Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭಾರತ ಶ್ರೀಮಂತ ಸಂಸ್ಕೃತಿ ಪೋಷಿಸುತ್ತ ಸಾರ್ವತ್ರಿಕ ಮೌಲ್ಯಗಳನ್ನು ಜಗತ್ತಿಗೆ ಬಿತ್ತರಿಸುತ್ತಿದೆ. ಅಂತಹ ಮೌಲ್ಯಾಧಾರಿತ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಲು ಇಂದಿನ ಯುವ ಜನಾಂಗ ಹಿಂದೆಟು ಹಾಕುತ್ತಿರುವುದು ವಿಷಾದನೀಯ ಸಂಗತಿ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತರ ಫೆಡರೇಶನದ ರಾಷ್ಟ್ರೀಯ ಅಧ್ಯಕ್ಷ ಡಾ.ಜಾವೀದ ಜಮಾದಾರ ಹೇಳಿದರು.ನಗರದ ಬಿ.ಎಲ್.ಡಿ.ಈ. ಅಸೋಶಿಯೇಶನ್ ಎ.ವಿ.ಎಫ್. ಆಯುರ್ವೇದ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ, ನೆಹರು ಯುವ ಕೇಂದ್ರ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ ೨೦೨೫ನೇ ಸಾಲಿನ ವಿಜಯಪುರ ಜಿಲ್ಲಾ ಮಟ್ಟದ ಯುವಜನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಪಾಶ್ಚಾತ್ಯ ಸಂಸ್ಕೃತಿಯ ಅತಿಯಾದ ವ್ಯಾಮೋಹದಿಂದ ಯುವಜನತೆ ನಮ್ಮ ಸಂಸ್ಕೃತಿಯ ಬಗ್ಗೆ ಒಲವು ಬೆಳೆಸಿಕೊಳ್ಳುತ್ತಿಲ್ಲ. ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಕರಣೆ ಮಾಡುವದಕ್ಕಿಂತ ನಮ್ಮ ನೆಲದ ಭವ್ಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕು ಎಂದರು.ಜಾನಪದ ಸಂಸ್ಕೃತಿ ಉಳಿಸಿ ಬೆಳೆಸಲು ಪ್ರತಿಯೊಬ್ಬರು ಪಣತೊಡಬೇಕಾಗಿದೆ. ಜನಪದ ಕಲೆಗಳು ಮಾನವೀಯ ಸಂಬಂಧದ ಸರಪಳಿ ಜಾನಪದ ಕಲೆ ನಮ್ಮ ಪೂರ್ವಜರು ನೀಡಿದ ಅನುಪಮ ಕೊಡುಗೆ,…

Read More

ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಕಳೆದ ೪೫ ದಿನಗಳಿಂದ ಕೆಟ್ಟು ನಿಂತಲ್ಲೆ ನಿಂತಿರುವ ಅಂಬ್ಯುಲೇನ್ಸ ದುರಸ್ತಿಗೊಳಿಸಿ ರೋಗಿಗಳ ಹಾಗೂ ಅಪಘಾತ ಸೇವೆಗೆ ಲಭ್ಯವಾಗುವಂತೆ ನೋಡಿಕೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ.ಈ ವೇಳೆ ಮಾತನಾಡಿದ ಮುಖಂಡರು, ಸರಕಾರದ ಕೆಲಸ ದೇವರ ಕೆಲಸ ಸೇವೆಗೆ ಅಂಬ್ಯುಲೆನ್ಸ ಇಲ್ಲದೆ ನಿತ್ಯ ರೋಗಿಗಳ ಪರದಾಟ ಮುಂದುವರೆದಿದೆ. ಇದನ್ನು ಸಾಕಷ್ಟು ಬಾರಿ ಮೇಲಾಧಿಕಾರಿಗಳ ಗಮನಕ್ಕೂ ತಂದರೂ ಪ್ರಯೋಜನ ಇಲ್ಲದಂತಾಗಿದೆ. ಆದರೆ ಅಧಿಕಾರಿಗಳು ಯಾವುದೆ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಇನ್ನಾದರೂ ಆದಷ್ಟು ಬೇಗನೆ ಅಧಿಕಾರಿಗಳು ಅಂಬ್ಯೂಲೆನ್ಸ ಸೇವೆಗೆ ಅನುಕೂಲ ಮಾಡಿಕೊಡಬೇಕೆಂದು ಪ್ರಮುಖರಾದ ಶಿವಶಂಕರಯ್ಯಾ ಜಿ ಮಠ, ರೈತ ಸಂಘ ಹಾಗೂ ಹಸೀರು ಸೇನೆ ಜಿಲ್ಲಾ ಸಂಚಾಲಕ ನಜೀರ ನಂದರಗಿ, ಶಿವಪ್ಪ ಪಟ್ಟಣಶೆಟ್ಟಿ ಆಗ್ರಹಿಸಿದ್ದಾರೆ. “ಈಗಾಗಲೆ ಡಿಎಚ್ಓ ಅವರ ಗಮನಕ್ಕೆ ಈ ವಿಷಯ ತರಲಾಗಿದೆ. ಅಂಬ್ಯುಲೆನ್ಸ ದುರಸ್ತಿ ಮಾಡಲಾಗುವದೆಂದು ಹೇಳಿದ್ದಾರೆ. ಯಾವಾಗ ಮಾಡಿಸ್ತಾರೋ ಗೊತ್ತಿಲ್ಲ.” – ಡಾ ಅಕ್ಷಯಕುಮಾರ ವಾಗಮೋರೆಪ್ರಾಥಮಿಕ ಆರೋಗ್ಯ ಕೇಂದ್ರ, ತಿಕೋಟಾ.

