Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ನಡೆದಿದೆ. ಬಡವರಿಗಾಗಿ ಕೆಲಸ ಮಾಡು ತ್ತಿದೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.ಸೋಮವಾರ ನಗರದ ಬಸ್ ನಿಲ್ದಾಣದಲ್ಲಿ ನೂತನ ಬಸ್‌ಗಳಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಸ್ತ್ರೀ ಶಕ್ತಿ ಯೋಜನೆಯ ಅಡಿಯಲ್ಲಿ ರಾಜ್ಯದಾದ್ಯಂತ 500 ಕೋಟಿ ಉಚಿತ ಪ್ರಯಾಣ ನಡೆದಿದೆ. ಜಮಖಂಡಿ ತಾಲೂಕಿನಲ್ಲಿ ₹2.40 ಕೋಟಿ ಜನ ಮಹಿಳೆಯರು ಉಚಿತ ಪ್ರಯಾಣ ನಡೆಸಿದ್ದಾರೆ. ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸಲು ಸರ್ಕಾರ ಕ್ರಮ ಜರುಗಿಸಿದೆ. ಐದು ಗ್ಯಾರಂಟಿಗಳ ಮೂಲಕ ರಾಜ್ಯದ ಬಡವರ ಕನಸು ನನಸು ಮಾಡಿದೆ ಎಂದು ಹೇಳಿದ ಅವರು, ಪ್ರತಿವರ್ಷ ಸರ್ಕಾರ ₹58 ಸಾವಿರ ಕೋಟಿ ಬಡವರಿಗಾಗಿ ಖರ್ಚು ಮಾಡುತ್ತಿದೆ. ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಬಡವರು ಆರ್ಥಿಕವಾಗಿ ಸಬಲರಾಗಬೇಕು ಎಂದು ಸಲಹೆ ನೀಡಿದರು.ರಾಜ್ಯ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳಿಂದ ಆರ್ಥಿಕವಾಗಿ ಹಿಂದುಳಿದವರಿಗೆ ಸಾಕಷ್ಟು ಅನುಕೂಲ ಆಗಿದೆ. ಬಡಮಹಿಳೆಯರು ಉಚಿತ ಪ್ರಯಾಣ ಮಾಡಿ ನಿತ್ಯದ ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದಾರೆ.…
ಲೇಖನ- ಆಶ್ರಿತ ಕಿರಣ್”ನಮ್ಮ ಕಥಾ ಅರಮನೆ”ಬರಹಗಾರರು ಉದಯರಶ್ಮಿ ದಿನಪತ್ರಿಕೆ ನೋವನ್ನು ಮರೆಯುವುದು ಸುಲಭವೇ..? ನೋವನ್ನು ಯಾಕೆ ಮರೆಯಬೇಕು? ನೋವನ್ನು ಅನುಭವಿಸದೆ ಬದುಕಲು ಸಾಧ್ಯವಿಲ್ಲವೇ.. ಎನ್ನುವ ಪ್ರಶ್ನೆಗಳು ನೋವಿನಲ್ಲಿರುವಾಗ ಉದ್ಭವವಾಗುತ್ತದೆ. ನಲಿವಿನ ಮಹತ್ವ ಅಡಗಿರುವುದು ನೋವಿನಲ್ಲಿ ಎನ್ನುವುದನ್ನು ಮರೆಯುವಂತಿಲ್ಲ ಅಲ್ಲವೇ..ನೋವನ್ನು ಅನುಭವಿಸದೆ ಹೋದರೆ ನಲಿವಿನ ಮಹತ್ವ ಅರ್ಥವಾಗದು. ನೋವು ಬದುಕಿನ ಅವಿಭಾಜ್ಯ ಅಂಗವೆಂದರೂ ತಪ್ಪಲ್ಲ. ಮಾನಸಿಕ ಅಥವಾ ದೈಹಿಕ ನೋವುಗಳು ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡುವ ಸವಾಲುಗಳಾಗಿರುತ್ತದೆ. ಅವುಗಳ ಜೊತೆಗೆ ಬದುಕನ್ನು ನಡೆಸಿ ಬೆಳೆದಾಗ ಬದುಕಿನ ಸಾರ್ಥಕತೆ ದೊರೆಯುತ್ತದೆ. ನೋವನ್ನು ಯಾಕೆ ಮರೆಯಬೇಕು !ನೋವನ್ನು ಮರೆತರೆ ನೆಮ್ಮದಿಯಾಗಿರಬಹುದು. ನೋವನ್ನು ತಾಳ್ಮೆಯಿಂದ ಗೆದ್ದಾಗ ಮನ ಮನೆ ನಗುತ್ತದೆ. ಪ್ರತಿಯೊಬ್ಬರು ನೋವನ್ನು ಎದುರಿಸಲೇಬೇಕು. ದೇವಾನುದೇವತೆಗಳೂ ಕೂಡ ನೋವು ಅನುಭವಿಸಿದ್ದಾರೆ. ರಾಜ ಮಹಾರಾಜರುಗಳು ನೋವಿನಿಂದ ಪಾರಾಗಿರಲಿಲ್ಲ. ಅಷ್ಟಕ್ಕೂ ನೋವಿಗೆ ಭಯಪಡುವುದೇಕೆ? ನೋವಿಗೆ ಅಳುವುದೇಕೆ ?ಕುರುಕ್ಷೇತ್ರ ರಣಭೂಮಿಯಲ್ಲಿ ಅರ್ಜುನ ಯುದ್ಧ ಮಾಡಲು ಹಿಂಜರಿದು ನನ್ನ ಸಂಬಂಧಿಕರ ಸಾವಿನ ನೋವನ್ನು ಹೇಗೆ ನೋಡಲಿ ಹೇಗೆ ಸಹಿಸಲಿ ಎಂಬ ಪ್ರಶ್ನೆ ಕೇಳಿ…
ರಚನೆ- ವಿದ್ಯಾಮಣಿ ನರೇಶ್ ರಾವ್ಮಂಗಳೂರು”ನಮ್ಮ ಕಥಾ ಅರಮನೆ”ಬರಹಗಾರರು ಉದಯರಶ್ಮಿ ದಿನಪತ್ರಿಕೆ ಅಂತರಂಗದ ಆಸೆಯು ನಾಚಿ ಚಿಮ್ಮುತ್ತಿದೆಅಡವಿಯೊಳಗೆ ನೀ ಸಿಗಬಹುದೆಂಬ ಕಾತುರಅನುಮಾನವಿದೆ ಇದು ನಿನ್ನದೆ ಬಿಸಿ ಉಸಿರೆಅಂಜುತ್ತಿರುವ ಅಭಿಲಾಷೆಗೆ ಅನುಮತಿ ನೀಡಲೆ? ಬಳ್ಳಿಯಂತೆ ಸುತ್ತಿದೆ ನಿನ್ನ ತುಂಬಿದ ತೋಳುಗಳುಮುಳ್ಳಿನಂತೆ ತೊಳಲಾಡುತ್ತಿದೆ ಅಸೆಯ ಕಂಗಳುಮರದ ತೊಗಟೆಯೊಳಗು ನಿನ್ನದೆ ಪಿಸುಮಾತುಮರದಷ್ಟೆ ವರಟು ನಿನ್ನ ಮಾತಿನ ಬಿರುಸು! ಆಸೆಯ ಕೊಳದೊಳಗೆ ದಿನವು ಮೀಯುವೆನಿನ್ನದೆ ಗುಂಗಿನಲಿ ಹಂಸವನ್ನು ಕೆಣಕುವೆಮನದೊಳಗಿನ ಆಸೆ ಮುಚ್ಚಿಡಲಾರೆರವಿಯ ಜೊತೆಗೂಡಿ ನಿನ್ನ ಎದೆಗೆ ಜಾರುವೆ.. ಕಪ್ಪನೆಯ ಇರುಳಲ್ಲಿ ಬೆಪ್ಪಗೆ ಕುಳಿತಿರುವೆಕಪ್ಪೆಯ ಶಬ್ದಕೆ ಕಾವೆರುತ್ತಿದೆ ಕಾದ ಮನಸುಗಳು ಅನುಮಾನವಿಲ್ಲದ ಅನುರಾಗಕೆ ಅಭಿಮತವಿದ್ದರೆಅಂತರಂಗದೊಳಗು ನಾನು ನಿನ್ನ ಸೇರಬಹುದು!
