ತಿಕೋಟಾ ತಾಲ್ಲೂಕಿನೆಲ್ಲೆಡೆ ಸುರಿದ ಭಾರಿ ಮಳೆ | ತುಂಬಿ ಹರಿದ ಹಳ್ಳ ಕೊಳ್ಳ | ದೇವಸ್ಥಾನ ಜಲಾವೃತ |
ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ತಾಲ್ಲೂಕಿನೆಲ್ಲೆಡೆ ಮಂಗಳವಾರ ರಾತ್ರಿ ಸುರಿದ ಮಳೆದ ಹಳ್ಳಕೊಳ್ಳಗಳು, ಬಾಂದಾರಗಳು ತುಂಬಿ ಹರಿಯುತ್ತಿದ್ದು ಹಲವೆಡೆ ಅಪಾಯಮಟ್ಟ ಮೀರಿ ಸೇತುವೆ ಮೇಲೆ ನೀರು ಹರಿಯುತ್ತಿದೆ.
ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಸಂಗಮನಾಥ ಹಳ್ಳ ಬರಪೂರ ತುಂಬಿ ಹರಿಯುತ್ತಿದ್ದು, ದೇವಸ್ಥಾನ ಸಂಪೂರ್ಣ ನೀರಿನಲ್ಲಿ ಮುಳುಗಿದೆ. ಗರ್ಭಗುಡಿಯಲ್ಲಿ ಆರೇಳು ಅಡಿ ನೀರು ನಿಂತಿದ್ದು ಪೂಜಾ ಕೈಂಕರ್ಯ ಸ್ಥಗಿತಗೊಂಡಿದೆ. ಸೇತುವೆ ಮೇಲೆ ಅಪಾಯ ಮಟ್ಟ ಮೀರಿ ನೀರು ಹರಿಯುತ್ತಿದ್ದು, ನೀರಿನ ಜೊತೆ ಚೆಲ್ಲಾಟ ಆಡುತ್ತಾ ಬೈಕ್ ಮೇಲೆ ಯುವಕರು ಸೇತುವೆ ದಾಟುವಾಗ ಬೈಕ್ ನೀರಿನಲ್ಲಿ ಕೊಚ್ಚಿ ಹೋಗಿದೆ. ಬೈಕ್ ಸವಾರ ಜಸ್ಟ ಮಿಸ್ ಆಗಿ ದಡ ಸೇರಿದ್ದಾನೆ. ತಾಜಪುರ ರಸ್ತೆ ಸೇತುವೆ ಮೇಲೆ ನೀರು ಇರುವದರಿಂದ ಶಾಲಾ ಮಕ್ಕಳಿಗೆ ತೊಂದರೆಯಾಯಿತು. ಸ್ಥಳಿಯರು ಮಕ್ಕಳಿಗೆ ಸಹಾಯ ಮಾಡಿ ಸೇತುವೆ ದಾಟಿಸಿದರು.
ಅಧಿಕಾರಿ ಭೇಟಿ: ಕೆಜಿಎಸ್ ಶಾಲೆಗೆ ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಡಿ.ಮೋಸಲಗಿ, ಶಿಕ್ಷಣ ಸಂಯೋಜಕ ಜಿ.ಟಿ.ಕಾಗವಾಡ, ಸಿಆರ್ಪಿ ಸುಜಾತಾ ಬಾಗಲಕೋಟ ಭೇಟಿ ನೀಡಿ ಪರಿಶೀಲಿಸಿದರು.
ಮುಂಜಾಗೃತಾ ಕ್ರಮವಾಗಿ ತಹಶಿಲ್ದಾರ ಸುರೇಶ ಚವಲರ , ಪಿಎಸ್ಐ ದೇವರಾಜ ಉಳ್ಳಾಗಡ್ಡಿ ತುಂಬಿ ಹರಿಯುತ್ತಿರುವ ಹಳ್ಳಗಳ ಎರಡು ದಡಗಳಲ್ಲಿ ಹಗ್ಗ ಕಟ್ಟಿ ಪೋಲಿಸ್ ಸಿಬ್ಬಂದಿ ನಿಯೋಜನೆ ಮಾಡಿ ಯಾವುದೇ ಜೀವ ಹಾನಿಯಾಗದಂತೆ ಕ್ರಮ ಕೈಗೊಂಡಿದ್ದಾರೆ.
