ಲೇಖನ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ
ಪುಣೆ
ಉದಯರಶ್ಮಿ ದಿನಪತ್ರಿಕೆ
ಡಾ. ವೀಣಾ ಎಲಿಗಾರ ಅವರು ನಮ್ಮ ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರದ ಆಜೀವ ಸದಸ್ಯರು, ದತ್ತಿ ದಾಸೋಹಿಗಳು, ಪ್ರಬುದ್ದ ಉಪನ್ಯಾಸಕರು, ವೇದಿಕೆಯ ಬಗೆಗೆ ಅಪಾರ ಕಾಳಜಿ, ಶ್ರದ್ದೆ ಹೊಂದಿದ, ಅಪ್ಪಟ ಬಸವ ಅನುಯಾಯಿಗಳು ಮತ್ತು
ಸರಳ ಸಜ್ಜನಿಕೆಯ ವ್ಯಕ್ತಿತ್ವ ವಿರುವ ಅಪರೂಪದ ಸಾಹಿತಿ ಎಂದರೆ ತಪ್ಪಾಗಲಾರದು.
ಡಾ.ವೀಣಾ ಅವರು ಲಿಂ. ಚನ್ನಬಸಪ್ಪ ಎಲಿಗಾರ ಮತ್ತು ಲಿಂ. ಗಂಗಮ್ಮ ಚನ್ನಬಸಪ್ಪ ಎಲಿಗಾರ ದತ್ತಿ,
ಲಿಂ. ಹನುಮಂತಪ್ಪ ಲಿಂಗಪ್ಪ ಹೂಗಾರ ಮತ್ತು ಲಿಂ.
ಶಾಂತಮ್ಮ ಹನುಮಂತಪ್ಪ ಹೂಗಾರ ದತ್ತಿ,
ಲಿಂ. ಡಾ. ಚನ್ನಕ್ಕ ಎಲಿಗಾರ ದತ್ತಿ ಹೀಗೆ ತಮ್ಮ ತಂದೆ-ತಾಯಿ
ಅತ್ತೆ-ಮಾವ ಮತ್ತು ನಾದಿನಿ ಹೆಸರಿನಲ್ಲಿ ಮೂರು ದತ್ತಿ ದಾಸೋಹಗಳನ್ನು ನೀಡಿದ್ದಾರೆ.
ಡಾ. ವೀಣಾ ಎಲಿಗಾರ ಅವರು 13 -3- 1966 ರಲ್ಲಿ ರಡ್ಡೇರ ಹಟ್ಟಿ ತಾ- ಅಥಣಿ, ಬೆಳಗಾವಿ ಜಿಲ್ಲೆಯಲ್ಲಿ ಜನಿಸಿದರು. ಇವರ ತಂದೆ ಲಿಂ. ಹನುಮಂತಪ್ಪ ಲಿಂಗಪ್ಪ ಹೂಗಾರ ಅವರು ತಾಯಿ ಲಿಂ. ಶಾಂತಮ್ಮ ಹೂಗಾರ ಅವರು.
ಇವರು ಮೂಲತ: ಗದಗ ತಾಲೂಕಿನ ಬಿಂಕದಕಟ್ಟಿಯವರು. ಇವರ ಅಜ್ಜನವರು ಲಿಂಗಪ್ಪನವರು. ಇವರ ಮಗ ಲಿಂ. ಶ್ರೀ ಹನಮಂತಪ್ಪ ಹೂಗಾರ ಇವರು. ಇವರು ಶಿಕ್ಷಕರ ತರಬೇತಿ ಕಾಲೇಜು ಧಾರವಾಡದಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದರು. ಮುಂದೆ ಇವತ್ತಿನ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಇಲಕಲ್ ದಲ್ಲಿ ಶಿಕ್ಷಕರ ತರಬೇತಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಹಲವು ವರ್ಷಗಳವರೆಗೆ ಬೋಧನೆ ಮಾಡಿ ಅಲ್ಲಿಯೇ ನಿವೃತ್ತಿ ಹೊಂದಿದರು. ಇವರ ಧರ್ಮ ಪತ್ನಿ ಲಿಂ. ಶರಣೆ ಶಾಂತಕ್ಕ ಇವರ ತವರು ಮನೆ ಅಥಣಿ ತಾಲೂಕಿನ ರಡ್ಡೇರಟ್ಟಿ. ಈ ಗ್ರಾಮದ ಪ್ರತಿಷ್ಠಿತ ಪೂಜಾರಿ ಮನೆತನದವರು. ಊರಿನ ಪ್ರಸಿದ್ಧ ಬಸವಣ್ಣನವರ ದೇವಾಲಯದ ಪೂಜಾರಿಕೆ ಇವರ ಮನೆತನಕ್ಕಿತ್ತು ಎಂದು ತಿಳಿದು ಬರುತ್ತದೆ.
