Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ತಾಲ್ಲೂಕಿನ ಢವಳಗಿ ಗ್ರಾಮದ ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು.ಕ್ರೀಡಾ ಧ್ವಜಾರೋಹಣವನ್ನು ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷ ಮಾಂತೇಶ ದೊಡಮನಿ ನೆರವೇರಿಸಿದರು. ಕ್ರೀಡಾಜೋತಿಯನ್ನು ಗ್ರಾಮದ ಹಿರಿಯರಾದ ಮಾದೇವಪ್ಪ ಕೊಣ್ಣೂರ ಸ್ವೀಕರಿಸಿದರು. ಶಾಲೆಯ ದೈಹಿಕ ಶಿಕ್ಷಕ ಮಹೇಶ ಕೊಣ್ಣೂರ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಮತಿ ಮಲ್ಲಮ್ಮ ನಾಗರಾಳ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಗ್ರಾಮ ಪಂಚಾಯತ ದ್ವೀತಿಯ ದರ್ಜೆಯ ಲೆಕ್ಕ ಸಹಾಯಕ ಎಮ್.ಕೆ.ಗುಡಿಮನಿ ಕ್ರೀಡಾಕೂಟವನ್ನು ಗುಂಡು ಎಸೆದು ಕ್ರೀಡಾಕೂಟಕ್ಕೆೆ ಚಾಲನೆ ನೀಡಿದರು. ಈ ವೇಳೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಆನಂದ ಹೀರೆಮಠ, ಉಪಾಧ್ಯಕ್ಷರಾದ ಸುರೇಶಗೌಡ ಪಾಟೀಲ ಸೇರಿದಂತೆ ಕ್ಲಸ್ಟರ್ ಮಟ್ಟದ ಎಲ್ಲಾ ಶಾಲೆಯ ಮುಖ್ಯೋಪಾಧ್ಯಾಯರು,ದೈಹಿಕ ಶಿಕ್ಷಕರು ಹಾಗೂ ಗ್ರಾಮಸ್ಥರು ಇದ್ದರು. ಸಮಯ ಪ್ರಜ್ಞೆ ಮರೆತ ಅಧಿಕಾರಿಗಳು ಕಾರ್ಯಕ್ರಮ ಚಾಲನೆಗೊಂಡು ಇನ್ನೇನು ಮುಗಿಯುವ ಹಂತಕ್ಕೆ ಬಂದು ತಲುಪಿದಾಗ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ, ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ವೈ.ಕವಡಿ, ಅಕ್ಷರ…
ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಇಂಗ್ಲೀಷ್‌ನಲ್ಲಿ ಒಂದು ಮಾತಿದೆ. ‘ಲೈಫ್ ಈಸ್ ಶಾರ್ಟ್ ಮೇಕ್ ಇಟ್ ಸ್ವೀಟ್.’ ಬದುಕು ಚಿಕ್ಕದು ಅದನ್ನು ಸವಿಸವಿಯಾಗಿ ಸಂತಸದಿಂದ ಕಳೆಯಬೇಕೆನ್ನುವುದು ಇದರರ್ಥ. ನಮ್ಮ ಹಿರಿಯರು ಬದುಕು ಮೂರು ದಿನದ ಸಂತೆ ಎಂದಿದ್ದಾರೆ. ಬದುಕಿನ ಕ್ಷಣ ಭಂಗುರತೆಯನ್ನು ಸಾರಿದ್ದಾರೆ. ಬದುಕು ನಮ್ಮ ಕೈಯಲಿಲ್ಲ ಅದು ಹೇಗೆ ಬರುತ್ತದೆಯೋ ಹಾಗೆಯೇ ಅದನ್ನು ಸ್ವೀಕರಿಸಬೇಕು ಎನ್ನುವ ಮಾತು ಕಿವಿಗೆ ಬೀಳುತ್ತಲೇ ಇರುತ್ತದೆ. ಏನೇ ಆಗಲಿ ನಾವೇನಾಗಿದ್ದಾವೇಯೋ ಅದೇ ನಮ್ಮ ಮಕ್ಕಳು ಆಗಿದ್ದಾರೆ. ಅಂದರೆ ಮಕ್ಕಳು ನಮ್ಮ ಪ್ರತಿಬಿಂಬಗಳು. ಮಕ್ಕಳ ನಡೆ ನುಡಿಗಳಲ್ಲಿ ಹಿತಮಿತವಾದ ಹಿಡಿತ, ಎಂದಿಗೂ ಬತ್ತದ ಉತ್ಸಾಹ, ಜೀವನೋತ್ಸಾಹದ ನೀರಬುಗ್ಗೆ ಮಕ್ಕಳಲ್ಲಿ ಟಿಸಿಲೊಡೆಯುವಂತೆ ಹೇಗೆ ಮಾಡುವುದು? ಭವಿಷ್ಯದ ನಾಗರಿಕರ ಬದುಕು ಆನಂದದತ್ತ ಪಯಣ ಮಾಡುವುದು ಹೇಗೆ ನೋಡೋಣ ಬನ್ನಿ.ಬಾಲ್ಯ ಅಂದು-ಇಂದುಸಾಮಾನ್ಯವಾಗಿ ಬಾಲ್ಯದಲ್ಲಿ ಆಟಿಕೆ ಸಾಮಗ್ರಿ ಇಲ್ಲವೇ ಕಂಡ ಕಂಡ ವಸ್ತುಗಳ ಮೇಲೆ ವ್ಯಾಮೋಹ ಇರುತ್ತದೆ. ಎಷ್ಟೋ ಸಲ ಬಡತನದ ಬದುಕಿನಲ್ಲಿ ತಂದೆ ತಾಯಿಗಳು ಬೇಕಾದ…
ಸಂಗ್ರಹ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ 13 ನೆಯ ದಿವಸದ ಶರಣ ಮಾಸದ ಅನುಭಾವ ಮಾಲಿಕೆಯಲ್ಲಿ ಪ್ರೊ.ಶಾರದಾ ಪಾಟೀಲ ಅವರು ಬಹುರೂಪಿ ಚೌಡಯ್ಯನವರ ಬಗೆಗೆ ಅತ್ಯಂತ ಅದ್ಭುತವಾಗಿ ತಮ್ಮ ಉಪನ್ಯಾಸವನ್ನು ನೀಡಿದರು.ಬಹುರೂಪಿ ಚೌಡಯ್ಯನವರು ಒಬ್ಬ ದಿಟ್ಟ ಶರಣ, ಬಸವ ಪ್ರೇಮಿ.ಇವರು ಬಹುರೂಪಿಯ ಕಾಯಕದ ಶ್ರೇಷ್ಠ ಕಲಾವಿದ ಅತ್ಯಂತ ಸುಂದರ ಅನುಭಾವದಿಂದ ಶರಣರ ಮನವನ್ನು ಗೆದ್ದ ಧೀಮಂತ. ಬಹುರೂಪಿ ಚೌಡಯ್ಯನವರ ಹುಟ್ಟೂರು ರೇಕಳಿಕೆ. ಬಾಲ್ಯದಿಂದಲೇ ಆಧ್ಯಾತ್ಮಿಕ ಮಾರ್ಗಕ್ಕೆ ಮನಸೋತ ಇವರು ವಿಭಿನ್ನ ವೇಷಭೂಷಣ ಮತ್ತು ಬಹುಪಾತ್ರಾಭಿನಯದ ಮೂಲಕ ಜನರನ್ನು ರಂಜಿಸುವ ಕಾಯಕ ಮಾಡುತ್ತಿದ್ದರು. ಇದರ ಜೊತೆಗೆ ಜನರ ಆಪ್ತ ಮಾರ್ಗದರ್ಶಕರಾಗಿಯೂ ತಮ್ಮ ಸೇವೆಯನ್ನು ವಿಸ್ತರಿಸಿಕೊಂಡಿದ್ದರು. ಕಲ್ಯಾಣದ ಶರಣರಲ್ಲಿ ಬಹುಮುಖ್ಯ ಪಾತ್ರ ವಹಿಸಿದ ಬಹುರೂಪಿ ಚೌಡಯ್ಯನವರು ” ರೇಕಣ್ಣಪ್ರಿಯ ನಾಗಿನಾಥ ” ಎಂಬ ಅಂಕಿತವನ್ನು ಇಟ್ಟುಕೊಂಡಿದ್ದರು. ಚೌಡಯ್ಯನವರು ಪೂರ್ವಾಶ್ರಮದಲ್ಲಿ ನಾಥ ಪರಂಪರೆಯಿಂದ ಪ್ರಭಾವಿತರಾಗಿ ನಂತರದಲ್ಲಿ ಕಲ್ಯಾಣವನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದರು. ಗಣ ಸಹಸ್ರ ನಾಮ,ಗುರುರಾಜ ಚರಿತ್ರೆ, ವೀರಶೈವಾಮೃತ ಮಹಾಪುರಾಣ,…