Read More

ಪಂದ್ಯಾವಳಿಯ ಲಾಂಛನ ಮತ್ತು ಟ್ರೋಪಿ ಬಿಡುಗಡೆಗೊಳಿಸಿ ಶಾಸಕ ಅಶೋಕ ಮನಗೂಳಿ ಭರವಸೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಗಳು ಸಿಂದಗಿ ಪಟ್ಟಣದಲ್ಲಿ ಜರುಗುತ್ತಿರುವುದು ಅತ್ಯಂತ ಸಂತಸ ತಂದಿದೆ. ಪಂದ್ಯಾವಳಿ ಯಶಸ್ವಿಗೆ ಎಲ್ಲ ರೀತಿಯ ಸಹಕಾರವನ್ನು ನೀಡುವುದಾಗಿ ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು.ಸಿಂದಗಿ ಪಟ್ಟಣದ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ. ಪಪೂ ಕಾಲೇಜಿನಲ್ಲಿ ಹಮ್ಮಿಕೊಂಡ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಬಾಲಕ ಮತ್ತು ಬಾಲಕಿಯರ ಕುಸ್ತಿ ಪಂದ್ಯಾವಳಿಯ ಲಾಂಛನ ಮತ್ತು ಟ್ರೋಪಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುತ್ತಿರುವ ವಿದ್ಯಾರ್ಥಿಗಳಿಗೆ ತಾಲೂಕ ಶಿಕ್ಷಣ ಪ್ರಸಾರಕ ಮಂಡಳಿಯಿಂದ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಹಾಗೂ ತಾಲೂಕಾಡಳಿತದಿಂದ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುವುದು. ಇಂದಿನ ಪಾಲಕರು ಕೇವಲ ಶಿಕ್ಷಣದ ಬಗ್ಗೆ ಮಾತ್ರ ಒಲವನ್ನು ತೋರಿಸುತ್ತಿದ್ದಾರೆ. ಅದರ ಜೊತೆಗೆ ಕ್ರೀಡೆ ಬಗ್ಗೆನೂ ಮಕ್ಕಳಲ್ಲಿ ಹೆಚ್ಚು ಆಸಕ್ತಿಯನ್ನು ಮೂಡಿಸಬೇಕಾಗಿದೆ. ದೈಹಿಕ ಮಾನಸಿಕ ಮತ್ತು ಬೌದ್ಧಿಕ ಪ್ರಕ್ರಿಯೆಗಳು ಕ್ರೀಡೆಗಳಿಂದ ಉತ್ತಮಗೊಳ್ಳುತ್ತವೆ. ಕ್ರೀಡಾ…

