ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ೨೦೨೩-೨೪ ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಯೋಜನೆಯಡಿಯಲ್ಲಿ ರೂ ೨೫ ರೂ ಲಕ್ಷ ಮೊತ್ತದಲ್ಲಿ ಸಿಂದಗಿ ಪಟ್ಟಣದ ೧೪ನೇ ವಾರ್ಡಿನ ಬೊಮ್ಮಲಿಂಗೇಶ್ವರ ದೇವಸ್ಥಾನದ ಹತ್ತಿರವಿರುವ ಪುರಾತನ ಬಾವಿಯನ್ನು ಸ್ವಚ್ಛಗೊಳಿಸಿ ನೂತನವಾಗಿ ನಿರ್ಮಾಣವಾದ ನೀರಿನ ಬಾವಿಯನ್ನು ಶಾಸಕ ಅಶೋಕ ಮನಗೂಳಿ ಉದ್ಘಾಟಿಸಿದರು.
ಇದೆ ಸಂದರ್ಭದಲ್ಲಿ ಸಾರಂಗಮಠದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯ, ಪುರಸಭೆ ಅಧ್ಯಕ್ಷ ಡಾ|| ಶಾಂತವಿರ ಮನಗೂಳಿ, ಉಪಾಧ್ಯಕ್ಷ ಸಂದೀಪ ಚೌರ, ಗೊಲ್ಲಾಳ ಬಂಕಲಗಿ, ಬ್ಲಾಕ್ ಅಧ್ಯಕ್ಷ ಸುರೇಶ ಪೂಜಾರಿ, ಜಿಲ್ಲಾ ಕೆಡಿಪಿ ಸದಸ್ಯ ಶಿವಣ್ಣ ಕೊಟರಗಸ್ತಿ, ಮಲ್ಲು ಸದುಗೋಳ, ಸುನಂದಾ ಯಂಪುರೆ, ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿ ರವೀಂದ್ರ ಬಂಥನಾಳ, ಕೆಆರ್‌ಐಡಿಎಲ್ ಅಧಿಕಾರಿ ರಾಜಶೇಖರ್, ಅಳ್ಳೊಳ್ಳಿ ಬುಡ್ಡಾ, ಪ್ರಕಾಶ ಪೂಜಾರಿ, ಸೇರಿದಂತೆ ಇನ್ನಿತರರು ಇದ್ದರು.