ಲೇಖನ- ವೀಣಾ ಹೇಮಂತ್ ಗೌಡ ಪಾಟೀಲಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ನಿಮಗೇಕೆ ಕೊಡಬೇಕು ಕಪ್ಪ?.. ನೀವೇನು ನಮ್ಮ ಅಣ್ಣ ತಮ್ಮಂದಿರೇ?ನೆಂಟರೇ! ಇಷ್ಟರೇ!. ನಿಮಗೇಕೆ ಕೊಡಬೇಕು ಕಪ್ಪ ಎಂಬ ಕಿತ್ತೂರು ರಾಣಿ ಚೆನ್ನಮ್ಮ ಚಿತ್ರದ ಈ ಸಂಭಾಷಣೆ ಯಾರಿಗೆ ಗೊತ್ತಿಲ್ಲ? ರಾಣಿ ಚೆನ್ನಮ್ಮನ ಪಾತ್ರಕ್ಕೆ ಅದ್ಭುತ ಅಮೋಘ ಅಭಿನಯದ ಮೂಲಕ ನ್ಯಾಯ ಸಲ್ಲಿಸಿದ ಕರ್ನಾಟಕದ ಮನೆ ಮಾತಾದ ಕಲಾ ಸರಸ್ವತಿ ಬಿ ಸರೋಜಾ ದೇವಿ. ಕಿತ್ತೂರು ಚೆನ್ನಮ್ಮನ ವೇಷ ಭೂಷಣ ಧರಿಸಿ ಮೇಲಿನ ಸಂಭಾಷಣೆ ಹೇಳದ ಯಾವುದಾದರೂ ಒಂದು ಛದ್ಮವೇಶ ಸ್ಪರ್ಧೆ ಅದೂ ಕರ್ನಾಟಕದ ಯಾವ ಮೂಲೆಯಲ್ಲಾದರೂ ನಡೆದಿದೆಯೇ ಎಂದು ಕೇಳಿದರೆಬಹುತೇಕ ಎಲ್ಲರ ಉತ್ತರ ಇಲ್ಲ ಎಂದು ಗೋಣಾ ಡಿಸುವುದೇ ಆಗಿರುತ್ತದೆ.. ಅಷ್ಟೊಂದು ಪ್ರಸಿದ್ಧ ಆ ಸಂಭಾಷಣೆ ಮತ್ತು ಕಿತ್ತೂರು ರಾಣಿ ಚೆನ್ನಮ್ಮನ ಗತ್ತು ಗಾಂಭೀರ್ಯದ ಅಭಿನಯ.ಕಿತ್ತೂರು ಚೆನ್ನಮ್ಮ ಪಾತ್ರದಲ್ಲಿ ಶೌರ್ಯವೇ ಮೈವೆತ್ತ ಅಭಿನಯವಾದರೆ ಭಾಗ್ಯವಂತರು ಚಿತ್ರದಲ್ಲಿ ಗಂಡನನ್ನು ಅತ್ಯಂತ ಗೌರವಿಸುವ, ಪ್ರೀತಿಸುವ ಮತ್ತು ಆತನೆಂದರೆ ಭಯಪಡುವ ಪತ್ನಿಯ ಪಾತ್ರ.. ಹೀಗೆ ಪಾತ್ರ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಲೋಕ್ ಅದಾಲತ್ ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡಲ್ಲಿ ಎರಡೂ ಪಕ್ಷಗಳಿಗೆ ಶಾಶ್ವತ ಪರಿಹಾರ ದೊರಕುತ್ತದೆ. ಹಾಗಾಗಿ ಪಕ್ಷಗಾರರು ತಮ್ಮ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಮುಂದೆ ಬರಬೇಕು ಎಂದು ೫ನೇ ಹೆಚ್ಚುವರಿ ಮತ್ತು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಚಿನ್ ಕೌಶಿಕ್ ಅವರು ಹೇಳಿದರು.ಪಟ್ಟಣದ ನ್ಯಾಯಾಲಯದಲ್ಲಿ ಕಾನೂನು ಸೇವಾ ಸಮಿತಿಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿ ಅವರು ಮಾತನಾಡಿದರು.