Read More

ಬಿಜೆಪಿ ಮಂಡಲ ಮತ್ತು ರೈತ ಮೋರ್ಚಾ ವತಿಯಿಂದ ಅಹೋರಾತ್ರಿ ಧರಣಿ | ಕಾಂಗ್ರೆಸ್ ಸರಕಾರದ ವಿರುದ್ಧ ಆಕ್ರೋಶ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಅತಿವೃಷ್ಟಿಯಿಂದ ಉತ್ತರ ಕರ್ನಾಟಕದಲ್ಲಿ ರೈತರು ಬೆಳೆದ ಬೆಳೆಗಳೆಲ್ಲ ಹಾನಿಯಾಗಿ ಸಂಕಷ್ಟದಲ್ಲಿರುವ ರೈತರ ಬಗ್ಗೆ ಯೋಚನೆ ಮಾಡದೆ ಅಧಿಕಾರಕ್ಕಾಗಿ ಸಭೆ ಮಾಡುತ್ತಿರುವ ಸರಕಾರವನ್ನು ನನ್ನ ನಿರಂತರ ೪೫ ವರ್ಷಗಳ ರಾಜಕಾರಣದಲ್ಲಿ ಇಂತಹ ಹೊಲಸು ಸರಕಾರವನ್ನು ನಾನು ಎಂದು ನೋಡಿಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಆಕ್ರೋಶ ವ್ಯಕ್ತಪಡಿಸಿದರು.ಸಿಂದಗಿ ಪಟ್ಟಣದ ತಹಶೀಲ್ದಾರ್ ಆವರಣದಲ್ಲಿ ಬಿಜೆಪಿ ಮಂಡಲ ಹಾಗೂ ರೈತ ಮೋರ್ಚಾ ವತಿಯಿಂದ ಹಮ್ಮಿಕೊಂಡ ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೀವು ಏನಾದರೂ ಮಾಡಿಕೊಂಡ ಹಾಳು ಬಾವಿಗೆ ಬಿಳಿ, ರೈತರ ಕಣ್ಣಿರಿನಲ್ಲಿ ಕೈತೊಳೆದುಕೊಳ್ಳುತ್ತಿದ್ದಾರೆ. ಇದೆಲ್ಲವನ್ನು ಬಿಟ್ಟು ನೀವು ಕುರ್ಚಿಗಾಗಿ ಬಡೆದಾಡುತ್ತಿರುವುದು ಸರಿಯಲ್ಲ. ರೈತರು ಬೆಳೆದ ಬೆಳೆಯಲ್ಲ ಹಾಳಾಗಿ ಹೋಗಿದೆ. ಸರಕಾರದ ಬೆಳೆಹಾನಿ ಸಮೀಕ್ಷೆಯ ವರದಿ ತಪ್ಪಾಗಿದ್ದು, ಸರಿಯಾದ ರೀತಿಯಲ್ಲಿ ಸಮೀಕ್ಷೆ ನಡೆಸಿ ಪರಿಹಾರ ಒದಗಿಸಬೇಕು. ರೈತರಿಗೆ ಪರಿಹಾರ ಸಿಗುವವರೆಗೂ ಧರಣಿ…

