Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಅನ್ಯಾಯವಾದವರಿಗೆ ನ್ಯಾಯ ಸಿಗುವಂತಾಗಬೇಕು :ಸುಣಗಾರ

ಬತಗುಣಕಿ: ಬಯಲಾಟ ಅಕಾಡೆಮಿಯಿಂದ ಕಲಾವಿದರ ಸಮೀಕ್ಷೆ

ಬೆಳೆ ಹಾನಿ ಜಂಟಿ ಸಮೀಕ್ಷೆಯ ರೈತರ ಯಾದಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಕಲ್ಯಾಣ ಅರಸರ ಜೊತೆಗಿನ ಇತರ ರಾಜ ಮನೆತನಗಳ ಸಂಬಂಧ
ವಿಶೇಷ ಲೇಖನ

ಕಲ್ಯಾಣ ಅರಸರ ಜೊತೆಗಿನ ಇತರ ರಾಜ ಮನೆತನಗಳ ಸಂಬಂಧ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಸಂಗ್ರಹ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ
ಪುಣೆ

ಉದಯರಶ್ಮಿ ದಿನಪತ್ರಿಕೆ

12 ನೆಯ ದಿವಸದ ಶರಣ ಮಾಸದ ಅನುಭಾವ ಮಾಲಿಕೆ – ದಿನಾಂಕ 4 ಆಗಸ್ಟ್ 2025 ರಂದು ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಇದರ ಅಧ್ಯಕ್ಷರಾದ ಡಾ ಶಶಿಕಾಂತ ಪಟ್ಟಣ ಇವರು ಕಲ್ಯಾಣ ಅರಸರ ಚಾಲುಕ್ಯರ ಜೊತೆಗಿನ ಇತರ ರಾಜಮನೆತನಗಳ ಸಂಬಂಧದ ವಿಷಯವಾಗಿ ಮಾತನಾಡುತ್ತ ಕಲ್ಯಾಣ ಚಾಲುಕ್ಯರು ಮತ್ತು ಚಾಲುಕ್ಯ ಸಾಮ್ರಾಜ್ಯ ಮತ್ತೆ ಕ್ರಿ.ಶ. ೬೫೫ ರಲ್ಲಿಮೊದಲನೆಯ ವಿಕ್ರಮಾದಿತ್ಯನ ಮೂಲಕ ಮೇಲೆದ್ದಿತು. ಪಲ್ಲವರೊಂದಿಗಿನ ಸರಣಿ ಯುದ್ಧಗಳು ಕ್ರಿ.ಶ. ೭೪೦ ರಲ್ಲಿ ಚಾಲುಕ್ಯ ದೊರೆ ಎರಡನೇ ವಿಕ್ರಮಾದಿತ್ಯನ ವಿಜಯದೊಂದಿಗೆ ಕೊನೆಗೊಂಡವು. ಆದರೆ ಮತ್ತೆ ೭೫೦ ರಲ್ಲಿ ರಾಷ್ಟ್ರಕೂಟರ ದೊರೆ ದಂತಿದುರ್ಗ ಇವನ ಮೇಲೆ ಯುದ್ಧದಲ್ಲಿ ಸೋತ ನಂತರ ಆ ಕಾಲಕ್ಕೆ ಚಾಲುಕ್ಯ ಸಾಮ್ರಾಜ್ಯ ಪತನವಾಯಿತು.