ವರ್ಷದಲ್ಲಿ ಒಟ್ಟು ನಾಲ್ಕು ಲೋಕ್ ಅದಾಲತ್‌ಗಳನ್ನು ನಡೆಸಲಾಗುತ್ತದೆ. ಇಲ್ಲಿ ಪಕ್ಷಗಾರರ ಸಮಕ್ಷಮ ತಮ್ಮ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದಾದ ಎಲ್ಲ ಮಾರ್ಗಗಳನ್ನು ತಿಳಿಸಿ ಎರಡೂ ಪಕ್ಷಗಳ ಒಪ್ಪಿಗೆಯಂತೆ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತದೆ. ಲೋಕ್ ಅದಾಲತ್ ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡಲ್ಲಿ ಎರಡೂ ಪಕ್ಷಗಳು ಗೆದ್ದಂತಾಗುತ್ತದೆ. ಹಾಗಾಗಿ ಪಕ್ಷಗಾರರು ತಮ್ಮ ಪ್ರಕರಣಗಳನ್ನು ಲೋಕ್ ಅದಾಲತ್ ಮೂಲಕ ಇತ್ಯರ್ಥಪಡಿಸಿಕೊಂಡು ನೆಮ್ಮದಿಯಾಗಿರಬಹುದು ಎಂದರು.ಸದರಿ ಲೋಕ ಅದಾಲತ್ ನಲ್ಲಿ ಮೂರು ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ಒಟ್ಟು ೭೫೫೭…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ರಾಷ್ಟ್ರೀಕೃತ ಬ್ಯಾಂಕಿನ ದರೋಡೆ ಪ್ರಕರಣ, ಕೆಲವೇ ದಿನಗಳಲ್ಲಿ ಪತ್ತೆ ಹಚ್ಚಿ, ಅಪರಾಧಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾದ ವಿಜಯಪುರ ಪೊಲೀಸ್ ಇಲಾಖೆಗೆ ಸಾವಿರ, ಸಾವಿರ ಸೆಲೂಟ್! ಎಂದು ಅಮ್ಮ ಫೌಂಢೇಶನ್ ಸಂಚಾಲಕರಾದ ಕಬೂಲ್ ಕೊಕಟನೂರ ಶ್ಲಾಘಿಸಿದ್ದಾರೆ.ಕರ್ನಾಟಕ ಪೊಲೀಸ್ ಇಲಾಖೆಗೆ ಸವಾಲಾಗಿದ್ದ ದರೋಡೆ ಪ್ರಕರಣ ಭೇದಿಸುವಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸರ್ ಅವರ ಬುದ್ದಿಮತ್ತೆ, ಅವಿರತ ಶ್ರಮ, ಚಾಣಾಕ್ಷತೆ, ಸಿಬ್ಬಂಧಿಗಳ ಜೊತೆ ಸೇವಾ ಕಾರ್ಯ, ಇಡೀ ಪ್ರಕರಣ ಸುಖಾಂತ್ಯಗೊಳಿಸುವಲ್ಲಿ ಸಹಕಾರಿಯಾಯಿತು. ಪೊಲೀಸ್ ಇಲಾಖೆಯ ನಿದ್ದೆಗೆಡಿಸಿದ್ದ ಇಡೀ ಪ್ರಕರಣವನ್ನು ಎಂಟು ತನಿಖಾ ತಂಡಗಳನ್ನು ರಚಿಸುವುದರೊಂದಿಗೆ ಅತ್ಯಂತ ಕರಾರುವಕ್ಕಾಗಿ ನಿಭಾಯಿಸಿ ಸರ್ವರಿಂದಲೂ ಸೈ ಎನಿಸಿಕೊಂಡಿರುವುದು ಶ್ಲಾಘನೀಯವಾಗಿದೆ. ಜಗ ಮೆಚ್ಚುವ ಕಾರ್ಯಗೈದ ಎಸ್‌ಪಿ ಅವರ ಸರಳ ಸ್ವಭಾವ, ಮೃದು ಮಾತು, ನಗು ಮೊಗ, ದಕ್ಷ ಕ್ರೀಯಾಶೀಲತೆ, ವೃತ್ತಿ ಗಾಂಭೀರ್ಯ ಅವರ ಕಾರ್ಯಕ್ಷಮತೆಗೆ ಹಿಡಿದ ಕೈಗನ್ನಡಿಯಾಗಿದೆ. ಪೊಲೀಸ್ ಇಲಾಖೆಯ ರೋಲ್ ಮಾಡೆಲ್ ಆಗಿರುವ ಎಸ್‌ಪಿ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ದೇಹವನ್ನು ನಾಶ ಮಾಡುವ ಆಹಾರ, ಮನಸ್ಸನ್ನು ಕೆಡಿಸುವ ಆಲೋಚನೆ, ಮನಸ್ಥಿತಿಯನ್ನೇ ನಾಶ ಮಾಡುವ ಜನರಿಂದ ವಿದ್ಯಾರ್ಥಿಗಳು ದೂರವಿರಬೇಕು ಎಂದು ವಿಜಯಪುರದ ಬಾಲಕರ ಪದವಿಪೂರ್ವ ಕಾಲೇಜಿನ ಪ್ರೊ; ಎಸ್.ಜಿ. ಕುಂಬಾರ ಹೇಳಿದರು.ಕೂಡಗಿ ಸರಕಾರಿ ಕಾಲೇಜಿನಲ್ಲಿ ಏರ್ಪಡಿಸಿದ 2025- 26 ನೇ ಸಾಲಿನ ಶೈಕ್ಷಣಿಕ ವರ್ಷದ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ, ಭಾರತ ಸೇವಾದಳ ರೋವ್ಹರ್ ರೆಂಜರ್ ಘಟಕ, ಮತದಾರರ ಸಾಕ್ಷರತಾ ಸಂಘ, ಕಾಲೇಜು ಸಂಸತ್ತು ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.ಪ್ರಾಸ್ಥಾವಿಕ ಮಾತುಗಳನ್ನಾಡಿದ ಪ್ರೊ; ಬಸವರಾಜ ಜಾಲವಾದಿ ಅವಕಾಶಗಳು ಮುಷ್ಠಿಯಲ್ಲಿಯ ನೀರಿದ್ದಂತೆ ಅದು ಸದಾ ಕಾಲ ಇರುವುದಿಲ್ಲ ಇದ್ದಾಗ ವಿದ್ಯಾರ್ಥಿಗಳು ಅದನ್ನು ಪಡೆದುಕೊಳ್ಳುವತ್ತ ಗಮನ ಹರಿಸಬೇಕು ವ್ಯಕ್ತಿತ್ವ ಬೆಳೆಸಿಕೊಳ್ಳಲು ಪಠ್ಯದಂತೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಲು ಇಂಥ ಕಾರ್ಯಕ್ರಮಗಳು ಅವಶ್ಯಕ ಎಂದು ನುಡಿದರು.ಅಧ್ಯಕ್ಷೀಯ ನುಡಿಗಳನ್ನು ಪ್ರಾಚಾರ್ಯ ಕೆ.ಜಿ. ಲಮಾಣಿ, ಪ್ರೊ;ಶಾಂತಾಬಾಯಿ ಕಾಮನಕೇರಿ, ಪ್ರೊ;ವ್ಹಿ.ಜಿ. ಕಿವುಡಜಾಡರ್ ಮಾತನಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಶಾಂತಾಬಾಯಿ ಕಾಮನಕೇರಿ ಇವರನ್ನು ಸನ್ಮಾನಿಸಲಾಯಿತು.ವೇದಿಕೆ ಮೇಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ…