ಸಂಗ್ರಹ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ 12 ನೆಯ ದಿವಸದ ಶರಣ ಮಾಸದ ಅನುಭಾವ ಮಾಲಿಕೆ – ದಿನಾಂಕ 4 ಆಗಸ್ಟ್ 2025 ರಂದು ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಇದರ ಅಧ್ಯಕ್ಷರಾದ ಡಾ ಶಶಿಕಾಂತ ಪಟ್ಟಣ ಇವರು ಕಲ್ಯಾಣ ಅರಸರ ಚಾಲುಕ್ಯರ ಜೊತೆಗಿನ ಇತರ ರಾಜಮನೆತನಗಳ ಸಂಬಂಧದ ವಿಷಯವಾಗಿ ಮಾತನಾಡುತ್ತ ಕಲ್ಯಾಣ ಚಾಲುಕ್ಯರು ಮತ್ತು ಚಾಲುಕ್ಯ ಸಾಮ್ರಾಜ್ಯ ಮತ್ತೆ ಕ್ರಿ.ಶ. ೬೫೫ ರಲ್ಲಿಮೊದಲನೆಯ ವಿಕ್ರಮಾದಿತ್ಯನ ಮೂಲಕ ಮೇಲೆದ್ದಿತು. ಪಲ್ಲವರೊಂದಿಗಿನ ಸರಣಿ ಯುದ್ಧಗಳು ಕ್ರಿ.ಶ. ೭೪೦ ರಲ್ಲಿ ಚಾಲುಕ್ಯ ದೊರೆ ಎರಡನೇ ವಿಕ್ರಮಾದಿತ್ಯನ ವಿಜಯದೊಂದಿಗೆ ಕೊನೆಗೊಂಡವು. ಆದರೆ ಮತ್ತೆ ೭೫೦ ರಲ್ಲಿ ರಾಷ್ಟ್ರಕೂಟರ ದೊರೆ ದಂತಿದುರ್ಗ ಇವನ ಮೇಲೆ ಯುದ್ಧದಲ್ಲಿ ಸೋತ ನಂತರ ಆ ಕಾಲಕ್ಕೆ ಚಾಲುಕ್ಯ ಸಾಮ್ರಾಜ್ಯ ಪತನವಾಯಿತು.೯೭೦ ರ ದಶಕದಲ್ಲಿ ಚಾಲುಕ್ಯರ ವಂಶಜರಲ್ಲಿ ಒಬ್ಬನಾದ ಎರಡನೇ ತೈಲಪ ರಾಷ್ಟ್ರಕೂಟರನ್ನು ಸೋಲಿಸಿ ಗುಜರಾತ್ ಪ್ರದೇಶವನ್ನು ಬಿಟ್ಟು ಚಾಲುಕ್ಯ ಸಾಮ್ರಾಜ್ಯದ ಉಳಿದ ಭಾಗಗಳನ್ನೆಲ್ಲ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ವಾರ್ಡ ನಂ.9 ರಲ್ಲಿ ಬರುವ ರಾಮ ಮಂದಿರ ಮುಖ್ಯ ರಸ್ತೆಯಿಂದ ಎಸ್.ಎಸ್.ಕಾಂಪ್ಲೆಕ್ಸ್ ಮೂಲಕ ಸಂಗೀತ ಮೊಬೈಲ್ ಸೆಂಟರ್ ವರೆಗೆ ರೂ.30 ಲಕ್ಷ ಅನುದಾನದಲ್ಲಿ ಒಳಚರಂಡಿ ಹಾಗೂ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರು ಸೋಮವಾರ ಭೂಮಿಪೂಜೆ ನೆರವೇರಿಸಿದರು.ಭೂಮಿಪೂಜೆ ಬಳಿಕ ಶಾಸಕರು ನೆರೆದ ಸಾರ್ವಜನಿಕರ ಅಹವಾಲು ಆಲಿಸಿದರು.ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ರಾಜಶೇಖರ ಮಗಿಮಠ, ವಿಠ್ಠಲ ಹೊಸಪೇಟ, ಮುಖಂಡರಾದ ಸದಾಶಿವ ಗುಡ್ಡೋಡಗಿ, ಡಿ.ಎಸ್.ಪಾಟೀಲ, ಪ್ರವೀಣ ಕರಡಿ, ಈರಪ್ಪ ಇಲಕಲ್ಲ ಸೇರಿದಂತೆ ಮತ್ತಿತರರು ಇದ್ದರು.