೯೭೦ ರ ದಶಕದಲ್ಲಿ ಚಾಲುಕ್ಯರ ವಂಶಜರಲ್ಲಿ ಒಬ್ಬನಾದ ಎರಡನೇ ತೈಲಪ ರಾಷ್ಟ್ರಕೂಟರನ್ನು ಸೋಲಿಸಿ ಗುಜರಾತ್ ಪ್ರದೇಶವನ್ನು ಬಿಟ್ಟು ಚಾಲುಕ್ಯ ಸಾಮ್ರಾಜ್ಯದ ಉಳಿದ ಭಾಗಗಳನ್ನೆಲ್ಲ ಹಿಂದಕ್ಕೆ ಪಡೆದನು. ಈತನ ರಾಜಧಾನಿ ಕಲ್ಯಾಣಿ, ಮತ್ತು ಈ ಕಾಲದ ಚಾಲುಕ್ಯ ವಂಶಕ್ಕೆ ಕಲ್ಯಾಣಿ ಚಾಲುಕ್ಯರು ಎಂದೂ ಸಹ ಹೆಸರು. ಈ ಬಾರಿ ಚಾಲುಕ್ಯರು ನಡುನಡುವೆ ಚೋಳ ಸಾಮ್ರಾಜ್ಯದ ವಿರುದ್ಧ ಯುದ್ಧಗಳನ್ನು ನಡೆಸುತ್ತಿದ್ದರು. ಮೊದಲನೆಯ ಸೋಮೇಶ್ವರ ಎಂಬ ಚಾಲುಕ್ಯ ಅರಸು (ಈತನಿಗೆ ಆಹವಮಲ್ಲ ಎಂದೂ ಹೆಸರು) ರಾಜಾಧಿರಾಜ ಚೋಳ ನನ್ನು ಕ್ರಿ.ಶ. ೧೦೫೨ ರಲ್ಲಿ ಸೋಲಿಸಿದನು. ಚಾಲುಕ್ಯ ವಂಶದ ಮುಂದಿನ ಪ್ರಸಿದ್ಧ ಅರಸು ಆರನೇ ವಿಕ್ರಮಾದಿತ್ಯ (ಕ್ರಿ.ಶ ೧೦೭೬-೧೧೨೬, ವಿಕ್ರಮಾಂಕ ಎಂದೂ ಹೆಸರು).
ಕಲ್ಯಾಣಿ ಚಾಲುಕ್ಯರು, 10ನೇ ಶತಮಾನದಿಂದ 12ನೇ ಶತಮಾನದವರೆಗೆ ಭಾರತದ ಡೆಕ್ಕನ್ ಪ್ರದೇಶವನ್ನು ಆಳಿದ ಪ್ರಮುಖ ರಾಜವಂಶವಾಗಿದೆ. ಇವರು ಮುಖ್ಯವಾಗಿ ಉತ್ತರ ಕರ್ನಾಟಕದಲ್ಲಿ ತಮ್ಮ ರಾಜಧಾನಿ ಕಲ್ಯಾಣಿಯನ್ನು ಹೊಂದಿದ್ದರು ಮತ್ತು ರಾಷ್ಟ್ರಕೂಟರ ನಂತರ ಅಧಿಕಾರಕ್ಕೆ ಬಂದರು. ಕಲ್ಯಾಣಿ ಚಾಲುಕ್ಯರು ಕಲೆ, ವಾಸ್ತುಶಿಲ್ಪ ಮತ್ತು ಸಾಹಿತ್ಯಕ್ಕೆ ಹೆಸರುವಾಸಿಯಾಗಿದ್ದರು.