Read More

ಯಾವ ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ | ಹಾಸನಾಂಬೆ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಹಾಸನ: ಸಂಪುಟ ಸಹೋದ್ಯೋಗಿಗಳಿಗೆ ನಾನು ಮೊನ್ನೆ ಆಯೋಜಿಸಿದ್ದ ಡಿನ್ನರ್ ಪಾರ್ಟಿಗೂ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ. ಆಗಾಗ ಹೀಗೆ ಪಾರ್ಟಿ ಕೊಡುತ್ತಿರುತ್ತೇನೆ, ಆಗಾಗ ಸೇರುತ್ತೀವಿ, ಊಟ ಮಾಡುತ್ತೀವಿ, ಗೆಟ್ ಟುಗೆದರ್ ಮಾಡುತ್ತಿರುತ್ತೇವೆ, ಪಕ್ಷದ ವಿಚಾರವಾಗಿ ಚರ್ಚೆ ಮಾಡುತ್ತೀವೆ, ಅದು ಬಿಟ್ಟರೆ ಔತಣಕೂಟದಲ್ಲಿ ನಾಯಕತ್ವ ಬದಲಾವಣೆಯಾಗಲಿ, ಬೇರೆ ರಾಜಕೀಯ ವಿಚಾರಗಳು ಚರ್ಚೆಯಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.ಬುಧವಾರ ಹಾಸನಾಂಬೆ ದೇವಿಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಹೈಕಮಾಂಡ್ ಈಗ ಬಿಹಾರ ಚುನಾವಣೆ ಮೇಲೆ ಗಮನ ಹರಿಸಿದ್ದಾರೆ. ಆಮೇಲೆ ಹೈಕಮಾಂಡ್ ಏನು ಹೇಳುತ್ತಾರೆ ನೋಡೋಣ ಎಂದರು.ಯಾವ ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲನವೆಂಬರ್ ನಲ್ಲಿ ರಾಜ್ಯ ಸರ್ಕಾರದಲ್ಲಿ ಕ್ರಾಂತಿಯಾಗುತ್ತದೆ ಎಂಬ ಚರ್ಚೆ ನಡೆಯುತ್ತಿದೆಯಲ್ಲವೇ ಎಂದು ಸುದ್ದಿಗಾರರು ಕೇಳಿದಾಗ ಯಾವ ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ, ಯಾವ ಶಾಸಕರೂ ಇದರ ಬಗ್ಗೆ ಅಪಸ್ವರ, ಕೂಗು ಎತ್ತುತ್ತಿಲ್ಲ, ಎಲ್ಲ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪುರಸಭೆಗೆ ಶಾಶ್ವತ ಆದಾಯವನ್ನು ತರುವ ನಿಟ್ಟಿನಲ್ಲಿ ಕಂದಾಯ ಇಲಾಖೆಯ ಹೆಸರಿನಲ್ಲಿರುವ ಜಾಗೆಯನ್ನು ಪುರಸಭೆಯ ಹೆಸರಿನಲ್ಲಿ ಹಸ್ತಾಂತರ ಮಾಡಿ ೧.೧೪ ಎಕರೆ ಜಾಗೆಯಲ್ಲಿ ಸುಸಜ್ಜಿತವಾದ ಮೇಘಾ ಮಾರುಕಟ್ಟೆಯನ್ನು ನಿರ್ಮಿಸಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಸಿಂದಗಿ ಪಟ್ಟಣದ ಹಳೆ ತಹಶೀಲ್ದಾರ್ ಆವರಣದಲ್ಲಿ ಹಮ್ಮಿಕೊಂಡ ೨೦೨೪-೨೫ನೆಯ ಸಾಲಿನ ಎಸ್‌ಎಫ್‌ಸಿ ವಿಶೇಷ ಅನುದಾನದಲ್ಲಿ ಮೇಗಾ ಮಾರುಕಟ್ಟೆ ನಿರ್ಮಿಸುವ ಮೊದಲನೆಯ ಹಂತದ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸಿಂದಗಿ ನಗರದಲ್ಲಿ ಮೇಘಾ ಮಾರುಕಟ್ಟೆ ನಿರ್ಮಿಸಿ ನಗರವನ್ನು ಅಭಿವೃದ್ಧಿಪಡಿಸಬೇಕೆನ್ನುವ ಮಹಾದಾಸೆ ನನ್ನದು. ಎಲ್ಲ ವ್ಯಾಪಾರಸ್ಥರಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ವ್ಯಾಪಾರ ವೃದ್ಧೀಕರಣಕ್ಕಾಗಿ ರಾಜ್ಯ ಸರಕಾರಕ್ಕೆ ಮನವಿ ಮಾಡಿಕೊಂಡಾಗ ಸಿಎಂ ಸಿದ್ಧರಾಮಯ್ಯ, ಪೌರಾಡಳಿತ ಸಚಿವ ರಹೀಂಖಾನ್, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ಅವರಿಗೆ ೨೭ಕೋಟಿ ೬೮ಲಕ್ಷ ರೂ. ಪ್ರಸ್ಥಾವನೆ ಸಲ್ಲಿಸಿದ್ದು, ಮೊದಲನೆ ಹಂತದಲ್ಲಿ ೫ ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ. ಒಟ್ಟು ೧೩೨ಮಳಿಗೆಗಳ ಕಟ್ಟಡ ನಿರ್ಮಾಣವಾಗುತ್ತದೆ.…