ಉದಯರಶ್ಮಿ ದಿನಪತ್ರಿಕೆ ತಿಕೋಟಾ: ತಾಲೂಕಿನ ಬಾಬಾನಗರ ಗ್ರಾಮದ ಬಸವರಾಜ ಮಸಳಿ ಹಾಗೂ ಕಳ್ಳಕವಟಗಿ ಗ್ರಾಮದ ಸಚಿನ ಗದ್ಯಾಳ ಯುವಕರಿಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಡಹಟ್ಟಿ ಗ್ರಾಮದಲ್ಲಿ ಬ್ರೋಡಾಕಾಸ್ಟ ಪ್ರೈವೇಟ್ ಲಿಮಿಟೆಡ್ ಅವರ ಸಹಯೋಗದಲ್ಲಿ ಪುನೀತ್ ರಾಜಕುಮಾರ್ ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು.ಕಳೆದ ಹಲವಾರು ವರ್ಷಗಳಿಂದ ಸಮಾಜ ಸೇವೆ, ಶಿಕ್ಷಣ ಪ್ರೇಮಿಗಳಾಗಿದ್ದು ಕನ್ನಡ ನಾಡಿನ ನೆಲ, ಜಲ, ಭಾಷೆಯ ಹಿತಕ್ಕಾಹಿ ಮತ್ತು ವಿವಿಧ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜ ಸೇವೆ ಕ್ಷೇತ್ರದಲ್ಲಿ ಸಲ್ಲಿಸಿದ ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಇವರಿಗೆ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಸಾರಿಗೆ ನೌಕರರ ಮುಷ್ಕರ | ಬಸ್‌ಗಳಿಲ್ಲದೇ ಬಿಕೋ ಎಂದ ದೇವರಹಿಪ್ಪರಗಿ ಬಸ್ ನಿಲ್ದಾಣ ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಸಾರಿಗೆ ಇಲಾಖೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರದ ಕಾರಣವಾಗಿ ದೇವರಹಿಪ್ಪರಗಿ ಬಸ್ ನಿಲ್ದಾಣ ಬಸ್‌ಗಳಿಲ್ಲದೇ ಬಿಕೋ ಎನ್ನುತ್ತಿದ್ದು, ಬಸ್‌ಗಳ ಜಾಗದಲ್ಲಿ ಖಾಸಗಿ ವಾಹನಗಳು ಪ್ರಯಾಣಿಕರಿಗೆ ಆಸರೆಯಾದವು.ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಮಂಗಳವಾರ ಬೆಳಿಗ್ಗೆ ಕೆಲವು ಗ್ರಾಮದಿಂದ ಬಸ್‌ಗಳು ಆಗಮಿಸಿದವು, ಮುಂದೆ ಕೆಲವು ಡಿಪೋಗಳಿಗೆ ತೆರಳಿದರೆ ಬೆರಳೆಣಿಕೆಯ ಬಸ್‌ಗಳು ನಿಲ್ದಾಣದಲ್ಲಿ ನಿಂತವು.ಸ್ಥಳೀಯ ಪಿಎಸ್‌ಐ ಸಚೀನ ಆಲಮೇಲಕರ ಹಾಗೂ ತಹಶೀಲ್ದಾರ ಪ್ರಕಾಶ ಸಿಂದಗಿ ಪೊಲೀಸ್ ಸಿಬ್ಬಂದಿಯೊಂದಿಗೆ ಸುಮಾರು ಗಂಟೆಗಳ ಕಾಲ ಬಸ್ ನಿಲ್ದಾಣದ ಆವರಣದಲ್ಲಿ ನಿಂತು ಯಾವುದೇ ಘಟನೆ ಜರುಗದಂತೆ ಕ್ರಮ ವಹಿಸಿದರು.ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಸ್ಥಳೀಯ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾದರೆ, ವಿಜಯಪುರ, ಸಿಂದಗಿಗೆ ತೆರಳುವ ವಿದ್ಯಾರ್ಥಿಗಳು ಬಸ್‌ಗಳಿಲ್ಲದೇ ಅನಿವಾರ್ಯವಾಗಿ ಮನೆಗೆ ತೆರಳಿದರೆ, ಕೆಲವರು ಹಣ ನೀಡಿ ಖಾಸಗಿ ವಾಹನಗಳಲ್ಲಿ ತೆರಳಿದರು.