ಡಾ ವೀಣಾ ಯಲಿಗಾರ. ಇವರು ಖ್ಯಾತ ಸಾಹಿತಿ ಕರ್ನಾಟಕ ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಡಾ.ಚೆನ್ನಕ್ಕ ಯಲಿಗಾರ ಇವರ ಸಹೋದರ ಪ್ರೊ ಅಶೋಕ ಚೆನ್ನಬಸಪ್ಪ ಯಲಿಗಾರ ಇವರೊಂದಿಗೆ 1990 ರಲ್ಲಿ ಮದುವೆಯಾದರು. ಇವರಿಗೆ ಸೃಷ್ಟಿ ಮತ್ತು ಸ್ಮೃತಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಡಾ. ವೀಣಾ ಎಲಿಗಾರ ಅವರು ಜೆ. ಟಿ. ಮಹಾವಿದ್ಯಾಲಯ ಗದಗ ನಿಂದ 1986ರಲ್ಲಿ ಬಿ.ಎ ಪದವಿಯನ್ನು ಕರ್ನಾಟಕ ವಿ.ವಿ ಕನ್ನಡ ಅಧ್ಯಯನ ಪೀಠ ಧಾರವಾಡದಿಂದ ಎಂ.ಎ ಪದವಿಯನ್ನು, ಬಸವ ಅಧ್ಯಯನ ಪೀಠ ಕ.ವಿ.ವಿ ಧಾರವಾಡದಿಂದ ಡಿಪ್ಲೋಮಾ ಇನ್ ಬಸವ ಅಧ್ಯಯನ, ಕರ್ನಾಟಕ ವಿಶ್ವವಿದ್ಯಾಲಯದಿಂದ ಅರಟಾಳ ರುದ್ರಗೌಡರ ಸಮಾಜಿಕ ಶೈಕ್ಷಣಿಕ ಸಾಧನೆಯ ವಿಷಯವಾಗಿ ಪಿ. ಎಚ್. ಡಿ ಪದವಿ ಪೂರೈಸಿದ್ದಾರೆ.
ಡಾ.ವೀಣಾ ಎಲಿಗಾರ ಅವರು ಕೆ. ಎಲ್. ಇ ಮಹಿಳಾ ವಿದ್ಯಾಲಯ ಗದಗ, ಕೆ.ಎಲ್.ಇ ಸಂಸ್ಥೆಯ ಪಿ. ಸಿ. ಜಾಬಿನ್ ಮಹಾವಿದ್ಯಾಲಯ ಹುಬ್ಬಳ್ಳಿ, ಜೆ.ಟಿ. ಮಹಾವಿದ್ಯಾಲಯ ಗದಗ ನಲ್ಲಿ ತಮ್ಮ ಸೇವೆ ಸಲ್ಲಿಸಿ ಈಗ ಸಧ್ಯ ಧಾರವಾಡದ ಶ್ರೀ ಮೃತ್ಯುಂಜಯ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆ.
ಡಾ.ವೀಣಾ ಎಲಿಗಾರ ಅವರು ಕರ್ನಾಟಕ ವಿಶ್ವವಿದ್ಯಾಲಯದ ಪಠ್ಯಪುಸ್ತಕ ಸಂಪಾದನೆ ಕಾರ್ಯ, ಅಭಿನಂದನಾ ಗ್ರಂಥ, ಸ್ಮರಣ ಸಂಚಿಕೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ ಮತ್ತು ಪತ್ರಿಕೆಗಳಲ್ಲಿ, ಜರ್ನಲ್ ಗಳಲ್ಲಿ ಹಲವಾರು ಲೇಖನಗಳು ಮತ್ತು ಸಂಪಾದಕೀಯ ಗ್ರಂಥಗಳು ಪ್ರಕಟಣೆಗೊಂಡಿವೆ.