Read More

ಉದಯರಶ್ಮಿ ದಿನಪತ್ರಿಕೆ ಗದಗ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕದಂಬ ಸೈನ್ಯ ರಾಜ್ಯ ಅಧ್ಯಕ್ಷ ಬೇಕ್ರಿ ರಮೇಶ್ ಮತ್ತು ಕನಾ೯ಟಕ ರಾಜ್ಯ ಶ್ರೀ ಪಂ ಪುಟ್ಟರಾಜ ಗವಾಯಿ ರೈತ ಸಂಘ ರಾಜ್ಯ ಅಧ್ಯಕ್ಷ ಎಂ ಪಿ ಮುಳಗುಂದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಾಯಾ೯ಲಯಕೆ ತೆರಳಿ ಮನವಿ ಸಲ್ಲಿಸಲಾಯಿತು.ಈ ವೇಲೆ ಮಾತನಾಡಿದ ಉಭಯ ಮುಖಂಡರು, ದ್ವಿಭಾಷಾ ನೀತಿ ಜಾರಿಗೆ ತಂದಿರುವಂತೆ ಮತ್ತು ಕನ್ನಡ ಕನ್ನಡಿಗರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊಗಳನ್ನು ಬಿತ್ತರಿಸಿ ಕನ್ನಡಿಗರು ಪರಭಾಷಿಕರ ಮೇಲೆ ಪುಂಡಾಟಿಕೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಸುಳ್ಳು ಆರೋಪ ಮಾಡಿ ಬಿತ್ತರಿಸುತಿದ್ದಾರೆ. ಕನ್ನಡಿಗರ ಮೇಲೆ ದೌರ್ಜನ್ಯ ಪುಂಡಾಟಿಕೆ ನಡೆಸುತ್ತಿದ್ದಾರೆ. ಇಂತಹವರ ವಿರುದ್ಧ ನಾಡ ದ್ರೋಹಕಾನೂನು ಜಾರಿಗೆ ತರಲೇಬೇಕು, ಹೊರ ರಾಜ್ಯ , ಬಾಂಗ್ಲಾ ದೇಶದ ಆಕ್ರಮ ವಲಸಿಗರಿಗೆ ಸುಮಾರು ೭೦ ಸಾವಿರ ಹೆಚ್ಚಿನ ಪಡಿತರ ಚೀಟಿ ರದ್ದು ಮಾಡಬೇಕು. ವಿಧಾನ ಸೌಧ ಮುಂದೆ ಕದಂಬ ಮಯೂರ ವರ್ಮ, ಚಾಲುಕ್ಯ ಪರಮೇಶ್ವರ ಇಮ್ಮಡಿ ಪುಲಿಕೇಶಿ ಪುತ್ಥಳಿ ಸ್ಥಾಪಿಸಬೇಕು, ಎಲ್ಲಾ ಜಿಲ್ಲಾ…