ಮಹಿಳಾ ಪ್ರಯಾಣಿಕರು ಮಾತ್ರ ಬಂದ ದಾರಿಗೆ ಸುಂಕವಿಲ್ಲದAತೆ ಮನೆಗೆ ಮರಳಿದರೆ, ಕೋರ್ಟ,…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ೨೦೨೩-೨೪ ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಯೋಜನೆಯಡಿಯಲ್ಲಿ ರೂ ೨೫ ರೂ ಲಕ್ಷ ಮೊತ್ತದಲ್ಲಿ ಸಿಂದಗಿ ಪಟ್ಟಣದ ೧೪ನೇ ವಾರ್ಡಿನ ಬೊಮ್ಮಲಿಂಗೇಶ್ವರ ದೇವಸ್ಥಾನದ ಹತ್ತಿರವಿರುವ ಪುರಾತನ ಬಾವಿಯನ್ನು ಸ್ವಚ್ಛಗೊಳಿಸಿ ನೂತನವಾಗಿ ನಿರ್ಮಾಣವಾದ ನೀರಿನ ಬಾವಿಯನ್ನು ಶಾಸಕ ಅಶೋಕ ಮನಗೂಳಿ ಉದ್ಘಾಟಿಸಿದರು.ಇದೆ ಸಂದರ್ಭದಲ್ಲಿ ಸಾರಂಗಮಠದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯ, ಪುರಸಭೆ ಅಧ್ಯಕ್ಷ ಡಾ|| ಶಾಂತವಿರ ಮನಗೂಳಿ, ಉಪಾಧ್ಯಕ್ಷ ಸಂದೀಪ ಚೌರ, ಗೊಲ್ಲಾಳ ಬಂಕಲಗಿ, ಬ್ಲಾಕ್ ಅಧ್ಯಕ್ಷ ಸುರೇಶ ಪೂಜಾರಿ, ಜಿಲ್ಲಾ ಕೆಡಿಪಿ ಸದಸ್ಯ ಶಿವಣ್ಣ ಕೊಟರಗಸ್ತಿ, ಮಲ್ಲು ಸದುಗೋಳ, ಸುನಂದಾ ಯಂಪುರೆ, ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿ ರವೀಂದ್ರ ಬಂಥನಾಳ, ಕೆಆರ್‌ಐಡಿಎಲ್ ಅಧಿಕಾರಿ ರಾಜಶೇಖರ್, ಅಳ್ಳೊಳ್ಳಿ ಬುಡ್ಡಾ, ಪ್ರಕಾಶ ಪೂಜಾರಿ, ಸೇರಿದಂತೆ ಇನ್ನಿತರರು ಇದ್ದರು.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ವೇತನ, ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯಾದ್ಯಂತ ಸಾರಿಗೆ ಇಲಾಖೆ ನೌಕರರು ನಡೆಸುತ್ತಿರುವ ಮುಷ್ಕರದಿಂದಾಗಿ ಬಹುತೇಕ ಸಾರಿಗೆ ಇಲಾಖೆಯ ವಾಹನಗಳು ಬೀದಿಗಿಳಿಯದ ಪರಿಣಾಮ, ಖಾಸಗಿ ವಾಹನಗಳಿಗೆ ಮಂಗಳವಾರ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಸಿಂದಗಿ ಕೇಂದ್ರ ಬಸ್ ನಿಲ್ದಾಣಕ್ಕೆ ನೇರವಾಗಿ ನುಗ್ಗಿದ ಖಾಸಗಿ ವಾಹನಗಳು, ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ಸಹಜವಾಗಿ ಸಾರಿಗೆ ಇಲಾಖೆಯ ಬಸ್ ನಿಲ್ದಾಣದಿಂದ ನೂರು ಮೀಟರ್ ಅಂತರದಲ್ಲಿ ಯಾವುದೇ ಖಾಸಗಿ ವಾಹನಗಳು ಓಡಾಟ ಮಾಡದಂತೆ ನಿಷೇಧವಿದೆ. ಆದರೆ, ಸಾರಿಗೆ ಇಲಾಖೆಯ ನೌಕರರ ಮುಷ್ಕರದಿಂದಾಗಿ ಖಾಸಗಿ ವಾಹನಗಳು ನೇರವಾಗಿ ಕೇಂದ್ರ ಬಸ್ ನಿಲ್ದಾಣಕ್ಕೆ ಪ್ರವೇಶಿಸಿ, ಅಲ್ಲಿದ್ದ ಪ್ರಯಾಣಿಕರನ್ನು ಸಾಗಿಸುತ್ತಿದ್ದವು. ದುಪ್ಪಟ್ಟು ಹಣ ವಸೂಲಿ ಸಾರಿಗೆ ಇಲಾಖೆಯ ವಾಹನಗಳ ಓಡಾಟವಿಲ್ಲದ್ದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ವಾಹನಗಳು ಜನರನ್ನು ನಿಗದಿತ ಸ್ಥಳಕ್ಕೆ ಕರೆದೊಯ್ಯಲು ದುಪ್ಪಟ್ಟು ಹಣ ವಸೂಲಿ ಮಾಡಿದ ಆರೋಪ ಪ್ರಯಾಣಿಕರಿಂದ ಅಲ್ಲಲ್ಲಿ ಕೇಳಿ ಬಂದಿವೆ. “ಸಾರಿಗೆ ಇಲಾಖೆಯ ಮುಷ್ಕರದಿಂದ ಬಸ್ ಸಂಚರಿಸದ ಕಾರಣ ಬಸ್ ನಿಲ್ದಾಣದಲ್ಲಿ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ತಾಯಿಯ ಎದೆ ಹಾಲು ಮಗುವಿಗೆ ಸೂಕ್ತವಾದ ಆಹಾರ. ಇದು ಸುರಕ್ಷಿತ, ಸ್ವಚ್ಚ ಮತ್ತು ಪ್ರತಿಕಾಯಗಳನ್ನು ಹೊಂದಿದ್ದು, ಬಾಲ್ಯದ ಅನೇಕ ಸಾಮಾನ್ಯ ಕಾಯಿಲೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ ಎಂದು ಭಾರತೀಯ ಮಕ್ಕಳ ತಜ್ಞರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಾ.ಎಸ್.ವ್ಹಿ.ಪಾಟೀಲ ಹೇಳಿದರು.ಅವರು ಪಟ್ಟಣದ ಮೊಗಲಾಯಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಭಾರತೀಯ ಮಕ್ಕಳ ತಜ್ಞರ ಸಂಘ, ತಾಲೂಕಾ ಆರೋಗ್ಯ ಇಲಾಖೆ ಮತ್ತು ಮೋಗಲಾಯಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಇವುಗಳ ಸಹಯೋಗದಲ್ಲಿ ವಿಶ್ವಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಎದೆ ಹಾಲು ಶಿಶುವಿಗೆ ಜೀವನದ ಮೊದಲ ತಿಂಗಳುಗಳಿಗೆ ಅಗತ್ಯವಿರುವ ಎಲ್ಲಾ ಶಕ್ತಿ ಮತ್ತು ಪೋಷಕಾಂಶಗಳನ್ನು ಒದಗಿಸುತ್ತದೆ. ಮಕ್ಕಳ ಬುದ್ದಿಮತ್ತೆ ಇದರಿಂದ ಜಾಸ್ತಿಯಾಗಿ ಮಕ್ಕಳು ಕ್ರಿಯಾಶೀಲರಾಗುತ್ತಾರೆ. ಎದೆಹಾಲು ಉಣಿಸುವ ಮಹಿಳೆಯರಿಗೆ ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್ ಬರುವ ಅಪಾಯವೂ ಕಡಿಮೆ ಎಂದರು.ಈ ವೇಳೆ ವಿಜಯಪುರದ ಮಕ್ಕಳ ತಜ್ಞ ಡಾ.ಎಸ್.ಎಸ್.ಕಲ್ಯಾಣಶೆಟ್ಟಿ ಮತ್ತು ಸ್ತ್ರೀ ರೋಗ ತಜ್ಞೆ ಡಾ.ಶಾರದಾ ನಾಡಗೌಡ ಮಾತನಾಡಿ, ಸ್ತನ್ಯಪಾನದ ಬಗ್ಗೆ ಅನೇಕ ತಾಯಂದಿರಲ್ಲಿ ತಪ್ಪು ಕಲ್ಪನೆಗಳಿಗೆ…