ಪ್ರವಾಹ ಪರಿಸ್ಥಿತಿ ನಿಯಂತ್ರಣ ಮುಂಜಾಗ್ರತಾ ಕ್ರಮಗಳಾದ ಡೋಣಿ ನದಿ ಮಿಂಚಿನ ಪ್ರವಾಹ, ಸಿಡಿಲು, ಪ್ರವಾಹ ಸಂದರ್ಭದಲ್ಲಿ ನೀರಿನಿಂದ ಆಗುವ ರೋಗಗಳ ತಡೆಗಟ್ಟುವಿಕೆ 24X7 ಸಹಾಯವಾಣಿ ಕೇಂದ್ರ ಸ್ಥಾಪನೆಗೆ ಗ್ರಾಮ ಪಂಚಾಯಿತಿ ಪಿಡಿಓಗಳ ಸಭೆ ಜರುಗಿಸಿ ಜನರಿಗೆ ತಿಳುವಳಿಕೆ ನೀಡಬೇಕೇಂದು. ಶಾಲಾ ಮಕ್ಕಳ ಹಾಗೂ ಜನ ಜಾನುವಾರುಗಳ ಸುರಕ್ಷತೆ, ಕುರಿತು ಕೈಗೊಳ್ಳಬೇಕಾದ ಕ್ರಮಗಳಬೇಕು ಎಂದು ಸಭೆಯಲ್ಲಿ ತಿಳಿಸಿದ್ದಾರೆ.
ಸಭೆಯಲ್ಲಿ ತಾಲ್ಲೂಕ ನೋಡಲ್ ಅಧಿಕಾರಿ ರಾಹುಲ್ ಕುಮಾರ್ ಭಾವಿ ದೊಡ್ಡಿ, ತಹಶಿಲ್ದಾರ ಸುರೇಶ ಚಾವಲರ, ತಾಲ್ಲೂಕ ಪಂಚಾಯಿತಿ ಇಓ ಬಸವಂತರಾಯ ಬಿರಾದಾರ, ಉಪತಹಶಿಲ್ದಾರ ಸೋಮಶೇಖರ ತಾವರಖೇಡ, ಆನಂದ ಕುಲಕರ್ಣಿ, ಕಂದಾಯ ನಿರೀಕ್ಷಕರು ಹಾಗೂ ಎಲ್ಲ ತಾಲ್ಲೂಕಾ ಮಟ್ಟದ ಅಧಿಕಾರಿಗಳು, ಪಿಡಿಓ ಮತ್ತು ಗ್ರಾಮ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.

ಶಾಲೆಗೆ ನುಗ್ಗಿದ ನೀರು
ಪಟ್ಟಣದ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಗೆ ನುಗ್ಗಿದ ನೀರು ಇಡೀ ವರ್ಗಕೋಣೆಗಳ ತುಂಬಾ ಆವರಿಸಿ ಆವಾಂತರ ಉಂಟು ಮಾಡಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಹರಿಯುವ ನೀರು ಶಾಲಾ ಮೈದಾನಕ್ಕೆ ನುಗ್ಗಿದರಿಂದ ಮಕ್ಕಳು ತೊಂದರೆ ಅನುಭವಿಸಿದರು. ಸ್ಥಳೀಯ ಆಡಳಿತ ಸೂಕ್ತ ಕ್ರಮ ಕೈಗೊಂಡು ಶಾಲಾ ಮೈದಾನಕ್ಕೆ ನೀರು ಹರಿಯದಂತೆ ಕ್ರಮ ಕೈಗೊಳ್ಳಬೇಕೆಂದು ಮುಖ್ಯೋಪಾಧ್ಯಾಯನಿ ವಿ.ಎಂ.ಸವನಳ್ಳಿ ವಿನಂತಿಸಿದರು.