Read More

ರಾಷ್ಟ್ರೀಯ ಮೀನುಗಾರರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಡಾ.ಗೌತಮ್ ಆರ್.ಚೌಧರಿ ವಿಷಾದ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಂಗಭೂಮಿಯ ಮೇಲೆ ತಮ್ಮದೇ ವಿಶಿಷ್ಟ ಶೈಲಿಯ ಹಾಸ್ಯದ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಜಿಲ್ಲೆಯ ಹೆಮ್ಮೆಯ ಕಲಾವಿದ ರಾಜು ತಾಳಿಕೋಟಿ ಸಾವಿನಿಂದ ರಂಗಭೂಮಿ ಬಡವಾಗಿದೆ ಎಂದು ರಾಷ್ಟ್ರೀಯ ಮೀನುಗಾರರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಡಾ.ಗೌತಮ್ ಆರ್.ಚೌಧರಿ ವಿಷಾದಿಸಿದರು.ಈ ಕುರಿತು ಮಂಗಳವಾರ ಪತ್ರಿಕಾ ಹೇಳಿಕೆ ನೀಡಿದ ಅವರು, ನಿಧನರಾಗಿರುವ ಧಾರವಾಡ ರಂಗಾಯಣ ನಿರ್ದೇಶಕರಾಗಿದ್ದ ರಾಜು ತಾಳಿಕೋಟಿ ಅವರು ಹಾಸ್ಯದ ಮೂಲಕ ಸಮಾಜದ ಲೋಪ ತಿದ್ದುವ ಮಹತ್ವದ ಸೇವೆ ಮಾಡಿದ್ದರು. ರಂಗಭೂಮಿ ಅಭಿವೃದ್ಧಿಗೆ ವಿಶಿಷ್ಟ ಕೊಡುಗೆ ನೀಡಿದ್ದರು. ಬಡತನದಲ್ಲಿ ಹುಟ್ಟಿ, ತಾಳಿಕೋಟೆಯ ಶ್ರೀಖಾಸ್ಗತೇಶ್ವರ ಮಠದಲ್ಲಿ ತ್ರಿವಿಧ ದಾಸೋಹ ಮಾಡಿ, ಸ್ವಂತ ನಾಟಕ ಕಂಪನಿ ಕಟ್ಟಿ ಬೆಳೆಸಿದ್ದರು. ತಮ್ಮ ಕಷ್ಟದ ಮಧ್ಯೆಯೇ ಕುಟುಂಬದ ನಿರ್ವಹಣೆ ಮಾಡುತ್ತ, ಸಾಮಾಜಿಕ ಸೇವೆಯಲ್ಲೂ ತೊಡಗಿದ್ದರು. ಹಾಸ್ಯ ಕಲಾವಿದರಾಗಿ ವಿಜಯಪುರ ಜಿಲ್ಲೆ ಮಾತ್ರವಲ್ಲ ಇಡೀ ಉತ್ತರ ಕರ್ನಾಟಕಕ್ಕೆ ತಮ್ಮ…

Read More

ಲೇಖನ- ಡಾ.ಜಯವೀರ ಎ.ಕೆಖೇಮಲಾಪುರ ಉದಯರಶ್ಮಿ ದಿನಪತ್ರಿಕೆ ಲೋಕಕ್ಕೆ ಸಿಹಿ ನೀಡುವ ಸಕ್ಕರೆ ಜಿಲ್ಲೆಯ ರೈತರ ಬದುಕು ಮಾತ್ರ ಇನ್ನೂ ಸಿಹಿಯಾಗದೆ ಇರುವುದು ಘನ ಘೋರ ಸತ್ಯ. ಸುಮಾರು ಎರಡು ದಶಕಗಳಿಂದಲೂ ಗೋಗರೆಯುತ್ತಲೇ ಬಂದಿರುವ ಅವರ ಹತ್ತು ಹಲವು ಮಹತ್ವದ ಬೇಡಿಕೆಗಳು ಈವರೆಗೂ ಸರಿಯಾಗಿ ಈಡೇರದೆ ವರ್ಷವಿಡೀ ಚಿಂತೆಯ ಹೊಂಡದಲ್ಲಿ ಮುಳುಗೇಳುತ್ತಲಿರುವುದು ಮಾತ್ರ ಅನಿವಾರ್ಯವಾಗಿದೆ.ಮಾರುಕಟ್ಟೆಯಲ್ಲಿ ರಸಗೊಬ್ಬರ ಬೆಲೆ ಏರಿಕೆ ಪರಿಣಾಮ, ಅನಾವೃಷ್ಟಿಯಿಂದ ಸಮರ್ಪಕ ಬೆಳೆ ಬಾರದಿರುವುದು, ಕೀಟಗಳ ಬಾಧೆ, ಕಬ್ಬು ಬೆಳೆಗೆ ವೈಜ್ಞಾನಿಕ ಹಾಗೂ ನ್ಯಾಯಯುತ ಸೂಕ್ತ ಬೆಲೆ ಸಿಗದೇ ಸಾಲಬಾಧೆಯಿಂದ ರೈತರು ಆತ್ಮಹತ್ಯೆ ಹಾದಿ ಹಿಡಿಯುತ್ತಿರುವುದು ಸಾರ್ವತ್ರಿಕ ಸತ್ಯ.ಪ್ರಸ್ತುತ ದೀಪಾವಳಿ ಹಬ್ಬದ ಆಸುಪಾಸು ಈ ಬಾರಿ ಕಬ್ಬು ನುರಿಸುವ ಹಂಗಾಮು ಆರಂಭವಾಗುವುದಿದೆ. ಆದರೂ ಈವರೆಗೂ ದರ ಪರಿಷ್ಕರಣೆ ಆಗದೇ ಇರುವುದು ರೈತರ ತೀವ್ರ ಆತಂಕ ಹೆಚ್ಚಾಗಲು ಕಾರಣವಾಗಿದೆ.ಪ್ರಸ್ತುತ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 29 ಸಕ್ಕರೆ ಕಾರ್ಖಾನೆಗಳಿವೆ ಎಂಬುದು ಗಮನಾರ್ಹ. ಬಹುತೇಕ ಸಕ್ಕರೆ ಕಾರ್ಖಾನೆಗಳು ಸಚಿವರ, ಶಾಸಕರ ಹಾಗೂ ಪ್ರಭಾವಿಗಳ ಹಿಡಿತದಲ್ಲಿರುವುದರಿಂದ ರೈತರ…