ಅವರು ಪಿ.ಎಚ್.ಡಿ ಪದವಿಯ ಸಲುವಾಗಿ ಕನ್ನಡ ವಿಶ್ವವಿದ್ಯಾಲಯ, ಹಂಪಿ ಲಿಂಗಾಯತ ಅಧ್ಯಯನ ಸಂಸ್ಥೆಯ ಸಂಶೋಧನಾ ಕೇಂದ್ರ, ತೋoಟದಾರ್ಯ ಮಠ -ಗದಗನಲ್ಲಿ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕ ಜಾನಪದ ಮಹಾವಿದ್ಯಾಲಯ ಗೋಟಗೋಡಿ, ಸ್ನಾತಕೋತ್ತರ ಸರ್ಟಿಫಿಕೇಟ್ ಶಿಕ್ಷಣ “ಜನಪದ ಗೀತ ಸಂಪ್ರದಾಯ” ಕಾರ್ಯಕಾರಿ ಮಂಡಳಿಯ ಸದಸ್ಯರಾಗಿದ್ದರು. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ವಿಚಾರ ಸಂಕೀರ್ಣಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯನಿರ್ವಹಣೆ ಹಾಗೂ ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ.
ಇವರು ರಾಷ್ಟ್ರಮಟ್ಟದ ವಿಚಾರ ಸಂಕೀರ್ಣಗಳಲ್ಲಿ,ರಾಷ್ಟ್ರಮಟ್ಟದ ಕಾರ್ಯಾಗಾರಗಳಲ್ಲಿ ಸಂಯೋಜಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
13ನೆಯ ಹಸ್ತಪ್ರತಿ ಸಮ್ಮೇಳನ -ಹಂಪಿ, ಅಂತರಾಷ್ಟ್ರೀಯ ಮಟ್ಟದ ಸಿಬ್ಬಂದಿ ಅಭಿವೃದ್ಧಿ ಕಾರ್ಯಕ್ರಮ, ರಾಷ್ಟ್ರೀಯ ಮಟ್ಟದ ವಿಚಾರ ಸಂಕೀರ್ಣ, ಡಾ.ಎಂ ಎಂ ಕಲ್ಬುರ್ಗಿ ಪ್ರತಿಷ್ಠಾನದ ಕಾರ್ಯಗಾರಗಳನ್ನು ಸಂಘಟನೆ ಮಾಡಿದ್ದಾರೆ. ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿ, ಕಾಲೇಜು ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರದ ವರ್ಚುವಲ್ ತರಗತಿಗಳಿಗೆ ಅವಶ್ಯಕವಾದ ಪಾಠ ಪ್ರವಚನಗಳನ್ನು ವಿಶೇಷ ಪರಿಣಿತರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
ಪತ್ರಿಕೋದ್ಯಮ, ವಚನ ಕಮ್ಮಟ – ಹೀಗೆ ಹಲವಾರು ಸರ್ಟಿಫಿಕೇಟ್ ಕೋರ್ಸ್ ಗಳ ಸಂಯೋಜಕರಾಗಿ ನಿರ್ವಹಣೆ ಮಾಡಿದ್ದಾರೆ.
ಡಾ.ವೀಣಾ ಅವರು ಗೂಗಲ್ ಮೀಟ್ ಮತ್ತು ಸಭೆ ಸಮಾರಂಭಗಳಲ್ಲಿ ಎರಡು ನೂರಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದ್ದಾರೆ.
ಅಂತರರಾಷ್ಟ್ರೀಯ ಇನ್ನರ ವೀಲ್ ಕ್ಲಬ್ ಸದಸ್ಯರಾಗಿ, ಖಜಾಂಚಿ, ಎಡಿಟರ್ ಮತ್ತು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕದಳಿ ವೇದಿಕೆ ಗದಗ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
ನಮ್ಮ ವೇದಿಕೆಗೆ ಹಲವಾರು ಅದ್ಭುತ ಉಪನ್ಯಾಸಕರನ್ನು ಪರಿಚಯಿಸಿದ ಶ್ರೇಯಸ್ಸು ಡಾ. ವೀಣಾ ಎಲಿಗಾರ ಅವರಿಗೆ ಸಲ್ಲುತ್ತದೆ. ಅವರು ನಿಜವಾದ ರೀತಿಯಲ್ಲಿ ನಮ್ಮ ಸಂಘದ ಒಳಿತಿಗಾಗಿ ದುಡಿಯುವವರು ಮತ್ತು ನೇರ ನುಡಿಯ ವಾಗ್ಮಿಗಳು. ಇವರ ಸೃಜನಶೀಲ ಮನಸ್ಸು, ಸಾಹಿತ್ಯಾಸಕ್ತಿ, ಸರಳ ಸಜ್ಜನಿಕೆಯ ವ್ಯಕ್ತಿತ್ವದ ಅನಾವರಣವನ್ನು ಮಾಡಲು ಅತೀವ ಸಂತಸವೆನಿಸುತ್ತದೆ.
