ಸಂಗ್ರಹ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ
ಪುಣೆ
ಉದಯರಶ್ಮಿ ದಿನಪತ್ರಿಕೆ
13 ನೆಯ ದಿವಸದ ಶರಣ ಮಾಸದ ಅನುಭಾವ ಮಾಲಿಕೆಯಲ್ಲಿ ಪ್ರೊ.ಶಾರದಾ ಪಾಟೀಲ ಅವರು ಬಹುರೂಪಿ ಚೌಡಯ್ಯನವರ ಬಗೆಗೆ ಅತ್ಯಂತ ಅದ್ಭುತವಾಗಿ ತಮ್ಮ ಉಪನ್ಯಾಸವನ್ನು ನೀಡಿದರು.
ಬಹುರೂಪಿ ಚೌಡಯ್ಯನವರು ಒಬ್ಬ ದಿಟ್ಟ ಶರಣ, ಬಸವ ಪ್ರೇಮಿ.ಇವರು ಬಹುರೂಪಿಯ ಕಾಯಕದ ಶ್ರೇಷ್ಠ ಕಲಾವಿದ ಅತ್ಯಂತ ಸುಂದರ ಅನುಭಾವದಿಂದ ಶರಣರ ಮನವನ್ನು ಗೆದ್ದ ಧೀಮಂತ. ಬಹುರೂಪಿ ಚೌಡಯ್ಯನವರ ಹುಟ್ಟೂರು ರೇಕಳಿಕೆ. ಬಾಲ್ಯದಿಂದಲೇ ಆಧ್ಯಾತ್ಮಿಕ ಮಾರ್ಗಕ್ಕೆ ಮನಸೋತ ಇವರು ವಿಭಿನ್ನ ವೇಷಭೂಷಣ ಮತ್ತು ಬಹುಪಾತ್ರಾಭಿನಯದ ಮೂಲಕ ಜನರನ್ನು ರಂಜಿಸುವ ಕಾಯಕ ಮಾಡುತ್ತಿದ್ದರು. ಇದರ ಜೊತೆಗೆ ಜನರ ಆಪ್ತ ಮಾರ್ಗದರ್ಶಕರಾಗಿಯೂ ತಮ್ಮ ಸೇವೆಯನ್ನು ವಿಸ್ತರಿಸಿಕೊಂಡಿದ್ದರು. ಕಲ್ಯಾಣದ ಶರಣರಲ್ಲಿ ಬಹುಮುಖ್ಯ ಪಾತ್ರ ವಹಿಸಿದ ಬಹುರೂಪಿ ಚೌಡಯ್ಯನವರು ” ರೇಕಣ್ಣಪ್ರಿಯ ನಾಗಿನಾಥ ” ಎಂಬ ಅಂಕಿತವನ್ನು ಇಟ್ಟುಕೊಂಡಿದ್ದರು. ಚೌಡಯ್ಯನವರು ಪೂರ್ವಾಶ್ರಮದಲ್ಲಿ ನಾಥ ಪರಂಪರೆಯಿಂದ ಪ್ರಭಾವಿತರಾಗಿ ನಂತರದಲ್ಲಿ ಕಲ್ಯಾಣವನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದರು.

ಗಣ ಸಹಸ್ರ ನಾಮ,ಗುರುರಾಜ ಚರಿತ್ರೆ, ವೀರಶೈವಾಮೃತ ಮಹಾಪುರಾಣ, ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ, ರತ್ನಾಕರ ಕೃತಿಗಳಲ್ಲಿ ಜಾನಪದ ಹಾಡು,ಹಂತಿಪದ, ಲಾವಣಿಪದ ಸುಗ್ಗಿ ಪದಗಳಲ್ಲಿ ಶರಣ ಬಹುರೂಪಿ ಚೌಡಯ್ಯನವರ ಉಲ್ಲೇಖಗಳನ್ನು ಕಾಣುತ್ತೇವೆ. ಇದು ಅವರಿಗೆ ಪೂರ್ವಜರಿಂದ ಬಂದ ಬಳುವಳಿ. ಚೌಡಯ್ಯನವರು ಈ ಸುಂದರ ಕಲೆಯನ್ನು ಬಸವ ತತ್ವಗಳನ್ನು ಹರಡಲು ಹೊಸ ವಿಚಾರಗಳನ್ನು ಜನಮನಕ್ಕೆ ಮುಟ್ಟಿಸಲು ಸಮರ್ಥವಾಗಿ ಬಳಸಿಕೊಂಡರು ಕಾಯಕ ದಾಸೋಹ ಸಿದ್ದಾಂತಗಳಲ್ಲಿ ಅಗಾಧ ನಂಬಿಕೆಯುಳ್ಳ ಚೌಡಯ್ಯನವರು ಅವುಗಳನ್ನು ತಮ್ಮ ಬದುಕಿನಲ್ಲಿ ರೂಡಿಸಿಕೊಂಡು ಶರಣರ ಆಚರಣೆ ವೃತ ನೇಮಗಳು ಹೇಗಿರಬೇಕು ಎಂಬುದನ್ನು ಬೇರೆ ಬೇರೆ ಪಾತ್ರಗಳಲ್ಲಿ ರಸವತ್ತಾಗಿ ಮನಮುಟ್ಟುವಂತೆ ತೋರುತ್ತಿದ್ದರು ಹಾಸ್ಯ ಶೃಂಗಾರ ವಿಡಂಬನೆ ಮತ್ತು ಟೀಕೆಗಳ ಅಭಿನಯಗಳ ಮೂಲಕ ಜನರನ್ನು ಎಚ್ಚರಿಸುವ ದಿಟ್ಟ ಗಣಾಚಾರ ಕಾಯಕ ಇವರದಾಗಿತ್ತು ಎಂದು ಹೇಳುತ್ತಾ, ಅವರ ಜೀವನದ ಇನ್ನಿತರ ಪ್ರಮುಖ ಘಟ್ಟಗಳನ್ನು ಹಂಚಿಕೊಳ್ಳುತ್ತಾ,ಅವರ ರಾಮ ಕ್ರಿಯಾರಾಗ, ಶಿವಪಾರಿಜಾತ ರಚಿಸಿದ್ದರ ಜೊತೆಗೆ ಹಲವಾರು ವಚನಗಳ ಅರ್ಥವನ್ನು ಅತ್ಯಂತ ಸರಳ ರೀತಿಯಲ್ಲಿ ನಮಗೆಲ್ಲರಿಗೂ ಮನದಟ್ಟು ಮಾಡಿದರು
ನಂತರ ಅಧ್ಯಕ್ಷರಾದ ಡಾ. ಶಶಿಕಾಂತ ಪಟ್ಟಣ ಅವರು, ತಾವು ಮೂವತ್ತು ವರ್ಷಗಳಿಂದ ವಚನಗಳ ಅಧ್ಯಯನದಲ್ಲಿ ಮತ್ತು ಸಂಶೋಧನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಬಗೆ, ಬಹು ರೂಪಿ ಚೌಡಯ್ಯನವರು ಹುಬ್ಬಳ್ಳಿಯ ಸಮೀಪದಲ್ಲಿರುವ ಭೈರಿದೇವರ ಕೊಪ್ಪದಲ್ಲಿ ಹಲವು ವರ್ಷಗಳ ಕಾಲ ತಂಗಿ, ಅಲ್ಲಿಯೇ ಐಕ್ಯರಾಗಿದ್ದುದನ್ನು ಹೇಳುತ್ತಾ, ಶರಣರ ಸಮಾಧಿ, ಕಾಲ,ಇತಿಹಾಸ,ಚರಿತ್ರೆಗಳ ಆಳವಾದ ಅಧ್ಯಯನದ ಅಗತ್ಯತೆ ಇದೆ ಎನ್ನುವುದನ್ನು ಒತ್ತಿ ಹೇಳಿದರು.
ಶರಣೆ ಪ್ರೇಮಕ್ಕ ಹೊರಟ್ಟಿ ಅವರ ವಚನ ಪ್ರಾರ್ಥನೆ, ಶರಣೆ ಸುಧಾ ಪಾಟೀಲ ಅವರ ಸ್ವಾಗತ, ಶರಣೆ ಲತಾ ಚಿನಿ ವಾರ ಅವರ ಶರಣು ಸಮರ್ಪಣೆ, ಶರಣೆ ಅನ್ನಪೂರ್ಣ ಅಗಡಿ ಅವರ ವಚನ ಮಂಗಳ ಮತ್ತು ಶರಣೆ ವಿದ್ಯಾ ಮುಗ್ದುಮ್ ಅವರ ನಿರೂಪಣೆಯೊಂದಿಗೆ ಕಾರ್ಯಕ್ರಮ ಸುಗಮವಾಗಿ ಸಂಪೂರ್ಣಗೊಂಡಿತು.

ವಿಶೇಷ ದತ್ತಿ ಉಪನ್ಯಾಸ-೩೧೧
ವಚನ ಅಧ್ಯಯನ ವೇದಿಕೆ ಬಸವಾದಿ ಶರಣರ ಚಿಂತನ ಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣ ಶ್ರೀ ಶಿವಾನಂದ ಕಲಕೇರಿ ಆಯುಕ್ತರು ಆದಾಯ ತೆರಿಗೆ ಇಲಾಖೆ ಬೆಂಗಳೂರು ಇವರ ತಂದೆ ಹಣಮಂತರಾಯ ರಾಮಪ್ಪ ಕಲಕೇರಿ ಮತ್ತು ಲಿಂ. ಗಿರಿಜಾದೇವಿ.ಎಚ್.ಕಲಕೇರಿ ಅವರ ಹೆಸರಿನಲ್ಲಿ ವಿಶೇಷ ದತ್ತಿ ಉಪನ್ಯಾಸ ೩೧೧.