ಇತಿಹಾಸ
ಕಲ್ಯಾಣಿ ಚಾಲುಕ್ಯರು, ರಾಷ್ಟ್ರಕೂಟ ಸಾಮಂತರಾಗಿದ್ದರು, ನಂತರ ಸ್ವತಂತ್ರವಾಗಿ ಆಡಳಿತ ನಡೆಸಿದರು. ಕಲ್ಯಾಣಿ ಚಾಲುಕ್ಯರ ಆಳ್ವಿಕೆಯಲ್ಲಿ, ಕಲ್ಯಾಣಿ ನಗರವು ಒಂದು ಪ್ರಮುಖ ಆಡಳಿತ ಕೇಂದ್ರವಾಗಿತ್ತು.
ಕಲ್ಯಾಣಿ ಚಾಲುಕ್ಯರು, ಚೋಳರು, ಪಾಂಡ್ಯರು ಮತ್ತು ಹೊಯ್ಸಳರೊಂದಿಗೆ ರಾಜಕೀಯ ಹೋರಾಟಗಳನ್ನು ನಡೆಸಿದರು. 12ನೇ ಶತಮಾನದಲ್ಲಿ, ಕಲಚುರಿಗಳು ಕಲ್ಯಾಣಿ ಚಾಲುಕ್ಯರನ್ನು ಸೋಲಿಸಿ ಅಧಿಕಾರಕ್ಕೆ ಬಂದರು.ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಸಾಮಾಜಿಕ ಜೀವನವು ಸಾಂಪ್ರದಾಯಿಕ ವರ್ಣಾಶ್ರಮ ವ್ಯವಸ್ಥೆಯನ್ನು ಆಧರಿಸಿತ್ತು. ಜಾತಿ ವ್ಯವಸ್ಥೆಯು ಆನುವಂಶಿಕವಾಗಿತ್ತು. ಇದರ ವಿರುದ್ಧ ಬಸವಣ್ಣ ಮತ್ತು ಶರಣರು ಸಮರ ಸಾರಿದರು. ಈ ಕಾಲದಲ್ಲಿ, ಲಿಂಗಾಯತ ಧರ್ಮವು ಹುಟ್ಟಿಕೊಂಡಿತು.
ಕಲ್ಯಾಣಿ ಚಾಲುಕ್ಯರ ಆಡಳಿತವು ಸಾಮಾಜಿಕ ಮತ್ತು ಧಾರ್ಮಿಕ ದೃಷ್ಟಿಕೋನದಿಂದ ಬಹಳ ಮುಖ್ಯವಾಗಿತ್ತು..
ಚಾಲುಕ್ಯ ಆರನೆಯ ವಿಕ್ರಮಾದಿತ್ಯನ ಮಗಳು ಬಿಜ್ಜಳನ ತಾಯಿ ಅಂದರೆ ಪೆರ್ಮಾಡಿಯ ಮಡದಿಯಾಗಿದ್ದಳು. ಕಲ್ಯಾಣದ ಅರಸು ಮನೆತನದವರ ಜೊತೆಗೆ ಗೋವೆಯ ಕದಂಬರು ಹೊಯ್ಸಳರು ಯಾದವರು ಕಲಚೂರಿಗಳು ವಾರಂಗಲ್ಲಿನ ಕಾಕತೀಯರು ಆಂತರಿಕ ಸಂಬಂಧ ಅಥವಾ ಸಂಘರ್ಷಕ್ಕೆ ಒಳಪಟ್ಟ ಹಲವು ಇತಿಹಾಸಿಕ ಸಂಗತಿಗಳನ್ನು ವಿವರಿಸಿದರು


