ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ವಿವಿಧ ಇಲಾಖೆ, ಸಂಘ ಸಂಸ್ಥೆಗಳ ಸಹಯೋಗದೊಡನೆ ಸ್ವಾತಂತ್ರೋತ್ಸವ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸೋಣ ಎಂದು ತಹಶೀಲ್ದಾರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಜರುಗಿದ ಸ್ವಾತಂತ್ರೋತ್ಸವ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ವಾತಂತ್ರೋತ್ಸವದ ಸಂಭ್ರಮದ ಆಚರಣೆಗೆ ಎಲ್ಲ ಇಲಾಖೆ, ಸಂಘ ಸಂಸ್ಥೆಗಳ ಸಹಕಾರ ಅಗತ್ಯ ಆದ್ದರಿಂದ ಸರ್ಕಾರದ ನಿರ್ದೇಶನ ಜೊತೆಗೆ ನಿಮ್ಮ ಸಲಹೆಗಳನ್ನು ಅನುಸರಿಸಿ ಆಚರಣೆ ಮಾಡೋಣ ಎಂದರು.
ಸಭೆಯಲ್ಲಿ ನಿವೃತ್ತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಕೆ.ಕುದರಿ, ಡಾ:ಆರ್.ಆರ್.ನಾಯಿಕ್, ಪ್ರಕಾಶ ಗುಡಿಮನಿ, ಕಾಶೀನಾಥ ತಳಕೇರಿ, ಸಿದ್ದು ಮೇಲಿಮನಿ, ಪ್ರಕಾಶ ಮಲ್ಲಾರಿ, ರಾಜು ಸಿಂದಗೇರಿ, ಅಜೀಜ್ ಯಲಗಾರ ಮಾತನಾಡಿದರು.
ಸಭೆಯಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನ, ಶಾಲಾ ಮಕ್ಕಳಿಗೆ ಉಪಹಾರದ ವ್ಯವಸ್ಥೆ, ಕಾರ್ಯಕ್ರಮಪೂರ್ಣ ಶಾಸಕರ ಉಪಸ್ಥಿತಿ, ಸರ್ಕಾರದ ನಡಾವಳಿ ಅನುಸಾರ ವೇದಿಕೆಯಲ್ಲಿ ಗಣ್ಯರ ಹಾಜರಾತಿ ಕುರಿತು ಚರ್ಚೆಗಳಾದವು.
ತಾಲ್ಲೂಕು ಪಂಚಾಯಿತಿ ಇಓ ಭಾರತಿ ಚೆಲುವಯ್ಯ, ಸಿಂದಗಿ ಬಿಇಓ ಎಂ.ಬಿ.ಯಡ್ರಾಮಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಎಸ್.ಬಾಗಲಕೋಟ, ಪಿಎಸ್‌ಐ ಸಚೀನ್ ಆಲಮೇಲಕರ, ಉಪತಹಶೀಲ್ದಾರ ಸುರೇಶ ಮ್ಯಾಗೇರಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಅಶೋಕ ಹೆಗಡೆ, ಸರ್ಕಾರಿ ಐಟಿಐ ಕಾಲೇಜು ಸಿಬ್ಬಂದಿ ಮಲ್ಲಿಕಾರ್ಜುನ ದೇವೂರ, ಚನ್ನಬಸು ಹೊಸಮನಿ, ಬಸವರಾಜ ದೇವಣಗಾಂವ, ಪಿ.ಎಸ್.ಮಿಂಚನಾಳ, ಜಿ.ಪಿ.ಬಿರಾದಾರ, ಬಿ.ಎಮ್.ತಳಕೇರಿ, ಸೋಮು ದೇವೂರ, ರಾಮು ದೇಸಾಯಿ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿ ಇದ್ದರು.

