಘಟ್ಟದ ವಚನ ಪರಂಪರೆಗೆ ಇವರು ಪ್ರಸ್ತಾನಕಾರರಾಗಿದ್ದಾರೆ. ವಚನ ಸಾಹಿತ್ಯದಲ್ಲಿ ಶ್ರೀಗಳ ಹೆಸರು ಹಲವಾರು ಶತಮಾನಗಳ ಅನಂತರ ಇಂದಿಗೂ ಜನರ ನೆನಪಿನಲ್ಲಿ ಹಚ್ಚಹಸಿರಾಗಿ ಉಳಿದುಬಂದಿದೆ.

ಶ್ರೀಗಳು ಹರಿಹರ ರಾಘವಾಂಕ ಕವಿಗಳ ಬಸವೇಶ್ವರ ಚರಿತ್ರೆಗಳನ್ನು ಕಾವ್ಯರೂಪದಲ್ಲಿ ರಚಿಸಿದರು. ಇವರು ಕನ್ನಡ ಸಾಹಿತ್ಯ ಲೋಕಕ್ಕೆ ಹೊಸ ಆಯಾಮ ನೀಡಿದರು. ಆ ಕಾಲಕ್ಕೆ ನೂರೊಂದು ವಿರಕ್ತರು ಕೂಡಿ ಲಿಂಗಾಯತ ಧರ್ಮ ಸಂಸ್ಕೃತಿಗಳನ್ನು ಬೆಳಗುವ ಪ್ರಯತ್ನ ಮಾಡಿದರು.
ಶ್ರೀಗಳು ಕೋಳಿ ಕೂಗಿದಲ್ಲೆಡೆ ಮಠ ನಿರ್ಮಾಣವಾಗಲಿ ಎಂದು 701ವಿರಕ್ತರ ಪಡೆ ನಿರ್ಮಿಸಿ ಕರ್ನಾಟಕದಲ್ಲಿ ಲಿಂಗಾಯತ ಮಠಗಳನ್ನು ಅತ್ಯುತ್ವಕ್ಕೆ ತಂದ ಮಹಾನುಭಾವರು.ಗದುಗಿನ ತೋoಟದಾರ್ಯ ಮಠ, ಸಿದ್ದಗಂಗಾ ಮಠ, ಚಿತ್ರದುರ್ಗದ ಮುರುಘಾಮಠ, ಹುಬ್ಬಳ್ಳಿ ಮೂರು ಸಾವಿರಾರು ಮಠ, ಇವೆಲ್ಲವನ್ನು ಒಳಗೊಂಡ ಎಲ್ಲಾ ಸಮಯ ಭೇದದ ಮಠಗಳು ಸಿದ್ಧಲಿಂಗಯತಿ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿವೆ.
ಬಸವೋತ್ತರ ಯುಗದ ಪರಿಸ್ಥಿತಿ, ಗೋಸಲ ಸಿದ್ದೇಶ್ವರ ಪರಂಪರೆ, ಗೋಸಲ ಚನ್ನಬಸವೇಶ್ವರರಿಂದ ಸಿದ್ದಲಿಂಗೇಶ್ವರರ ಗುರು ಕಾರುಣ್ಯ ಪ್ರಸಂಗ, ಲೋಕ ಸಂಚಾರ, ಶೂನ್ಯ ಪೀಠದ ಅಧಿಪತಿಯಾಗಿ, ಸಿದ್ದಲಿಂಗರು ಅಧಿಕಾರ ವಹಿಸಿಕೊಂಡ ತರುವಾಯ ಮಾಡಿದ ಸಮಾಜೋದ್ಧಾರ ಕಾರ್ಯಗಳು ರಾಜ ಮನೆತನಗಳಿಗೆ ಮಾಡಿದ ಆಶೀರ್ವಾದ, ಅವರು ರಚಿಸಿದ ವಚನ ಸಾಹಿತ್ಯದ ವಿಹಂಗಮ ನೋಟ, ಬೆಡಗಿನ ವಚನಗಳ ಬೆಡಗು, ಸಿದ್ದಲಿಂಗ ಯತಿಗಳನ್ನು ಕುರಿತು ರಚನೆಯಾದ ಪುರಾಣಗಳು, ಸಾಂಗತ್ಯಗಳು,ರಗಳೆ, ಲಘು ಕೃತಿಗಳ ಸಮೀಕ್ಷೆ, ಅವರ ವಚನಗಳಲ್ಲಿ ಪ್ರತಿಪಾದಿತವಾದ ಧಾರ್ಮಿಕ ಮೌಲ್ಯಗಳು, ಅಷ್ಟಾವರಣ,ಪಂಚಾಚಾರ, ಷಟಸ್ಥಲ, ಶಿವಯೋಗ, ಲಿಂಗಾಂಗ ಸಾಮರಸ್ಯ, ಮೊದಲಾದ ದಾರ್ಷನಿಕ ಚಿಂತನೆಗಳು ನಮಗೆಲ್ಲ ಪ್ರೇರಕ ಶಕ್ತಿಯಾಗಿದೆ ಎಂದು ಹೇಳುತ್ತಾ ತಮ್ಮ ಅನುಭಾವವನ್ನು ಮುಕ್ತಾಯಗೊಳಿಸಿದರು.

ಅಧ್ಯಕ್ಷರಾದ ಡಾ.ಶಶಿಕಾಂತ ಪಟ್ಟಣ ಅವರು ಸಿದ್ಧಲಿಂಗೇಶ್ವರರು 701 ವಿರಕ್ತ ಪರಂಪರೆಯನ್ನು ಹುಟ್ಟು ಹಾಕಿದ ಮಹಾನುಭಾವರು. ಇವರನ್ನು ಅನುಭವ ಅಲ್ಲಮ ಎಂದೇ ಕರೆಯುತ್ತಿದ್ದರು ಎಂದು ಹೇಳುತ್ತಾ, ಅವರು ಎಲ್ಲೆಡೆ ಸ್ಥಾಪಿಸಿದ ಮಠಗಳನ್ನು ಮತ್ತು ರಾಜಮನೆತನದೊಂದಿಗಿನ ಅವರ ಗೌರವ ಸಂಬಂಧವನ್ನು ಹಂಚಿಕೊಂಡರು.
ದತ್ತಿ ದಾಸೋಹಿಗಳಾದ ಶಿವಾನಂದ ಕಲಕೇರಿ ಅವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.ಡಾ. ಶಶಿಕಾಂತ ಪಟ್ಟಣ ಅವರು ಇಡೀ ಕಾರ್ಯಕ್ರಮವನ್ನು ಅತ್ಯಂತ ವ್ಯವಸ್ಥಿತವಾಗಿ ನಿರೂಪಿಸಿದರು.