ಕಲಚೂರಿ
ಕಲ್ಯಾಣಿಯ ಕಲಚುರಿಗಳು ಇಂದಿನ ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದ ಭಾಗಗಳನ್ನು ಆಳಿದ 12 ನೇ ಶತಮಾನದ ಭಾರತೀಯ ರಾಜವಂಶದವರು. 1156 ಮತ್ತು 1181 ಸಿಇ (25 ವರ್ಷಗಳು) ನಡುವೆ ಈ ರಾಜವಂಶವು ಡೆಕ್ಕನ್ ಪ್ರದೇಶದಲ್ಲಿ ಅಧಿಕಾರಕ್ಕೆ ಏರಿತು. ಪೆರ್ಮಾಡಿಯ ಮಗ ಎರಡನೆಯ ಬಿಜ್ಜಳ ತನ್ನ ಸಹೋದರ ಮಾವನಾದ ಮುಮ್ಮಡಿ ತೈಲಪನನ್ನು ಸೋಲಿಸಿ 1156 ಸುಮಾರಿಗೆ ಕಲಚೂರಿಗಳನ್ನು ಸ್ವತಂತ್ರ ರಾಜ ಮನೆತನವೆಂದು ಘೋಷಿಸಿ ಕೊಂಡನು, ಬಿಜ್ಜಳ ಇತಿಹಾಸಕಾರರ ದೃಷ್ಟಿಯಲ್ಲಿ ಕ್ರೂರಿಯಾಗಿರಲಿಲ್ಲ ಬಸವಣನವರನ್ನು ಅತ್ಯಂತ ಗೌರವದಿಂದ ಕಂಡರು. ಕಾಕತಿಯ ಪ್ರತಾಪ ರುದ್ರನು ಲಿಂಗಾಯತ ಧಾರ್ಮ ತತ್ವ ಸಿದ್ಧಾಂತಗಳಿಗೆ ಆಕರ್ಷಿತನಾಗಿ ಶರಣ ಧರ್ಮವನ್ನು ಆಂಧ್ರ ತಮಿಳುನಾಡು ಕೇರಳ ಪಾಂಡಿಚೇರಿ ಮುಂತಾದ ಪ್ರದೇಶಗಳಲ್ಲಿ ಹರಡುವಂತೆ ಮಾಡಿದನು. ಕಲ್ಯಾಣದ ಕ್ಷಿಪ್ರ ಕ್ರಾಂತಿಯ ನಂತರ ಸೋಲಾಪುರದ ಯಾದವರ ರಾಣಿ ಚಾಮಲಾದೇವಿ ವಚನ ಸಾಹಿತ್ಯದ ಉಳುವಿಗೆ ಆಶ್ರಯ ನೀಡಿದರು ಅದೇ ರೀತಿ ಜಯಕೇಶಿ 2 ಗೋವೆಯ ಕದಂಬರು ಶರಣರಿಗೆ ಆಶ್ರಯ ನೀಡಿದರು. ಹೀಗಾಗಿ ಶರಣರು ಖಾನಾಪುರ ಹಲಸಿ ಗೋವೆಯ ಆಡಳಿತಕ್ಕೆ ಒಳಪಟ್ಟ ಉಳವಿ ಮತ್ತೆ ಕದಂಬರ ಆಡಳಿತಕ್ಕೆ ಒಳಪಟ್ಟ ಬನವಾಸಿಯ ಕಡೆಗೆ ಹೋದರು. ದಾರಿಯಲ್ಲಿ ಜೈನ ಧರ್ಮಿಯರಾದ ರಟ್ಟರು ಸವದತ್ತಿ ಬೆಳಗಾವಿ ವೇಳುಗ್ರಾಮ ಇಲ್ಲಿ ಶರಣರಿಗೆ ಆಶ್ರಯ ನೀಡಿದರು. ಎಂದು ಕಲ್ಯದ ಶರಣರ ಕೊನೆಯ ಹೆಜ್ಜೆ ಗುರುತುಗಳು ಸಂಘರ್ಷ ಸಮರದ ಬಗ್ಗೆ ವಿವರವಾಗಿ ತಿಳಿಸಿದರು.
ಸಂವಾದದಲ್ಲಿ ಪ್ರೊ ಹನುಮಾಕ್ಷಿ ಗೋಗಿ, ಡಾ ಯು. ಬಿ.ಶೇಟ್ಕರ, ಪ್ರೊ ಎಫ್. ಬಿ ಸೊರಟೂರ, ಡಾ. ವೀಣಾ ಎಲಿಗಾರ,ಡಾ ದಾನಮ್ಮ ಝಳಕಿ ಮುಂತಾದವರು ಮಾತನಾಡಿದರು.
ಶರಣೆ ವಿದ್ಯಾ ಮುಗ್ದುಮ್ ಅವರ ವಚನ ಪ್ರಾರ್ಥನೆ, ಪ್ರೊ. ಶಾರದಾ ಪಾಟೀಲ ಅವರ ಸ್ವಾಗತ, ಶರಣೆ ರತ್ನಕ್ಕ ಕಾದ್ರೊಳ್ಳಿ ಅವರ ಶರಣು ಸಮರ್ಪಣೆ,ಶರಣೆ ರೇಣುಕಾ ಪಾಟೀಲ ಅವರ ವಚನ ಮಂಗಳ ಮತ್ತು ಡಾ. ಕಸ್ತೂರಿ ದಳವಾಯಿ ಅವರ ನಿರೂಪಣೆ ಯೊಂದಿಗೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಿತು.