ಮುಖ್ಯ ಸಂಪಾದಕರು
1.. ಕನ್ನಡ ಸಾಹಿತ್ಯ ಶೋಧ ( ರಾಜ್ಯ ಮಟ್ಟದ ಸಂಶೋಧನಾ ಲೇಖನಗಳು )
2.. ಕಾವ್ಯದೀಪ ( ರಾಜ್ಯ ಮಟ್ಟದ ಕವನಗಳ ಸಂಗ್ರಹ )
3.. ಶೂನ್ಯ ಸಂಪಾದನೆ- ಅಧ್ಯಯನ ಪರಂಪರೆ ( ಸಂಶೋಧನಾ ಲೇಖನಗಳು)
4.. ಅನುಭಾವ ಶರಣರು ಮತ್ತು ಜಾಗತಿಕ ದಾರ್ಶನಿಕರು (ಅಂತರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದ ಲೇಖನಗಳು )
5.. ಅನುಭವ ಕಳಶ ಅಮೃತ ವರ್ಷ (ಪ್ರೊ. ಶಾರದಾ ಪಾಟೀಲ ಅವರ ಅಭಿನಂದನಾ ಗ್ರಂಥ )
6.. ಅನುಭವ ಸಿರಿ ( ಡಾ. ಸರಸ್ವತಿ ಪಾಟೀಲ ಅವರ ಅಭಿನಂದನಾ ಗ್ರಂಥ )
7.. ಹೊಯ್ದವರೆನ್ನ ಹೊರೆದವರೆಂಬೆ ( ಬಸವಣ್ಣ ನವರ ವಚನಗಳ ವಿಶ್ಲೇಷಣೆ )
8.. ಕಿಚ್ಚಿನಲಿ ಕೈ ಹಾಕಿ ಹೆಕ್ಕಿದರು ( ಆಯ್ದ ಶರಣರ ಜೀವನ ಚರಿತ್ರೆಗಳು )
9..ಅವಲೋಕನ ( ಆಯ್ದ ಪುಸ್ತಕಗಳ ವಿಮರ್ಶೆ )
10.. ವಿಳಾಸವಿಲ್ಲದ ಪತ್ರಗಳು (ಕವನ )
11..ಅಕ್ಕನ ವಚನ ವಿಶ್ಲೇಷಣೆ ( ಬಸವ ಪಥ )
12..ನಿಷ್ಪತ್ತಿ ( ಅಂತರಾಷ್ಟ್ರೀಯ ಮಟ್ಟದ ವಿಚಾರ ಸಂಕೀರ್ಣದ ಲೇಖನಗಳ ಪ್ರಕಟಣೆ )
ಡಾ.ವೀಣಾ ಎಲಿಗಾರ ಅವರಿಗೆ ಸಂದ ಪ್ರಶಸ್ತಿಗಳು
1.. ಸಂಸ್ಕೃತಿ ಸೌಗಂಧ ಪ್ರಶಸ್ತಿ – ಸಾಹಿತ್ಯ ಸಂಸ್ಕೃತಿ ಪ್ರತಿಷ್ಠಾನ – ಬೈಲಹೊಂಗಲ
2.. ಶಿಕ್ಷಣ ಪ್ರೇಮಿ ಪ್ರಶಸ್ತಿ – ವಚನ ಕಮ್ಮಟ ಪರೀಕ್ಷೆ – ಚಿತ್ರದುರ್ಗ
3.. ಸಾಹಿತ್ಯ ರತ್ನ ಪ್ರಶಸ್ತಿ -ರಾಜ್ಯ ಮಟ್ಟದ ಪ್ರಶಸ್ತಿ -ಅಂಭಾ ದರ್ಶನ ಪೀಠ ಬೆಳಗಾವಿ
4.. ಸಾಹಿತ್ಯದೀಪ – ರಾಜ್ಯಮಟ್ಟದ ಪ್ರಶಸ್ತಿ- ಹುಬ್ಬಳ್ಳಿ
5.. ಶ್ರೀ ಗುರು ಸೇವಾ ರತ್ನ ಪ್ರಶಸ್ತಿ- ಗುಲ್ಬರ್ಗ