Read More

ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಒಮ್ಮೆ ಕ್ಲಾಸಿನಲ್ಲಿ ಗುರುಗಳು ಟಾಪರ್, ಎವರೆಜ್,ಬ್ಯಾಕ್‌ಬೆಂರ‍್ಸ್ಗಳ ಗುಂಪು ಮಾಡಿದರು. ಆ ಎಲ್ಲ ಮಕ್ಕಳಿಗೆ ಒಂದು ಗ್ರೂಪ್ ಪ್ರೊಜೆಕ್ಟ್ ನೀಡಿದರು. ಅರವತ್ತು ದಿನಗಳಲ್ಲಿ ಯಾರು ಹೆಚ್ಚು ಪಾಲಕ್‌ನ್ನು ಬೆಳೆಯುವರೋ ಅವರಿಗೆ ಹೆಚ್ಚು ಅಂಕ ನೀಡಲಾಗುವುದು. ಯಾರು ಕಡಿಮೆ ಬೆಳೆಯುವರೋ ಅವರಿಗೆ ಕಡಿಮೆ ಅಂಕ ಎಂದು ಘೋಷಿಸಿದರು. ಎಲ್ಲ ಮಕ್ಕಳು ಅತ್ಯುತ್ಸಾಹದಿಂದ ಯೋಜನೆ ಹಾಕಲು ಶುರು ಮಾಡಿದರು. ಮರುದಿನವೇ ಮಣ್ಣನ್ನು ಹದಗೊಳಿಸಲು ಆರಂಭಿಸಿದರು. ಬೀಜವನ್ನು ಬಿತ್ತಿದರು. ಗೊಬ್ಬರವನ್ನು ಹಾಕಿದರು. ಎಲ್ಲ ಮಕ್ಕಳುವ ಬಹಳ ಪರಿಶ್ರಮ ವಹಿಸಿದರು. ಆದರೆ ಅರವತ್ತು ದಿನಗಳ ನಂತರ ಗುರುಗಳು ಬೆಳೆಯನ್ನು ನೋಡಿದಾಗ ಎಲ್ಲಕ್ಕಿಂತ ಕಡಿಮೆ ಟಾರ‍್ಸ್ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬ್ಯಾಕ್ ಬೆಂರ‍್ಸ್ ಬೆಳೆದಿದ್ದರು. ಆದರೆ ಅದರಲ್ಲಿ ಬಹಳಷ್ಟು ಪಾಲಕ್ ನಾಶವಾಗಿತ್ತು. ಎವರೆಜ್ ಮಕ್ಕಳು ಬಹಳ ಪ್ರಮಾಣದಲ್ಲಿ ಉತ್ತಮ ಗುಣಮಟ್ಟದ ಪಾಲಕ್‌ನ್ನು ಬೆಳೆದಿದ್ದರು.ಗುರುಗಳು ಮಕ್ಕಳನ್ನುದ್ದೇಶಿಸಿ ಹೀಗೆ ಹೇಳಿದರು: ಮಕ್ಕಳೇ, ಉಳಿದ ಎರಡು ತಂಡದವರು ಏಕೆ ವಿಫಲರಾದಿರಿ ಎಂಬುದಕ್ಕೆ ಸಿಸಿಟಿವಿ ಫೂಟೇಜ್‌ನ್ನು…

Read More