ವಿಶೇಷ ದತ್ತಿ ಉಪನ್ಯಾಸ – ೩೧0

ವಚನ ಅಧ್ಯಯನ ವೇದಿಕೆ ಬಸವಾದಿ ಶರಣರ ಚಿಂತನ ಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣ ಶ್ರೀ ಶಿವಾನಂದ ಕಲಕೇರಿ ಆಯುಕ್ತರು, ಆದಾಯ ತೆರಿಗೆ ಇಲಾಖೆ, ಬೆಂಗಳೂರು ಇವರ ತಂದೆ ಲಿಂ.ಹಣಮಂತರಾಯ ಕಲಕೇರಿ ಮತ್ತು ಲಿಂ. ಗಿರಿಜಾ ದೇವಿ ಕಲಕೇರಿ ಅವರ ಹೆಸರಿನಲ್ಲಿ ವಿಶೇಷ ದತ್ತಿ ಉಪನ್ಯಾಸ – ೩೧0

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಅನ್ಯಾಯವಾದವರಿಗೆ ನ್ಯಾಯ ಸಿಗುವಂತಾಗಬೇಕು :ಸುಣಗಾರ

ಬತಗುಣಕಿ: ಬಯಲಾಟ ಅಕಾಡೆಮಿಯಿಂದ ಕಲಾವಿದರ ಸಮೀಕ್ಷೆ

ಬೆಳೆ ಹಾನಿ ಜಂಟಿ ಸಮೀಕ್ಷೆಯ ರೈತರ ಯಾದಿ

ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ಆಚರಿಸಲು ನಿರ್ಧಾರ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಅನ್ಯಾಯವಾದವರಿಗೆ ನ್ಯಾಯ ಸಿಗುವಂತಾಗಬೇಕು :ಸುಣಗಾರ
    In (ರಾಜ್ಯ ) ಜಿಲ್ಲೆ
  • ಬತಗುಣಕಿ: ಬಯಲಾಟ ಅಕಾಡೆಮಿಯಿಂದ ಕಲಾವಿದರ ಸಮೀಕ್ಷೆ
    In (ರಾಜ್ಯ ) ಜಿಲ್ಲೆ
  • ಬೆಳೆ ಹಾನಿ ಜಂಟಿ ಸಮೀಕ್ಷೆಯ ರೈತರ ಯಾದಿ
    In (ರಾಜ್ಯ ) ಜಿಲ್ಲೆ
  • ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ಆಚರಿಸಲು ನಿರ್ಧಾರ
    In (ರಾಜ್ಯ ) ಜಿಲ್ಲೆ
  • ಪಕ್ಷದ ಬಲವರ್ಧನೆಗೆ ಮಹಿಳಾ ಕಾರ್ಯಕರ್ತೆಯರು ಶ್ರಮಿಸಬೇಕು
    In (ರಾಜ್ಯ ) ಜಿಲ್ಲೆ
  • ಆದೇಶ ಹಿಂಪಡೆಯದಿದ್ದರೆ ಬಬಲೇಶ್ವರದಿಂದಲೇ ಹೋರಾಟ
    In (ರಾಜ್ಯ ) ಜಿಲ್ಲೆ
  • ಬರಡೋಲ: ೧೨ ಜನರಿಗೆ ಪಿಂಚಣಿ ಪ್ರಮಾಣ ಪತ್ರ ವಿತರಣೆ
    In (ರಾಜ್ಯ ) ಜಿಲ್ಲೆ
  • ಪೊಲೀಸರ ಗುಂಡಿಗೆ ರೌಡಿ ಶೀಟರ್ ಬಲಿ
    In (ರಾಜ್ಯ ) ಜಿಲ್ಲೆ
  • ಮಹಿಳೆಯರು ಅಗತ್ಯ ಕೌಶಲ್ಯಗಳನ್ನು ಪಡೆಯುವುದು ಅತ್ಯವಶ್ಯ :ಪ್ರೊ.ಸೋನಾರ
    In (ರಾಜ್ಯ ) ಜಿಲ್ಲೆ
  • ಬಾಲಕಿ ನೇಣಿಗೆ ಶರಣು
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.