ಒಂದೇ ದಿನ ಇಂಡಿಯಲ್ಲಿ 4559 ಕೋಟಿ ರೂಗಳ ಶಂಕುಸ್ಥಾಪನೆ & ಉದ್ಘಾಟನೆ | ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಮ್ಮದು ಅಭಿವೃದ್ಧಿ ಪರವಾದ ಸರ್ಕಾರ ಎನ್ನುವುದಕ್ಕೆ, ಒಂದೇ ದಿನ ಇಂಡಿಯಲ್ಲಿ 4559 ಕೋಟಿ ರೂಪಾಯಿಗಳ ಶಂಕುಸ್ಥಾಪನೆ, ಉದ್ಘಾಟನೆಯನ್ನು ನಾನು ನೆರವೇರಿಸಿದ ಈ ಕ್ಷಣವೇ ಸಾಕ್ಷಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.ಸೋಮವಾರ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಶಕ್ತಿ ಯೋಜನೆಯಡಿ 500 ಕೋಟಿ ಬಾರಿ ಮಹಿಳೆಯರು ಉಚಿತ ಪ್ರಯಾಣ ನಡೆಸಿದ ಹಿನ್ನೆಲೆಯಲ್ಲಿ ಕೆ.ಕೆ.ಆರ್.ಟಿ.ಸಿ ಬಸ್‌ಗೆ ಪೂಜೆ ನೆರವೇರಿಸಿ, ಮಹಿಳಾ ಪ್ರಯಾಣಿಕರಿಗೆ ಉಚಿತ ಟಿಕೆಟ್ ವಿತರಿಸಿ, ನಂತರ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಿ, ಲಿಂಬೆ ಅಭಿವೃದ್ಧಿ ಮಂಡಳಿಯ ಲಾಂಛನವನ್ನು ಬಿಡುಗಡೆಗೊಳಿಸಿ ಮಾತನಾಡಿದರು.4157 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ, 401 ಕೋಟಿ ಮೊತ್ತದ ಕಾಮಗಾರಿ ಉದ್ಘಾಟನೆ ಮಾಡಿದ್ದೇನೆ. ಬಿಜೆಪಿಯವರು ಬಹಿರಂಗ ಚರ್ಚೆಗೆ ಬರಲಿ. ಅಭಿವೃದ್ಧಿಯಲ್ಲಿ ನಮ್ಮ ಸರ್ಕಾರದ ಸಾಧನೆ ಮತ್ತು ಬಿಜೆಪಿ…
ಒಂದೇ ದಿನ ಇಂಡಿಯಲ್ಲಿ 4559 ಕೋಟಿ ರೂಗಳ ಶಂಕುಸ್ಥಾಪನೆ & ಉದ್ಘಾಟನೆ | ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಮ್ಮದು ಅಭಿವೃದ್ಧಿ ಪರವಾದ ಸರ್ಕಾರ ಎನ್ನುವುದಕ್ಕೆ, ಒಂದೇ ದಿನ ಇಂಡಿಯಲ್ಲಿ 4559 ಕೋಟಿ ರೂಪಾಯಿಗಳ ಶಂಕುಸ್ಥಾಪನೆ, ಉದ್ಘಾಟನೆಯನ್ನು ನಾನು ನೆರವೇರಿಸಿದ ಈ ಕ್ಷಣವೇ ಸಾಕ್ಷಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.ಸೋಮವಾರ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಶಕ್ತಿ ಯೋಜನೆಯಡಿ 500 ಕೋಟಿ ಬಾರಿ ಮಹಿಳೆಯರು ಉಚಿತ ಪ್ರಯಾಣ ನಡೆಸಿದ ಹಿನ್ನೆಲೆಯಲ್ಲಿ ಕೆ.ಕೆ.ಆರ್.ಟಿ.ಸಿ ಬಸ್‌ಗೆ ಪೂಜೆ ನೆರವೇರಿಸಿ, ಮಹಿಳಾ ಪ್ರಯಾಣಿಕರಿಗೆ ಉಚಿತ ಟಿಕೆಟ್ ವಿತರಿಸಿ, ನಂತರ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ನೆರವೇರಿಸಿ, ಲಿಂಬೆ ಅಭಿವೃದ್ಧಿ ಮಂಡಳಿಯ ಲಾಂಛನವನ್ನು ಬಿಡುಗಡೆಗೊಳಿಸಿ ಮಾತನಾಡಿದರು.4157 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ, 401 ಕೋಟಿ ಮೊತ್ತದ ಕಾಮಗಾರಿ ಉದ್ಘಾಟನೆ ಮಾಡಿದ್ದೇನೆ. ಬಿಜೆಪಿಯವರು ಬಹಿರಂಗ ಚರ್ಚೆಗೆ ಬರಲಿ. ಅಭಿವೃದ್ಧಿಯಲ್ಲಿ ನಮ್ಮ ಸರ್ಕಾರದ ಸಾಧನೆ ಮತ್ತು ಬಿಜೆಪಿ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ರಾಜ್ಯದಲ್ಲಿ ಜಾತ್ಯಾತೀತ ಜನತಾದಳವನ್ನು ತಳಮಟ್ಟದಿಂದ ಬಲಪಡಿಸಿ ಮತ್ತೆ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಜನರೊಂದಿಗೆ ಜನತಾದಳ ಅಭಿಯಾನವನ್ನು ಆರಂಭಿಸಿರುವ ಪಕ್ಷದ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ಕುಮಾರಸ್ವಾಮಿ ಸೇರಿದಂತೆ ಪಕ್ಷದ ರಾಜ್ಯ,ಜಿಲ್ಲಾ ಮುಖಂಡರು ಸೇರಿದಂತೆ ಅನೇಕರು ಜು. ೧೫ ರಂದು ಹೂವಿನಹಿಪ್ಪರಗಿಯ ಎಂ.ಜಿ.ಕೋರಿ ಮತ್ತು ಡಾ.ಬಿ.ಜಿ.ಬ್ಯಾಕೋಡ ಪಪೂ ವಿದ್ಯಾಲಯದ ಆವರಣದಲ್ಲಿ ಮಧ್ಯಾನ್ಹ ೩ ಗಂಟೆಗೆ ಹಮ್ಮಿಕೊಂಡಿರುವ ಜನರೊಂದಿಗೆ ಜನತಾದಳ ಹಾಗೂ ಪಕ್ಷದ ಡಿಜಿಟಲ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ ಎಂದು ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ ಹೇಳಿದರು.ತಾಲೂಕಿನ ಕುದರಿಸಾಲವಾಡಗಿಯ ತಮ್ಮ ನಿವಾಸದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕಾರ್ಯಕ್ರಮವನ್ನು ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಉದ್ಘಾಟಿಸುವರು. ಇವರೊಂದಿಗೆ ಮಾಜಿ ಸಚಿವರಾದ ಆಲಗೊಂಡ ಹನಮಂತಪ್ಪ, ವೆಂಕಟರಾವ ನಾಡಗೌಡ, ವೆಂಕಟ್ಟಪ್ಪ ನಾಯಕ, ದೇವದುರ್ಗ ಶಾಸಕಿ ಕರೆಮ್ಮ ನಾಯಕ, ಮುಖಂಡರಾದ ಅಪ್ಪುಗೌಡ ಪಾಟೀಲ, ಹನಮಂತಪ್ಪ ಮಾವಿನಮರದ, ಬಿ.ಡಿ.ಪಾಟೀಲ, ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ ಸೇರಿದಂತೆ ಅನೇಕರು ಆಗಮಿಸುತ್ತಾರೆ. ಮುಂಬರುವ ದಿನಗಳಲ್ಲಿ…
